ಒಂದೇ ದಿನ ಒಟಿಟಿಗೆ ಬಂದ 9 ಸಿನಿಮಾಗಳು; ಆ ಒಂಬತ್ತರಲ್ಲಿ ಆರು ಸಿನಿಮಾಗಳು ಬಹಳ ವಿಶೇಷ, ವಸಿಷ್ಠ ಸಿಂಹ ನಟನೆಯ ಚಿತ್ರವೂ ಇದೆ
ಇಂದು ಒಂದೇ ದಿನ 9 ಸಿನಿಮಾಗಳು ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿವೆ. 9ರಲ್ಲಿ ಆರು ಸಿನಿಮಾಗಳು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿವೆ. ತಮನ್ನಾ ಭಾಟಿಯಾ, ವಸಿಷ್ಠ ಸಿಂಹ ನಟನೆಯ ʻಓದೆಲ್ಲ 2ʼ ಸಿನಿಮಾ ಸಹ ಒಟಿಟಿಗೆ ಆಗಮಿಸಿದೆ.

ಶುಕ್ರವಾರ ಸನಿಹವಾಗುತ್ತಿದ್ದಂತೆ, ಒಟಿಟಿಯಲ್ಲಿ ಸಿನಿಮಾ ಕಳೆ ಹೆಚ್ಚಾಗುತ್ತದೆ. ಬೇರೆ ಬೇರೆ ಭಾಷೆಗಳ ಹತ್ತಾರು ಸಿನಿಮಾಗಳು, ಸ್ಟ್ರೀಮಿಂಗ್ ಆರಂಭಿಸಲು ಅಣಿಯಾಗುತ್ತವೆ. ಕೆಲವೊಮ್ಮೆ ಶುಕ್ರವಾರಕ್ಕೂ ಮೊದಲೇ ಗುರುವಾರವೇ ಒಟಿಟಿ ಅಂಗಳ ತಲುಪುತ್ತವೆ. ಆ ಪೈಕಿ ಈ ವಾರವೂ ಒಟಿಟಿಯಲ್ಲಿ 9 ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಹಾರರ್, ಕ್ರೈಮ್, ಆಕ್ಷನ್, ರೊಮ್ಯಾಂಟಿಕ್ ಕಾಮಿಡಿ ಮುಂತಾದ ಜಾನರ್‌ನ ಸಿನೆಮಾಗಳು, ವೆಬ್ ಸೀರೀಸ್‌ಗಳೂ ಸೇರಿವೆ. ಹಾಗಾದರೆ ಆ ಸಿನಿಮಾಗಳು ಯಾವ ಒಟಿಟಿ ವೇದಿಯಲ್ಲಿವೆ? ಹೀಗಿದೆ ಮಾಹಿತಿ.
ನೆಟ್‌ಫ್ಲಿಕ್ಸ್ ಒಟಿಟಿ
- ನಾಸ್ಕಾರ್ ಫುಲ್ ಸ್ಪೀಡ್ ಸೀಸನ್ 2 (ಇಂಗ್ಲಿಷ್ ಸ್ಪೋರ್ಟ್ಸ್ ಡಾಕ್ಯುಮೆಂಟರಿ ವೆಬ್ ಸೀರೀಸ್)- ಮೇ 08
- ಗುಡ್ ಬ್ಯಾಡ್ ಅಗ್ಲಿ (ಕನ್ನಡ ಡಬ್ಬಿಂಗ್ ತಮಿಳು ಆಕ್ಷನ್ ಥ್ರಿಲ್ಲರ್ ಸಿನಿಮಾ)- ಮೇ 08
- ಜಾಕ್ (ತೆಲುಗು ರೊಮ್ಯಾಂಟಿಕ್ ಕಾಮಿಡಿ ಆಕ್ಷನ್ ಥ್ರಿಲ್ಲರ್ ಚಿತ್ರ)- ಮೇ 08
- ಫಾರೆವರ್ (ಇಂಗ್ಲಿಷ್ ರೊಮ್ಯಾಂಟಿಕ್ ವೆಬ್ ಸೀರೀಸ್)- ಮೇ 08
- ಬ್ಲಡ್ ಆಫ್ ಜೀಯೂಸ್ ಸೀಸನ್ 3 (ಇಂಗ್ಲಿಷ್ ಅನಿಮೇಟೆಡ್ ಆಕ್ಷನ್ ಥ್ರಿಲ್ಲರ್ ವೆಬ್ ಸೀರೀಸ್)- ಮೇ 08
- ದಿ ಹಾಂಟೆಡ್ ಅಪಾರ್ಟ್ಮೆಂಟ್ ಮಿಸ್ ಕೆ (ಇಂಡೋನೇಷಿಯನ್ ಥ್ರಿಲ್ಲರ್ ಚಿತ್ರ)- ಮೇ 08
ಇದನ್ನೂ ಓದಿ: ಒಟಿಟಿಗೆ ಇನ್ನೇನು ಬರಲಿರುವ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಆರು ಸಿನಿಮಾಗಳಿವು, ಈ ಆರರಲ್ಲಿ ಕನ್ನಡದ ಚಿತ್ರವೂ ಒಂದಿದೆ
ಅಮೆಜಾನ್ ಪ್ರೈಂ ಒಟಿಟಿ
- ಓದೆಲ್ಲಾ 2 (ತೆಲುಗು ಹಾರರ್ ಥ್ರಿಲ್ಲರ್ ಮೂವಿ)- ಮೇ 08
- ಟೆನ್ ಹವರ್ಸ್ (ತಮಿಳು ಕ್ರೈಮ್ ಆಕ್ಷನ್ ಥ್ರಿಲ್ಲರ್ ಚಿತ್ರ)- ಮೇ 08
- ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ (ತೆಲುಗು ರೊಮ್ಯಾಂಟಿಕ್ ಕಾಮಿಡಿ ಚಿತ್ರ)- ಈಟಿವಿ ವಿನ್ ಒಟಿಟಿ- ಮೇ 08
ಇಂದು ಹಲವು ಒಟಿಟಿಯಲ್ಲಿ ಒಟ್ಟು 9 ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ಇವುಗಳಲ್ಲಿ, ತಮಿಳು ಸ್ಟಾರ್ ಹೀರೋ ಅಜಿತ್ ಕುಮಾರ್, ತ್ರಿಷಾ ಕೃಷ್ಣನ್, ಪ್ರಿಯಾ ಪ್ರಕಾಶ್ ವಾರಿಯರ್, ಅರ್ಜುನ್ ದಾಸ್ ಮತ್ತು ಶೈನ್ ಟಾಮ್ ಚಾಕೊ ನಟಿಸಿರುವ ಬ್ಲಾಕ್‌ಬಸ್ಟರ್ ಆಕ್ಷನ್ ಥ್ರಿಲ್ಲರ್ ಚಿತ್ರ ʻಗುಡ್ ಬ್ಯಾಡ್ ಅಗ್ಲಿʼ ಮತ್ತು ಸಿದ್ದು ಜೊನ್ನಲಗಡ್ಡ ಮತ್ತು ವೈಷ್ಣವಿ ಚೈತನ್ಯ ನಾಯಕ-ನಾಯಕಿಯರಾಗಿ ನಟಿಸಿರುವ ಬೊಮ್ಮರಿಲ್ಲು ಭಾಸ್ಕರ್ ನಿರ್ದೇಶನದ ʻಜಾಕ್ʼ ಚಿತ್ರ ವಿಶೇಷ ಎನಿಸಿಕೊಂಡಿವೆ.
ಒಟಿಟಿಗೆ ಬಂತು ತಮನ್ನಾ ಸಿನಿಮಾ
ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ, ಕನ್ನಡದ ನಟ ವಸಿಷ್ಠ ಸಿಂಹ ನಟನೆಯ ಪೌರಾಣಿಕ ಹಾರರ್ ಥ್ರಿಲ್ಲರ್ ಚಿತ್ರ ʻಓದೆಲ್ಲಾ 2ʼ, ಪ್ರದೀಪ್ ಮಾಚಿರಾಜು- ದೀಪಿಕಾ ಪಿಲ್ಲಿ ಅವರ ʻಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿʼ, ಹಾರರ್ ಮಿಸ್ಟರಿ ಥ್ರಿಲ್ಲರ್ ಚಿತ್ರ ʻದಿ ಹಾಂಟೆಡ್ ಅಪಾರ್ಟ್ಮೆಂಟ್ ಮಿಸ್ ಕೆʼ ಮತ್ತು ತಮಿಳು ಕ್ರೈಮ್ ಆಕ್ಷನ್ ಥ್ರಿಲ್ಲರ್ ಚಿತ್ರ ʻಟೆನ್ ಅವರ್ಸ್ʼ ಕೂಡ ಬಹಳ ವಿಶೇಷವಾಗಿವೆ. ಈ 9ರಲ್ಲಿ ಒಂದಷ್ಟು ಸಿನಿಮಾಗಳು ಕನ್ನಡದಲ್ಲಿಯೂ ಸ್ಟ್ರೀಮಿಂಗ್ ಆಗಲಿವೆ. ಈ ಒಂಬತ್ತರಲ್ಲಿ 6 ಸಿನಿಮಾಗಳು ನೆಟ್‌ಫ್ಲಿಕ್ಸ್‌ನಲ್ಲಿ ಪ್ರೀಮಿಯರ್ ಆಗಲಿವೆ.