OTT Thriller: ಒಟಿಟಿಯಲ್ಲಿ ಡಿಸ್ಪ್ಯಾಚ್‌ ಚಿತ್ರಕ್ಕೆ ಮನಸೋತ ವೀಕ್ಷಕರು; 20 ಕೋಟಿ ನಿಮಿಷ ವೀಕ್ಷಣೆ ಕಂಡ ಮನೋಜ್‌ ಬಾಜಪೇಯಿ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Ott Thriller: ಒಟಿಟಿಯಲ್ಲಿ ಡಿಸ್ಪ್ಯಾಚ್‌ ಚಿತ್ರಕ್ಕೆ ಮನಸೋತ ವೀಕ್ಷಕರು; 20 ಕೋಟಿ ನಿಮಿಷ ವೀಕ್ಷಣೆ ಕಂಡ ಮನೋಜ್‌ ಬಾಜಪೇಯಿ ಸಿನಿಮಾ

OTT Thriller: ಒಟಿಟಿಯಲ್ಲಿ ಡಿಸ್ಪ್ಯಾಚ್‌ ಚಿತ್ರಕ್ಕೆ ಮನಸೋತ ವೀಕ್ಷಕರು; 20 ಕೋಟಿ ನಿಮಿಷ ವೀಕ್ಷಣೆ ಕಂಡ ಮನೋಜ್‌ ಬಾಜಪೇಯಿ ಸಿನಿಮಾ

OTT Crime Thriller Movies: ಬಾಲಿವುಡ್‌ ನಟ ಮನೋಜ್‌ ಬಾಜಪೇಯಿ ನಟನೆಯ ಕ್ರೈಮ್ ಥ್ರಿಲ್ಲರ್ ಜಾನರ್‌ನ ಡಿಸ್ಪ್ಯಾಚ್‌ ಸಿನಿಮಾ ಇದೀಗ ಒಟಿಟಿಯಲ್ಲಿ ಮತ್ತೊಂದು ಅಪರೂಪದ ಮೈಲಿಗಲ್ಲು ಮುಟ್ಟಿದೆ. ಕಳೆದ ಎರಡು ವಾರಗಳ ಹಿಂದಷ್ಟೇ ಜೀ5 ಒಟಿಟಿಗೆ ಬಂದಿದ್ದ ಈ ಚಿತ್ರ, ಈಗ ಕಡಿಮೆ ಸಮಯದಲ್ಲಿ 20 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ.

200 ಮಿಲಿಯನ್‌ ವೀಕ್ಷಣೆ ಕಂಡ ಮನೋಜ್‌ ಬಾಜಪೇಯಿ ಸಿನಿಮಾ
200 ಮಿಲಿಯನ್‌ ವೀಕ್ಷಣೆ ಕಂಡ ಮನೋಜ್‌ ಬಾಜಪೇಯಿ ಸಿನಿಮಾ

OTT Crime Thriller Movies: ಒಟಿಟಿ ವೇದಿಕೆಗಳಲ್ಲಿ ಕ್ರೈಮ್ ಥ್ರಿಲ್ಲರ್ ಶೈಲಿಯ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ. ಈಗಾಗಲೇ ಆ ಜಾನರ್‌ನ ಚಿತ್ರಗಳು ದೊಡ್ಡ ಯಶಸ್ಸು ಕಂಡ ಉದಾಹರಣೆಗಳು ಸಾಕಷ್ಟಿವೆ. ಈಗ ಆ ಸಾಲಿಗೆ ಇನ್ನೊಂದು ಸೇರ್ಪಡೆ ಆಗುತ್ತಿದೆ ಇತ್ತೀಚೆಗಷ್ಟೇ ಬಿಡುಗಡೆ ಡಿಸ್ಪ್ಯಾಚ್‌ ಸಿನಿಮಾ. ಎರಡು ವಾರಗಳ ಹಿಂದೆ ಜೀ5  ಒಟಿಟಿಯಲ್ಲಿ ಬಿಡುಗಡೆ ಆಗಿದ್ದ ಮನೋಜ್‌ ಬಾಜಪೇಯಿ ಅವರ ಈ ಸಿನಿಮಾ, ಅಂಥದ್ದೊಂದು ದಾಖಲೆ ತನ್ನದಾಗಿಸಿಕೊಂಡಿದೆ.

ಬಾಲಿವುಡ್‌ ನಟ ಮನೋಜ್‌ ಬಾಜಪೇಯಿ, ಸಿನಿಮಾ ಮಾತ್ರವಲ್ಲದೆ, ಒಟಿಟಿ ವೀಕ್ಷಕರಿಗೂ ಇಷ್ಟದ ನಟ. ಈಗಾಗಲೇ ಇವರ ಫ್ಯಾಮಿಲಿ ಮ್ಯಾನ್‌ ವೆಬ್‌ಸಿರೀಸ್‌ ಸಾಕಷ್ಟು ಜನಪ್ರಿಯ ಗಳಿಸಿದ ಸಿರೀಸ್‌ ಎನಿಸಿಕೊಂಡಿವೆ. ಅದಾದ ಬಳಿಕ ಎಷ್ಟೋ ಸಿನಿಮಾಗಳು ನೇರವಾಗಿ ಒಟಿಟಿಗೂ ಆಗಮಿಸಿದ್ದವು. ಅದರಂತೆ, ಇದೇ ತಿಂಗಳ 13ರಂದು ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಈಗ ಇದೇ ಸಿನಿಮಾ ವೀಕ್ಷಣೆ ವಿಚಾರದಲ್ಲೂ ಮುಂದಡಿ ಇರಿಸಿದೆ.

ಜೀ5 ಒಟಿಟಿಯಲ್ಲಿ ಡಿಸೆಂಬರ್ 13ರಂದು ಸ್ಟ್ರಿಮಿಂಗ್‌ ಆರಂಭಿಸಿದ್ದ ಈ ಸಿನಿಮಾ, ಎರಡೇ ವಾರಗಳಿಗೂ ಕಡಿಮೆ ಅವಧಿಯಲ್ಲಿ 20 ಕೋಟಿ ನಿಮಿಷ ಸ್ಟ್ರೀಮಿಂಗ್ ದಾಖಲೆ ಮುಟ್ಟಿದೆ. 20 ಕೋಟಿ ನಿಮಿಷದ ಗಡಿ ದಾಟಿದ ಎಂಬ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಂಡಿದೆ ಜೀ5. ಅಂದಹಾಗೆ, ಡಿಸ್ಪ್ಯಾಚ್‌ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಮನೋಜ್‌ ಬಾಜಪೇಯಿ ಕಾಣಿಸಿಕೊಂಡಿದ್ದಾರೆ.

ಡಿಸ್ಪ್ಯಾಚ್ ಮೂವಿ ಕಥೆ ಏನು?

ಡಿಸ್ಪ್ಯಾಚ್ ಚಿತ್ರವು ಕ್ರೈಮ್ ಥ್ರಿಲ್ಲರ್ ಶೈಲಿಯ ಸಿನಿಮಾ. 2ಜಿ ಹಗರಣವನ್ನು ಬಹಿರಂಗಪಡಿಸುವ ಪತ್ರಕರ್ತ ಜಾಯ್ (ಮನೋಜ್‌ ಬಾಜಪೇಯಿ) ಅವರ ಸುತ್ತ ಸುತ್ತುತ್ತದೆ. ಡಿಸ್ಪ್ಯಾಚ್ ಎಂಬ ಪತ್ರಿಕೆಯಲ್ಲಿ ಕೆಲಸಮಾಡುವವರಾಗಿ ನಟಿಸಿದ್ದಾರೆ. ಕೊಲೆ ಪ್ರಕರಣವೊಂದರ ಜಾಡು ಹಿಡಿದು, ಆ ಕೊಲೆಯ ಹಿಂದಿರುವವರನ್ನು ಪತ್ತೆ ಮಾಡುವಾಗ, 2 ಜಿ ಹಗರಣದ ಬಗ್ಗೆ ಆತನಿಗೆ ಮಾಹಿತಿ ಸಿಗುತ್ತದೆ. ಅಲ್ಲಿ 8 ಸಾವಿರ ಕೋಟಿ ರೂಪಾಯಿ ಹಗರಣದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಹುಡುಕಾಟಕ್ಕಿಳಿಯುತ್ತಾನೆ.

ಮೂವರು ನಾಯಕಿಯರ ಜತೆಗೆ ಲಿಪ್‌ಲಾಕ್‌

ಈ ಹುಡುಕಾಟದಲ್ಲಿ ಅನೇಕ ಸವಾಲುಗಳನ್ನು ಸಹ ಎದುರಿಸುತ್ತಾನೆ ಜಾಯ್‌. ಈ ಥ್ರಿಲ್ಲರ್‌ ಸಿನಿಮಾಕ್ಕೆ ಆರಂಭದಲ್ಲಿ ನೆಗೆಟಿವ್‌ ಟಾಕ್‌ ಕೇಳಿಬಂದಿತ್ತು. ಅದಾದ ಮೇಲೆ ಐಎಂಡಿಬಿಯಲ್ಲಿ ಕೇವಲ 4.7 ರೇಟಿಂಗ್‌ ಪಡೆದುಕೊಂಡಿತ್ತು. ಇದಷ್ಟೇ ಅಲ್ಲದೆ, ಮನೋಜ್ ಬಾಜಪೇಯಿ ಕೂಡ ಈ ಚಿತ್ರದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಒಂದು ದೃಶ್ಯದಲ್ಲಿ ಅವರು ಸಂಪೂರ್ಣವಾಗಿ ನಗ್ನರಾಗಿದ್ದಾರೆ. ಮೂವರು ನಟಿಯರ ಜತೆಗೆ ಲಿಪ್-ಲಾಕ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ರೋನಿ ಸ್ಕ್ರೂವಾಲಾ ನಿರ್ಮಿಸಿರುವ ಈ ಚಿತ್ರವನ್ನು ಕಾನು ಬೆಹ್ಲ್ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಜೀ5 ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.

Whats_app_banner