ಪುಷ್ಪ ಸಿನಿಮಾದಲ್ಲಿ ಬೋಳು ತಲೆ ಶೇಖಾವತ್ ಪಾತ್ರಕ್ಕೆ ಮೊದಲ ಆಯ್ಕೆ ಫಹಾದ್ ಫಾಸಿಲ್ ಆಗಿರಲಿಲ್ಲವಂತೆ!
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟನೆಯ ಪುಷ್ಪ ಸಿನಿಮಾದ ಕುರಿತು ಆಸಕ್ತಿದಾಯಕ ಅಂಶವೊಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಬೋಳು ತಲೆ ಅವತಾರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಬ್ಬರಿಸಿದ್ದರು.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟನೆಯ ಪುಷ್ಪ ಸಿನಿಮಾದ ಕುರಿತು ಆಸಕ್ತಿದಾಯಕ ಅಂಶವೊಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಬೋಳು ತಲೆ ಅವತಾರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಬ್ಬರಿಸಿದ್ದರು. ಪುಷ್ಪ ಪಾರ್ಟ್ 1ರಲ್ಲಿ ತಲೆ ಬೋಳಿಸಿಕೊಂಡಿದ್ದು, ಎರಡರಲ್ಲಿಯೂ ಅದನ್ನೇ ಮುಂದುವರೆಸಿದ್ದರು. ಅಂದಹಾಗೆ, ಚಿತ್ರತಂಡ ಈ ಪಾತ್ರದಲ್ಲಿ ನಟಿಸಲು ಆರಂಭದಲ್ಲಿ ಬೇರೆ ನಟನನ್ನು ಗಮನದಲ್ಲಿಟ್ಟುಕೊಂಡಿತ್ತಂತೆ.
ನಾರಾ ರೋಹಿತ್ ಹೀಗಂದ್ರು
ಪುಷ್ಪ ಚಿತ್ರದಲ್ಲಿ ಫಹಾದ್ ಫಾಸಿಲ್ ಪಾತ್ರಕ್ಕೆ ತಮ್ಮನ್ನು ಸಂಪರ್ಕಿಸಲಾಗಿತ್ತು ಎಂಬ ಪ್ರಶ್ನೆಗೆ ತೆಲುಗು ನಟ ಮತ್ತು ನಿರ್ಮಾಪಕ ನಾರಾ ರೋಹಿತ್ ಉತ್ತರಿಸಿದ್ದಾರೆ. "ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಾನು ದಪ್ಪ ಮೀಸೆಯ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದೆ. ಮೊದಲು ರವಿ (ಶಂಕರ್) ಗಾರು ಮೊದಲು ನನ್ನೊಂದಿಗೆ ಮಾತನಾಡಿದರು, ಹಾಗೆಯೇ ಸುಕುಮಾರ್ ಗಾರು ಕೂಡ. ನಂತರ ಚಿತ್ರದ ಅವಧಿ ಬದಲಾಯಿತು. ನಂತರ ಅವರು ಫಹಾದ್ ಫಾಸಿಲ್ ಈ ಪಾತ್ರಕ್ಕೆ ಬೇಕೆಂದು ಬಯಸಿದರು. ಆದರೆ, ಆರಂಭದಲ್ಲಿ ನನ್ನನ್ನು ಸಂಪರ್ಕಿಸಿದ್ದು ನಿಜ" ಎಂದು ಅವರು ಮಾಹಿತಿ ನೀಡಿದ್ದಾರೆ.
ಆ ಪಾತ್ರದಲ್ಲಿ ನಟಿಸಲು ಆಸಕ್ತಿ ನನಗಿತ್ತು ನಿಜ. ಆದರೆ, ನಾನು ಫಹಾದ್ ಫಾಸಿಲ್‌ನಷ್ಟು ಉತ್ತಮವಾಗಿ ಮಾಡುತ್ತಿದ್ದೇನೋ? ಫಹಾದ್ ಅವರ ನಟನೆ ನೋಡಿದ ಬಳಿಕ ನನಗೆ ನಿಜಕ್ಕೂ ಅಚ್ಚರಿಯಾಯಿತು. ಎಂತಹ ಅದ್ಭುತ ನಟನೆ ಅವರದ್ದು" ಎಂದು ರೋಹಿತ್ ಹೇಳಿದ್ದಾರೆ.
ಪುಷ್ಪ ಸಿನಿಮಾದಲ್ಲಿ ಶೇಖಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ಇದು ಪುಷ್ಪನ ಪರಮಶತ್ರುವಿನ ಪಾತ್ರ. ಯಾವುದೇ ಬೆಲೆ ತೆತ್ತಾದರೂ ಕೆಂಪು ಮರಳು ಕಳ್ಳಸಾಗಣೆ ಜಾಲವನ್ನು ಕಿತ್ತೊಗೆಯಲು ಬಯಸುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಪಾತ್ರದ ಕುರಿತು 2024ರಲ್ಲಿ ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ಫಹಾದ್ ಫಾಸಿಲ್ "ನನಗೆ ಅದು ಅಂತಹ ಮಹತ್ವದ ಪಾತ್ರವೆಂದು ಅನಿಸಿಲ್ಲ. ಆ ಪಾತ್ರದಲ್ಲಿ ನಟಿಸಿ ಪ್ರಭಾವಿತನಾಗಿಲ್ಲ" ಎಂದು ಹೇಳಿದ್ದರು.
ರೋಹಿತ್ ಅವರು ನಟಿಸಿದ ವೀರ ಭೋಗ ವಸಂತ ರಾಯಲು ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಇದಾದ ಬಳಿಕ ಇವರು ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. 2024ರಲ್ಲಿ ಇವರು ಪ್ರತಿನಿಧಿ 2 ಚಿತ್ರದ ಸಹನಟಿ ಸಿರಿ ಲೆಲ್ಲಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಅವರು ಶೀಘ್ರದಲ್ಲೇ ಸುಂದರಕಾಂಡ ಮತ್ತು ಭೈರವಂ ಚಿತ್ರಗಳಲ್ಲಿ ನಟಿಸಲಿದ್ದಾರೆ.