Oscar Awards 2025: ಸೋತು ಸುಣ್ಣವಾದ ಕಂಗುವ ಚಿತ್ರಕ್ಕೆ ಆಸ್ಕರ್ ಮೇಲೆ ಕಣ್ಣು; ರೇಸ್‌ನಲ್ಲಿ ಭಾರತದ ಯಾವೆಲ್ಲ ಸಿನಿಮಾಗಳಿವೆ?
Oscar Awards 2025: ಅಚ್ಚರಿಯ ರೀತಿಯಲ್ಲಿ ಕಾಲಿವುಡ್‌ನಲ್ಲಿ ನಿರ್ಮಾಣವಾದ ಕಂಗುವ ಸಿನಿಮಾ ಆಸ್ಕರ್ ಪ್ರಶಸ್ತಿಯ ರೇಸ್‌ಗೆ ಇಳಿದಿದೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಎಲ್ಲರು ಹುಬ್ಬೇರಿಸಿದ್ದಾರೆ.
Oscar Awards 2025: ಆಸ್ಕರ್ ಅವಾರ್ಡ್ಸ್ 2025ರ ನಾಮನಿರ್ದೇಶನ ಆರಂಭವಾಗಿದೆ. ಮುಂದಿನ ಎರಡು ತಿಂಗಳಲ್ಲಿ ನಡೆಯುವ ವಿಶ್ವದ ಅತಿ ದೊಡ್ಡ ಸಿನಿಮಾ ಪ್ರಶಸ್ತಿ ಇದಾಗಿದ್ದು, ಈಗಾಗಲೇ ಈ ಪ್ರಶಸ್ತಿಯಲ್ಲಿ ಸೆಣಸಲು ಭಾರತೀಯ ಸಿನಿಮಾಗಳೂ ಸ್ಪರ್ಧೆಯಲ್ಲಿವೆ. ಆ ಪೈಕಿ ಅವುಗಳಲ್ಲಿ ಕೆಲವು ನಾಮಿನೇಷನ್ ಪ್ರಕ್ರಿಯೆ ತಲುಪಿವೆ. ಅದರಂತೆ ಈ ವರ್ಷದ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತ ಕಂಗುವ ಸಿನಿಮಾ ಸಹ ಆಸ್ಕರ್ ರೇಸ್‌ನಲ್ಲಿದೆ! 97ನೇ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ನಟ ಸೂರ್ಯ ಅಭಿನಯದ ಕಂಗುವ ಚಿತ್ರದ ಹೆಸರು ಕಂಡಿದೆ. ಕಂಗುವ ಮಾತ್ರವಲ್ಲದೆ 5 ಭಾರತೀಯ ಚಿತ್ರಗಳು ಆಸ್ಕರ್ ಪ್ರಶಸ್ತಿ ರೇಸ್‌ಗಿಳಿದಿವೆ.
1929ರಲ್ಲಿ ಆರಂಭವಾದ ಆಸ್ಕರ್ ಪ್ರಶಸ್ತಿ, ಸದ್ಯ 97ನೇ ಆವೃತ್ತಿಗೆ ಬಂದು ನಿಂತಿದೆ. ಇದೇ ವರ್ಷದ 2ರಂದು ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹೀಗಿರುವಾಗಲೇ ಸಿನಿಮಾ ಟ್ರೇಡ್ ಅನಾಲಿಸ್ಟ್ ಮನೋಬಾಲಾ ವಿಜಯಬಾಲನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಕಂಗುವ ಸಿನಿಮಾದ ಆಸ್ಕರ್ ಪ್ರವೇಶದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕಾಡೆಮಿ ಪ್ರಶಸ್ತಿ ಪಟ್ಟಿ ಹೊರಬಿದ್ದಿದ್ದು, ಅದರಲ್ಲಿ ಕಂಗುವವರ ಹೆಸರೂ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
207 ಚಿತ್ರಗಳ ಶಾರ್ಟ್ ಲಿಸ್ಟ್
ಈ ಬಾರಿ ಒಟ್ಟು 323 ಚಿತ್ರಗಳು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಅವಾರ್ಡ್ಸ್‌ಗೆ ಅರ್ಜಿ ಸಲ್ಲಿಸಿದ್ದವು. ಅವುಗಳಲ್ಲಿ 207 ಚಿತ್ರಗಳು ಶಾರ್ಟ್‌ಲಿಸ್ಟ್ ಆಗಿವೆ. ಅಂದಹಾಗೆ ಇತ್ತೀಚೆಗಷ್ಟೇ ಅಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ತಯಾರಾದ 'ಲಾಪತಾ ಲೇಡೀಸ್' ಸಿನಿಮಾ ಈಗಾಗಲೇ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ. ಈ ನಡುವೆಯೇ ಕಂಗುವ ಹೆಸರೂ ತೂರಿಬಂದಿದ್ದು, ಅಚ್ಚರಿ ಮೂಡಿದೆ. ಇದೊಂದೆ ಸಿನಿಮಾ ಮಾತ್ರವಲ್ಲದೆ, ಭಾರತ ಈ ಐದು ಸಿನಿಮಾಗಳೂ ಆಸ್ಕರ್ ರೇಸ್‌ನಲ್ಲಿವೆ ಎನ್ನಲಾಗುತ್ತಿದೆ.
ಆಸ್ಕರ್ ರೇಸ್‌ನಲ್ಲಿ ಭಾರತದ ಐದು ಸಿನಿಮಾಗಳು
- ದಿ ಗೋಟ್ ಲೈಫ್
- ಸ್ವತಂತ್ರ ವೀರ್ ಸಾವರ್ಕರ್
- ಅನುಜಾ
ನಾಮನಿರ್ದೇಶನಕ್ಕೆ ಮತದಾನ ಯಾವಾಗ
97ನೇ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಅವಾರ್ಡ್‌ಗಳಿಗಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಚಿತ್ರಗಳ ನಾಮನಿರ್ದೇಶನಗಳಿಗೆ ಜನವರಿ 8 ರಿಂದ ಮತದಾನ ಪ್ರಾರಂಭವಾಗುತ್ತದೆ. ಇದು ಜನವರಿ 12 ರವರೆಗೆ ನಡೆಯಲಿದೆ. ಇದರ ನಂತರ, ಆಸ್ಕರ್ 2025ಕ್ಕೆ ನಾಮನಿರ್ದೇಶನಗೊಳ್ಳುವ ಚಿತ್ರಗಳನ್ನು ಜನವರಿ 17ರಂದು ಅಧಿಕೃತವಾಗಿ ಘೋಷಿಸಲಾಗುತ್ತದೆ.