OTT Horror Movie: ಒಟಿಟಿಯತ್ತ ಮುಖ ಮಾಡುತ್ತಿದೆ ಸ್ತ್ರೀ 2, ಮನೆಯಲ್ಲೇ ನೋಡಿ ಬ್ಲಾಕ್‌ಬಸ್ಟರ್‌ ಹಾರರ್‌ ಚಿತ್ರ, ಇಲ್ಲೊಂದು ಟ್ವಿಸ್ಟ್‌ ಇದೆ-ott horror movie stree 2 ott release date where and when to watch shraddha kapoor rajkummar rao horror film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Horror Movie: ಒಟಿಟಿಯತ್ತ ಮುಖ ಮಾಡುತ್ತಿದೆ ಸ್ತ್ರೀ 2, ಮನೆಯಲ್ಲೇ ನೋಡಿ ಬ್ಲಾಕ್‌ಬಸ್ಟರ್‌ ಹಾರರ್‌ ಚಿತ್ರ, ಇಲ್ಲೊಂದು ಟ್ವಿಸ್ಟ್‌ ಇದೆ

OTT Horror Movie: ಒಟಿಟಿಯತ್ತ ಮುಖ ಮಾಡುತ್ತಿದೆ ಸ್ತ್ರೀ 2, ಮನೆಯಲ್ಲೇ ನೋಡಿ ಬ್ಲಾಕ್‌ಬಸ್ಟರ್‌ ಹಾರರ್‌ ಚಿತ್ರ, ಇಲ್ಲೊಂದು ಟ್ವಿಸ್ಟ್‌ ಇದೆ

OTT Horror Movie: ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿದ್ದ ಸ್ತ್ರೀ 2 ಬಾಲಿವುಡ್‌ನ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿದೆ. ಈಗಲೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿರುವ ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸ್ತ್ರೀ 2 ಒಟಿಟಿ ಬಿಡುಗಡೆ ಕುರಿತು ಅಪ್‌ಡೇಟ್‌ ದೊರಕಿದೆ.

OTT Horror Movie: ಸ್ತ್ರೀ 2 ಸಿನಿಮಾ ಒಟಿಟಿ ಬಿಡುಗಡೆ ವಿವರ
OTT Horror Movie: ಸ್ತ್ರೀ 2 ಸಿನಿಮಾ ಒಟಿಟಿ ಬಿಡುಗಡೆ ವಿವರ

ಬೆಂಗಳೂರು: ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸ್ತ್ರೀ 2 ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ವಿ ದಾಖಲಿಸಿದೆ. ಆಗಸ್ಟ್‌ 15ರಂದು ಈ ಚಿತ್ರ ಬಿಡುಗಡೆಯಾಗಿ ಎಲ್ಲರ ನಿರೀಕ್ಷೆಗೂ ಮೀರಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಇದೇ ಸಮಯದಲ್ಲಿ ಕನ್ನಡದಲ್ಲಿ ಕೃಷ್ಣಂ ಪ್ರಣಯ ಸಖಿ ಬಿಡುಗಡೆಯಾಗಿತ್ತು. ಸ್ತ್ರೀ 2 ಸಿನಿಮಾ ದಿನದಿಂದ ದಿನಕ್ಕೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೆಚ್ಚಿಸುತ್ತ ಸಾಗಿತ್ತು. ಇದು ಜವಾನ್‌ ಸಿನಿಮಾವನ್ನು ಕಲೆಕ್ಷನ್‌ನಲ್ಲಿ ಹಿಂದಿಕ್ಕಿದೆ. ಇದು 2018ರ ಸ್ತ್ರೀ ಎಂಬ ಸೂಪರ್‌ಹಿಟ್‌ ಸಿನಿಮಾದ ಮುಂದಿನ ಭಾಗವಾಗಿದೆ. ಆರಂಭದ ದಿನದಿಂದಲೂ ಸ್ತ್ರೀ 2 ಉತ್ತಮ ಪ್ರಚಾರ ಪಡೆಯಿತು. ವಿಶೇಷವಾಗಿ ಜನರ ಬಾಯ್ಮಾತಿನ ಪ್ರಚಾರದಿಂದಲೇ ಇದು ಫೇಮಸ್‌ ಆಯಿತು.

ಸ್ತ್ರೀ 2 ಒಟಿಟಿ ಬಿಡುಗಡೆ ವಿವರ

ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯು ಸ್ತ್ರೀ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಚಿತ್ರವನ್ನು ಸೆಪ್ಟೆಂಬರ್ 27ಕ್ಕೆ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಲಾಗುತ್ತಿದೆ. ಒಟಿಟಿ ಬಿಡುಗಡೆ ಕುರಿತು ಪ್ರೈಮ್‌ ವಿಡಿಯೋ ಕಡೆಯಿಂದ ಇನ್ನೂ ಅಧದಿಕೃತ ಅಪ್‌ಡೇಟ್‌ ದೊರಕಿದೆ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಇದೇ ಸೆಪ್ಟೆಂಬರ್‌ 27ರಂದು ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಆದರೆ, ಇದೇ ಸಮಯದಲ್ಲಿ ಒಂದು ಟ್ವಿಸ್ಟ್‌ ಕೂಡ ಇದೆ.

ಏನು ಟ್ವಿಸ್ಟ್‌?

ಅಮೆಜಾನ್ ಪ್ರೈಮ್ ವೀಡಿಯೊ ಒಟಿಟಿಯಲ್ಲಿ ಮೊದಲು ಸ್ತ್ರೀ 2 ಸಿನಿಮಾ ಆರಂಭದಲ್ಲಿ ಬಾಡಿಗೆ ಆಧಾರದಲ್ಲಿ ಪ್ರಸಾರವಾಗಲಿದೆಯಂತೆ. ಈ ಮೂಲಕ ಒಟಿಟಿಯಲ್ಲಿ ಇನ್ನಷ್ಟು ಹಣ ಬಾಚಲು ಚಿತ್ರದ ನಿರ್ಮಾಪಕರು ಉದ್ದೇಶಿಸಿದ್ದಾರೆ. ಈಗಾಗಲೇ ಸ್ತ್ರೀ 2 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ, ಈ ಸಮಯದಲ್ಲಿ ಬಾಡಿಗೆ ಆಧಾರದಲ್ಲಿ ಮಾತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಥಿಯೇಟರ್‌ ಕ್ರೇಜ್‌ ಕಡಿಮೆಯಾದ ಬಳಿಕ ಒಟಿಟಿಯಲ್ಲಿ ಚಂದಾದಾರರಿಗೆ ಉಚಿತವಾಗಿ ನೋಡುವ ಅವಕಾಶ ದೊರಕಲಿದೆ.

ಅಕ್ಟೋಬರ್‌ 2ನೇ ವಾರದಿಂದ ಅಮೆಜಾನ್‌ ಪ್ರೈಮ್‌ ವಿಡಿಯದಲ್ಲಿ ಉಚಿತವಾಗಿ ನೋಡುವ ಅವಕಾಶ ಒಟಿಟಿ ಚಂದಾದಾರರಿಗೆ ದೊರಕಲಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಸ್ತ್ರೀ 2 ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ನಟಿಸಿರುವ ಸ್ತ್ರೀ 2 ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಇಲ್ಲಿಯವರೆಗೆ 828 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ಭಾರತದಲ್ಲಿಯೇ 568.67 ಕೋಟಿಗಳ ನಿವ್ವಳ ಗಳಿಕೆ ಮಾಡಿದೆ. 60 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರದ ಈ ಚಿತ್ರ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದು ಭಾರತದಲ್ಲಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಚಿತ್ರವೆಂಬ ಖ್ಯಾತಿಗೆ ಪಾತ್ರವಾಗಿದೆ.

ಸ್ತ್ರೀ 2 ಚಿತ್ರವನ್ನು ಅಮರ್ ಕೌಶಿಲ್ ನಿರ್ದೇಶಿಸಿದ್ದಾರೆ. ಶ್ರದ್ಧಾ ಕಪೂರ್ ಜೊತೆಗೆ ರಾಜ್‌ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ, ಅಪರಶಕ್ತಿ ಖುರಾನಾ, ಅತುಲ್ ಶ್ರೀವಾತ್ಸವ, ಮುಷ್ತಾಕ್ ಖಾನ್, ಸುನೀತ್ ರಾಜ್ವರ್, ಅನ್ಯಾ ಸಿಂಗ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಚಿನ್-ಜಿಗರ್ ಮತ್ತು ಜಸ್ಟಿನ್ ವರ್ಗೀಸ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ದಿನೇಶ್ ವಿಜನ್ ಮತ್ತು ಜ್ಯೋತಿ ದೇಶಪಾಂಡೆ ಸ್ತ್ರೀ 2 ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸೀಕ್ವೆಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ನಿರ್ಮಾಪಕರ ತಿಜೋರಿ ತುಂಬಿದೆ. ನಿರ್ದೇಶಕ ಅಮರ್ ಕೌಶಿಕ್ ಸಿನಿಮಾವನ್ನು ಹಾರರ್‌ ಜತೆ ಹಾಸ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರಕ್ಕೆ ದೊರಕಿರುವ ಯಶಸ್ಸಿನಿಂದ ಪ್ರೇರಣೆ ಪಡೆದ ಚಿತ್ರತಂಡ ಸ್ತ್ರೀ 3 ಬಿಡುಗಡೆ ಮಾಡುವ ಯೋಜನೆಯನ್ನೂ ಹೊಂದಿದ್ದಾರೆ.

mysore-dasara_Entry_Point