OTT Movies: ಕೃಷ್ಣಂ ಪ್ರಣಯ ಸಖಿ ಇಷ್ಟವಾಯ್ತ? ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 4 ಲವ್ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಿ
Golden star ganesh Movies in OTT: ಶ್ರೀನಿವಾಸ್ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಗೊಂಡು ಪ್ರೇಕ್ಷಕರನ್ನು ಸಂಗೀತದ ಅಲೆಯಲ್ಲಿ ಮುಳುಗಿಸುತ್ತಿದೆ. ಇದೇ ಸಮಯದಲ್ಲಿ ಮುಂಗಾರು ಮಳೆ ಗಣೇಶ್ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಸಾಕಷ್ಟು ಜನರು ಬಯಸಬಹುದು. ಒಟಿಟಿಯಲ್ಲಿ ಲಭ್ಯವಿರುವ ಗಣೇಶ್ ನಟನೆಯ ನಾಲ್ಕು ಸಿನಿಮಾಗಳ ವಿವರ ನೀಡಲಾಗಿದೆ.
Krishnam Pranaya Sakhi ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣಿಸುತ್ತಿದೆ. ಚಿತ್ರದ ಕುರಿತು ಒಂದಿಷ್ಟು ಅಪಸ್ವರಗಳು ಕೇಳಿಬರುತ್ತಿದ್ದರೂ ಗಣಿ ಅಭಿಮಾನಿಗಳು "ದ್ವಾಪರ ಹಾಡಿನ" ಗುಂಗಿನಲ್ಲಿ ಹೇಗೆ ಬೇಕಾದರೂ ಇರಲಿ ಎಂದು ಧೈರ್ಯವಾಗಿ ಚಿತ್ರಮಂದಿರಕ್ಕೆ ಮುನ್ನುಗ್ಗುತ್ತಿರುವ ಸಾಕ್ಷಿಯಾಗಿ ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್‌ಗಳು ಫಿಲ್ಲಿಂಗ್ ಫಾಸ್ಟ್ ಮತ್ತು ಆಲ್‌ಮೋಸ್ಟ್ ಫುಲ್ ಮೂಡ್‌ನಲ್ಲಿವೆ. ಮುಂಗಾರು ಮಳೆ ಸಿನಿಮಾದ ಮೂಲಕ ಖ್ಯಾತಿ ಪಡೆದ, ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್‌ನಲ್ಲಿ ಹೊಸ ಭಾಷ್ಯ ಬರೆದ ಗಣೇಶ್ ಸಿನಿಮಾಗಳು ರೋಮ್ಯಾಂಟಿಕ್ ಆಗಿರುತ್ತವೆ, ಪ್ರೇಕ್ಷಕರಿಗೆ ಕಚಗುಳಿ ನೀಡುತ್ತದೆ ಎನ್ನುವುದು ಸುಳ್ಳಲ್ಲ. ಕೃಷ್ಣಂ ಪ್ರಣಯ ಸಖಿ ಬಿಡುಗಡೆಯಾದ ಈ ಶುಭ ಸಂದರ್ಭದಲ್ಲಿ ಗಣೇಶ್ ನಟನೆಯ ಬೇರೆ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಬಯಸುವವರಿಗೆ ಇಲ್ಲೊಂದಿಷ್ಟು ಮಾಹಿತಿ ನೀಡಲಾಗಿದೆ.
ಗಾಳಿಪಟ 2
ಮುಂಗಾರು ಮಳೆಯ ಬಳಿಕ ಯೋಗರಾಜ್ ಭಟ್ ಜತೆ ಗಾಳಿಪಟ 2 ಎಂಬ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದರು. ಈ ಸಿನಿಮಾದಲ್ಲಿ ಅನಂತ್ ನಾಗ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಲಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. ಗಣೇಶ್, ದಿಗಂತ್ ಮತ್ತು ಪವನ್ ಎಂಬ ಕಾಲೇಜು ಗೆಳೆಯರು ಕನ್ನಡವನ್ನು ಸ್ಪಷ್ಟವಾಗಿ ಓದಲು ಮತ್ತು ಬರೆಯುವುದನ್ನು ಕಲಿಯುವ ಸಲುವಾಗಿ ಕನ್ನಡ ಶಿಕ್ಷಕ ಅನಂತ್ ನಾಗರನ್ನು ಭೇಟಿಯಾಗುತ್ತಾದೆ. ಈ ಹಿರಿಯ ವ್ಯಕ್ತಿಗೆ ತನ್ನ ಕಳೆದು ಹೋದ ಮಗುವನ್ನು ಹುಡುಕಲು ಈ ಹುಡುಗರು ನೆರವಾಗುತ್ತಾರೆ. ಕಥೆ ಇಂಟ್ರೆಸ್ಟಿಂಗ್ ಆಗಿದೆಯಲ್ವ. ಈ ಸಿನಿಮಾವನ್ನು ಝೀ5 ಒಟಿಟಿಯಲ್ಲಿ ವೀಕ್ಷಿಸಬಹುದು.
ರೋಮಿಯೋ
ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿದ ಬಹುತೇಕರು ಇದನ್ನು ರೋಮಿಯೋ 2 ಎನ್ನಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಆದರೆ, ರೋಮಿಯೋ ಸಿನಿಮಾ ನೋಡದವರು ಇದ್ದರೆ ಅಥವಾ ಒಮ್ಮೆ ನೋಡಿದ್ರು ಇನ್ನೊಮ್ಮೆ ಒಟಿಟಿಯಲ್ಲಿ ನೋಡೋಣ ಎಂದುಕೊಂಡಿದ್ದರೆ ಖಂಡಿತಾ ಆನ್‌ಲೈನ್‌ನಲ್ಲಿ ನೋಡಬಹುದು. ಪಿಸಿ ಶಂಕರ್ ನಿರ್ದೇಶನದ ರೋಮಿಯೋ ಸಿನಿಮಾದಲ್ಲಿ ಗಣೇಶ್‌ಗೆ ನಾಯಕಿಯಾಗಿ ಭಾವನ ನಟಿಸಿದ್ದಾರೆ. ಇವರಿಬ್ಬರು ಬೇರೆಬೇರೆ ರೀತಿಯ ಬ್ಯಾಕ್‌ಗ್ರೌಂಡ್‌ನಿಂದ ಬಂದವರು. ಈ ಸಿನಿಮಾದಲ್ಲಿ ತಾನು ಶ್ರೀಮಂತ ಕುಟುಂಬದಿಂದ ಬಂದವನು ಎಂದು ಗಣೇಶ್ ಸುಳ್ಳು ಹೇಳುತ್ತಾನೆ. ಅಂದಹಾಗೆ ಕೃಷ್ಣಂ ಪ್ರಣಯ ಸಖಿಯಲ್ಲಿ ಇದೇ ರೀತಿಯ ಸ್ವಲ್ಪ ವಿಭಿನ್ನ ಕಥೆ ಇದೆಯಂತೆ. ಅದೇ ಕಾರಣಕ್ಕೆ ಎಲ್ಲರೂ ಕೃಷ್ಣಂ ಪ್ರಣಯ ಸಖಿಯನ್ನು ರೋಮಿಯೋ 2 ಎನ್ನುತ್ತಿದ್ದಾರೆ. ರೋಮಿಯೋ ಸಿನಿಮಾವನ್ನು ಸನ್ ನೆಕ್ಸ್ಟ್ ಒಟಿಟಿಯಲ್ಲಿ ವೀಕ್ಷಿಸಬಹುದು.
ಗಿಮಿಕ್
ಗಣೇಶ್ ನಟನೆಯ ಹಾರರ್ ಕಾಮಿಡಿ ಸಿನಿಮಾವಿದು. ಇದು ತಮಿಳಿನ ಧಿಲುಕು ಧುಡ್ಡು ಎಂಬ ಸಿನಿಮಾದ ರಿಮೇಕ್. ಈ ಸಿನಿಮಾದ ಮೂಲಕ ರೋನಿಕಾ ಸಿಂಗ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು. ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಶೈಲೋ
ಇದು ರೋಮ್ಯಾಟಿಂಕ್ ಡ್ರಾಮ. ಇದು ತಮಿಳಿನ ಮೈನಾ ಸಿನಿಮಾದ ರಿಮೇಕ್. ಈ ಸಿನಿಮಾದಲ್ಲಿ ಮಲಯಾಳಂ ನಟಿ ಭಾಮಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಗಣೇಶ್ ಮಂಜನ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಶೈಲೋ ಎಂಬ ಚೈಲ್ಡ್‌ವುಡ್ ಗೆಳತಿಯ ಜತೆ ಲವ್. ಈ ಸಿನಿಮಾ ಕೂಡ ಸನ್‌ನೆಕ್ಸ್ಟ್‌ನಲ್ಲಿದೆ.
ಕೃಷ್ಣಂ ಪ್ರಣಯ ಸಖಿ ಸಿನಿಮಾದ ಗುಂಗಿನಲ್ಲಿ ಇರುವವರು ಗಣೇಶ್ ನಟನೆಯ ಗಾಳಿಪಟ 2, ರೋಮಿಯೋ, ಗಿಮಿಕ್, ಶೈಲೋ ಸಿನಿಮಾಗಳನ್ನು ನೋಡಬಹುದು.