Today OTT Movies: ಶ್ರಾವಣ ಶುಕ್ರವಾರದಂದು ಒಟಿಟಿಯಲ್ಲಿ 11 ಸಿನಿಮಾ, ವೆಬ್‌ ಸರಣಿ ಬಿಡುಗಡೆ; ಹಾರರ್‌ ಹಾಸ್ಯ ಬೋಲ್ಡ್‌, ಯಾವುದು ನೋಡ್ತಿರಿ-ott movies releasing friday 11 new movies web series released today shravana shukravara which is best to watch pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Today Ott Movies: ಶ್ರಾವಣ ಶುಕ್ರವಾರದಂದು ಒಟಿಟಿಯಲ್ಲಿ 11 ಸಿನಿಮಾ, ವೆಬ್‌ ಸರಣಿ ಬಿಡುಗಡೆ; ಹಾರರ್‌ ಹಾಸ್ಯ ಬೋಲ್ಡ್‌, ಯಾವುದು ನೋಡ್ತಿರಿ

Today OTT Movies: ಶ್ರಾವಣ ಶುಕ್ರವಾರದಂದು ಒಟಿಟಿಯಲ್ಲಿ 11 ಸಿನಿಮಾ, ವೆಬ್‌ ಸರಣಿ ಬಿಡುಗಡೆ; ಹಾರರ್‌ ಹಾಸ್ಯ ಬೋಲ್ಡ್‌, ಯಾವುದು ನೋಡ್ತಿರಿ

OTT Movies Releasing Friday: ಶ್ರಾವಣ ಶುಕ್ರವಾರವಾದ ಇಂದು (ಆಗಸ್ಟ್‌ 16) 11 ಸಿನಿಮಾಗಳು ಏಕಕಾಲದಲ್ಲಿ ಒಟಿಟಿಗೆ ಲಗ್ಗೆಯಿಟ್ಟಿವೆ. ಹಾರರ್‌, ಬೋಲ್ಡ್‌, ಸೂಪರ್‌ ಹೀರೋ ಜಾನರ್‌, ಕಾಮಿಡಿ ವೆಬ್‌ ಸೀರಿಸ್‌ಗಳು ಸೇರಿದಂತೆ ವೈವಿಧ್ಯಮಯ ಸಿನಿಮಾಗಳು ಬಿಡುಗಡೆಯಾಗಿವೆ. ಯಾವ ಒಟಿಟಿಯಲ್ಲಿ ಹೊಸ ಸಿನಿಮಾ, ವೆಬ್‌ ಸರಣಿಗಳನ್ನು ನೋಡಬಹುದು ಗಮನಿಸೋಣ.

ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗುವ ಸಿನಿಮಾಗಳು, ಒಟಿಟಿಯಲ್ಲಿ ಇಂದು ಬಿಡುಗಡೆಯಾದ ಸಿನಿಮಾಗಳು, ವೆಬ್‌ ಸರಣಿಗಳ ವಿವರ.
ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗುವ ಸಿನಿಮಾಗಳು, ಒಟಿಟಿಯಲ್ಲಿ ಇಂದು ಬಿಡುಗಡೆಯಾದ ಸಿನಿಮಾಗಳು, ವೆಬ್‌ ಸರಣಿಗಳ ವಿವರ.

OTT Movies Releasing Today: ಈ ವಾರ ಶ್ರಾವಣ ಶುಕ್ರವಾರದ ಸಮಯದಲ್ಲಿ ಮತ್ತು ವೀಕೆಂಡ್‌ನಲ್ಲಿ ಹೊಸ ಸಿನಿಮಾ ಅಥವಾ ವೆಬ್‌ ಸರಣಿಗಳನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಬಯಸಬಹುದು. ಒಟಿಟಿ ಸಿನಿಪ್ರಿಯರಿಗೆ ಈ ವಾರ ನಿರಾಶೆಯಾಗದು. ಈ ವಾರ 23ಕ್ಕೂ ಹೆಚ್ಚು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿವೆ. ಅವುಗಳಲ್ಲಿ 11 ಸಿನಿಮಾ/ವೆಬ್‌ ಸರಣಿಗಳು ಶ್ರಾವಣ ಶುಕ್ರವಾರವಾದ ಇಂದು (ಆಗಸ್ಟ್‌ 16) ಬಿಡುಗಡೆಯಾಗಿವೆ.

ನಗುವೂ ಇದೆ, ಭಯವೂ ಇದೆ

ಶ್ರಾವಣ ಶುಕ್ರವಾರದಂದು ಹಾರರ್, ಬೋಲ್ಡ್, ಸೂಪರ್‌ಹೀರೋ ಪ್ರಕಾರದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಜೊತೆಗೆ ಕಾಮಿಡಿ ವೆಬ್ ಸರಣಿಯೂ ಬಿಡುಗಡೆಯಾಗಿದೆ. ಯಾವೆಲ್ಲ ಸಿನಿಮಾಗಳು ರಿಲೀಸ್‌ ಆಗಿವೆ, ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಎಂಬ ಮಾಹಿತಿ ಪಡೆಯೋಣ.

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ವೀಕ್ಷಿಸಿ

  • ಕೆಂಗನ್ ಅಸುರ ಸೀಸನ್ 2 ಭಾಗ 2 (ಅನಿಮೇಟೆಡ್ ವೆಬ್ ಸರಣಿ) - ಆಗಸ್ಟ್ 16
  • ಐ ಕ್ಯಾನಾಟ್‌ ಲಿವ್‌ ವಿದೌಟ್‌ ಯು (ಹಾಲಿವುಡ್ ಚಲನಚಿತ್ರ) - ಆಗಸ್ಟ್ 16
  • ಪರ್ಲ್ (ಇಂಗ್ಲಿಷ್ ಹಾರರ್ ಚಲನಚಿತ್ರ) - ಆಗಸ್ಟ್ 16
  • ಲವ್ ನೆಕ್ಸ್ಟ್ ಡೋರ್ (ಕೊರಿಯನ್ ವೆಬ್ ಸರಣಿ) - ಆಗಸ್ಟ್ 17
  • ಶಾಜಮ್: ಫ್ಯೂರಿ ಆಫ್ ಗಾಡ್ಸ್ (ಇಂಗ್ಲಿಷ್ ಸೂಪರ್ ಹೀರೋ ಚಲನಚಿತ್ರ) - ಆಗಸ್ಟ್ 17
  • ದಿ ಗಾರ್ಫೀಲ್ಡ್ (ಅನಿಮೇಟೆಡ್ ಚಲನಚಿತ್ರ) - ಆಗಸ್ಟ್ 17

ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ನೋಡಿ

  • ವಾಸ್ಕೋಡಿಗಮ್‌ (ತಮಿಳು ಚಲನಚಿತ್ರ) - ಆಗಸ್ಟ್ 16
  • ಯೆ ಮೇರಿ ಫ್ಯಾಮಿಲಿ ಸೀಸನ್ 4 (ಹಿಂದಿ ವೆಬ್ ಸರಣಿ) - ಆಗಸ್ಟ್ 16

ಇದನ್ನೂ ಓದಿ: Thangalaan OTT: 8 ವಾರದಲ್ಲಿ ಒಟಿಟಿಗೆ ಬರಲಿದೆ ತಂಗಲಾನ್‌, ಚಿಯಾನ್‌ ವಿಕ್ರಮ್‌ ಸಿನಮಾ ಯಾವಾಗ, ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಆಹಾ ಒಟಿಟಿ

ಇವೊಲ್ (ತೆಲುಗು ಬೋಲ್ಡ್ ಚಲನಚಿತ್ರ)- ಆಗಸ್ಟ್ 16

ಕೊಂಜಾಲ್ ಪೆಸಿನಲ್ ಎನ್ನ (ತಮಿಳು ಚಲನಚಿತ್ರ) - ಆಗಸ್ಟ್ 16

ಈ ಒಟಿಟಿಗಳಲ್ಲಿ ನೋಡಿ

  1. ಮೈ ಪರ್ಫೆಕ್ಟ್‌ ಹಸ್ಬೆಂಡ್‌ (ತಮಿಳು ವೆಬ್ ಸರಣಿ) - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ - ಆಗಸ್ಟ್ 16
  2. ಬೆಲ್ ಏರ್ ಸೀಸನ್ 3 (ಇಂಗ್ಲಿಷ್ ವೆಬ್ ಸರಣಿ) - ಜಿಯೋ ಸಿನಿಮಾ ಒಟಿಟಿ - ಆಗಸ್ಟ್ 16
  3. ಚಮಕ್: ದಿ ಕನ್‌ಕ್ಲೂಷನ್ (ಹಿಂದಿ ಚಲನಚಿತ್ರ) - ಸೋನಿ ಲೈವ್ ಒಟಿಟಿ - ಆಗಸ್ಟ್ 16
  4. ಡಿಸ್ಪೆಕೇಬಲ್‌ ಮೀ 2 (ಇಂಗ್ಲಿಷ್ ಚಲನಚಿತ್ರ) - ಬುಕ್ ಮೈ ಶೋ ಒಟಿಟಿ - ಆಗಸ್ಟ್ 16

ಇದನ್ನೂ ಓದಿ: OTT Movies: ಥಿಯೇಟರ್‌ಗಳಿಂದ ಬ್ಯಾನ್‌ ಆದ ಈ ಹಿಂದಿ ಸಿನಿಮಾಗಳು ಒಟಿಟಿಯಲ್ಲಿ ಲಭ್ಯ; ದಿ ಪೇಂಟೆಡ್ ಹೌಸ್‌ನಿಂದ ಪಾಂಚ್‌ವರೆಗೆ

11 ಸಿನಿಮಾ/ಸರಣಿ ಇಂದು ಬಿಡುಗಡೆ

ಶ್ರಾವಣ ಶುಕ್ರವಾರದಂದು ಒಟ್ಟು ಹನ್ನೊಂದು ಸಿನಿಮಾ/ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಅವುಗಳಲ್ಲಿ, ಪರ್ಲ್ ಹಾಲಿವುಡ್ ಹಾರರ್ ಚಲನಚಿತ್ರ ಮತ್ತು ಶಾಜಮ್: ಫ್ಯೂರಿ ಆಫ್ ಗಾಡ್ಸ್ ಸೂಪರ್ ಹೀರೋ ಚಲನಚಿತ್ರ ಶಾಜಮ್‌ನ ಸೀಕ್ವೆಲ್ ಆಸಕ್ತಿದಾಯಕವಾಗಿರುತ್ತದೆ. ಹಾಗೆಯೇ ತೆಲುಗಿನ ಬೋಲ್ಡ್ ರೊಮ್ಯಾಂಟಿಕ್ ಚಿತ್ರ ಇವೊಲ್ ಕೂಡ ಕೆಲವರಿಗೆ ಇಷ್ಟವಾಗಬಹುದು. ಇವುಗಳ ಹೊರತಾಗಿ ಸತ್ಯರಾಜ್ ಅಭಿನಯದ ಮೈ ಪರ್ಫೆಕ್ಟ್ ಹಸ್ಬೆಂಡ್ ವೆಬ್ ಸಿರೀಸ್ ಕೂಡ ಕುತೂಹಲಕರವಾಗಿರಲಿದೆ. ಕನ್ನಡಿಗರು ಇತ್ತೀಚೆಗೆ ಬಿಡುಗಡೆಯಾದ ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ ನೋಡಿಲ್ಲವೆಂದಾರೆ ಒಟಿಟಿಯಲ್ಲಿ ನೋಡಬಹುದು.