OTT Kannada: ಒಟಿಟಿಯತ್ತ ಹೃದಯಸ್ಪರ್ಶಿ ಭಾವನಾತ್ಮಕ ಕನ್ನಡ ಸಿನಿಮಾ... ಸ್ಟ್ರೀಮಿಂಗ್‌ ಎಲ್ಲಿ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಮನರಂಜನೆ  /  Ott Kannada: ಒಟಿಟಿಯತ್ತ ಹೃದಯಸ್ಪರ್ಶಿ ಭಾವನಾತ್ಮಕ ಕನ್ನಡ ಸಿನಿಮಾ... ಸ್ಟ್ರೀಮಿಂಗ್‌ ಎಲ್ಲಿ? ಇಲ್ಲಿದೆ ವಿವರ

OTT Kannada: ಒಟಿಟಿಯತ್ತ ಹೃದಯಸ್ಪರ್ಶಿ ಭಾವನಾತ್ಮಕ ಕನ್ನಡ ಸಿನಿಮಾ... ಸ್ಟ್ರೀಮಿಂಗ್‌ ಎಲ್ಲಿ? ಇಲ್ಲಿದೆ ವಿವರ

OTT Kannada drama movie: ನವೀನ್‌ ಶಂಕರ್‌, ಅಪೂರ್ವ ಭಾರದ್ವಾಜ್‌ ಮುಂತಾದವರು ನಟಿಸಿದ "ನೋಡಿದವರು ಏನಂತಾರೆ" ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ವಿಮರ್ಶಕರಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ವಿವರ ಇಲ್ಲಿದೆ.

OTT Kannada: ಒಟಿಟಿಯತ್ತ ಹೃದಯಸ್ಪರ್ಶಿ ಭಾವನಾತ್ಮಕ ಕನ್ನಡ ಸಿನಿಮಾ
OTT Kannada: ಒಟಿಟಿಯತ್ತ ಹೃದಯಸ್ಪರ್ಶಿ ಭಾವನಾತ್ಮಕ ಕನ್ನಡ ಸಿನಿಮಾ

OTT Kannada drama movie: ಕನ್ನಡ ಸಿನಿಮಾಗಳು ಒಟಿಟಿಗೆ ಅಪರೂಪವಾಗಿ ಆಗಮಿಸುತ್ತಿವೆ. ಇತ್ತೀಚೆಗೆ ಫಾರೆಸ್ಟ್‌ ಎಂಬ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ವಾರ ನೋಡಿದವರು ಏನಂತಾರೆ ಎಂಬ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಯುವ ನಟ ನವೀನ್ ಶಂಕರ್ ನಾಯಕನಾಗಿ ನಟಿಸಿರುವ 'ನೋಡಿದವರು ಏನಂತಾರೆ' ಚಿತ್ರ ಈ ವರ್ಷ ಜನವರಿ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಭಾವನಾತ್ಮಕ ಡ್ರಾಮಾ ಸಿನಿಮಾವು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಚಿತ್ರವನ್ನು ಕುಲದೀಪ್ ಕಾರ್ಯಪ್ಪ ನಿರ್ದೇಶಿಸಿದ್ದರು. ನೋಡಿದವರು ಏನಂತರಾರೆ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ.

ನೋಡಿದವರು ಏನಂತಾರೆ ಸ್ಟ್ರೀಮಿಂಗ್ ದಿನಾಂಕ

ನೋಡಿದವರು ಏನಂತಾರೆ ಚಿತ್ರ ನಾಳೆ (ಮಾರ್ಚ್ 21) ಅಮೆಜಾನ್ ಪ್ರೈಮ್ ವಿಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ . 'ನೋಡಿದವರು ಏನಂತಾರೆ' ಚಿತ್ರದಲ್ಲಿ ಜೀವನದಲ್ಲಿ ಸತತ ಕಷ್ಟಗಳನ್ನು ಎದುರಿಸುವ ಯುವಕನಾಗಿ ನವೀನ್ ಶಂಕರ್ ಅಭಿನಯಿಸಿದ್ದಾರೆ. ನಿರ್ದೇಶಕ ಕುಲದೀಪ್ ಕರಿಯಪ್ಪ ಈ ಚಿತ್ರವನ್ನು ಭಾವನಾತ್ಮಕ ರೀತಿಯಲ್ಲಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಪೂರ್ವ ಭಾರದ್ವಾಜ್, ಪದ್ಮಾವತಿ ರಾವ್, ಆರ್ಯ ಕೃಷ್ಣ, ರಾಜೇಶ್ ಮತ್ತು ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹಿಪ್ಪೋ ಮತ್ತು ಕಿಡ್ಡೋ ಮೆಷಿನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಗೇಶ್ ಗೋಪಾಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಬಂದರೂ, ಕಲೆಕ್ಷನ್ ವಿಷಯದಲ್ಲಿ ಹೆಚ್ಚಿನದನ್ನು ಗಳಿಸಲಿಲ್ಲ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆದ ನಂತರ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ನೋಡಿದವರು ಏನಂತಾರೆ ಸಿನಿಮಾದ ಕಥೆಯೇನು?

ವೆಬ್ ಡಿಸೈನರ್ ಆಗಿ ಕೆಲಸ ಮಾಡುವ ಯುವಕ ಸಿದ್ಧಾರ್ಥ್ (ನವೀನ್ ಶಂಕರ್) ತನ್ನ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸುತ್ತಾನೆ. ಅವನು ಚಿಕ್ಕವನಿದ್ದಾಗ ಅವನ ತಾಯಿ ಮನೆ ಬಿಟ್ಟು ಹೋಗಿರುತ್ತಾರೆ. ತಂದೆ ಈತನನ್ನು ಸಾಕುತ್ತಾರೆ. ಸಿದ್ಧಾರ್ಥ್ ಮತ್ತು ಆತನ ಗೆಳತಿ (ಸೋನು ಗೌಡ) ಸಂಬಂಧವೂ ಮುರಿದು ಬೀಳುತ್ತದೆ. ಇಂತಹ ಹಲವು ನೋವುಗಳಿಂದಾಗಿ ಸರಿಯಾಗಿ ಕೆಲಸ ಮಾಡಲಾಗುವುದಿಲ್ಲ. ಅವನಿಗೆ ಮಹಿಳೆಯರೆಂದರೆ ದ್ವೇಷ ಇರುತ್ತದೆ. ಈ ನಡುವೆ ಸಿದ್ಧಾರ್ಥ್‌ನ ತಂದೆಯೂ ಸಾಯುತ್ತಾರೆ. ಕೈಯಲ್ಲಿದ್ದ ಉದ್ಯೋಗವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಜೀವನದಲ್ಲಿ ಏನೂ ಉಳಿದಿಲ್ಲ ಎಂಬ ಹತಾಶೆಯಿಂದ ಬಳಲುತ್ತಾ ಸಿದ್ಧಾರ್ಥ್ ದಣಿವರಿಯಿಲ್ಲದೆ ಪ್ರಯಾಣ ಮುಂದುವರಿಸುತ್ತಾನೆ. ಈ ಪ್ರಯಾಣದ ಸಮಯದಲ್ಲಿ, ಅವನಿಗೆ ನಾಡಿಯಾ (ಅಪೂರ್ವ ಭಾರದ್ವಾಜ್) ಮತ್ತು ಕುರುಬ ಮಲ್ಲಣ್ಣ (ರಾಜೇಶ್) ಪರಿಚಯವಾಗುತ್ತದೆ. ಈ ಪ್ರಯಾಣ ಆತನಿಗೆ ಬದುಕಿನಲ್ಲಿ ಸಾಕಷ್ಟು ಕಲಿಸುತ್ತದೆ. ಈ ಚಿತ್ರ ಭಾವನಾತ್ಮಕವಾಗಿದೆ.

ನೋಡಿದವರು ಏನಂತಾರೆ ಸಿನಿಮಾ ವಿಮರ್ಶೆ

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಈಗಾಗಲೇ ಈ ಸಿನಿಮಾದ ವಿಮರ್ಶೆ ಮಾಡಿದೆ. "ಸಿನಿಮಾದಲ್ಲಿ ಜನರ ಭಾವನೆಯನ್ನು ನೇರವಾಗಿ ಸಂಪರ್ಕಿಸುತ್ತದೆ. ಚಿತ್ರದ ನಾಯಕನ ಪರಿಸ್ಥಿತಿ ಹೇಗಿದೆಯೋ ಇಂದು ಸಾಕಷ್ಟು ಜನ ಅದೇ ರೀತಿ ಬದುಕುತ್ತಿದ್ದಾರೆ. ಕೆಲಸ ಮಾಡಿ ಹಣ ಸಂಪಾದನೆ ಮಾಡಬೇಕು, ನಮ್ಮ ಜೀವನ ನಾವು ನಡೆಸಿಕೊಳ್ಳಬೇಕು ಎನ್ನುವುದಕ್ಕಿಂದ ಹೆಚ್ಚಾಗಿ ಕೌಟುಂಬಿಕ ಒತ್ತಾಯಗಳೇ ಹೆಚ್ಚಾಗಿ, ಅವರ ನಿರೀಕ್ಷೆಗೆ ತಕ್ಕಂತೆ ಮಕ್ಕಳು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ನೋಡಿದವರು ಏನಂತಾರೆ? ಇದೊಂದೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗದ ಎಷ್ಟೋ ಜನರಿದ್ದಾರೆ. ಅವರೆಲ್ಲರ ಪ್ರಶ್ನೆಗೂ ಉತ್ತರವಾಗಿ ನಿಲ್ಲುವ ಸಿನಿಮಾ ಇದು". ಪೂರ್ತಿ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner