ಬಜೆಟ್‌ನ 45 ಪಟ್ಟು ಗಳಿಕೆ ಕಂಡ ಚಿತ್ರವಿದು, ಇದರ ಅಬ್ಬರದ ಮುಂದೆ ಪುಷ್ಪ 2, ಕಲ್ಕಿಗೂ ಕಿಮ್ಮತ್ತಿಲ್ಲ!
ಕನ್ನಡ ಸುದ್ದಿ  /  ಮನರಂಜನೆ  /  ಬಜೆಟ್‌ನ 45 ಪಟ್ಟು ಗಳಿಕೆ ಕಂಡ ಚಿತ್ರವಿದು, ಇದರ ಅಬ್ಬರದ ಮುಂದೆ ಪುಷ್ಪ 2, ಕಲ್ಕಿಗೂ ಕಿಮ್ಮತ್ತಿಲ್ಲ!

ಬಜೆಟ್‌ನ 45 ಪಟ್ಟು ಗಳಿಕೆ ಕಂಡ ಚಿತ್ರವಿದು, ಇದರ ಅಬ್ಬರದ ಮುಂದೆ ಪುಷ್ಪ 2, ಕಲ್ಕಿಗೂ ಕಿಮ್ಮತ್ತಿಲ್ಲ!

Most Profitable Movie: ಪುಷ್ಪ 2 ಭಾರತದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿರಬಹುದು, ಆದರೆ ಇದು 2024ರ ಅತಿ ಹೆಚ್ಚು ಗಳಿಕೆಯ ಚಿತ್ರವಲ್ಲ. ಇದರ ಹೊರತುಪಡಿಸಿ, 3 ಕೋಟಿ ಬಜೆಟ್‌ನ ಸಿನಿಮಾವೊಂದು 136 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಯಾವುದಾ ಸಿನಿಮಾ? ಹೀಗಿದೆ ಮಾಹಿತಿ.

3 ಕೋಟಿ ಬಜೆಟ್‌ನ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 136 ಕೋಟಿ.
3 ಕೋಟಿ ಬಜೆಟ್‌ನ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 136 ಕೋಟಿ.

Most Profitable Movie: ಕಡಿಮೆ ಹೂಡಿಕೆ ಮಾಡಿ, ದೊಡ್ಡ ಮೊತ್ತವನ್ನೇ ಬಾಚಿಕೊಳ್ಳುವ ಇಂಡಸ್ಟ್ರಿ ಎಂದರೆ ಅದು ಮಾಲಿವುಡ್‌. ಈಗಾಗಲೇ ಅಂಥ ಸಾಕಷ್ಟು ಉದಾಹರಣೆಗಳು ಆ ಚಿತ್ರೋದ್ಯಮದಲ್ಲಿವೆ. 2024ರ ಪಾಲಿಗೂ ಅಂಥ ಒಂದು ದಾಖಲೆಯನ್ನು ಬರೆದಿದೆ ಈ ಸಿನಿಮಾ. ಅದ್ಯಾವ ಮಟ್ಟಿಗೆ ಎಂದರೆ, 2024ರಲ್ಲಿ ಭಾರತದ ಇತರ ಭಾಷೆಗಳ ಯಾವೊಂದೂ ಚಿತ್ರವೂ ಈ ದಾಖಲೆ ಮಾಡಿಲ್ಲ. ಸಾವಿರ ಸಾವಿರ ಕೋಟಿ ಕಲೆಕ್ಷನ್‌ ಮಾಡಿದ ಪುಷ್ಪ 2 ಮತ್ತು ಕಲ್ಕಿ ಸಿನಿಮಾಗಳೂ ಈ ಚಿಕ್ಕ ಬಜೆಟ್‌ನ ಸಿನಿಮಾ ಮುಂದೆ ಮಂಕು!

ದಾಖಲೆ ಬರೆದ ಪ್ರೇಮಲು 

ಮಾಲಿವುಡ್‌ನಲ್ಲಿ 2024ರ ಫೆಬ್ರವರಿ 9ರಂದು ಪ್ರೇಮಲು ಸಿನಿಮಾ ಬಿಡುಗಡೆ ಆಗಿತ್ತು. ಗಿರೀಶ್‌ ಎಡಿ ನಿರ್ದೇಶನದ ಈ ಸಿನಿಮಾದಲ್ಲಿ ನಸ್ಲೀನ್‌ ಗಪೂರ್‌, ಮಮತಾ ಬೈಜು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಹೈದರಾಬಾದ್ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಚಿತ್ರವು ಮಲಯಾಳಂ ಪ್ರೇಕ್ಷಕರನ್ನು ಮಾತ್ರವಲ್ಲದೆ ತೆಲುಗು ಪ್ರೇಕ್ಷಕರನ್ನೂ ನಗಿಸಿದೆ. ಇದೇ ಚಿತ್ರವು 2024ರಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರ ಎಂಬ  ಹೆಗ್ಗಳಿಕೆಗೂ ಪಾತ್ರವಾಗಿದೆ. 

ರೊಮ್ಯಾಂಟಿಕ್ ಡ್ರಾಮಾ ಜಾನರ್‌ನ ಈ ಸಿನಿಮಾ ಕೇವಲ 3 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮಾಡಿದ ಮೋಡಿ ಸಣ್ಣದೇನಲ್ಲ. ಬರೋಬ್ಬರಿ 136 ಕೋಟಿ ರೂ.ಗಳನ್ನು ಈ ಸಿನಿಮಾ ಗಳಿಕೆ ಕಂಡಿದೆ. ಅಂದರೆ, ಇದು ಬಜೆಟ್‌ಗಿಂತ 45 ಪಟ್ಟು ಹೆಚ್ಚು ಗಳಿಸಿದೆ. ಇದು ಕಳೆದ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಸಿನಿಮಾಗಳಲ್ಲಿ ಒಂದಾಗಿದೆ. 2024ರಲ್ಲಿ, ಯಾವುದೇ ಭಾರತೀಯ ಸಿನಿಮಾ ಇಷ್ಟೊಂದು ಲಾಭ ಕಂಡಿಲ್ಲ. 

ಒಟ್ಟಾರೆ ಮೂರನೇ ಸ್ಥಾನದಲ್ಲಿದೆ.

ಕಳೆದ ವರ್ಷ ಲಾಭದ ದೃಷ್ಟಿಯಿಂದ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪ್ರೇಮಲು, ಒಟ್ಟಾರೆಯಾಗಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೂರನೇ ಅತಿದೊಡ್ಡ ಚಿತ್ರವಾಗಿದೆ. ಸೀಕ್ರೆಟ್ ಸೂಪರ್ ಸ್ಟಾರ್ ಮತ್ತು ಜೈ ಸಂತೋಷಿ ಮಾ ಚಿತ್ರಗಳು ಮಾತ್ರ ಪ್ರೇಮಲುಗಿಂತ ಎರಡು ಪಟ್ಟು ಹೆಚ್ಚು ಲಾಭ ಗಳಿಸಿವೆ. ಪುಷ್ಪ 2 ಮತ್ತು ಕಲ್ಕಿ 2898 AD ಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಒಟ್ಟು ಕಲೆಕ್ಷನ್‌ನ  ಶೇಕಡ 10 ರಷ್ಟು ಇಲ್ಲದಿದ್ದರೂ, ಆ ಚಿತ್ರಗಳ ಬಜೆಟ್ ಕೂಡ ದೊಡ್ಡದಾಗಿರುವುದರಿಂದ ಲಾಭ ಕಡಿಮೆ.

2024ರಲ್ಲಿ ಬಿಡುಗಡೆಯಾದ ಪುಷ್ಪ 2, ಇಲ್ಲಿಯವರೆಗೆ 1800 ಕೋಟಿ ರೂ.ಗಳನ್ನು ಗಳಿಸಿದೆ. ದಂಗಲ್ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಇದು ಬಾಹುಬಲಿ 2 ದಾಖಲೆಯನ್ನು ಮುರಿದಿದೆ. ಆದಾಗ್ಯೂ, ಈ ಚಿತ್ರವನ್ನು 350 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಇದರ ಲಾಭ ಕೇವಲ ಐದು ಪಟ್ಟು ಮಾತ್ರ!

ಏನಿದು ಪ್ರೇಮಲು ಸಿನಿಮಾ?

ಕಳೆದ ವರ್ಷ ಬಿಡುಗಡೆಯಾದ ಮಲಯಾಳಂ ಚಿತ್ರ ಪ್ರೇಮಲು ಸೆನ್ಸೇಷನಲ್ ಹಿಟ್ ಆಗಿತ್ತು. ಇದು ಕೇರಳದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿಯೂ ತೆರೆಕಂಡಿತ್ತು. ಇದು ತೆಲುಗಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಡಬ್ಬಿಂಗ್ ಚಿತ್ರವಾಯಿತು. ಗಿರೀಶ್ ಎ.ಡಿ. ನಿರ್ದೇಶನದ ಈ ಚಿತ್ರದಲ್ಲಿ ನಸ್ಲೀನ್ ಕೆ. ಗಫೂರ್, ಮಮತಾ ಬೈಜು, ಸಂಗೀತ್ ಪ್ರತಾಪ್, ಅಖಿಲಾ ಭಾರ್ಗವನ್ ಮತ್ತು ಶ್ಯಾಮ್ ಮೋಹನ್ ನಟಿಸಿದ್ದಾರೆ.

 ಐಟಿ ಕೆಲಸಕ್ಕಾಗಿ ಹೈದರಾಬಾದ್‌ಗೆ ಬರುವ ಯುವಕ ಮತ್ತು ಅದೇ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿಯ ಸುತ್ತ ಸುತ್ತುವ ಕಥೆ ಈ ಚಿತ್ರದ್ದು. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಈ ಸಿನಿಮಾ ಸದ್ಯ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ವೀಕ್ಷಿಸಬಹುದು. 

Whats_app_banner