Amar Singh Chamkila: ಪಂಜಾಬ್‌ ಎಲ್ವಿಸ್‌ನ ಬದುಕಿಗೆ ಕನ್ನಡಿ ಹಿಡಿದ ನಿರ್ದೇಶಕ ಇಮ್ತಿಯಾಜ್‌; ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Amar Singh Chamkila: ಪಂಜಾಬ್‌ ಎಲ್ವಿಸ್‌ನ ಬದುಕಿಗೆ ಕನ್ನಡಿ ಹಿಡಿದ ನಿರ್ದೇಶಕ ಇಮ್ತಿಯಾಜ್‌; ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾ ವಿಮರ್ಶೆ

Amar Singh Chamkila: ಪಂಜಾಬ್‌ ಎಲ್ವಿಸ್‌ನ ಬದುಕಿಗೆ ಕನ್ನಡಿ ಹಿಡಿದ ನಿರ್ದೇಶಕ ಇಮ್ತಿಯಾಜ್‌; ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾ ವಿಮರ್ಶೆ

Amar Singh Chamkila Movie Review: ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಗೊಂಡ ಅಮರ್ ಸಿಂಗ್ ಚಮ್ಕಿಲಾ ಸಿನಿಮಾದ ಕುರಿತು ಸಿನಿಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದು ಗಾಯಕ ಚಮ್ಕಿಲಾ ಜೀವನವನ್ನು ಆಧರಿಸಿದ ಸಿನಿಮಾ. ಈ ಸಿನಿಮಾ ಹೇಗಿದೆ? ಓದಿ ಈ ಚಿತ್ರವಿಮರ್ಶೆ.

Amar Singh Chamkila Movie Review: ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾ ವಿಮರ್ಶೆ
Amar Singh Chamkila Movie Review: ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾ ವಿಮರ್ಶೆ

Amar Singh Chamkila OTT Movie Review: ಕಳೆದ ಒಂದೆರಡು ದಿನಗಳಿಂದ ಎಲ್ಲೆಡೆ ಅಮರ್‌ ಸಿಂಗ್‌ ಚಮ್ಕಿಲಾ ಎಂಬ ಸಿನಿಮಾ ಸುದ್ದಿಯಲ್ಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಚಿತ್ರದ ಕುರಿತು ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ. ತನ್ನ ಹಾಡುಗಳಿಂದಲೇ ಜನಪ್ರಿಯರಾದ ಗಾಯಕ, ಸಂಗೀತಗಾರ ಅಮರ್‌ ಸಿಂಗ್‌ ಚಮ್ಕಿಲಾ ಅವರ ಜೀವನಗಾಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಏಪ್ರಿಲ್‌ 12ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. 1980 ರ ದಶಕದಲ್ಲಿ ಕ್ಷಿಪ್ರವಾಗಿ ಜನಪ್ರಿಯತೆ ಪಡೆದ ಪಂಜಾಬ್‌ ಎಲ್ವಿಸ್‌ ಎಂದೇ ಖ್ಯಾತಿ ಪಡೆದ ಚಮ್ಕಿಲಾರ ಬದುಕಿನ ಕಥೆಯಿದು. ಬೇಸರದ ಸಂಗತಿಯೆಂದರೆ ಬಹುಬೇಗ ಪ್ರಸಿದ್ಧಿಗೆ ಬಂದ ಈ ಗಾಯಕ ತನ್ನ 27ನೇ ವಯಸ್ಸಿನಲ್ಲಿಯೇ ಕೊಲೆಯಾದರು. ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾದ ವಿಮರ್ಶೆ ಇಲ್ಲಿದೆ. (ವಿಮರ್ಶೆ ಕೃಪೆ: ಎಚ್‌ಟಿ ತೆಲುಗು)

ಸಿನಿಮಾದ ಹೆಸರು: ಅಮರ್‌ ಸಿಂಗ್‌ ಚಮ್ಕಿಲಾ

ಬಿಡುಗಡೆ ದಿನಾಂಕ: ಏಪ್ರಿಲ್‌ 12

ಎಲ್ಲಿ ಬಿಡುಗಡೆ: ನೆಟ್‌ಫ್ಲಿಕ್ಸ್‌:

ತಾರಾಗಣ: ದಿಲ್ಜಿತ್ ದೋಸಾಂಜ್, ಪರಿಣಿತಿ ಚೋಪ್ರಾ, ಅಂಜುಮ್ ಬಾತ್ರಾ, ಅಪಿಂದರ್ ಸಿಂಗ್, ಅನುರಾಗ್ ಅರೋರಾ ಮುಂತಾದವರು.

ಸಂಗೀತ ನಿರ್ದೇಶನ: ಎಆರ್ ರೆಹಮಾನ್,

ಕಥೆ: ಸಾಜಿದ್ ಅಲಿ, ಇಮ್ತಿಯಾಜ್ ಅಲಿ

ನಿರ್ದೇಶಕ: ಇಮ್ತಿಯಾಜ್ ಅಲಿ

ಅಮರ್ ಸಿಂಗ್ ಚಮ್ಕಿಲಾ (ದಿಲ್ಜಿತ್ ದೋಸಾಂಜ್) ಮತ್ತು ಅವರ ಪತ್ನಿ, ಗಾಯಕಿ ಅಮರ್ಜೋತ್ ಅಲಿಯಾಜ್ ಬಬ್ಬಿ (ಪರಿಣಿತಿ ಚೋಪ್ರಾ) ಕೊಲೆಯೊಂದಿಗೆ ಈ ಸಿನಿಮಾ ಆರಂಭವಾಗುತ್ತದೆ. ಇದಾದ ಬಳಿಕ ಸಿನಿಮಾದ ಫ್ಲಾಶ್‌ ಬ್ಯಾಕ್‌ ಆರಂಭವಾಗುತ್ತದೆ. ಬಡ ಕುಟುಂಬದಲ್ಲಿ ಜನಿಸಿದ ಅಮರ್ ಸಿಂಗ್ ಚಮ್ಕಿಲಾ ಹೇಗೆ ಗಾಯಕನಾದ? ಅತಿ ಹೆಚ್ಚು ಕ್ಯಾಸೆಟ್‌ ಮಾರಾಟವಾಗುವ ಜಾನಪದ ಗಾಯಕನ ಮಟ್ಟಕ್ಕೆ ಹೇಗೆ ತಲುಪಿದ? ಅಮರ್ಜೋತ್ ಅಲಿಯಾಜ್ ಬಬ್ಬಿ ಈತನ ಜೀವನದಲ್ಲಿ ಹೇಗೆ ಬಂದಳು? ಈತನ ಕೊಲೆಗೆ ಕಾರಣವೇನು? ಹೇಗೆ ಕೊಲೆ ಮಾಡಲಾಯಿತು? ಹೀಗೆ ಹಲವು ವಿಷಯಗಳನ್ನು ಸಿನಿಮಾ ಹೊಂದಿದೆ.

ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾವು 1977 ಮತ್ತು 1988 ರ ನಡುವಿನ ಕಾಲಘಟ್ಟದಲ್ಲಿ ನಡೆಯುತ್ತದೆ. ಸಾಕ್ಸ್ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಮ್ಕಿಲಾನಿಗೆ ಬಾಲ್ಯದಿಂದಲೂ ಹಾಡುಗಳೆಂದರೆ ಪಂಚಪ್ರಾಣ. ಸುತ್ತಮುತ್ತಲಿನ ಸನ್ನಿವೇಶಗಳಿಗೆ ಸಾಹಿತ್ಯ ಬರೆದು ಹಾಡುತ್ತಾನೆ. ಬಳಿಕ ಜನಪ್ರಿಯ ಗಾಯಕ ಶಿಂದಾರನ್ನು ಭೇಟಿಯಾಗುತ್ತಾನೆ. ಅವರಿಗಾಗಿ ಸಾಹಿತ್ಯ ಬರೆಯುತ್ತಾನೆ. ಟ್ಯೂನ್‌ ಮಾಡುತ್ತಾನೆ. ಬಳಿಕ ಚಮ್ಕಿಲಾನಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡುವ ಅವಕಾಶ ದೊರಕುತ್ತದೆ. ಈತನ ಹಾಡಿಗೆ ಎಲ್ಲರೂ ಮರುಳಾಗುತ್ತಾರೆ. ಬಳಿಕ ಆತನ ಬದುಕೇ ಬದಲಾಗುತ್ತದೆ. ಅನೇಕ ಅವಕಾಶಗಳು ದೊರಕುತ್ತವೆ. ಕೆಲವೇ ಸಮಯದಲ್ಲಿ ಸೆನ್ಸೇಷನಲ್‌ ಸಿಂಗರ್‌ ಆಗುತ್ತಾನೆ. ಈತನ ಹಾಡುಗಳಿರುವ ಕ್ಯಾಸೆಟ್‌ಗಳು ಬಿಸಿದೋಸೆಯಂತೆ ಮಾರಾಟವಾಗುತ್ತವೆ. ವಿದೇಶದಲ್ಲೂ ಪ್ರದರ್ಶನ ನೀಡುವ ಲೆವೆಲ್‌ಗೆ ತಲುಪುತ್ತಾನೆ. ಅಶ್ಲೀಲ ಹಾಡುಗಳನ್ನು ಬರೆದು ಹಾಡಿರುವುದಕ್ಕೆ ಬೆದರಿಕೆಗಳೂ ಬರುತ್ತವೆ. ಹೀಗಿದ್ದರೂ ಜನರು ಚಮ್ಕಿಲಾ ಹಾಡುಗಳನ್ನು ತುಂಬಾ ಇಷ್ಟಪಡುತ್ತಾರೆ. ಇದೇ ಸಮಯದಲ್ಲಿ ಈತನ ವಿರುದ್ಧ ಷಡ್ಯಂತ್ರವೂ ಆರಂಭವಾಗುತ್ತದೆ.

ಹೇಗಿದೆ ಚಮ್ಕಿಲಾ ಸಿನಿಮಾ?

ಅಮರ್‌ ಸಿಂಗ್ ಚಮ್ಕಿಲಾನ ಎಲ್ಲಾ ರೀತಿಯ ವ್ಯಕ್ತಿತ್ವವನ್ನು ಚಿತ್ರಿಸಲು ನಿರ್ದೇಶಕರು ಯತ್ನಿಸಿದ್ದಾರೆ. ಚಮ್ಕಿಲಾನ ಆಲೋಚನೆಗಳು, ಗಾಯಕನಾಗಿ ಬೆಳೆಯುವ ಹಂಬಲ, ಎದುರಾಗುವ ವಿವಿಧ ಸನ್ನಿವೇಶಗಳನ್ನು ಎದುರಿಸಿದ ರೀತಿ ಇತ್ಯಾದಿಗಳನ್ನು ಸಮರ್ಥವಾಗಿ ತೆರೆಗೆ ತಂದಿದ್ದಾರೆ. ಚಮ್ಕಿಲಾ ಅಮರಜೋತ್‌ನನ್ನು ಏಕೆ ಮದುವೆಯಾದರು ಎಂಬುದನ್ನೂ ಯಾವುದೇ ಫಿಲ್ಟರ್ ಇಲ್ಲದೆ ತೋರಿಸಲಾಗಿದೆ. ಬಹುತೇಕ ಡೈಲಾಗ್‌ಗಳೂ ಆಕರ್ಷಕವಾಗಿವೆ. ಈ ಚಿತ್ರದ ಪಂಜಾಬಿ ಹಾಡುಗಳೂ ಮನಸೂರೆಗೊಳ್ಳುತ್ತವೆ.

ನಿರ್ದೇಶಕ ಇಮ್ತಿಯಾಜ್ ಅಲಿ ಅವರು ಅಮರ್ ಸಿಂಗ್ ಚಮ್ಕಿಲಾ ಎಂಬ ಗಾಯಕನ ಜೀವನದ ಕಥೆಯನ್ನು ಆಕರ್ಷಕವಾಗಿ ತೋರಿಸಿದ್ದಾರೆ. ಸಿನಿಮಾ ಎಲ್ಲೂ ಸ್ಲೋ ಆಗುವುದಿಲ್ಲ. ಹಾಡುಗಳು ಹೆಚ್ಚಿದ್ದರೂ ಚಿತ್ರ ಎಲ್ಲೂ ಬೋರ್‌ ಹೊಡೆಸದು. ಪಂಜಾಬಿ ಹಾಡುಗಳನ್ನು ಇಷ್ಟಪಡುವವರು ಈ ಸಿನಿಮಾವನ್ನು ತುಂಬಾ ಇಷ್ಟಪಡಬಹುದು.

ಈ ಚಿತ್ರದಲ್ಲಿರುವ ಭಾವನಾತ್ಮಕ ದೃಶ್ಯಗಳು ನೋಡುಗರಿಗೆ ಕನೆಕ್ಟ್‌ ಆಗುತ್ತವೆ. ಚಮ್ಕಿಲಾ ಹಾಡಿನ ಕ್ಯಾಸೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟವಾಗುವುದು, ಅಮಿತಾಬ್‌ ಬಚ್ಚನ್‌ ಹಾಡಿದ ವೇದಿಕೆಯಲ್ಲಿ ಹಾಡುವುದು, ವಿದೇಶಗಳಲ್ಲಿ ಪ್ರದರ್ಶನ ನೀಡುವುದು ಸೇರಿದಂತೆ ಹಲವು ಅಂಶಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಇದೇ ಸಮಯದಲ್ಲಿ ಚಮ್ಕಿಲಾ ಅವರು ಸತತ ಬೆದರಿಕೆಗಳಿಗೆ ಹೆದರುತ್ತಾರೆ. ತನ್ನ ಪತ್ನಿ ಬಬ್ಬಿ ಬಗ್ಗೆ ಚಿಂತಿಸುತ್ತಾರೆ. ಆದರೆ, ಹಾಡುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇಂತಹ ಹಲವು ಭಾವನಾತ್ಮಕ ವಿಷಯಗಳನ್ನು ಸಮರ್ಥವಾಗಿ ತೋರಿಸಲಾಗಿದೆ. ಆ ಕಾಲದಲ್ಲಿ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು ಅಪರಾಧವಾಗಿತ್ತು.

ಅಮರ್‌ ಸಿಂಗ್‌ ಚಮ್ಕಿಲಾ ಕೊಲೆಗೆ ಕಾರಣಗಳೇನು?

1988ರಲ್ಲಿ ನಡೆದ ಅಮರ್ ಸಿಂಗ್ ಚಮ್ಕಿಲಾ ಅವರ ಹತ್ಯೆಯ ರಹಸ್ಯ ಇನ್ನೂ ಬಗೆಹರಿದಿಲ್ಲ. ಈತನ ಕೊಲೆ ಬಗ್ಗೆ ಮೂರು ಥಿಯರಿಗಳಿವೆ. ಈತ ಆ ಕಾಲಕ್ಕೆ ಬರೆಯುತ್ತಿದ್ದ ಹಾಡುಗಳ ಸಾಹಿತ್ಯಕ್ಕೆ ವಿರೋಧಿಗಳು ಇದ್ದರು. ಪಂಜಾಬ್‌ನ ಜನ ಸಾಮಾನ್ಯರ ಕುರಿತು ಇವರ ಹಾಡುಗಳು ಇದ್ದವು. ಕುಡಿತ, ಡ್ರಗ್ಸ್‌, ಅನೈತಿಕ ಸಂಬಂಧ ಇತ್ಯಾದಿಗಳ ಕುರಿತು ಇವರ ಹಾಡುಗಳು ಚಾಟಿ ಬೀಸುತ್ತಿದ್ದವು. ಇವರ ಕಾಂಟ್ರಾವರ್ಸಿಯಲ್‌ ಹಾಡುಗಳು ಕೂಡ ಇವರ ಸಾವಿಗೆ ಕಾರಣವಾಗಿರಬಹುದು. ಇನ್ನೊಂದು ಥಿಯರಿ ಪ್ರಕಾರ ವೃತ್ತಿಪರ ಏಳಿಗೆ ಸಹಿಸದೆ ಹತ್ಯೆ ಮಾಡಿರಬಹುದು. ಖಲಿಸ್ತಾನ್‌ ಹೋರಾಟಗಾರರಿಂದ ಈತನ ಹತ್ಯೆ ನಡೆದಿರಬಹುದು ಎಂದು ಇನ್ನೊಂದು ಥಿಯರಿ ಇದೆ.

ರೇಟಿಂಗ್‌: 3.75/5

Whats_app_banner