ಐಎಂಡಿಬಿಯಲ್ಲಿ 9.6 ರೇಟಿಂಗ್‌ ಪಡೆದ ಫ್ಯಾಮಿಲಿ ಥ್ರಿಲ್ಲರ್‌ ತಮಿಳು ಸಿನಿಮಾ ಓಟಿಟಿ ಎಂಟ್ರಿ; ಸ್ಟ್ರೀಮಿಂಗ್‌ ಯಾವಾಗ, ಎಲ್ಲಿ?
ಕನ್ನಡ ಸುದ್ದಿ  /  ಮನರಂಜನೆ  /  ಐಎಂಡಿಬಿಯಲ್ಲಿ 9.6 ರೇಟಿಂಗ್‌ ಪಡೆದ ಫ್ಯಾಮಿಲಿ ಥ್ರಿಲ್ಲರ್‌ ತಮಿಳು ಸಿನಿಮಾ ಓಟಿಟಿ ಎಂಟ್ರಿ; ಸ್ಟ್ರೀಮಿಂಗ್‌ ಯಾವಾಗ, ಎಲ್ಲಿ?

ಐಎಂಡಿಬಿಯಲ್ಲಿ 9.6 ರೇಟಿಂಗ್‌ ಪಡೆದ ಫ್ಯಾಮಿಲಿ ಥ್ರಿಲ್ಲರ್‌ ತಮಿಳು ಸಿನಿಮಾ ಓಟಿಟಿ ಎಂಟ್ರಿ; ಸ್ಟ್ರೀಮಿಂಗ್‌ ಯಾವಾಗ, ಎಲ್ಲಿ?

ಥ್ರಿಲ್ಲರ್‌ ಸಿನಿಮಾ ಪ್ರಿಯರಿಗಾಗಿ ತಮಿಳಿನ ಹೊಸ ಚಿತ್ರವೊಂದು ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಆಗಸ್ಟ್‌ನಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಂಡ ಸಿನಿಮಾ ಇದೇ ತಿಂಗಳಲ್ಲಿ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ ಈ ಸಿನಿಮಾಗೆ ಐಎಂಡಿಬಿಯಲ್ಲಿ ಟಾಪ್‌ ರೇಟಿಂಗ್‌ ಇರುವುದು ವಿಶೇಷ.

ಐಎಂಡಿಬಿಯಲ್ಲಿ 9.6 ರೇಟಿಂಗ್‌ ಪಡೆದ ಫ್ಯಾಮಿಲಿ ಥ್ರಿಲ್ಲರ್‌ ತಮಿಳು ಸಿನಿಮಾ ಓಟಿಟಿ ಎಂಟ್ರಿ; ಸ್ಟ್ರೀಮಿಂಗ್‌ ಯಾವಾಗ, ಎಲ್ಲಿ?
ಐಎಂಡಿಬಿಯಲ್ಲಿ 9.6 ರೇಟಿಂಗ್‌ ಪಡೆದ ಫ್ಯಾಮಿಲಿ ಥ್ರಿಲ್ಲರ್‌ ತಮಿಳು ಸಿನಿಮಾ ಓಟಿಟಿ ಎಂಟ್ರಿ; ಸ್ಟ್ರೀಮಿಂಗ್‌ ಯಾವಾಗ, ಎಲ್ಲಿ?

ಮತ್ತೊಂದು ತಮಿಳು ಥ್ರಿಲ್ಲರ್‌ ಸಿನಿಮಾವೊಂದು ಒಟಿಟಿಯಲ್ಲಿ ಶೀಘ್ರದಲ್ಲೇ ಸ್ಟ್ರೀಮಿಂಗ್‌ ಆರಂಭಿಸಿದೆ. ಪೋಗುಮಿದಂ ವೇಗು ತೂರಮಿಳ್ಲೈ ಸಿನಿಮಾ ಕನ್ನಡ, ಹಿಂದಿ, ತೆಲುಗು ಮೂರೂ ಭಾಷೆಗಳಲ್ಲೂ ಸ್ಟ್ರೀಮ್‌ ಆಗುತ್ತಿದೆ. ಈ ಸಿನಿಮಾ ಆಗಸ್ಟ್‌ 23 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ರಿಲೀಸ್‌ ಆಗಿ ಪಾಸಿಟಿವ್‌ ರಿವ್ಯೂ ಪಡೆದು ಒಂದು ತಿಂಗಳ ನಂತರ ಒಟಿಟಿಗೆ ಬಂದಿದೆ. 

ಐಎಂಡಿಬಿಯಲ್ಲಿ 9.6 ರೇಟಿಂಗ್‌

ಪೋಗುಮಿದಂ ವೇಗು ತೂರಮಿಳ್ಲೈ ಸಿನಿಮಾ ಚಿತ್ರಕ್ಕೆ ಐಎಂಡಿಬಿಯಲ್ಲಿ 1100ಕ್ಕೂ ಹೆಚ್ಚು ಜನರಿಂದ ರೇಟಿಂಗ್ಸ್‌ ದೊರೆತಿದೆ. ಚಿತ್ರಕ್ಕೆ 9.6 ರೇಟಿಂಗ್‌ ದೊರೆತಿದ್ದು ಈಗ ಒಟಿಟಿ ವೀಕ್ಷಕರನ್ನು ಹೇಗೆ ಸೆಳೆಯಲಿದೆ ಅನ್ನೋದನ್ನು ಕಾದು ನೋಡಬೇಕು. ಚಿತ್ರಮಂದಿರಗಳಲ್ಲಿ ಮಿಸ್‌ ಮಾಡಿಕೊಂಡವರು ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬಹುದು.

ಚೆನ್ನೈನಿಂದ ತಿರುನಲ್ವೇಲಿಗೆ ಮೃತದೇಹವನ್ನು ಸಾಗಿಸುವ ಒಬ್ಬ ವ್ಯಾನ್‌ ಡ್ರೈವರ್‌ ಹಾಗೂ ದಾರಿ ಮಧ್ಯೆ ಲಿಫ್ಟ್‌ ಕೇಳುವ ಮತ್ತೊಬ್ಬ ವ್ಯಕ್ತಿ ಸುತ್ತ ಪೋಗುಮಿದಂ ವೇಗು ತೂರಮಿಳ್ಲೈ ಸಿನಿಮಾ ಕಥೆ ಸುತ್ತುತ್ತದೆ. ಹೊಟ್ಟೆ ನೋವಿನಿಂದ ಬಳಲುವ ತನ್ನ ಹೆಂಡತಿಯನ್ನು ಮನೆ ಬಳಿ ಬಿಟ್ಟು, ಆ ಮೃತದೇಹವನ್ನು ತೆಗೆದುಕೊಂಡು ಹೊರಡುವ ಚಾಲಕನಿಗೆ ದಾರಿ ನಡುವೆ ಏನು ಸವಾಲು ಎದುರಾಗುತ್ತದೆ? ಮೃತದೇಹ ಹೇಗೆ ಕಾಣೆಯಾಗುತ್ತದೆ? ಕಾಣೆಯಾದ ಮೃತದೇಹವನ್ನು ಆತ ವಾಪಸ್‌ ಪಡೆಯುತ್ತಾನಾ? ದಾರಿಯಲ್ಲಿ ವ್ಯಾನ್‌ಗೆ ಅಡ್ಡಗಟ್ಟಿ ಲಿಫ್ಟ್‌ ಕೇಳುವ ಆ ವ್ಯಕ್ತಿ ಯಾರು? ಈ ಎಲ್ಲಾ ಉತ್ತರಗಳಿಗೂ ಈ ಸಿನಿಮಾ ನೋಡಬೇಕು.

ಅಕ್ಟೋಬರ್‌ 18 ರಿಂದ ವೆಬ್‌ ಸೀರಿಸ್‌ ಸ್ಟ್ರೀಮಿಂಗ್‌

ಅಕ್ಟೋಬರ್‌ 18 ರಿಂದ ಮತ್ತೊಂದು ತಮಿಳು ವೆಬ್‌ ಸೀರಿಸ್‌ ಇತರ ಭಾಷೆಗಳಿಗೂ ಡಬ್‌ ಆಗಿ ಸ್ಟ್ರೀಮ್‌ ಆಗಲಿದೆ. ತಮಿಳಿನ ಖ್ಯಾತ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ಈ ಸ್ನೇಕ್‌ ಅಂಡ್‌ ಲ್ಯಾಡರ್ಸ್‌ ವೆಬ್‌ ಸೀರೀಸ್‌ ನಿರ್ಮಾಣ ಮಾಡಿದ್ದಾರೆ. ತಮಿಳು ಭಾಷೆ ಮಾತ್ರವಲ್ಲದೆ, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ವೆಬ್‌ ಸೀರಿಸ್‌ ಸ್ಟ್ರೀಮ್‌ ಆಗಲಿದೆ. ನೋಡುವವರು ಊಹೆ ಮಾಡಲಾಗದ ಟ್ವಿಸ್ಟ್‌ ಈ ವೆಬ್‌ ಸೀರೀಸ್‌ನಲ್ಲಿದೆ. ಇದೇ ವರ್ಷ ಮಾರ್ಚ್‌ನಲ್ಲಿ ಅಮೆಜಾನ್‌ ಪ್ರೈಂ ಈ ವೆಬ್‌ ಸೀರೀಸ್‌ ಅನೌನ್ಸ್‌ ಮಾಡಿತ್ತು. ಇನ್ನು 10 ದಿನಗಳಲ್ಲಿ ಈ ವೆಬ್‌ ಸೀರಿಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ವೆಬ್‌ ಸರಣಿಯನ್ನು ಭರತ್‌ ಮುರಳೀಧರನ್‌, ಅಶೋಕ್‌ ವೀರಪ್ಪನ್‌ ಹಾಗೂ ಕಮಲಾ ಅಲ್ಕಮಿಸ್‌ ನಿರ್ದೇಶನ ಮಾಡಿದ್ದಾರೆ.

4 ಧೈರ್ಯವಂತ ಮಕ್ಕಳ ಸುತ್ತ ಸುತ್ತುವ ಕಥೆ ಇದು. ಒಂದು ಸಮಸ್ಯೆಯಿಂದ ಹೊರ ಬರಲು ಮಾಡುವ ಪ್ರಯತ್ನ ಮತ್ತೊಂದು ಸಮಸ್ಯೆಗೆ ಸಿಲುಕಿಸುತ್ತದೆ. ಪೊಲೀಸರು, ಕಳ್ಳರು ಈ ಮಕ್ಕಳ ಹಿಂದೆ ಬಿದ್ದಿರುತ್ತಾರೆ. ಅವರಿಂದ ಈ ನಾಲ್ವರು ಮಕ್ಕಳು ಹೇಗೆ ತಪ್ಪಿಸಿಕೊಳ್ಳುತ್ತಾರೆ. ಕೊನೆಗೆ ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎನ್ನುವುದು ಈ ಸ್ನೇಕ್‌ ಅಂಡ್‌ ಲ್ಯಾಡರ್‌ ವೆಬ್‌ ಸೀರೀಸ್‌ ನೋಡಿದರೆ ತಿಳಿಯಲಿದೆ.