ನೆಟ್‍ಫ್ಲಿಕ್ಸ್ ಚಂದಾದಾರರಿಗೆ ಈ ವರ್ಷ ಹಬ್ಬವೋ ಹಬ್ಬ; 6 ಹೊಸ ಸಿನಿಮಾ, 14 ವೆಬ್ ಸೀರೀಸ್ ಜತೆಗೆ 5 ಕಾರ್ಯಕ್ರಮ ಘೋಷಿಸಿದ ಒಟಿಟಿ ವೇದಿಕೆ
ನೆಟ್‍ಫ್ಲಿಕ್ಸ್ ಇಂಡಿಯಾ ಒಟಿಟಿ ಸಂಸ್ಥೆಯು ತನ್ನ ಈ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ರಲ್ಲಿ 6 ಹೊಸ ಸಿನಿಮಾ, 14 ಸರಣಿಗಳು ಮಾತ್ರವಲ್ಲದೆ 5 ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿದೆ.

ಕಳೆದ ವರ್ಷ ಓಟಿಟಿಗಳಲ್ಲಿ ನೆಟ್‍ಫ್ಲೆಕ್ಸ್ ಹೊಸ ಕ್ರಾಂತಿಯನ್ನೇ ಮಾಡಿತ್ತು. 11 ಹೊಸ ಚಿತ್ರಗಳು, 6 ವೆಬ್ ಸರಣಿಗಳು, ಒಂದು ಸಾಕ್ಷ್ಯಚಿತ್ರ ಮತ್ತು 3 ಹೊಸ ಕಾರ್ಯಕ್ರಮಗಳನ್ನು ಘೋಷಿಸಿತ್ತು. ಈ ವರ್ಷ ತನ್ನ ದಾಖಲೆಯನ್ನು ನೆಟ್‍ಫ್ಲಿಕ್ಸ್ ತಾನೇ ಮುರಿದುಕೊಂಡಿದೆ. ಸೋಮವಾರ (ಫೆಬ್ರುವರಿ 3) ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಈ ವರ್ಷ ನೆಟ್‍ಫ್ಲಿಕ್ಸ್ ತನ್ನ ಈ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ (2025) 6 ಹೊಸ ಸಿನಿಮಾ, 14 ಸರಣಿಗಳು, 5 ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗುತ್ತಿದೆ.
ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಖಾನ್ ನಟನೆಯ ಮೊದಲ ಚಿತ್ರ, ಶಾರೂಖ್ ಖಾನ್ ಮಗ ಆರ್ಯನ್ ನಿರ್ದೇಶನದ ಮೊದಲ ಕಾರ್ಯಕ್ರಮ, ‘ದಿ ಕಪಿಲ್ ಶರ್ಮ ಶೋ – 3’, ಹಿಂದಿ ವೀಕ್ಷಕ ವಿವರಣೆ ಇರುವ WWE ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳು ಈ ವರ್ಷ ನೆಟ್‍ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಇದೇ ಮೊದಲ ಬಾರಿಗೆ ‘ಸೂಪರ್ ಸುಬ್ಬು’ ಎಂಬ ತೆಲುಗು ವೆಬ್‍ಸರಣಿಯನ್ನು ನೆಟ್‍ಫ್ಲಿಕ್ಸ್ ನಿರ್ಮಿಸುತ್ತಿದೆ.
ಸಿನಿಮಾ ಪೈಕಿ ಸೈಫ್ ಅಲಿ ಖಾನ್ ಮತ್ತು ಜಯದೀಪ್ ಅಹ್ಲಾವತ್ ಅಭಿನಯದ ‘ದಿ ಜ್ಯೂವೆಲ್ ಥೀಫ್’, ಇಬ್ರಾಹಿಂ ಖಾನ್ ಮತ್ತು ಖುಷಿ ಕಪೂರ್ ಅಭಿನಯದ ‘ನಾದಾನಿಯಾನ್’, ಮಾಧವನ್ ಮತ್ತು ಫಾತಿಮಾ ಸನಾ ಶೇಖ್ ಅಭಿನಯದ ‘ಆಪ್ ಜೈಸಾ ಕೋಯಿ’, ಪ್ರತೀಕ್ ಗಾಂಧಿ ಮತ್ತು ಯಾಮಿ ಗೌತಮ್ ಅಭಿನಯದ ‘ಧೂಮ್ ಧಾಮ್’, ಇಷಾನ್ ಕಟ್ಟರ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ‘ದಿ ರಾಯಲ್ಸ್’, ಸಿದ್ಧಾರ್ಥ್, ನಯನತಾರಾ ಮತ್ತು ಮಾಧವನ್ ಅಭಿನಯದ ‘ಟೆಸ್ಟ್’ ಚಿತ್ರಗಳ ಟೀಸರ್‌ಗಳು ಘೋಷಣೆಯಾಗುವುದರ ಜೊತೆಗೆ ಟೀಸರ್‌ಗಳನ್ನು ಸಹ ಬಿಡುಗಡೆ ಮಾಡಲಾಗಿದೆ.
ವೆಬ್ ಸರಣಿಗಳ ಪೈಕಿ ‘ದೆಹಲಿ ಕ್ರೈಮ್ ಸೀಸನ್ 3’, ‘ಕೋಹ್ರಾ 2’, ವಾಣಿ ಕಪೂರ್ ಅಭಿನಯದ ‘ಮಂಡಲ ಮರ್ಡರ್ಸ್’, ಕೀರ್ತಿ ಸುರೇಶ್ ಮತ್ತು ರಾಧಿಕಾ ಆಪ್ಟೆ ಅಭಿನಯದ ‘ಅಕ್ಕ’, ಪುಲ್ಕಿತ್ ಸಾಮ್ರಾಟ್ ಮತ್ತು ದಿವ್ಯೆಂದು ಅಭಿನಯದ ಪ್ರಸನ್ನಜೀತ್ ಚಟರ್ಜಿ ಅಭಿನಯದ ‘ಗ್ಲೋರಿ’, ‘ಖಾಕಿ - ದಿ ಬೆಂಗಾಲ್ ಚಾಪ್ಟರ್’, ‘ಕಪಿಲ್ ಶರ್ಮಾ ಶೋ - ಸೀಸನ್ 3’, ವೆಂಕಟೇಶ್ ಮತ್ತು ರಾನಾ ದಗ್ಗುಬಾಟಿ ಅಭಿನಯದ ‘ರಾಣಾ ನಾಯ್ಡು 2’, ಸಂದೀಪ್ ಕಿಶನ್ ಅಭಿನಯದ ತೆಲುಗು ಸರಣಿ ‘ಸೂಪರ್ ಸುಬ್ಬು’, ಪ್ರತೀಕ್ ಗಾಂಧಿ ಅಭಿನಯದ ‘ಸಾರೆ ಜಹಾನ್ ಸೇ ಅಚ್ಛಾ’ ಮುಂತಾದ ಸರಣಿಗಳು ಘೋಷಣೆಯಾಗಿವೆ. ಇದರಲ್ಲಿ ಕೆಲವು ಹಳೆಯ ಸರಣಿಗಳ ಹೊಸ ಸೀಸನ್‍ಗಳಾದರೆ, ಇನ್ನೂ ಹೊಸ ಸರಣಿಗಳನ್ನು ಈ ವರ್ಷ ಹೊಸದಾಗಿ ಬಿಡುಗಡೆ ಮಾಡಲಾಗುತ್ತದೆ.
Unscripted Originals ಕಾರ್ಯಕ್ರಮಗಳ ಪೈಕಿ ರಾಜ್ ಕಪೂರ್ ಕುಟುಂಬದ ಆಹಾರ ಅಭಿರುಚಿಯ ಕುರಿತಾದ ‘ಡೈನಿಂಗ್ ವಿಥ್ ದಿ ಕಪೂರ್ಸ್’, ‘ವೀರ್ ದಾಸ್ - ಫೂಲ್ ವಾಲ್ಯೂಮ್’, ಆರ್ಯನ್ ಖಾನ್ ನಿರ್ದೇಶನದ ‘The Ba***ds of Bollywood’ ಕಾರ್ಯಕ್ರಮಗಳನ್ನು ಈ ವರ್ಷದಿಂದ ಹೊಸದಾಗಿ ಪ್ರಾರಂಭ ಮಾಡಲಾಗುತ್ತಿದೆ.
ಒಟ್ಟಾರೆ, ನೆಟ್‍ಫ್ಲಿಕ್ಸ್ ಚಂದಾದಾರರಿಗೆ ಈ ವರ್ಷ ಹಬ್ಬವೋ ಹಬ್ಬ. ಈ ಎಲ್ಲಾ ಹೊಸ ಸಿನಿಮಾ ಮತ್ತು ಕಾರ್ಯಕ್ರಮಗಳಿಂದಾಗಿ ಈ ವರ್ಷ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಇನ್ನಷ್ಟು ಕಡಿಮೆಯಾದರೆ ಆಶ್ಚರ್ಯವಿಲ್ಲ.
ಇನ್ನಷ್ಟು ಓಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
