ದುಲ್ಕರ್ ಸಲ್ಮಾನ್ ನಟಿಸಿದ ಈ ಮಲಯಾಳಂ ಥ್ರಿಲ್ಲರ್ ಚಿತ್ರ ಸೂಪರ್‌ಹಿಟ್‌; ನಿರಪರಾಧಿ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಪೊಲೀಸರು
ಕನ್ನಡ ಸುದ್ದಿ  /  ಮನರಂಜನೆ  /  ದುಲ್ಕರ್ ಸಲ್ಮಾನ್ ನಟಿಸಿದ ಈ ಮಲಯಾಳಂ ಥ್ರಿಲ್ಲರ್ ಚಿತ್ರ ಸೂಪರ್‌ಹಿಟ್‌; ನಿರಪರಾಧಿ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಪೊಲೀಸರು

ದುಲ್ಕರ್ ಸಲ್ಮಾನ್ ನಟಿಸಿದ ಈ ಮಲಯಾಳಂ ಥ್ರಿಲ್ಲರ್ ಚಿತ್ರ ಸೂಪರ್‌ಹಿಟ್‌; ನಿರಪರಾಧಿ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಪೊಲೀಸರು

ಮಲಯಾಳಂನ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ನಟಿಸಿರುವ ಥ್ರಿಲ್ಲರ್ ಸಿನಿಮಾವೊಂದು ಯೂಟ್ಯೂಬ್‌ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಆಗುತ್ತಿದೆ. ಐಎಂಡಿಬಿಯಲ್ಲಿ 7 ರೇಟಿಂಗ್ ಹೊಂದಿರುವ ಈ ಸಿನಿಮಾ ಅತ್ಯುತ್ತಮ ಅಪರಾಧ ತನಿಖಾ ಥ್ರಿಲ್ಲರ್ ಎಂದು ಹೇಳಬಹುದು. ಬನ್ನಿ ಈ ಸಿನಿಮಾದ ಕುರಿತು ತಿಳಿದುಕೊಳ್ಳೋಣ.

ಮಲಯಾಳಂನ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ನಟಿಸಿರುವ ಥ್ರಿಲ್ಲರ್ ಸಿನಿಮಾವೊಂದು ಯೂಟ್ಯೂಬ್‌ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಆಗುತ್ತಿದೆ.
ಮಲಯಾಳಂನ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ನಟಿಸಿರುವ ಥ್ರಿಲ್ಲರ್ ಸಿನಿಮಾವೊಂದು ಯೂಟ್ಯೂಬ್‌ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಆಗುತ್ತಿದೆ.

ಮಲಯಾಳಂನ ಅನೇಕ ಸಿನಿಮಾಗಳು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಮೂಲ ಮಲಯಾಳಂ ಭಾಷೆಯ ಸಿನಿಮಾ ವಿವಿಧ ಭಾಷೆಗಳಿಗೆ ಡಬ್‌ ಆಗಿಯೂ ರಿಲೀಸ್‌ ಆಗುತ್ತಿದೆ. ದುಲ್ಕರ್‌ ಸಲ್ಮಾನ್‌ ನಟಿಸಿದ 2022ರ ಸೆಲ್ಯೂಟ್‌ ಚಿತ್ರವೂ ಯೂಟ್ಯೂಬ್‌ನಲ್ಲಿದೆ. ಚಿತ್ರದಲ್ಲಿ ಎಸ್‌ಐ ಅರವಿಂದ್ ಕರುಣಾಕರನ್ ಪಾತ್ರದಲ್ಲಿ ದುಲ್ಕರ್ ಅವರ ಅಭಿನಯಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡುವ ಮುನ್ನ ಒಂದಿಷ್ಟು ವಿವರ ಪಡೆಯೋಣ.

ಸೆಲ್ಯೂಟ್ ಸಿನಿಮಾದ ಸ್ಟೋರಿ

ಮಲಯಾಳಂ ಥ್ರಿಲ್ಲರ್ ಚಿತ್ರ ಸೆಲ್ಯೂಟ್ ಆರಂಭದಲ್ಲಿ, ರಜೆಯಲ್ಲಿರುವ ಎಸ್ಐ ಅರವಿಂದ್ ಕರುಣಾಕರನ್ (ದುಲ್ಕರ್ ಸಲ್ಮಾನ್) ಒಂದು ಕೊಲೆ ಪ್ರಕರಣ ಮತ್ತು ಇನ್ನೊಂದು ಸ್ಪೀಡ್‌ ಡ್ರೈವಿಂಗ್‌ ಪ್ರಕರಣದ ವಿವರಗಳನ್ನು ಪಡೆಯಲು ಪೊಲೀಸ್ ಠಾಣೆಗೆ ಆಗಮಿಸುತ್ತಾರೆ. ಅವರು ರಜೆಯ ಮೇಲೆ ಹೋಗಲು ಕಾರಣವಾದ ಕೊಲೆ ಪ್ರಕರಣದ ಕಥೆ ಅಲ್ಲಿಂದ ಆರಂಭವಾಗುತ್ತದೆ. ಅಂದರೆ ಹಳೆಯ ಕಥೆ ತೆರೆದುಕೊಳ್ಳುತ್ತದೆ.

ಕೊಲೆ ಪ್ರಕರಣವೊಂದರಲ್ಲಿ ಅಮಾಯಕ ವ್ಯಕ್ತಿಯ ವಿರುದ್ಧ ಸಾಕ್ಷ್ಯಗಳನ್ನು ಸೃಷ್ಟಿಸಲು ಪೊಲೀಸರು ಪ್ರಯತ್ನಿಸುವುದನ್ನು ಈ ಚಿತ್ರ ತೋರಿಸುತ್ತದೆ. ಪಕ್ಷದ ನಾಯಕ ಮತ್ತು ಅವರ ಪತ್ನಿಯನ್ನು ಕ್ರೂರವಾಗಿ ಕೊಲ್ಲಲಾಗುತ್ತದೆ. ಈ ಪ್ರಕರಣದಲ್ಲಿ ಆಟೋ ಚಾಲಕನನ್ನು ಶಂಕಿತ ಎಂದು ಪರಿಗಣಿಸಲಾಗಿದ್ದರೂ, ಕೆಲವೊಂದು ಸಾಕ್ಷಿಗಳು, ಪುರಾವೆಗಳು ಅದಕ್ಕೆ ಪೂರಕವಾಗಿಲ್ಲ. ನಿಜವಾದ ಅಪರಾಧಿಯನ್ನು ಹಿಡಿಯಲು ಸಾಧ್ಯವಾಗದ ಪೊಲೀಸರು, ಸಾಕ್ಷ್ಯಗಳನ್ನು ಸೃಷ್ಟಿಸಿ ಅವನಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಾರೆ.

ನಂತರ ಅದೇ ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಯೆಂದು ನಂಬಲಾದ ವ್ಯಕ್ತಿಯನ್ನು ಪೊಲೀಸರು ವೇಗದ ಚಾಲನೆ ಪ್ರಕರಣದಲ್ಲಿ ಪತ್ತೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಆತನೂ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆದರೆ, ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಇದೆ. ಆಟೋ ಚಾಲಕನ ವಿರುದ್ಧ ಸಾಕ್ಷ್ಯಗಳು ಸೃಷ್ಟಿಯಾಗಿಔೆ. ಹೀಗಾಗಿ ನಿಜವಾದ ಅಪರಾಧಿಯನ್ನು ಬಿಟ್ಟು ಆಟೋ ಚಾಲಕನಿಗೆ ಶಿಕ್ಷೆಯಾಗುವುದೇ ಸರಿ ಎಂದು ಪೊಲೀಸರು ನಿರ್ಧರಿಸುತ್ತಾರೆ.

ಸತ್ಯದ ಹುಡುಕಾಟದಲ್ಲಿ ಅರವಿಂದ್

ಈ ಪ್ರಕರಣದಲ್ಲಿ, ಡಿಎಸ್ಪಿ ಅಜಿತ್ ಕರುಣಾಕರನ್ (ಮನೋಜ್ ಕೆ ಜಯನ್) ಸೇರಿದಂತೆ ಇತರ ನಾಲ್ವರು ಪೊಲೀಸ್ ಅಧಿಕಾರಿಗಳು ಇರುತ್ತಾರೆ. ಉಳಿದವರು ನಿರಾಪರಾಧಿಗೆ ಶಿಕ್ಷೆಯಾಗುವ ವಿಷಯಕ್ಕೆ ಸಂಬಂಧಪಟ್ಟಂತೆ ಮೌನವಾಗಿದ್ದರೂ, ಎಸ್.ಎಸ್. ಅರವಿಂದ್ ಕರುಣಾಕರನ್‌ಗೆ ಈ ಅನ್ಯಾಯವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಅವನು ನಿಜವಾದ ಕೊಲೆಗಾರನನ್ನು ಹಿಡಿಯಲು ಪ್ರಯತ್ನಿಸುತ್ತಾರೆ.

ನಿಜವಾದ ಅಪರಾಧಿ ಸಿಕ್ಕಿಬಿದ್ದರೆ ತನ್ನ ಕೆಲಸ ಮತ್ತು ತನ್ನ ಸಹೋದರ ಡಿಎಸ್ಪಿ ಅಜಿತ್ ಅವರ ಕೆಲಸಕ್ಕೆ ತೊಂದರೆಯಾಗಲಿದೆ ಎಂದು ಅರವಿಂದ್‌ಗೆ ತಿಳಿದಿದೆ. ಹೀಗಿದ್ದರೂ ಆತ ಈ ತನಿಖೆ ಮುಂದುವರೆಸುತ್ತಾನೆ. ಹಾಗಾದರೆ ಅವರು ಈ ಪ್ರಕರಣವನ್ನು ಹೇಗೆ ತನಿಖೆ ಮಾಡುತ್ತಾರೆ? ಈ ಪ್ರಕ್ರಿಯೆಯಲ್ಲಿ ಎದುರಿಸಿದ ಸವಾಲುಗಳೇನು? ನಿಜವಾದ ಕೊಲೆಗಾರನನ್ನು ಅರವಿಂದ್ ಹಿಡಿಯುತ್ತಾನಾ ಎಂಬುದು ಸೆಲ್ಯೂಟ್ ಚಿತ್ರದ ಕಥೆ.

ಯಾವುದೇ ಪ್ರಕರಣದಲ್ಲಿ ನಿಜವಾದ ಅಪರಾಧಿಯನ್ನು ಹಿಡಿಯಲು ವಿಫಲವಾದ ಪೊಲೀಸರು ಸುಳ್ಳು ಸಾಕ್ಷ್ಯವನ್ನು ಹೇಗೆ ಸೃಷ್ಟಿಸುತ್ತಾರೆ? ಈ ಸೆಲ್ಯೂಟ್ ಚಿತ್ರದಲ್ಲಿ ಮುಗ್ಧ ಜನರನ್ನು ಹೇಗೆ ಬಲಿಕೊಡಲಾಗುತ್ತದೆ ಎಂಬುದನ್ನು ನೀವು ನೋಡಬಹುದು. ಇದು ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕಥೆಯನ್ನೂ ಹೊಂದಿದೆ. ಅವನು ಪಶ್ಚಾತ್ತಾಪದಿಂದ ತನ್ನ ವೃತ್ತಿ ಮತ್ತು ಜೀವವನ್ನು ಪಣಕ್ಕಿಟ್ಟು ನಿಜವಾದ ಅಪರಾಧಿಯನ್ನು ಹುಡುಕುತ್ತಾನೆ.

ಈ ಸಿನಿಮಾ ಸಾಮಾನ್ಯ ಥ್ರಿಲ್ಲರ್ ಸಿನಿಮಾಗಳಿಗಿಂತ ಭಿನ್ನವಾಗಿದೆ. ಈ ಪ್ರಕರಣವನ್ನು ಅವರು ತನಿಖೆ ಮಾಡುವ ರೀತಿ ಚಿತ್ರದ ಶಕ್ತಿ. ಆಗಾಗ್ಗೆ ಅಲಿಯಾಸ್ ಗಳ ಮೂಲಕ ಸ್ಥಳ ಬದಲಾಯಿಸುವ ಅವನನ್ನು ಹಿಡಿಯುವುದು ಅರವಿಂದ್ ಗೆ ಸವಾಲಿನ ಕೆಲಸವಾಗುತ್ತದೆ. ಹೀಗಿದ್ದರೂ ಈತ ತನ್ನದೇ ರೀತಿಯ ತನಿಖೆಯಿಂದ ಅಪರಾಧಿಯನ್ನು ತಲುಪುವ ಪರಿ ಇಷ್ಟವಾಗುತ್ತದೆ. ಚಿತ್ರ ಕೊನೆಯವರೆಗೂ ಸಸ್ಪೆನ್ಸ್‌ ಕಾಯ್ದುಕೊಂಡು ನೋಡಿಸಿಕೊಂಡು ಹೋಗುತ್ತದೆ.

ಈ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ನೀವು ಸೋನಿಲಿವ್‌ ಒಟಿಟಿಯ ಚಂದಾದಾರರಾಗಿದ್ದರೆ ಅಲ್ಲೂ ಈ ಸೆಲ್ಯೂಟ್‌ ಸಿನಿಮಾ ನೋಡಬಹುದು.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in