ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ ಬಿಡುಗಡೆ: ಲೆಸ್ಬಿಯನ್‌ ಲವ್‌ ಸ್ಟೋರಿ ನೋಡಲು ಈ ಒಟಿಟಿಗೆ ಭೇಟಿ ನೀಡಿ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ ಬಿಡುಗಡೆ: ಲೆಸ್ಬಿಯನ್‌ ಲವ್‌ ಸ್ಟೋರಿ ನೋಡಲು ಈ ಒಟಿಟಿಗೆ ಭೇಟಿ ನೀಡಿ

ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ ಬಿಡುಗಡೆ: ಲೆಸ್ಬಿಯನ್‌ ಲವ್‌ ಸ್ಟೋರಿ ನೋಡಲು ಈ ಒಟಿಟಿಗೆ ಭೇಟಿ ನೀಡಿ

ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ: ಬೋಲ್ಡ್‌ ತಮಿಳು ಸಿನಿಮಾವೊಂದು ಒಟಿಟಿಗೆ ಆಗಮಿಸಿದೆ. ಎರಡು ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕಾದಲ್‌ ಎನ್ಬಾದು ಪೋದು ಉಧಮೈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಲೆಸ್ಬಿಯನ್‌ ಲವ್‌ ಸ್ಟೋರಿ ಹೊಂದಿರುವ ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ.

ಕಾದಲ್‌ ಎನ್ಬಾದು ಪೋದು ಉಧಮೈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ
ಕಾದಲ್‌ ಎನ್ಬಾದು ಪೋದು ಉಧಮೈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ

ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ: ಸಲಿಂಗಕಾಮ, ಲೆಸ್ಬಿಯನ್‌ ಪ್ರೇಮದ ಕಥೆಗಳ ಕುರಿತು ಸಮಾಜ ಈಗಲೂ ವಿಚಿತ್ರವಾಗಿ ನೋಡುತ್ತದೆ. ಲೆಸ್ಬಿಯನ್‌ ಲವ್‌ ಕುರಿತು ಕೆಲವೊಂದು ದೇಶಗಳು ಮುಕ್ತವಾಗಿದೆ. ಆದರೆ, ಭಾರತದಲ್ಲಿ ಈಗಲೂ ಲೆಸ್ಬಿಯನ್‌ ಪ್ರೇಮದ ಕುರಿತು ನೇರವಾಗಿ ಹೇಳಲು ಹಿಂಜರಿಯುತ್ತಾರೆ. ಸುಪ್ರೀಂ ಕೋರ್ಟ್ ಇದು ಕಾನೂನುಬಾಹಿರವಲ್ಲ ಎಂದು ತೀರ್ಪು ನೀಡಿದ ನಂತರವೂ ಲೆಸ್ಬಿಯನ್‌ ಪ್ರೇಮದ ಕುರಿತು ಮಡಿವಂತಿಕೆ ಕಡಿಮೆಯಾಗಿಲ್ಲ. ಆದರೆ, ಕೆಲವೊಂದು ಸಿನಿಮಾ, ವೆಬ್‌ ಸರಣಿಗಳು ಲೆಸ್ಬಿಯನ್‌ ಲವ್‌ಸ್ಟೋರಿಗಳಿಗೆ ಒತ್ತು ನೀಡುತ್ತಿವೆ. ಇತ್ತೀಚೆಗೆ ತಮಿಳಿನಲ್ಲಿ ಲೆಸ್ಬಿಯನ್‌ ಪ್ರೇಮಕಥೆಯ ಸಿನಿಮಾವೊಂದು ಬಂದಿದೆ.

ಕಾದಲ್‌ ಎನ್ಬಾದು ಪೋದು ಉಧಮೈ ಒಟಿಟಿ ಬಿಡುಗಡೆ

ಕಾದಲ್‌ ಎನ್ಬುದು ಪೋದು ಉಧಮೈ ಸಿನಿಮಾವು ಈ ಸೋಮವಾರ (ಏಪ್ರಿಲ್‌ 14) ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದು ಪ್ರೇಮಿಗಳ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಈಗ ಸನ್‌ನೆಕ್ಸ್ಟ್‌ ಒಟಿಟಿಯಲ್ಲಿ ನೋಡಬಹುದು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

"ಅಡೆತಡೆಗಳನ್ನು ನಿವಾರಿಸಿ ಪ್ರೀತಿಯನ್ನು ಅನುಭವಿಸಿ, ಈಗಲೇ ವೀಕ್ಷಿಸಿ, ಕಾದಲ್‌ ಎನ್ಬಾದು ಪೋದು ಉಧಮೈ ಇದೀಗ ಸನ್‌ನೆಕ್ಸ್ಟ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾದಲ್ಲಿ ವಿನೀತ್, ರೋಹಿಣಿ, ಲಿಜೋಮೋಲ್ ಜೋಸ್ ಮತ್ತು ಅನುಷಾ ಪ್ರಭು ನಟಿಸಿದ್ದಾರೆ" ಎಂದು ಸನ್‌ನೆಕ್ಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

ನಮ್ಮ ಸಮಾಜದಲ್ಲಿ ಸಲಿಂಗ ಪ್ರೀತಿ ಮತ್ತು ಮದುವೆಯನ್ನು ಇನ್ನೂ ವಿಚಿತ್ರವಾಗಿ ನೋಡಲಾಗುತ್ತದೆ. ಹೆಚ್ಚಿನ ಜನರು ಇನ್ನೂ ಅಂತಹ ಪ್ರೀತಿ ಮತ್ತು ಮದುವೆಯನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಈ ಸಂದರ್ಭದಲ್ಲಿ, ಈ ಚಿತ್ರವು ಇಬ್ಬರು ಲೆಸ್ಬಿಯನ್ನರ ನಡುವಿನ ಪ್ರೀತಿ ಮತ್ತು ಮದುವೆಯ ಕಥೆ ಹೇಳಿದೆ. ಈ ಚಿತ್ರ ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅಭಿನವ್ ಸುಬ್ರಮಣಿಯನ್ ಕಥೆ ಬರೆದ ಈ ಚಿತ್ರವನ್ನು ಜಯಪ್ರಕಾಶ್ ರಾಧಾಕೃಷ್ಣನ್ ನಿರ್ದೇಶಿಸಿದ್ದಾರೆ. ವಿನೀತ್ ಮತ್ತು ರೋಹಿಣಿಯಂತಹ ಹಿರಿಯ ನಟರ ಜೊತೆಗೆ, ಲಿಜೋಮೋಲ್ ಜೋಸ್ ಮತ್ತು ಅನುಷಾ ಪ್ರಭು ಲೆಸ್ಬಿಯನ್‌ ಪ್ರೇಮಿಗಳಾಗಿ ನಟಿಸಿದ್ದಾರೆ.

ಕಾದಲ್‌ ಎನ್ಬಾದು ಪೋದು ಉಧಮೈ ಕಥೆ

ಒಬ್ಬಳು ಇನ್ನೊಬ್ಬಳನ್ನು ಪ್ರೀತಿಸುತ್ತಾಳೆ. ಈ ವಿಷಯ ಮನೆಯವರಿಗೆ ತಿಳಿಸಿದಾಗ ಅವರು ಆಘಾತಕ್ಕೆ ಒಳಗಾಗುತ್ತಾರೆ. ಇದು ನಡೆಯಲು ಸಾಧ್ಯವಿಲ್ಲ ಎಂದುಕೊಳ್ಳುತ್ತಾರೆ. ಇವರಿಬ್ಬರು ತಮ್ಮ ಮನೆಯವರನ್ನು ಮನವೊಲಿಸಲು ಆ ಯುವ ದಂಪತಿಗಳು ಯಾವ ಪ್ರಯತ್ನಗಳನ್ನು ಮಾಡಿದರು? ಈ ಪ್ರಕ್ರಿಯೆಯಲ್ಲಿ ಎದುರಾದ ಸವಾಲುಗಳೇನು? ಆ ಪೋಷಕರು ಕೊನೆಗೆ ಏನು ಮಾಡಿದರು ಎಂಬುದು ಈ ಚಿತ್ರದ ಕಥೆ. ಎಲ್‌ಜಿಬಿಟಿಕ್ಯೂ ಸಮುದಾಯದ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಈ ಚಿತ್ರ ಸೂಚ್ಯವಾಗಿ ತಿಳಿಸಿದೆ.

ಕಾದಲ್‌ ಎನ್ಬಾದು ಪೋದು ಉಧಮೈ ಸಿನಿಮಾಕ್ಕೆ ಐಎಂಡಿಬಿಯಿಂದ 10ರಲ್ಲಿ 9.1 ರೇಟಿಂಗ್ ದೊರಕಿದೆ. ಲೆನ್ಸ್ ನಂತಹ ವೈವಿಧ್ಯಮಯ ಚಿತ್ರವನ್ನು ನಿರ್ದೇಶಿಸಿದ ಜಯಪ್ರಕಾಶ್ ರಾಧಾಕೃಷ್ಣನ್, ಕಾದಲ್‌ ಎನ್ಬಾದು ಪೋದು ಉಧಮೈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner