ಕನ್ನಡ ಸುದ್ದಿ  /  ಮನರಂಜನೆ  /  Ott Releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

OTT releases this week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಿರುವ, ಬಿಡುಗಡೆಯಾಗುತ್ತಿರುವ ಹೊಸ ಸಿನಿಮಾಗಳು, ವೆಬ್‌ ಸರಣಿಗಳ ವಿವರ ಇಲ್ಲಿದೆ. 'ಬಾಹುಬಲಿ: ಕ್ರೌನ್ ಆಫ್ ಬ್ಲಡ್', 'ಬಸ್ತಾರ್: ದಿ ನಕ್ಸಲ್ ಸ್ಟೋರಿ', 'ದಿ 8 ಶೋ ಸಿನಿಮಾ, ಸರಣಿಗಳು ರಿಲೀಸ್‌ ಆಗಲಿವೆ. ಕನ್ನಡದ ಬ್ಲಿಂಕ್‌ ಸಿನಿಮಾ ಕೂಡ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ.

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ
OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ (Bloomberg)

ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌, ಜಿಯೋ ಸಿನಿಮಾ, ಸೋನಿಲಿವ್‌ ಸೇರಿದಂತೆ ಲಭ್ಯವಿರುವ ಹತ್ತು ಹಲವು ಒಟಿಟಿಗಳಲ್ಲಿ ಈ ವಾರ ಹಲವು ಹೊಸ ವೆಬ್‌ ಸರಣಿಗಳು ಮತ್ತು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್‌ ಆಗಿವೆ, ಆಗುತ್ತಿವೆ. ಸಾಹಸ, ನಾಟಕ, ಪ್ರಣಯ, ನಿಗೂಢತೆ ಇತ್ಯಾದಿ ಕಥಾಹಂದರವನ್ನೂ ಹೊಂದಿರುವ ಹಲವು ಸಿನಿಮಾಗಳು, ವೆಬ್‌ ಸರಣಿಗಳನ್ನು ಈ ವಾರ ನೀವು ಮನೆಯಲ್ಲಿ ಕುಳಿತು ನೋಡಬಹುದು. ಈಗಾಗಲೇ ಅಮೆಜಾನ್‌ ಪ್ರೈಮ್‌ ವಿಡಿಯದಲ್ಲಿ ಬಿಡುಗಡೆಯಾಗಿರುವ ಕನ್ನಡದ ಬ್ಲಿಂಕ್‌ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಅನಿಮೇಟೆಡ್ ಸರಣಿ 'ಬಾಹುಬಲಿ: ಕ್ರೌನ್ ಆಫ್ ಬ್ಲಡ್', 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಮತ್ತು ದಿ 8 ಶೋ ಕೂಡ ನೋಡಬಹುದು.

ಟ್ರೆಂಡಿಂಗ್​ ಸುದ್ದಿ

ಬಾಹುಬಲಿ: ಕ್ರೌನ್ ಆಫ್ ಬ್ಲಡ್

ಒಟಿಟಿ ಬಿಡುಗಡೆ ದಿನಾಂಕ: ಮೇ 17

ಎಲ್ಲಿ ನೋಡಬಹುದು?: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

'ಬಾಹುಬಲಿ: ಕ್ರೌನ್ ಆಫ್ ಬ್ಲಡ್' ಅನಿಮೇಟೆಡ್ ಸರಣಿಯಾಗಿದೆ. ಈಗಾಗಲೇ ಬಾಹುಬಲಿ ಸಿನಿಮಾ ನೋಡಿರುವವರಿಗೆ ಈ ಸರಣಿ ಇಷ್ಟವಾಗಬಹುದು. ಈ ಸರಣಿಯು ಅಮರೇಂದ್ರ ಬಾಹುಬಲಿ ಮತ್ತು ಭಲ್ಲಾಲದೇವನ ಆರಂಭಿಕ ಸಾಹಸಗಳ ಸುತ್ತ ಸುತ್ತುತ್ತದೆ.

8 ಶೋ

ಒಟಿಟಿ ಬಿಡುಗಡೆ ದಿನಾಂಕ: ಮೇ 17

ಫ್ಲಾಟ್‌ಫಾರ್ಮ್‌: ನೆಟ್‌ಫ್ಲಿಕ್ಸ್‌

'ದಿ 8 ಶೋ' ದಕ್ಷಿಣ ಕೊರಿಯಾದ ಡಾರ್ಕ್ ಕಾಮಿಡಿ ಥ್ರಿಲ್ಲರ್ ಸರಣಿಯಾಗಿದೆ. ಈ ಕಥೆಯು ಎಂಟು ಅಂತಸ್ತಿನ ಕಟ್ಟಡದೊಳಗೆ ಸಿಕ್ಕಿ ಬಿದ್ದ ಉನ್ನತ ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಎಂಟು ವ್ಯಕ್ತಿಗಳ ಮೂಲಕ ವೀಕ್ಷಕರನ್ನು ತೀವ್ರ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ಇದು ಮಾನವ ಹತಾಶೆ, ಸಹಯೋಗ ಮತ್ತು ಸ್ಪರ್ಧೆಯ ವಿಷಯಗಳನ್ನು ಪರಿಶೀಲಿಸುತ್ತದೆ.

ಬಿಗ್ ಸಿಗಾರ್

ಒಟಿಟಿ ಬಿಡುಗಡೆ ದಿನಾಂಕ: ಮೇ 17

ಫ್ಲಾಟ್‌ಫಾರ್ಮ್‌: ಆಪಲ್ ಟಿವಿ +

ಈ ಆಕರ್ಷಕ ಸರಣಿಯು ಕಾಲ್ಪನಿಕ ಚಲನಚಿತ್ರ ನಿರ್ಮಾಣದ ಕಥೆ ಹೊಂದಿದೆ. ಬ್ಲ್ಯಾಕ್ ಪ್ಯಾಂಥರ್ ಪಕ್ಷದ ಸಹ-ಸಂಸ್ಥಾಪಕ ಹ್ಯೂಯ್ ಪಿ. ನ್ಯೂಟನ್ ಅವರ ಸಾಹಸವನ್ನು ನೋಡಬಹುದು. ಆಂಡ್ರೆ ಹಾಲೆಂಡ್ ನಟಿಸಿದ ಈ ಸರಣಿಯು ಸಿನಿಮೀಯ ಕಥೆಯನ್ನು ಹೇಳುವುದರ ಜತೆಗೆ ಐತಿಹಾಸಿಕ ಘಟನೆಗಳನ್ನು ಇದನ್ನು ಒಳಗೊಂಡಿದೆ.

ಬಸ್ತಾರ್: ದಿ ನಕ್ಸಲ್ ಸ್ಟೋರಿ

ಒಟಿಟಿ ಬಿಡುಗಡೆ ದಿನಾಂಕ: ಮೇ 17

ಫ್ಲಾಟ್‌ಫಾರ್ಮ್‌: ಝೀ5

ಸುದೀಪ್ತೋ ಸೇನ್ ಮತ್ತು ವಿಪುಲ್ ಅಮೃತಲಾಲ್ ಶಾ ನಿರ್ದೇಶನದ 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಸಿನಿಮಾವನ್ನು ಈ ವಾರ ಒಟಿಟಿಯಲ್ಲಿ ನೋಡಬಹುದು. ಅದಾ ಶರ್ಮಾ, ಇಂದಿರಾ ತಿವಾರಿ, ಶಿಲ್ಪಾ ಶುಕ್ಲಾ ಮತ್ತು ರೈಮಾ ಸೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಐಪಿಎಸ್ ಅಧಿಕಾರಿ ನೀರಜಾ ಮಾಧವನ್ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ.

ರಣಧಾನೆ ಬಂಧನ್

ಒಟಿಟಿ ಬಿಡುಗಡೆ ದಿನಾಂಕ: ಮೇ 20

ಫ್ಲಾಟ್‌ಫಾರ್ಮ್‌: ಝೀ5

ಇದು ಅಡುಗೆ ಸ್ಪರ್ಧೆ. ಬಂಗಾಳಿ ಭಾಷೆಯ ಈ ಅಡುಗೆ ಪ್ರದರ್ಶನದಲ್ಲಿ ಕುಟುಂಬ ಸದಸ್ಯರು ರುಚಿಕರವಾದ ಭಕ್ಷ್ಯಗಳನ್ನು ರಚಿಸಲು ಜೋಡಿಯಾಗುತ್ತಾರೆ. ಅವರು ಪ್ರತಿಷ್ಠಿತ ಪ್ರಶಸ್ತಿಗಾಗಿ ಇತರ ಕುಟುಂಬಗಳೊಂದಿಗೆ ಸ್ಪರ್ಧಿಸುತ್ತಾರೆ.

ತಲೈಮೈ ಸೆಯಲಗಂ

ಒಟಿಟಿ ಬಿಡುಗಡೆ ದಿನಾಂಕ: ಮೇ 17

ಎಲ್ಲಿ ನೋಡಬಹುದು?: ಝೀ5

ವಸಂತಬಾಲನ್ ನಿರ್ದೇಶನದ ಶ್ರೀಯಾ ರೆಡ್ಡಿ ಅಭಿನಯದ 'ತಲೈಮೈ ಸೆಯಲಗಂ' ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದೆ. ಮುಖ್ಯಮಂತ್ರಿಯ ಭ್ರಷ್ಟಾಚಾರದ ವಿಚಾರಣೆಯ ಸುತ್ತಲಿನ ತನಿಖೆಗಳ ಸುತ್ತ ಕಥೆ ಸುತ್ತುತ್ತದೆ. ನಾಟಕವು ಅನಿರೀಕ್ಷಿತ ತಿರುವು ಪಡೆಯುವ ಜಾರ್ಖಂಡ್ ಕೊಲೆ ಮತ್ತು ಕೊಲೆಗಳಿಗೆ ವಿಸ್ತರಿಸುತ್ತದೆ.

ಬ್ಲಿಂಕ್‌

ಈಗಾಗಲೇ ಅಮೆಜಾನ್‌ ಪ್ರೈಮ್‌ನಲ್ಲಿ ಬ್ಲಿಂಕ್‌ ಕನ್ನಡ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ನೋಡದೆ ಇರುವ ಸಿನಿಪ್ರೇಕ್ಷಕರು ಇದೀಗ ಒಟಿಟಿಯಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024