ಕ್ರೈಮ್ ಥ್ರಿಲ್ಲರ್ ಸಿನಿಮಾ ಇಷ್ಟ ಅಂದ್ರೆ ನೆಟ್‌ಫ್ಲಿಕ್ಸ್‌ನಲ್ಲಿರುವ ಈ 5 ತಮಿಳು ಚಿತ್ರಗಳನ್ನು ತಪ್ಪದೇ ನೋಡಿ
ಕ್ರೈಂ ಥ್ರಿಲ್ಲರ್ ಸಿನಿಮಾ ನೋಡೋದು ಇಷ್ಟ ಅನ್ನೋರಿಗೆ ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ಸಿಗುತ್ತವೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ 5 ತಮಿಳು ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನು ತಪ್ಪದೇ ನೋಡಬೇಕು. ಒಂದಕ್ಕಿಂತ ಒಂದು ಥ್ರಿಲ್ಲಿಂಗ್ ಆಗಿದೆ

ಕ್ರೈ ಥ್ರಿಲ್ಲರ್ ಸಿನಿಮಾ ಎಂದಾಗ ಮಲಯಾಳಂ ಸಿನಿಮಾ ಇಂಡಸ್ಟ್ರಿಯೇ ನೆನಪಾಗುತ್ತದೆ. ಆದರೆ ತಮಿಳಿನಲ್ಲೂ ಸಾಕಷ್ಟು ಕ್ರೈ ಥ್ರಿಲ್ಲರ್ ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಕೆಲವು ಬ್ಲಾಕ್‌ಬಸ್ಟರ್ ಯಶಸನ್ನೂ ಗಳಿಸಿವೆ. ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೊಂದಿದ್ದು, ಅಂತಹ ಚಿತ್ರಗಳನ್ನು ಒಮ್ಮೆಯಾದರೂ ಮಿಸ್ ಮಾಡದೇ ನೋಡಬೇಕು. ಅಂತಹ ಕೆಲವು ಚಿತ್ರಗಳು ಒಟಿಟಿಯಲ್ಲೂ ಲಭ್ಯವಿವೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ನೋಡಬೇಕಾಗಿರುವ ತಮಿಳು ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿವೆ. ಅಂತಹ 5 ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.
ವಿಸಾರಣೈ
ವಿಸಾರಣೈ ಇದು ವೆಟ್ರಿಮಾರನ್ ನಿರ್ದೇಶನದ ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರ. 2015 ರಲ್ಲಿ ಬಿಡುಗಡೆಯಾದ ಈ ಚಿತ್ರವು ವಿರ್ಮಶಕರ ಮೆಚ್ಚುಗೆ ಪಡೆಯಿತು, ಮಾತ್ರವಲ್ಲ ಬಾಕ್ಸ್ ಆಫೀಸ್‌ನಲ್ಲೂ ಸಾಕಷ್ಟು ಯಶಸ್ಸು ಗಳಿಸಿತು. ಈ ಚಿತ್ರದಲ್ಲಿ ಅಟ್ಟಕತ್ತಿ ದಿನೇಶ್, ಸಮುದ್ರಕಣಿ, ಮುರುಗದಾಸ್, ಕಿಶೋರ್ ಮತ್ತು ರಾಮದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ನಾಲ್ವರು ಯುವಕರನ್ನು ಪೊಲೀಸರು ತಾವು ಮಾಡದ ಕಳ್ಳತನಕ್ಕಾಗಿ ಬಂಧಿಸಿ ಚಿತ್ರಹಿಂಸೆ ನೀಡುವುದು ಮತ್ತು ನಂತರದ ಸನ್ನಿವೇಶಗಳ ಸುತ್ತ ಸುತ್ತುತ್ತದೆ. 'ವಿಸಾರಣೈ' ಚಿತ್ರವು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಈ ಸಿನಿಮಾ ನೋಡಲೇಬೇಕಾದ ಥ್ರಿಲ್ಲರ್ ಸಿನಿಮಾ.
ಸೈಕೋ
ಉದಯನಿಧಿ ಸ್ಟಾಲಿನ್ ನಾಯಕನಾಗಿ ನಟಿಸಿದ ಸೈಕೋ ಚಿತ್ರ 2020 ರಲ್ಲಿ ಬಿಡುಗಡೆಯಾಯಿತು. ನಿತ್ಯಾ ಮೆನನ್ ಮತ್ತು ಅದಿತಿ ರಾವ್ ಹೈದರಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಿಸ್ಕಿನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಒಬ್ಬ ಕುರುಡನು ತನ್ನ ಗೆಳತಿಯನ್ನು ಸೈಕೋ ಸೀರಿಯಲ್ ಕಿಲ್ಲರ್‌ನಿಂದ ರಕ್ಷಿಸಲು ಮಾಡುವ ಪ್ರಯತ್ನದ ಸುತ್ತ ಸುತ್ತುತ್ತದೆ. ಸೈಕೋ ಚಿತ್ರವನ್ನು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ವೀಕ್ಷಿಸಬಹುದು. ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟವಾಗುತ್ತದೆ.
ಮಹಾರಾಜ
ವಿಜಯ್ ಸೇತುಪತಿ ನಾಯಕನಾಗಿ ನಟಿಸಿದ ಮಹಾರಾಜ ಚಿತ್ರವು ದೊಡ್ಡ ಬ್ಲಾಕ್ ಬಸ್ಟರ್ ಆಗಿತ್ತು. ಕಳೆದ ವರ್ಷ ಅಂದರೆ 2024 ರಲ್ಲಿ ಬಿಡುಗಡೆಯಾದ ಈ ಕ್ರೈಮ್ ಆಕ್ಷನ್ ಥ್ರಿಲ್ಲರ್ ಚಿತ್ರವು 1,000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ನಿಥಿಲನ್ ಸಾಮಿನಾಥನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಹಾರಾಜ ಕೂಡ ಒಂದು ಥ್ರಿಲ್ಲರ್ ಚಿತ್ರವಾಗಿದ್ದು, ಅದನ್ನು ತಪ್ಪಿಸಿಕೊಳ್ಳಬಾರದು. ಚಿತ್ರಕಥೆ ಮನಮುಟ್ಟುವಂತಿದ್ದು, ಸಿನಿಮಾ ಕುತೂಹಲಕಾರಿಯಾಗಿದೆ.
ಸ್ವರ್ಗವಾಸಲ್
ಆರ್‌ಜೆ ಬಾಲಾಜಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸ್ವರ್ಗವಾಸಲ್ ಕಳೆದ ವರ್ಷ ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವನ್ನು ಸಿದ್ಧಾರ್ಥ್ ವಿಶ್ವನಾಥನ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯು ಮಾಡದ ಅಪರಾಧಕ್ಕಾಗಿ ಜೈಲು ಪಾಲಾಗುವ ವ್ಯಕ್ತಿಯ ಸುತ್ತ ಸುತ್ತುತ್ತದೆ. ಈ ಚಿತ್ರವು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ತಮಿಳು ಜೊತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಮನಮುಟ್ಟುವ ಸ್ವರ್ಗವಾಸಲ್ ಚಿತ್ರವನ್ನು ನೀವಿನ್ನೂ ನೋಡಿಲ್ಲ ಅಂದ್ರೆ ತಪ್ಪದೇ ನೋಡಿ.
ಕೊಲಾಯುಥಿರ್ ಕಾಲಮ್
2019 ರಲ್ಲಿ ಬಿಡುಗಡೆಯಾದ 'ಕೊಲಾಯುಥಿರ್ ಕಾಲಮ್' ಚಿತ್ರದಲ್ಲಿ ನಯನತಾರಾ ಮತ್ತು ಭೂಮಿಕಾ ಚಾವ್ಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕಿವುಡ ಮಹಿಳೆಯೊಬ್ಬಳು ತನ್ನ ಮನೆಗೆ ಬರುವ ಕೊಲೆಗಾರನಿಂದ ತನ್ನ ಜೀವವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಸುತ್ತ ಸುತ್ತುತ್ತದೆ. ಈ ಚಿತ್ರವನ್ನು ಚಕ್ರಿ ಟೋಲೆಟಿ ನಿರ್ದೇಶಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಕೊಲಾಯುಥಿರ್ ಇಷ್ಟವಾಗುತ್ತದೆ.
