ಕನ್ನಡ ಸುದ್ದಿ  /  ಮನರಂಜನೆ  /  Ott Releases: ಈ ವಾರ ಒಟಿಟಿಯಲ್ಲಿ ಬಿಡುಗಡೆ; ದೇಧ್ ಭಿಗಾ ಜಮೀನ್, ವಿಜಿಲ್ 2 ಸೇರಿದಂತೆ ಹಲವು ಸಿನಿಮಾ, ಸರಣಿಗಳು ರಿಲೀಸ್‌

OTT releases: ಈ ವಾರ ಒಟಿಟಿಯಲ್ಲಿ ಬಿಡುಗಡೆ; ದೇಧ್ ಭಿಗಾ ಜಮೀನ್, ವಿಜಿಲ್ 2 ಸೇರಿದಂತೆ ಹಲವು ಸಿನಿಮಾ, ಸರಣಿಗಳು ರಿಲೀಸ್‌

5 OTT releases to watch this week: ಈ ವಾರ ಒಟಿಟಿಯಲ್ಲಿ ಐದು ಪ್ರಮುಖ ಸಿನಿಮಾ, ಸರಣಿಗಳು ರಿಲೀಸ್‌ ಆಗುತ್ತಿವೆ. ಈ ಶುಕ್ರವಾರ ಜಿಯೋ ಸಿನೆಮಾದಲ್ಲಿ ಪ್ರತೀಕ್ ಗಾಂಧಿ ಅವರ ದೇಧ್ ಭಿಗಾ ಜಮೀನ್ ಬಿಡುಗಡೆಯಾಗುತ್ತಿದೆ. ಇದೇ ಸಮಯದಲ್ಲಿ ವಿವಿಧ ಒಟಿಟಿಗಳಲ್ಲಿ ವಿಜಿಲ್‌ 2 ಸೇರಿದಂತೆ ಹಲವು ಸರಣಿಗಳು ರಿಲೀಸ್‌ ಆಗುತ್ತಿವೆ.

OTT releases: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾ, ಸರಣಿಗಳ ವಿವರ
OTT releases: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾ, ಸರಣಿಗಳ ವಿವರ

ಒಟಿಟಿ ವೀಕ್ಷಕರಿಗೆ ಈ ವಾರ ಐದು ಹೊಸ ಸಿನಿಮಾ, ಸರಣಿಗಳನ್ನು ವೀಕ್ಷಿಸಬಹುದು. ಈ ಸೆಖೆ/ಮಳೆಗೆ ಚಿತ್ರಮಂದಿರಗಳಿಗೆ ಹೋಗೋದ್ಯಾಕೆ ಎಂದು ಮನೆಯಲ್ಲಿಯೇ ಸಿನಿಮಾ, ಸರಣಿ ನೋಡಲು ಬಯಸುವವರಿಗೆ ಹಲವು ಆಯ್ಕೆಗಳು ಇವೆ. ನಿಮ್ಮ ಮನೆಯ ಟೀವಿ, ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳಲ್ಲಿ ಹೊಸ ಸಿನಿಮಾ, ಸರಣಿ ನೋಡಲು ಬಯಸುವವರಿಗೆ ಹಲವು ಆಯ್ಕೆಗಳು ಇವೆ. ಈ ಭಾನುವಾರ ಲೋಕ ಸಭೆ ಚುನಾವಣೆಯ ಎಕ್ಸಿಟ್‌ ಪೋಲ್‌ ಫಲಿತಾಂಶಗಳು ಬರುತ್ತಿವೆ. ರಾಜಕೀಯ ಆಸಕ್ತರು ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ಕ್ಷಣಕ್ಷಣದ ಅಪ್‌ಡೇಟ್‌ ಅನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಓದಬಹುದು. ಅದಕ್ಕೂ ಮೊದಲು ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಝೀ5, ಜಿಯೋ ಸಿನಿಮಾಗಳ ಹೊಸ ಸಿನಿಮಾ, ಸರಣಿಗಳನ್ನು ನೋಡಿ ಮುಗಿಸಬಹುದು.

ಟ್ರೆಂಡಿಂಗ್​ ಸುದ್ದಿ

ದೇಧ್ ಭಿಗಾ ಜಮೀನ್ - ಜಿಯೋ ಸಿನೆಮಾ - ಮೇ 31

ಈ ವರ್ಷವನ್ನು ಪ್ರತೀಕ್‌ ಗಾಂಧಿ ವರ್ಷ ಎನ್ನಬಹುದು. 2020 ರಲ್ಲಿ ಫೈನಾನ್ಷಿಯಲ್ ಥ್ರಿಲ್ಲರ್ "ಸ್ಕ್ಯಾಮ್ 1992" ಬಿಡುಗಡೆಯಾಗಿತ್ತು. ಇದಾದ ಬಳಿಕ ಪ್ರತೀಕ್‌ಗೆ ಗೆಲುವಿನ ಸರಮಾಲೆ ಎನ್ನಬಹುದು. ಮಾಡ್ಗಾಂವ್‌ ಎಕ್ಸ್‌ಪ್ರೆಸ್‌ ಯಶಸ್ಸಿನ ಬಳಿಕ ಚಿತ್ರಮಂದಿರಗಳಲ್ಲಿ ದೋ ಔರ್ ದೋ ಪ್ಯಾರ್ ಬಿಡುಗಡೆಯಾಗಿದೆ. ಇದೀಗ ಪ್ರತೀಕ್‌ ಅವರನ್ನು ಸಂಪೂರ್ಣ ಹೊಸ ಅವತಾರದಲ್ಲಿ ದೇಧ್ ಭಿಗಾ ಜಮೀನ್‌ನಲ್ಲಿ ನೋಡಬಹುದು. ಈ ಸಿನಿಮಾದಲ್ಲಿ ಇವರು ಅಂಡರ್‌ಡಾಗ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಖುಶಾಲಿ ಕುಮಾರ್‌ ಕೂಡ ನಟಿಸಿದ್ದಾರೆ.

ದೇಧ್ ಭಿಗಾ ಜಮೀನ್‌ನಲ್ಲಿ ಪ್ರತೀಕ್‌ ಗಾಂಧಿ
ದೇಧ್ ಭಿಗಾ ಜಮೀನ್‌ನಲ್ಲಿ ಪ್ರತೀಕ್‌ ಗಾಂಧಿ

ವಿಜಿಲ್ 2 - ನೆಟ್‌ಫ್ಲಿಕ್ಸ್‌ - ಮೇ 31

ಟಾಮ್‌ ಎಡ್ಜ್‌ ಅವರ ಪೊಲೀಸ್‌ ಕಾರ್ಯಾಚರಣೆಯ ಮುಂದುವರೆದ ಭಾಗವಿದು. 2021ರಲ್ಲಿ ಮೊದಲ ಸೀಸನ್‌ ಕೊನೆಗೊಂಡಿತ್ತು. ಈ ಸರಣಿಯ ಕಥೆ ಅಲ್ಲಿಂದಲೇ ಆರಂಭವಾಗುತ್ತದೆ. ಡಿಟೆಕ್ಟಿವ್ ಚೀಫ್ ಇನ್ಸ್ಪೆಕ್ಟರ್ ಆಮಿ ಸಿಲ್ವಾ ಪಾತ್ರವನ್ನು ಸುರಾನ್ ಜೋನ್ಸ್ ಮಾಡಿದ್ದಾರೆ. ಈ ಋತುವಿನಲ್ಲಿ, ಅವರು ಪರ್ಷಿಯನ್ ಕೊಲ್ಲಿಯ ವಿವಾದಾತ್ಮಕ ಮಿತ್ರ ರಾಷ್ಟ್ರವಾದ ವುಡ್ಯಾನ್ ಸಾಮ್ರಾಜ್ಯದ ಜಂಟಿ ಅಲ್-ಶವ್ಕಾ ವಾಯುನೆಲೆಗೆ ಎಂಟ್ರಿ ನೀಡಲಿದ್ದಾರೆ.

ವಿಜಿಲ್‌ 2
ವಿಜಿಲ್‌ 2

ಎ ಪಾರ್ಟ್ ಆಫ್ ಯು - ನೆಟ್‌ಫ್ಲಿಕ್ಸ್‌ - ಮೇ 31

ಹದಿಹರೆಯದ ಯುವತಿ ತನ್ನನ್ನು ಮತ್ತು ಹೊಸ ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಸಿನಿಮಾ ಇದಾಗಿದೆ. ಸಿಗ್ಜ್ ಎಕ್ಲಂಡ್ ಅವರ ಈ  ಚಿತ್ರದಲ್ಲಿ ಫೆಲಿಸಿಯಾ ಮ್ಯಾಕ್ಸಿಮ್, ಎಡ್ವಿನ್ ರೈಡಿಂಗ್, ಇಡಾ ಎಂಗ್ವೋಲ್, ಆಳ್ವಾ ಬ್ರಾಟ್ ಮತ್ತು ಜಾರಾ ಲಾರ್ಸನ್ ಪ್ರಮುಖ ಪಾತ್ರಗಳಲ್ಲಿ  ನಟಿಸಿದ್ದಾರೆ.

ರೈಸಿಂಗ್ ವಾಯ್ಸಸ್ - ನೆಟ್‌ಫ್ಲಿಕ್ಸ್‌- ಮೇ 31

17 ವರ್ಷದ ಯುವತಿಯೊಬ್ಬಳು ಪ್ರೌಢ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ದೂರು ನೀಡುತ್ತಾಳೆ. ಈ ತನಿಖೆಯು ಈಕೆಯ ಜೀವನವನ್ನು ಹಾಳು ಮಾಡುತ್ತದೆ. ಸಂಬಂಧಗಳ ಕುರಿತು ಅರಿವು ನೀಡುತ್ತದೆ. ಜೋಸ್ ಮ್ಯಾನುಯೆಲ್ ಲೊರೆಂಜೊ ಮತ್ತು ಮಿಗುಯೆಲ್ ಸೇಜ್ ಕ್ಯಾರಲ್ ನಿರ್ದೇಶನದ ಈ ಸಿನಿಮಾದಲ್ಲಿ ನಿಕೋಲ್ ವ್ಯಾಲೇಸ್, ಕ್ಲಾರಾ ಗಾಲೆ, ಐಚಾ ವಿಲ್ಲಾವರ್ಡೆ ನಟಿಸಿದ್ದಾರೆ.

ಎರಿಕ್ - ನೆಟ್ಫ್ಲಿಕ್ಸ್ - ಮೇ 30

ಬೆನೆಡಿಕ್ಟ್ ಕಂಬರ್ಬ್ಯಾಚ್ ನಟನೆಯ ಎರಿಕ್‌ ಸಿನಿಮಾ
ಬೆನೆಡಿಕ್ಟ್ ಕಂಬರ್ಬ್ಯಾಚ್ ನಟನೆಯ ಎರಿಕ್‌ ಸಿನಿಮಾ

ಬೆನೆಡಿಕ್ಟ್ ಕಂಬರ್ಬ್ಯಾಚ್, ಗ್ಯಾಬಿ ಹಾಫ್ಮನ್ ಮತ್ತು ಮೆಕಿನ್ಲೆ ಬೆಲ್ಚರ್ III ನಟಿಸಿದ್ದಾರೆ. ಅಬಿ ಮೋರ್ಗನ್ ನಿರ್ದೇಶನದ ಈ ಕ್ರೈಮ್‌ ಡ್ರಾಮಾವು ಭಾವನಾತ್ಮಕವಾಗಿದೆ. ಮಗ ಶಾಲೆಗೆ ಹೋಗುವ ಸಂದರ್ಭದಲ್ಲಿ ಕಾಣೆಯಾಗುತ್ತಾನೆ. ಆ ಮಗನನ್ನು ಹುಡುಕುವ ತಂದೆಯ ಹತಾಶ ಪ್ರಯತ್ನದ ಕಥೆಯನ್ನು ಇದು ಹೊಂದಿದೆ.

ಟಿ20 ವರ್ಲ್ಡ್‌ಕಪ್ 2024