ಕನ್ನಡ ಸುದ್ದಿ  /  ಮನರಂಜನೆ  /  Malayalam Ott Movies: ಇದೇ ತಿಂಗಳು ಒಟಿಟಿಗೆ ಆಗಮಿಸಲಿರುವ ಟಾಪ್‌ 5 ಮಲಯಾಳಂ ಸಿನಿಮಾಗಳು ಹೀಗಿವೆ

Malayalam OTT Movies: ಇದೇ ತಿಂಗಳು ಒಟಿಟಿಗೆ ಆಗಮಿಸಲಿರುವ ಟಾಪ್‌ 5 ಮಲಯಾಳಂ ಸಿನಿಮಾಗಳು ಹೀಗಿವೆ

ಬರೀ ಮಲಯಾಳಿಗಳು ಮಾತ್ರವಲ್ಲದೆ, ಪರಭಾಷಿಕರಿಗೂ ಮಾಲಿವುಡ್‌ ಸಿನಿಮಾಗಳ ಮೇಲೆ ವಿಶೇಷ ವ್ಯಾಮೋಹ. ಅದರಲ್ಲೂ ಒಟಿಟಿ ವೇದಿಕೆಗಳಲ್ಲಿ ರಿಲೀಸ್‌ ಆಗುವ ಚಿತ್ರಗಳ ಮೇಲೆ ಸಿನಿಮಾ ಪ್ರಿಯರ ದೃಷ್ಟಿ ಇದ್ದದ್ದೇ. ಅದೇ ರೀತಿ ಈ ತಿಂಗಳಲ್ಲಿ (ಜೂನ್)‌ ಹಲವು ಮಲಯಾಳಿ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಇಲ್ಲಿದೆ ಅವುಗಳ ಕುರಿತ ಮಾಹಿತಿ.

Malayalam OTT Movies: ಇದೇ ತಿಂಗಳು ಒಟಿಟಿಗೆ ಆಗಮಿಸಲಿರುವ ಟಾಪ್‌ 5 ಮಲಯಾಳಂ ಸಿನಿಮಾಗಳು ಹೀಗಿವೆ
Malayalam OTT Movies: ಇದೇ ತಿಂಗಳು ಒಟಿಟಿಗೆ ಆಗಮಿಸಲಿರುವ ಟಾಪ್‌ 5 ಮಲಯಾಳಂ ಸಿನಿಮಾಗಳು ಹೀಗಿವೆ

Malayalam movies OTT Releases in June: ಒಟಿಟಿ ವೇದಿಕೆಗಳಲ್ಲಿ ಮಲಯಾಳಂ ಸಿನಿಮಾಗಳಿಗೆ ಕ್ರೇಜ್ ಜಾಸ್ತಿ ಇದೆ. ಹೊಸ ಹೊಸ ಮಲಯಾಳಂ ಸಿನಿಮಾಗಳು ಯಾವಾಗ ಒಟಿಟಿಗೆ ಬರುತ್ತವೆ ಎಂದು ಪ್ರೇಕ್ಷಕರು ಕಾಯುತ್ತಲೇ ಇರುತ್ತಾರೆ. ಆ ಪೈಕಿ ಕಳೆದ ತಿಂಗಳು ಒಂದಷ್ಟು ಸಿನಿಮಾಗಳು ನೋಡುಗರ ಮನಸೆಳೆದಿವೆ. ಅದೇ ರೀತಿ ಈ ತಿಂಗಳಲ್ಲಿ (ಜೂನ್‌) ಯಾವೆಲ್ಲ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ ಎಂಬ ಕಾತರ ಇದೆ. ಅದಕ್ಕೆ ಉತ್ತರ ಎಂಬಂತೆ ಒಂದಷ್ಟು ಸಿನಿಮಾಗಳು ಈ ತಿಂಗಳಲ್ಲಿ ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಸಿನಿಮಾಗಳು ಯಾವವು ಎಂಬ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಆಡುಜೀವಿತಂ

ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಆಡುಜೀವಿತಂ' ಸಿನಿಮಾದ ಒಟಿಟಿ ಸ್ಟ್ರೀಮಿಂಗ್‌ಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಸರ್ವೈವಲ್‌ ಥ್ರಿಲ್ಲರ್‌ ಸಿನಿಮಾ ಇನ್ನೂ ಒಟಿಟಿಯಲ್ಲಿ ಸ್ಟ್ರೀಮ್ ಆಗಿಲ್ಲ. ಬ್ಲೆಸ್ಸಿ ನಿರ್ದೇಶಿಸಿದ, ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿಪ್ಲಸ್‌ಹಾಟ್‌ಸ್ಟಾರ್ ಒಟಿಟಿ ಪಡೆದುಕೊಂಡಿದೆ. ಇದೇ ಜೂನ್‌ನಲ್ಲಿಯೇ ಆಡುಜೀವಿತಂ ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆ ಹೆಚ್ಚಿದೆ. ಹಾಟ್‌ಸ್ಟಾರ್‌ ಒಟಿಟಿ ಶೀಘ್ರದಲ್ಲೇ ಸ್ಟ್ರೀಮಿಂಗ್ ದಿನಾಂಕವನ್ನು ಪ್ರಕಟಿಸುತ್ತದೆ.

ನಾಡಿಕರ್

ಕಾಮಿಡಿ ಡ್ರಾಮಾ ಸಿನಿಮಾ ‘ನಾಡಿಕರ್’ಗೆ ಒಳ್ಳೆ ಕ್ರೇಜ್ ಸಿಕ್ಕಿತ್ತು. ಈ ಕಾಮಿಡಿ ಡ್ರಾಮಾದಲ್ಲಿ ಟೋವಿನೋ ಥಾಮಸ್‌ ನಾಯಕ. ಲಾಲ್ ಜೂನಿಯರ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ದಿವ್ಯಾ ಪಿಳ್ಳೈ, ಭಾವನಾ, ಸೌಬಿನ್ ಶಾಹಿರ್ ಮತ್ತು ಬಾಲು ವರ್ಗೀಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೇ 3 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗದಿದ್ದರೂ, ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಒಟಿಟಿ ಸ್ಟ್ರೀಮಿಂಗ್‌ಗಾಗಿ ನಾಡಿಕರ್‌ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಪಡೆದಿದೆ. ಇದೇ ತಿಂಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆ ಇದೆ.

ಮಲಯಾಳಿ ಫ್ರಂ ಇಂಡಿಯಾ

ಮಲಯಾಳಿ ಫ್ರಂ ಇಂಡಿಯಾ ಚಿತ್ರಕ್ಕೆ ಸಾಕಷ್ಟು ಪಾಸಿಟಿವ್ ಟಾಕ್ ಸಿಕ್ಕಿದೆ. ಚಿತ್ರವು ಮೇ 1 ರಂದು ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಡಿಜೋ ಜಾಸ್ ಆಂಟೋನಿ ನಿರ್ದೇಶನದ ಈ ರಾಜಕೀಯ ವಿಡಂಬನಾತ್ಮಕ ಸಿನಿಮಾದಲ್ಲಿ ನಿವೀನ್ ಪೌಲಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಸೋನಿಲಿವ್ ಒಟಿಟಿ ಪ್ಲಾಟ್‌ಫಾರ್ಮ್ ಪಡೆದುಕೊಂಡಿದೆ. ಮಲಯಾಳಿ ಫ್ರಂ ಇಂಡಿಯಾ ಈ ತಿಂಗಳು ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.

ಗುರುವಾಯೂರ್ ಅಂಬಲನಡಾಯಿಲ್

ಗುರುವಾಯೂರ್ ಅಂಬಲನಡಾಯಿಲ್ ಚಿತ್ರ ಸೂಪರ್ ಟಾಕ್ ಪಡೆದುಕೊಂಡ ಮಲಯಾಳಿ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲೂ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬೇಸಿಲ್ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಪಿನ್ ದಾಸ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಗುರುವಾಯೂರ್ ಅಂಬಲನಡಾಯಿಲ್ ಮೇ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೇ ತಿಂಗಳು ಒಟಿಟಿಗೆ ಎಂಟ್ರಿಯಾಗುವ ಲಕ್ಷಣಗಳಿವೆ. ಈ ಚಿತ್ರವನ್ನು ಯಾವ ಒಟಿಟಿ ಸಂಸ್ಥೆ ಪಡೆದುಕೊಂಡಿದೆ ಎಂಬ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ವರ್ಷಂಗಲ್ಕು ಶೇಷಮ್

ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ವರ್ಷಂಗಲ್ಕು ಶೇಶಮ್' ಜೂನ್ 7 ರಂದು ಸೋನಿ ಲೈವ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಮಲಯಾಳಂ ಅಲ್ಲದೆ, ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳು ಸಹ ಲಭ್ಯವಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಪುತ್ರ ಪ್ರಣವ್ ಮೋಹನ್ ಲಾಲ್, ಧ್ಯಾನ್ ಶ್ರೀನಿವಾಸನ್ ಮತ್ತು ಕಲ್ಯಾಣಿ ಪ್ರಿಯದರ್ಶಿ ವರ್ಷಂಗಲ್ಕು ಶೇಷಂ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು 80 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿನೀತ್ ಶ್ರೀನಿವಾಸನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಈಗ ಸೋನಿ ಲೈವ್ OTT ಪ್ಲಾಟ್‌ಫಾರ್ಮ್‌ನಲ್ಲಿ ನೋಡಬಹುದು.

 

ಟಿ20 ವರ್ಲ್ಡ್‌ಕಪ್ 2024