ನಾವ್ಯಾರಿಗೂ ಕಮ್ಮಿ ಇಲ್ಲ! ಕನ್ನಡ ಕಿರುತೆರೆ ಕ್ಷೇತ್ರದ ಬಗ್ಗೆ ಪರಭಾಷೆ ವಾಹಿನಿಯ ಹೆಡ್ ಹೇಳಿದ್ದು ಕೇಳಿ ಮಾಳವಿಕಾ ಅವಿನಾಶ್ ಅಚ್ಚರಿ
Kannada Television: ಸಿನಿಮಾ ಮತ್ತು ಕಿರುತೆರೆ ನಟಿ ಮಾಳವಿಕಾ ಅವಿನಾಶ್, ಬೇರೆ ಭಾಷೆಯ ಚಿತ್ರೋದ್ಯಮದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚೆಗಷ್ಟೇ ಸಿನಿಮಾ ಜತೆ ಜತೆಗೆ ಸೀರಿಯಲ್ ಆಫರ್‌ಗಳೂ ಮಾಳವಿಕಾ ಅವರನ್ನು ಹುಡುಕಿಕೊಂಡು ಬರುತ್ತಿವೆ. ಇದೇ ವಿಚಾರಕ್ಕೆ ನಡೆದ ಪ್ರಸಂಗವೊಂದನ್ನು ಖುಷಿಯಿಂದಲೇ ಅವರು ಹೇಳಿಕೊಂಡಿದ್ದಾರೆ.

Malavika Avinash on Kannada Television: ಕನ್ನಡ ಕಿರುತೆರೆ ಮೊದಲಿನಂತಿಲ್ಲ. ಸಣ್ಣ ಬಜೆಟ್‌ನಲ್ಲಿ ಸೀರಿಯಲ್‌ಗಳು ನಿರ್ಮಾಣವಾಗುತ್ತಿಲ್ಲ. ಸಿನಿಮಾ ರೇಂಜಿಗೆ ನಮ್ಮ ಸೀರಿಯಲ್‌ಗಳು ಮೂಡಿಬರುತ್ತಿವೆ. ತಾಂತ್ರಿಕವಾಗಿಯೂ ಅಷ್ಟೇ ಬಲಶಾಲಿಯಾಗಿವೆ. ಅಂದಹಾಗೆ ಇದು ನಮ್ಮ ಬೆನ್ನನ್ನು ನಾವೇ ಇಲ್ಲಿ ತಟ್ಟಿಕೊಳ್ಳುತ್ತಿಲ್ಲ. ಬದಲಾಗಿ, ನಮ್ಮ ಪಕ್ಕದ ರಾಜ್ಯಗಳ ವಾಹಿನಿಗಳ ಹೆಡ್‌ಗಳೂ ಕನ್ನಡ ಕಿರುತೆರೆಯಲ್ಲಿನ ಬೆಳವಣಿಗೆ, ಬದಲಾವಣೆಗಳನ್ನು ಗಮನಿಸುತ್ತಿದ್ದಾರೆ. ಇತ್ತೀಚಿಗೆ ಉದಾಹರಣೆ ಎಂಬಂತೆ, ನಟಿ ಮಾಳವಿಕಾ ಅವಿನಾಶ್ ತಮಗಾದ ಅನುಭವೊಂದನ್ನು ಹಂಚಿಕೊಂಡಿದ್ದಾರೆ.
ನಟಿ ಮಾಳವಿಕಾ ಅವಿನಾಶ್ ಪೋಸ್ಟ್ ಹೀಗಿದೆ..
ನಾನು ಇತ್ತೀಚೆಗೆ ಆರ್‌ಜೆ ರ್ಯಾಪಿಡ್ ರಶ್ಮಿಯೊಂದಿಗೆ ನಡೆಸಿದ ಸಂವಾದ, ಅನೇಕರಿಗೆ ಇಷ್ಟವಾಗಿದೆ ಅಂತ ತಿಳಿಸಿದ್ದಕ್ಕೆ ತಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ವಿಶೇಷವಾಗಿ ಕೆಜಿಎಫ್ ಯಾವ ರೀತಿ ಕನ್ನಡ ಚಿತ್ರಗಳನ್ನು ಭಾಷೆಯ ಗೆರೆಯನ್ನು ದಾಟಿಸಿ, ಭೌಗೋಳಿಕ ಗಡಿಗಳನ್ನು ದಾಟಿಸಿ, ವಿಶ್ವದ ಪ್ರೇಕ್ಷಕರನ್ನು ವ್ಯಾಪಿಸಿದೆ ಎಂಬ ನನ್ನ ಅನುಭವಗಳನ್ನು ಹಂಚಿಕೊಂಡಿದ್ದು, ತಮ್ಮೆಲ್ಲರಿಗೆ ಹೆಮ್ಮೆ, ಮೆಚ್ಚುಗೆಯನ್ನುಂಟುಮಾಡಿದೆ.
ಚಲನ ಚಿತ್ರಗಳ ಮಾಧ್ಯಮ ಹಾಗಿರಲಿ. ನನಗೆ ಓರ್ವ ಕಲಾವಿದೆಯಾಗಿ, ಗಂಭೀರವಾದ ಆದರ್ಶದ ಕಥಾಪಾತ್ರಗಳಿಂದ ಹಿಡಿದು ಹಾಸ್ಯ, ಖಳಭೂಮಿಕೆ, ನಿರೂಪಣೆ, ಬರವಣಿಗೆ, ನಿರ್ದೇಶನದಂತಹ ನನ್ನಲ್ಲಿನ ಹಲವು ಆಯಾಮಗಳನ್ನು ನನಗೆ ತೋರಿಸಿಕೊಟ್ಟ ಮಾಧ್ಯಮ ಕಿರುತೆರೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ ಸಮೇತವಾಗಿ ಎಲ್ಲ ಭಾಷೆಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ನನ್ನದಾಗಿದೆ. ಹಿರಿತೆರೆಯಂತೆಯೇ ಕಿರುತೆರೆಯಲ್ಲೂ ನಾವು ತೆಲುಗು ತಮಿಳಿಗೆ ಹೋಲಿಸಿದರೆ ಅನುಜರೇ. ಅವರ ಬಡ್ಜೆಟ್ಟಿನ ಗಾತ್ರ ಮತ್ತು ಮಾರುಕಟ್ಟೆ ನಮಗಿಂತ ಹಿರಿದು. ನಾನು, ಮಾಯಾಮೃಗದ ನಂತರ, 2001ರಲ್ಲಿ ಕೆ.ಬಾಲಚಂದರ್ ಅವರ “ಅಣ್ಣಿ”ಯಲ್ಲಿ ಅಭಿನಯಿಸಲು ಹೋದಾಗ ಎಲ್ಲವನ್ನು ಬೆರಗಿನಿಂದ ನೋಡಿದ ನೆನಪಿದೆ. The scale of production was ginormous in comparison. ಈ 25-27ವರ್ಷಗಳಲ್ಲಿ ಎಲ್ಲವನ್ನೂ ನೋಡಿದ್ದಾಗಿದೆ, ತೆರೆಯ ಹಿಂದೆ ಮುಂದೆ, full 360 of television.
ಮೊನ್ನೆ ನನಗೊಂದು ಕರೆ ಬಂತು. “ನೀವು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದರೆ ಮಾತ್ರ ಅಭಿನಯಿಸೋದಂತೆ ಟಿವಿಯಲ್ಲಿ”, ಅಂತ ಕೇಳಿದ್ದು, ತಮಿಳಿನ ಪ್ರತಿಷ್ಠಿತ ವಾಹಿನಿಯ ಫಿಕ್ಷನ್ ಹೆಡ್. “ನಿಜ, ಸಿನಿಮಾ ಆದರೆ ಕೆಲವು ದಿನಗಳ ಮಟ್ಟಿಗೆ ಶೂಟಿಂಗಿರುತ್ತೆ. ಹಾಗಾಗಿ ಔಟ್ ಡೋರ್ ಅಂತ ಬೇರೆಬೇರೆ ರಾಜ್ಯಗಳಿಗೆ ಹೋಗೋದುಂಟು. ಟೀವಿಯದ್ದು ಸುದೀರ್ಘ commitment, ವರ್ಷಗಟ್ಟಲೆ ಚೆನ್ನೈಯಲ್ಲೊ ಹೈದರಾಬಾದನಲ್ಲೋ ನೆಲೆಯೂರ ಬೇಕಾಗುತ್ತೆ. ನನ್ನ ಈಗಿನ ಮನೆಯ ಪರಿಸ್ಥಿತಿ, ಗಾಲವನ ಕಾರಣಕ್ಕೆ, ನಾನು ತಮಿಳು ತೆಲುಗು ಮಲಯಾಳಂನ ಧಾರಾವಾಹಿಗಳನ್ನುavoid ಮಾಡುತ್ತೇನೆ. ಹಾಗೂ ನಾನೇ ಬೇಕು ಎಂದರೆ, ಬೆಂಗಳೂರಲ್ಲಿ ಚಿತ್ರೀಕರಣ ಮಾಡುವುದಾದರೆ ಅಭಿನಯಿಸುತ್ತೇನೆ,” ಎಂದೆ. “ಮ್ಯಾಡಮ್ ನಾವು ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ಮಾಡಬೇಕೆಂದು ನಿರ್ಧರಿಸಿದ್ದೇವೆ. ಆದ ಕಾರಣವೇ ನಿಮಗೆ ಫೋನ್ ಹಚ್ಚಿದ್ದು. ಕನ್ನಡ ಧಾರಾವಾಹಿಗಳಲ್ಲಿನ presentation ಮತ್ತು ಚಿತ್ರೀಕರಣದ ಶೈಲಿ ಅತ್ಯಂತ ವಿಭಿನ್ನವಾಗಿದೆ ಮತ್ತು ನಮ್ಮಲ್ಲಿ ಹಾಗಿಲ್ಲ. ಅದಕ್ಕೆ ಅಲ್ಲೇ ಬಂದು ಸ್ಥಳೀಯ ಬರಹಗಾರ, ನಿರ್ದೇಶಕ, ಕಲಾವಿದರು, ನಿರ್ಮಾಪಕರೊಂದಿಗೆ ಕೆಲಸ ಮಾಡೋಣವೆಂದು ತೀರ್ಮಾನಿಸಿದ್ದೇವೆ,” ಎಂದರು.
ಅಭಿನಯದಲ್ಲಿ ಎಲ್ಲಾ ಕಾಲದಲ್ಲೂ, ಎಲ್ಲರಷ್ಟೇ ನಾವು ಸಮರ್ಥರಿದ್ದೇವೆ. ತಮಿಳು ತೆಲುಗು ಕಿರುತೆರೆಯ ಬಹುಪಾಲು ನಾಯಕ ನಾಯಕಿಯರು, ಪೋಷಕ ಕಲಾವಿದರು, ನಮ್ಮಲ್ಲಿಂದ ವಲಸೆ ಹೋಗುವವರೆ. ಆದರೆ ಟೆಕ್ನಿಕಲ್ ಸಾಮರ್ಥ್ಯದಲ್ಲಿ, ಟೇಕಿಂಗ್ಸ್ ನಲ್ಲೂ ನಾವು ಮುಂದುದ್ದೇವೆ ಎಂಬುದನ್ನು ಕೇಳಿ ತುಂಬ ಹೆಮ್ಮೆಯೆನಿಸಿತು. ರಾಘವ್, ಸುಧೀಂದ್ರ, ನಿಮ್ಮ ತಂಡಕ್ಕೆ ನನ್ನದೊಂದು ಸಲಾಮ್! ಅವರಿಗೆ ನನ್ನ ಅಭಿನಂದನೆಗಳು.
ವಿಭಾಗ