NTR30 film: ʼಎನ್‌ಟಿಆರ್30ʼ ಚಿತ್ರಕ್ಕೆ ಮುಹೂರ್ತ ನಿಗದಿ; ಕೊನೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚಿತ್ರತಂಡ
NTR30 film: ಎನ್‌ಟಿಆರ್30 ಸಿನಿಮಾದ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿತ್ತು. ಎನ್‌ಟಿಆರ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಚಿತ್ರದ ಅಪ್‌ಡೇಟ್ ಬಗ್ಗೆಯೇ ಕೇಳಲಾಗುತ್ತಿತ್ತು, ಕೊನೆಗೂ ಚಿತ್ರತಂಡದಿಂದ ಅಪ್‌ಡೇಟ್ ಹೊರಬಿದಿದ್ದೆ. ಮಾರ್ಚ್ 23ರಂದು ಚಿತ್ರದ ಮುಹೂರ್ತಕ್ಕೆ ದಿನ ನಿಗದಿಯಾಗಿದೆ.
ಟಾಲಿವುಡ್‌ನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ನಟನೆಯ ಮುಂದಿನ ಚಿತ್ರಕ್ಕೆ ಸಂಬಂಧಿಸಿ ಅಪ್‌ಡೇಟ್‌ವೊಂದು ಹೊರಬಿದಿದ್ದೆ. ಈ ಸಿನಿಮಾಕ್ಕೆ ಸಂಬಂಧಿಸಿದ ಈ ಅಪ್‌ಡೇಟ್‌ನಿಂದಾಗಿ ಅಭಿಮಾನಿಗಳು ಖುಷಿಯಾಗಿದೆ. ಅದೇನಪ್ಪಾ ಅಂತಹ ಸುದ್ದಿ ಎನ್ನುತ್ತೀರಾ?
ಟ್ರೆಂಡಿಂಗ್ ಸುದ್ದಿ
ಅದೇನೆಂದರೆ ನಟ ಜೂನಿಯರ್ ಎನ್‌ಟಿಆರ್ ಅವರ 30ನೇ ಸಿನಿಮಾಕ್ಕೆ ಕೊನೆಗೂ ಮುಹೂರ್ತ ದಿನಾಂಕ ನಿಗದಿಯಾಗಿದೆ. ಮಾರ್ಚ್ 23ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಖಚಿತಪಡಿಸಿದೆ ಚಿತ್ರತಂಡ.
ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಅಧಿಕೃತ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದ ಮೂಲಕ ಬಾಲಿವುಡ್ ಸುಂದರಿ ಜಾಹ್ನವಿ ಕಪೂರ್ ಮೊದಲ ಬಾರಿಗೆ ಟಾಲಿವುಡ್ ಸಿನಿರಂಗಕ್ಕೆ ಕಾಲಿರಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿದ ಅವತಾರ್‌ದಲ್ಲಿ ಎನ್‌ಟಿಆರ್ ತೆರೆ ಮೇಲೆ ಕಾಣಿಸಲಿದ್ದು, ಅಭಿಮಾನಿಗಳು ಚಿತ್ರದ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ.
ಮುಹೂರ್ತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ʼಬಿರುಗಾಳಿ ಬೀಸಲಿದೆ #ಎನ್‌ಟಿಆರ್ 30ಕ್ಕೆ ಮಾರ್ಚ್ 23ರಂದು ಮುಹೂರ್ತʼ ಎಂದು ಬರೆದುಕೊಂಡು ಎನ್‌ಟಿಆರ್, ಜಾಹ್ನವಿ ಕಪೂರ್, ಕೊರಟಾಲ ಶಿವ, ನಂದಮೂರ್ ಕಲ್ಯಾಣರಾಮ್, ಸಂಗೀತ ನಿರ್ದೇಶಕ ಅನಿರುದ್ಧ ಮುಂತಾದವರನ್ನು ಟ್ಯಾಗ್ ಮಾಡಿದೆ. ಈ ಚಿತ್ರವನ್ನು ಆರ್‌ಆರ್‌ಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.
ಈ ಚಿತ್ರದಲ್ಲಿ ಇನ್ನು ಯಾವ ಯಾವ ನಟ-ನಟಿಯರು ನಟಿಸಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಖಚಿತವಾಗಿಲ್ಲ.
ಎನ್‌ಟಿಆರ್ ಜೊತೆ ನಟಿಸುವುದು ಕನಸು: ಜಾಹ್ನವಿ
ನಟಿ ಜಾಹ್ನವಿ ಕಪೂರ್ ಎನ್‌ಟಿಆರ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತಸದಿಂದಿದ್ದಾರೆ.
ಈ ಬಗ್ಗೆ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ʼನಾನು ಅಕ್ಷರಶಃ ಸಿನಿಮಾದ ಚಿತ್ರೀಕರಣ ಆರಂಭಕ್ಕಾಗಿ ದಿನಗಣನೆ ಮಾಡುತ್ತಿದ್ದೇನೆ. ಈ ಕುರಿತು ನಾನು ನಿರ್ದೇಶಕರಿಗೆ ಪ್ರತಿನಿತ್ಯ ಮಸೇಜ್ ಮಾಡುತ್ತಿದ್ದೇನೆ. ಎನ್‌ಟಿಆರ್ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸು. ಇತ್ತೀಚೆಗೆ ನಾನು ಆರ್‌ಆರ್‌ಆರ್ ಸಿನಿಮಾವನ್ನು ಇನ್ನೊಮ್ಮೆ ನೋಡಿದೆ. ಎನ್‌ಟಿಆರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ನನ್ನ ಜೀವನದ ಬಹುದೊಡ್ಡ ಖುಷಿʼ ಎಂದಿದ್ದಾರೆ.
ʼನಾನು ಎನ್‌ಟಿಆರ್ ಅವರೊಂದಿಗೆ ನಟಿಸುವ ಹಂಬಲವನ್ನು ವ್ಯಕ್ತಪಡಿಸಿದ್ದೆ. ಅದಕ್ಕಾಗಿ ನಾನು ಪ್ರತಿದಿನ ಪ್ರಾರ್ಥಿಸುತ್ತಿದ್ದೆ. ಪ್ರತಿ ಸಂದರ್ಶನದಲ್ಲೂ ಅವರೊಂದಿಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದೇನೆ. ನೀವು ಯಾವುದರ ಮೇಲೆ ಆಕರ್ಷಣೆ ಹೊಂದಿರುತ್ತೀರೋ ಅದನ್ನು ಯೂನಿವರ್ಸ್ ನಿಮಗಾಗಿ ನೀಡುತ್ತದೆ, ಇದನ್ನು ನಾನು ನಂಬುತ್ತೇನೆ, ಬಹುಶಃ ಮೊದಲ ಬಾರಿ ಈ ಸಿನಿಮಾದ ಮೂಲಕ ನನಗೆ ಈ ಅನುಭವವಾಗಿದೆ. ನಾನು ಯಾವಾಗಲೂ ಧನಾತ್ಮಕವಾಗಿರುತ್ತೇನೆ, ಅದರಿಂದ ಕೆಲಸ ಮಾಡಲು ಕಲಿತಿದ್ದೇನೆʼ ಎಂದೂ ಎನ್‌ಟಿಆರ್ ಜೊತೆ ನಟಿಸುವ ಕನಸನ್ನು ಬಿಚ್ಚಿಟ್ಟಿದ್ದರು.
ಈ ಸುದ್ದಿಗಳನ್ನೂ ಓದಿ
ʼಪದೇ ಪದೇ ಹೀಗೆ ಮಾಡಿದ್ರೆ ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆʼ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದೇಕೆ ಎನ್‌ಟಿಆರ್
ʼನೀವು ಇನ್ನೊಮ್ಮೆ ಎಲ್ಲಾದರು ಚಿತ್ರದ ಅಪ್‌ಡೇಟ್ ಬಗ್ಗೆ ಕೇಳಿದರೆ, ಖಂಡಿತ ಹೇಳುತ್ತಿದ್ದೇನೆ, ನಾನು ಆ ಸಿನಿಮಾ ಮಾಡುವುದಿಲ್ಲ. ಪುನಃ ಪುನಃ ನೀವು ಅದನ್ನೇ ಕೇಳುತ್ತಿದ್ದರೆ ಖಂಡಿತ, ನಾನು ಸಿನಿಮಾಗಳಲ್ಲಿ ನಟಿಸುವುದನ್ನೇ ನಿಲ್ಲಿಸುತ್ತೇನೆʼ ಎಂದು ಅಭಿಮಾನಿಗಳ ಮೇಲೆ ಕೋಪಗೊಂಡಿದ್ದಾರೆ ನಟ ಎನ್‌ಟಿಆರ್
‘ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು’; ಸಾಲು ಸಾಲು ಸಿನಿಮಾಗಳಲ್ಲಿ ಅಶ್ವಿನ್ ಹಾಸನ್ ಬಿಜಿ..
ಒಂದೇ ರೀತಿಯ ಪಾತ್ರಕ್ಕೆ ಬ್ರ್ಯಾಂಡ್ ಆಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರ ಹುಡುಕುತ್ತಿರುತ್ತೇನೆ. ಆ ನಿಟ್ಟಿನಲ್ಲಿ ಪ್ರಕಾಶ್ ರೈ, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಹೀಗೆ ಹಲವರು ನನಗೆ ಸ್ಪೂರ್ತಿ.