Transformers One OTT: ಅಮೆಜಾನ್ ಪ್ರೈಮ್ ವಿಡಿಯೋದ ಟ್ರಾನ್ಸ್‌ಫಾರ್ಮರ್ಸ್ ಒನ್ ಸಿನಿಮಾದಲ್ಲಿ ಮನುಷ್ಯರಿಲ್ಲ ಏಕೆ? ಹೀಗಿದೆ ಕಾರಣ
Transformers one: ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಟ್ರಾನ್ಸ್‌ಫಾರ್ಮರ್ಸ್ ಒನ್ ಎಂಬ ಸಿನಿಮಾವನ್ನು ನೀವು ನೋಡಿರಬಹುದು. ಈ ಸಿನಿಮಾದಲ್ಲಿ ಈ ಹಿಂದಿನ ಟ್ರಾನ್ಸ್‌ಫಾರ್ಮರ್ಸ್ ಸಿನಿಮಾಗಳಂತೆ ಮಾನವ ಪಾತ್ರಗಳು ಇಲ್ಲ. ಇದು ಏಕೆಂದು ತಿಳಿದಿರುವುದೇ?

Transformers one: ಹಾಲಿವುಡ್ ಸಿನಿಮಾ ಪ್ರಿಯರು ಟ್ರಾನ್ಸ್‌ಫಾರ್ಮರ್ಸ್ ಸಿನಿಮಾಗಳ ಎಲ್ಲಾ ಸರಣಿಗಳನ್ನು ಮಿಸ್ ಮಾಡದೆ ನೋಡಿರಬಹುದು. 2007ರ ಟ್ರಾನ್ಸ್‌ಫಾರ್ಮರ್ಸ್, 2009ರಲ್ಲಿ ಬಿಡುಗಡೆಯಾದ "ಟ್ರಾನ್ಸ್‌ಫಾರ್ಮರ್ಸ್: ರಿವೇಂಜ್‌ಆಫ್ ದಿ ಫಾಲನ್" , "2021ರ ಟ್ರಾನ್ಸ್‌ಫಾರ್ಮರ್ಸ್: ಡಾರ್ಕ್ ಆಫ್ ದಿ ಮೂನ್", 2024ರ "ಟ್ರಾರ್ನ್ಸ್‌ಫಾರ್ಮರ್ಸ್: ಏಜ್ ಆಪ್ ಎಕ್ಸಿಟಿಷನ್", " 2017ರ "ಟ್ರಾನ್ಸ್‌ಫಾರ್ಮರ್ಸ್: ದಿ ಲಾಸ್ಟ್ ನೈಟ್", 2018ರ "ಬಾಂಬ್ಲಿಬೀ", 2023ರ "ಟ್ರಾನ್ಸ್‌ಫಾರ್ಮರ್ಸ್: ರೈಸ್ ಆಫ್ ದಿ ಬೀಸ್ಟ್"... ಹೀಗೆ ಟ್ರಾನ್ಸ್‌ಫಾರ್ಮರ್ ಸರಣಿಗಳಲ್ಲಿ ಮನುಷ್ಯ ಪಾತ್ರಗಳು ಇದ್ದವು. ಆದರೆ, ಕಳೆದ ವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಟ್ರಾನ್ಸ್‌ಫಾರ್ಮರ್ಸ್ ಒನ್‌ನಲ್ಲಿ ಮಾನವ ಪಾತ್ರಗಳು ಯಾಕಿಲ್ಲ? ನಿಮ್ಮಲ್ಲಿ ಈ ಪ್ರಶ್ನೆ ಇರುವುದೇ? ಹಾಗಾದರೆ ಉತ್ತರ ಕಂಡುಕೊಳ್ಳೋಣ ಬನ್ನಿ.
ಟ್ರಾನ್ಸ್‌ಫಾರ್ಮರ್ಸ್ ಒನ್‌ನಲ್ಲಿ ಮನುಷ್ಯರಿಲ್ಲ ಏಕೆ?
ನಮ್ಮ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಫ್ರೀಕ್ವೆಲ್ ತರಲು ಉದ್ದೇಶಿದ್ದಾರೆ. ಅಂದರೆ, ಮೊದಲು ಬಿಡುಗಡೆಯಾದ ಕಾಂತಾರ ಸಿನಿಮಾದ ಮೊದಲಿನ ಕಥೆ ಹೇಳಲು ಹೊರಟಿದ್ದಾರೆ. ಆದರೆ, ಅದರಲ್ಲಿ ಮಾನವ ಪಾತ್ರಗಳು ಇರುತ್ತದೆ. ಇದೇ ರೀತಿ, ಟ್ರಾನ್ಸ್‌ಫಾರ್ಮರ್ಸ್ ಒನ್ ಕೂಡ ಫ್ರೀಕ್ವೆಲ್. ಟ್ರಾನ್ಸ್‌ಫಾರ್ಮರ್ಸ್ ಎಂಬ ಈ ಯಂತ್ರ ಮಾನವರ ಕಥೆಯಲ್ಲಿ ಈ ಹಿಂದೆ ಮನುಷ್ಯ ಪಾತ್ರಗಳು ಇದ್ದವು. ಆದರೆ, ಟ್ರಾನ್ಸ್‌ಫಾರ್ಮರ್ಸ್ ಒನ್ ಈ ಎಲ್ಲಾ ಟ್ರಾನ್ಸ್‌ಫಾರ್ಮರ್ಸ್ ಸಿನಿಮಾಗಳ ಫ್ರೀಕ್ವೆಲ್.
ಟ್ರಾನ್ಸ್‌ಫಾರ್ಮರ್ಸ್ ಒನ್‌ನಲ್ಲಿ ಯಾವುದೇ ಮಾನವ ಪಾತ್ರಗಳಿಲ್ಲ. ಏಕೆಂದರೆ ಇದು ಇತರ ಟ್ರಾನ್ಸ್‌ಫಾರ್ಮರ್ಸ್ ಸಿನಿಮಾಗಳಿಗಿಂತ ಲಕ್ಷಾಂತರ ವರ್ಷಗಳ ಹಿಂದೆ, ರೋಬೋಟ್‌ಗಳು ಸೈಬರ್‌ಟ್ರಾನ್‌ನಲ್ಲಿದ್ದಾಗ ನಡೆಯುವ ಕಥೆಯನ್ನು ಹೊಂದಿದೆ. ಈ ಸಿನಿಮಾವು ಟ್ರಾನ್ಸ್‌ಫಾರ್ಮರ್ಸ್ ಮತ್ತು ಅವುಗಳ ಪರಸ್ಪರ ಸಂಬಂಧದ ಮೇಲೆ ಕೇಂದ್ರೀಕರಿಸುತ್ತದೆ. ಈ ಸಿನಿಮಾದ ಟೈಮ್‌ಲೈನ್ ಮನುಷ್ಯರನ್ನು ಒಳಗೊಂಡಿಲ್ಲ. ಇದರಲ್ಲಿ ಮನುಷ್ಯರು ಇಲ್ಲದೆ ಇದ್ದರೂ ಹಾಸ್ಯ ಮತ್ತು ಭಾವನೆಗಳಿಗೆ ಬರವಿಲ್ಲ. ಇದು ಪೂರ್ಣವಾಗಿ ಟ್ರಾನ್ಸ್‌ಫಾರ್ಮರ್‌ಗಳ ಕಥೆ. ಈ ಸಿನಿಮಾ ಆಪ್ಟಿಮಸ್ ಪ್ರೈಮ್ ಮತ್ತು ಮೆಗಾಟ್ರಾನ್ ನಡುವಿನ ಸಂಬಂಧದ ಕಥೆಯನ್ನು ಹೇಳುತ್ತದೆ. ಈ ಎರಡು ಪಾತ್ರಗಳು ಏಕೆ ಬೇರ್ಪಟ್ಟವು ಎನ್ನುವುದನ್ನೂ ಇದು ತಿಳಿಸುತ್ತದೆ.
ಇದು ಮಕ್ಕಳ ಸಿನಿಮಾವೇ?
ಇದು ಮಕ್ಕಳು ಖುಷಿಪಡಬಹುದಾದ ಸಿನಿಮಾ. ಆದರೆ, ಯುವ ಜನತೆಯೂ ಇದನ್ನು ಇಷ್ಟಪಡಬಹುದು. ಇದರಲ್ಲಿ ಯಾವುದೇ ಅಡಲ್ಟ್ ಜೋಕ್‌ಗಳು ಇಲ್ಲ. ಎಲ್ಲಾ ವಯೋಮಾನದವರೂ ನೋಡಿ ಖುಷಿಪಡಬಹುದು. ಸಿನಿಮಾ ಆರಂಭದಲ್ಲಿ ಮನುಷ್ಯರು ಇಲ್ಲದೆ ಇರುವುದರಿಂದ ತುಸು ನೀರಸ ಎನಿಸಬಹುದು. ಆದರೆ, ಬಳಿಕ ಈ ಟ್ರಾನ್ಸ್‌ಫಾರ್ಮರ್ ಪಾತ್ರಗಳು ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತವೆ. ಇದು ಮನುಷ್ಯರು ಇಲ್ಲದೆ ಸಿನಿಮಾವಾಗಿದ್ದರೂ ಸಾಕಷ್ಟು ಮಜಾ, ಮಸ್ತಿ, ಮನರಂಜನೆ ಇದೆ. ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿರುವ ಈ ಸಿನಿಮಾವನ್ನು ಆಸಕ್ತರು ನೋಡಬಹುದು.
