ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಮನೆಯಲ್ಲೇ ನೋಡಿ ಸಲ್ಮಾನ್‌ ಖಾನ್‌- ರಶ್ಮಿಕಾ ಮಂದಣ್ಣ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಮನೆಯಲ್ಲೇ ನೋಡಿ ಸಲ್ಮಾನ್‌ ಖಾನ್‌- ರಶ್ಮಿಕಾ ಮಂದಣ್ಣ ಸಿನಿಮಾ

ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಮನೆಯಲ್ಲೇ ನೋಡಿ ಸಲ್ಮಾನ್‌ ಖಾನ್‌- ರಶ್ಮಿಕಾ ಮಂದಣ್ಣ ಸಿನಿಮಾ

ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಸಲ್ಮಾನ್‌ ಖಾನ್‌, ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್‌ ಸಿನಿಮಾ ಇಂದು ಮಧ್ಯರಾತ್ರಿ ಅಂದರೆ ಮೇ 25ರಂದು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಭಾನುವಾರದ ಬಿಡುವಿನಲ್ಲಿ ಮನೆಯಲ್ಲಿಯೇ ಕುಳಿತು ಈ ಸಿನಿಮಾವನ್ನು ನೋಡಬಹುದು.

ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಮನೆಯಲ್ಲೇ ನೋಡಿ ಸಲ್ಮಾನ್‌ ಖಾನ್‌ ಸಿನಿಮಾ
ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಮನೆಯಲ್ಲೇ ನೋಡಿ ಸಲ್ಮಾನ್‌ ಖಾನ್‌ ಸಿನಿಮಾ

ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಮಾರ್ಚ್ 30, 2025 ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿದೆ. ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಒಂದು ತಿಂಗಳಾಗುವ ಮುನ್ನವೇ ಒಟಿಟಿಯತ್ತ ಮುಖ ಮಾಡುತ್ತಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಆಕ್ಷನ್ ನಾಟಕವು ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು. ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಈ ಚಿತ್ರ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಸಿಕಂದರ್‌ ಸಿನಿಮಾ ಒಟಿಟಿ ಬಿಡುಗಡೆ

ಸಿಕಂದರ್‌ ಸಿನಿಮಾವು ಮೇ 25ರ ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಅಂದರೆ, ಮೇ 24 ಕಳೆದ ತಕ್ಷಣ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ನಾಳೆ ಹೇಗೋ ರಜೆ ಇಂದೇ ರಾತ್ರಿ ನೋಡೋಣ ಎಂದು ಕಾಯುವವರು ನಿದ್ದೆಗಣ್ಣಲ್ಲಿಈ ಸಿನಿಮಾ ನೋಡಬಹುದು. ನಾಳೆ ಭಾನುವಾರ ಹೊರಗೆಲ್ಲ ಮಳೆ ಅಥವಾ ಬಿಸಿಲು ಇರುತ್ತದೆ, ಮನೆಯಲ್ಲೇ ಇರೋಣ ಎಂದು ಪ್ಲ್ಯಾನ್‌ ಮಾಡಿದ್ದವರು ಕೂಡ ಮನೆಯಲ್ಲಿಯೇ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು. ಈ ಕುರಿತು ನೆಟ್‌ಫ್ಲಿಕ್ಸ್‌ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ನೀಡಿದೆ "ಕಮ್ಮಿಂಗ್‌ ಆನ್‌ ಸಂಡೆ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದೆ.

ಬಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿರುವ ಸಲ್ಮಾನ್‌ ಖಾನ್‌ ಈ ವರ್ಷ ಸಿಕಂದರ್‌ ಮೂಲಕ ನೀರಸ ಪ್ರದರ್ಶನ ನೀಡಿದ್ದರು. ಈ ವರ್ಷದ ಬ್ಲಾಕ್‌ಬಸ್ಟರ್‌ ಸಿನಿಮಾವಾಗಬಹುದೆಂದು ನಿರೀಕ್ಷಿಸಿದ್ದ ಸಿಕಂದರ್‌ ಮಕಾಡೆ ಮಲಗಿತ್ತು. ಈ ಸಿನಿಮಾ ರಶ್ಮಿಕಾ ಮಂದಣ್ಣ ನಟಿಸಿದ ಫ್ಲಾಪ್‌ ಸಿನಿಮಾಗಳ ಪಟ್ಟಿಗೆ ಸೇರಿತ್ತು. ಎ.ಆರ್. ಮುರುಗದಾಸ್ ನಿರ್ದೇಶನದ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರ ಈದ್‌ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಸಿಕಂದರ್‌ ಸಿನಿಮಾ ಹೇಗಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಈಗಾಗಲೇ ಈ ಚಿತ್ರವನ್ನು ನೋಡಿ ರಿವ್ಯೂ ಬರೆದಿದೆ. "ಈಗಾಗಲೇ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಬಹುದಿತ್ತು. ಆದರೆ, ಆಕೆಯ ಮಾದಕ ನೋಟವನ್ನು ನಾವು ಪಡೆಯುವ ಮೊದಲೇ ಆಕೆಯನ್ನು ದೆವ್ವವಾಗಿಸಲಾಗಿದೆ. ಹೌದು, ಈ ಸುಂದರ ನಟಿ ಈ ಸಿನಿಮಾದಲ್ಲಿ ದೆವ್ವವಾಗಿದ್ದಾರೆ. ಸಿನಿಮಾದಲ್ಲಿ ಆಕೆಯ ದೆವ್ವದ ಧ್ವನಿ ಕೇಳಿಸುತ್ತದೆ. "ನಾನು ಇರುವವರೆಗೆ ನಿನಗೆ ಏನೂ ಆಗಲು ಬಿಡುವುದಿಲ್ಲ" ಎಂಬ ರಶ್ಮಿಕಾ ಮಂದಣ್ಣ ಧ್ವನಿ ಸಲ್ಮಾನ್‌ ಖಾನ್‌ಗೆ ಅಭಯ ನೀಡುತ್ತ ಇರುತ್ತದೆ. ಹೀಗಾಗಿ ರಶ್ಮಿಕಾ ಮಂದಣ್ಣರ ಮೋಡಿ ಇರುವುದಿಲ್ಲ. ನಿರ್ದೇಶಕ ಮುರುಗದಾಸ್‌ ತಲೆಯಲ್ಲಿ ಗಜಿನಿ ಇದ್ದಾನೆ. ರಶ್ಮಿಕಾಗೆ ಇದರಿಂದ ಹೊರಬರಲು ಅವಕಾಶವಿಲ್ಲ" ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಪೂರ್ತಿ ರಿವ್ಯೂ ಓದಲು ಇಲ್ಲಿ ಕ್ಲಿಕ್‌ ಮಾಡಿ

ಒಟಿಟಿಯಲ್ಲಿ ಸಿಕಂದರ್‌ ಬದಲು ಬೇರೆ ಯಾವುದಾದರೂ ಸಲ್ಮಾನ್‌ ಖಾನ್‌ ಸಿನಿಮಾ ನೋಡಲು ಬಯಸುವಿರಾ. ವಾಂಟೆಡ್‌ 2009ರಲ್ಲಿ ಬಿಡುಗಡೆಯಾದ ಸಲ್ಮಾನ್‌ ಖಾನ್‌ ಸಿನಿಮಾ. ಈ ಸಿನಿಮಾ ಜೀ5ನಲ್ಲಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿರುವ ದಬಾಂಗ್‌ ಸಿನಿಮಾ ಇನ್ನೊಮ್ಮೆ ನೋಡಲು‌ ಅಡ್ಡಿಯಿಲ್ಲ. ಇದೇ ಒಟಿಟಿಯಲ್ಲಿ ಏಕ್‌ ತಾ ಟೈಗರ್‌ ಎಂಬ ಸಿನಿಮಾವೂ ಇದೆ. ಟೈಗರ್‌ 3 ಕೂಡ ಅಮೆಜಾನ್‌ ಪ್ರೈಮ್‌ನಲ್ಲಿದೆ. ಕಿಕ್‌ ಎಂಬ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ. ಇದೇ ಒಟಿಟಿಯಲ್ಲಿ ಜೈ ಹೋ ಸಿನಿಮಾವೂ ಇದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲಿರುವ ವೀರ್‌ ಕೂಡ ನೋಡಬಹುದು. ಜೀ 5ನಲ್ಲಿರುವ ಕರಣ್‌ ಅರ್ಜುನ್‌ ಕೂಡ ನಿಮಗೆ ಇಷ್ಟವಾಗಬಹುದು. ಇವೆಲ್ಲ ಹಳೆಯ ಸಿನಿಮಾ ಬೇಡ ಎನ್ನುವವರು ಇಂದು ಮಧ್ಯರಾತ್ರಿ ಬಿಡುಗಡೆಯಾಗುವ ಸಿಕಂದರ್‌ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in