ಕುಂಬಳಕಾಯಿ ಕೋಪಗೊಂಡರೆ ಏನಾಗಬಹುದು? ಒಟಿಟಿಗೆ ಬಂತು ಹಾರರ್ ಕಾರ್ವೆಡ್ ಸಿನಿಮಾ; ಇದು ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ
Carved Movie OTT: ಹಾರರ್ ಸಿನಿಮಾ ಇಷ್ಟಪಡುವವರು ಇದೀಗ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಗೆ ಭೇಟಿ ನೀಡಬಹುದು. ಕುಂಬಳಕಾಯಿಯೊಂದು ಕೋಪಗೊಂಡರೆ ಏನೆಲ್ಲ ಮಾಡಬಹುದು ಎಂಬ ಎಳೆಯ ಹಾರರ್ ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
OTT Horror Comedy: ಹಾರರ್ ಕಾಮಿಡಿ ಪ್ರಕಾರದ ಸಿನಿಮಾಗಳನ್ನು ಇಷ್ಟಪಡುವವರಿಗೆ ಮತ್ತೊಂದು ಚಿತ್ರ ಒಟಿಟಿ ಪ್ರವೇಶಿಸಿದೆ. ಈ ಇಂಗ್ಲಿಷ್ ಚಿತ್ರದ ಹೆಸರು ಕಾರ್ವೆಡ್. 2018ರಲ್ಲಿ ಕಿರುಚಿತ್ರವಾಗಿ ಬಂದ ಈ ಸಿನಿಮಾ, ಈಗ ಪೂರ್ಣಪ್ರಮಾಣದ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಜಸ್ಟಿನ್ ಹಾರ್ಡಿಂಗ್ ನಿರ್ದೇಶನದ ಈ ಚಿತ್ರಕ್ಕೆ ಇದೀಗ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕುಂಬಳಕಾಯಿ ಕೋಪಗೊಂಡರೆ..
ಕಾರ್ವೆಡ್ ಸಿನಿಮಾ ಸೋಮವಾರದಿಂದ (ಅಕ್ಟೋಬರ್ 21) ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ವಾಸ್ತವವಾಗಿ, ಕಾರ್ವೆಡ್ ಹೆಸರಿನೊಂದಿಗೆ 2018 ರಲ್ಲಿ ಕಿರುಚಿತ್ರವೊಂದು ಹೊರಬಂದಿತ್ತು. ಈಗ ಕಂಪ್ಲೀಟ್ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಕುಂಬಳಕಾಯಿ ಸೇಡು ತೀರಿಸಿಕೊಂಡು ಜನರನ್ನು ಸಾಯಿಸುವ ವಿಭಿನ್ನ ಪರಿಕಲ್ಪನೆಯ ಸಿನಿಮಾ ಇದಾಗಿದೆ.
ವಿದೇಶದಲ್ಲಿ ಆಚರಣೆ ಮಾಡುವ ಹ್ಯಾಲೋವೀನ್ ಬಗ್ಗೆ ಈ ಸಿನಿಮಾ ಮೂಡಿಬಂದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 31 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅನೇಕ ಜನರು ಆ ದಿನ ವಿವಿಧ ವೇಷಭೂಷಣಗಳನ್ನು ಧರಿಸಿ, ಈ ಹ್ಯಾಲೋವೀನ್ ಆಚರಣೆ ಮಾಡುತ್ತಾರೆ. ಇದು ಕ್ರಿಶ್ಚಿಯನ್ನರ ಪವಿತ್ರ ಹಬ್ಬ. ಈಗ ಇದೇ ದಿನದ ಥೀಮ್‌ನೊಂದಿಗೆ ಹಾರರ್ ಕಾಮಿಡಿ ಚಿತ್ರ ಕಾರ್ವೆಡ್ ಸಿದ್ಧವಾಗಿದ್ದು, ಒಟಿಟಿಗೂ ಬಂದಿದೆ.
ಕಾರ್ವೆಡ್ ಸಿನಿಮಾ ಕಥೆ ಏನು?
ಕಾರ್ವೆಡ್ ಸಿನಿಮಾದ ಕಥೆ ಹಳ್ಳಿಯೊಂದರಲ್ಲಿ ನಡೆಯುವಂತದ್ದು. ಹಳ್ಳಿಯ ಜನ ಹ್ಯಾಲೋವೀನ್ ದಿನದಂದು ಕುಂಬಳಕಾಯಿಯನ್ನು ಕತ್ತರಿಸಲು ಪ್ರಯತ್ನಿಸುತ್ತಿರುವಾಗ, ಇದ್ದಕ್ಕಿದ್ದಂತೆ ಅದು ಅವರನ್ನು ಕೊಲ್ಲಲು ಪ್ರಾರಂಭಿಸುತ್ತದೆ. ತನ್ನ ಬಳ್ಳಿಗಳಿಂದ ಅವರ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ, ಕತ್ತು ಕೊಯ್ದು ಕೊಲ್ಲುತ್ತದೆ. ಇದಕ್ಕೆ ಕಾರಣ ಏನು? ಆ ಕುಂಬಳಕಾಯಿಯ ಕಥೆ ಏನು? ಅದು ಏಕೆ ಜನರನ್ನು ಕೊಲ್ಲುತ್ತದೆ? ಅಲ್ಲಿಗೆ ಹೋದವರು ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು.
ರಾಟನ್ ಟೊಮ್ಯಾಟೋಸ್‌ನಂತಹ ರೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಚಿತ್ರಕ್ಕೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಈ ಸಿನಿಮಾವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿ ವೀಕ್ಷಿಸಬಹುದು.
ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿರುವ ಸಿನಿಮಾಗಳು
- ಹಸನ್ ಮಿನ್ಹಾ (ಇಂಗ್ಲಿಷ್ ಸಿನಿಮಾ)- ಅಕ್ಟೋಬರ್ 22
- ದಿ ಕಮ್ ಬ್ಯಾಕ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 23
- ಫ್ಯಾಮಿಲಿ ಪ್ಯಾಕ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 23
- ಬ್ಯೂಟಿ ಇನ್ ಬ್ಲ್ಯಾಕ್ (ಇಂಗ್ಲಿಷ್ ವೆಬ್ ಸರಣಿ)- ಅಕ್ಟೋಬರ್ 24
- ದಿ 90ಸ್ ಶೋ ಪಾರ್ಟ್ 3 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 24
- ಟೆರಿಟರಿ (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 24
- ದೋ ಪತ್ತಿ (ಹಿಂದಿ ಸಿನಿಮಾ) - ಅಕ್ಟೋಬರ್ 25
- ಡೋಂಟ್ ಮೂವ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 25
- ಹೆಲ್ ಬೌಂಡ್ ಸೀಸನ್ 2 (ಕೊರಿಯನ್ ವೆಬ್ ಸರಣಿ) - ಅಕ್ಟೋಬರ್ 25
- ದಿ ಲಾಸ್ಟ್ ನೈಟ್ ಅಟ್ ಟ್ರೆಮರ್ ಬೀಚ್ (ಸ್ಪ್ಯಾನಿಷ್ ವೆಬ್ ಸರಣಿ) - ಅಕ್ಟೋಬರ್ 25
- ಮಾಯಾಜಗನ್ (ತಮಿಳು ಸಿನಿಮಾ) ಅಕ್ಟೋಬರ್ 27ರಿಂದ