ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

Aavesham OTT release date: ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾವು ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಇದೀಗ ಮೇ 9ರ ಬಳಿಕ ಆವೇಶಂ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ
ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ (Screengrab from YouTube/Anwar Rasheed Entertainment Official)

Aavesham OTT release date: ಫಹಾದ್ ಫಾಸಿಲ್ ಅಭಿನಯದ ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾ ಆವೇಶಂ ಇನ್ನೂ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಈ ಸಿನಿಮಾ ಏಪ್ರಿಲ್ 11 ರಂದು ಬಿಡುಗಡೆಯಾಯಾಗಿತ್ತು. ಸ್ಯಾಕ್‌ನಿಲ್ಕ್‌.ಕಾಆಂ ವರದಿ ಪ್ರಕಾರ ಈ ಸಿನಿಮಾ ಬಿಡುಗಡೆಯಾದ ಇದು 26 ನೇ ದಿನದಂದು 1.10 ಕೋಟಿ ರೂ. ಗಳಿಸಿದೆ. ಚಿತ್ರಮಂದಿರಗಳಲ್ಲಿ ಓಡುತ್ತಿದರೂ ಶೀಘ್ರದಲ್ಲಿ ಅಂದರೆ ಮೇ 9 ಅಂದರೆ ನಾಳೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಆವೇಶಂ ಒಟಿಟಿ ಬಿಡುಗಡೆ ದಿನಾಂಕ

ಆವೇಶಂ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ಸಾಗರೋತ್ತರ ಮಾರುಕಟ್ಟೆಯಿಂದ 53 ಕೋಟಿ ರೂ. ಗಳಿಕೆ ಮಾಡಿದೆ. ಓಟ್ಟಾರೆ ಆವೇಶಂನ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಸಂಗ್ರಹವು 146.9 ಕೋಟಿ ರೂಗೆ ತಲುಪಿದೆ. ಈ ಚಿತ್ರದ ಬಜೆಟ್‌ 30 ಕೋಟಿ ರೂಪಾಯಿ ಆಗಿತ್ತು.

ಹಲವು ಕಾರಣಗಳಿಂದ ಆವೇಶಂ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೆ ಇರಬಹುದು. ಪರಭಾಷೆಯ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿಲ್ಲದೆ ಇರುವವರು ಕನ್ನಡ ಸೇರಿದಂತೆ ತಮಗೆ ಇಷ್ಟವಾಗುವ ಯಾವುದೇ ಭಾಷೆಯಲ್ಲಿ ಒಟಿಟಿಯಲ್ಲಿ ನೋಡಬಹುದು. ಅಮೆಜಾನ್‌ ಪ್ರೈಮ್‌ನಲ್ಲಿ ಆವೇಶಂ ಸಿನಿಮಾ ಮೇ 9ರಂದು ರಿಲೀಸ್‌ ಆಗಲಿದೆ.

ಜಿತು ಮಾಧವನ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಮನ್ಸೂರ್ ಅಲಿ ಖಾನ್ ಮತ್ತು ಸಜಿನ್ ಗೋಪು ಕೂಡ ನಟಿಸಿದ್ದಾರೆ. ಮಲಯಾಳಂ ಸಿನಿಮಾದ ಪ್ರಮುಖ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ. ಓದಲೆಂದು ಬೆಂಗಳೂರಿಗೆ ಬರುವ ಮೂವರು ಹುಡುಗರು ಅಲ್ಲಿ ಜಗಳದಲ್ಲಿ ಸಿಕ್ಕಿ ಬಿದ್ದು ಸ್ಥಳೀಯ ದರೋಡೆಕೋರನ ನೆರವಿನಿಂದ ಗೆಲುವು ಪಡೆಯಲು ಪ್ರಯತ್ನಿಸುವಂತಹ ಕಥೆ ಹೊಂದಿದೆ. ಆ ಸ್ಥಳೀಯ ದರೋಡೆಕೋರ ಬೇರಾರು ಅಲ್ಲ, ಫಹಾದ್‌ ಫಾಸಿಲ್‌.

ಕೇರಳ ಮತ್ತು ಕರ್ನಾಟಕದಲ್ಲಿ ಲಿಂಕ್‌ ಹೊಂದಿರುವಂತಹ ಬೆಂಗಳೂರು ದರೋಡೆಕೋರನ ಪಾತ್ರದಲ್ಲಿ ಫಹಾದ್‌ ನಟಿಸಿದ್ದಾರೆ. ಸಂಪೂರ್ಣವಾಗಿ ಬಿಳಿ ಉಡುಗೆ ತೊಟ್ಟು, ದಪ್ಪಮೀಸೆಯೊಂದಿಗೆ ಈ ಚಿತ್ರದಲ್ಲಿ ವಿನೂತನವಾಗಿ ನಟಿಸಿದ್ದಾರೆ.

"ಮೊದಲಿಗೆ ನಾನು ಈ ಪಾತ್ರಕ್ಕೆ ಸೂಕ್ತವೆಂದುಕೊಂಡಿರಲಿಲ್ಲ. ನನ್ನ ಬಳಿ ಕಥೆ ಹೇಳಿದಾಗ ಓಕೆ ಎಂದು ಹೇಳಿದೆ. ಈ ಹಿಂದೆ ಮಾಡಿದ ಪಾತ್ರಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಈ ಪಾತ್ರ ನನಗೆ ಇಷ್ಟವಾಯಿತು. ನಾನು ಕನ್ನಡ ಮತ್ತು ಮಲಯಾಳಂ ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತೇನೆ" ಎಂದು ಫಹಾದ್‌ ಫಾಸಿಲ್‌ ಮಲಯಾಳ ಮನೋರಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಈ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರದಲ್ಲಿ ನೋಡಿ. ಇದು ಸಖತ್‌ ಮನರಂಜನೆ ಹೊಂದಿದೆ. ಒಟಿಟಿಯಲ್ಲಿ ನೋಡುವ ಬದಲು ಚಿತ್ರಮಂದಿರದಲ್ಲಿಯೇ ನೋಡಿ ಎಂದು ಅವರು ಹೇಳಿದ್ದರು.

ಆವೇಶಂ ಸಿನಿಮಾವನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಮೀಮ್ಸ್‌ ಆಗಿಯೂ ಬಳಸಿಕೊಂಡಿದೆ.

ಆವೇಶಂ ಸಿನಿಮಾ ನಿರ್ದೇಶನದ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.ಸಾಹಸ ದೃಶ್ಯಗಳು, ಛಾಯಾಗ್ರಹಣ, ಸಂಗೀತ, ತಾಂತ್ರಿಕ ಅಂಶಗಳು ಮೆಚ್ಚುಗೆ ಗಳಿಸಿವೆ. ಕಡಿಮೆ ಬಜೆಟ್‌ನ ಸಿನಿಮಾವು 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ.. 2024ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕನೇ ಮಲಯಾಳ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು. ದಕ್ಷಿಣ ಭಾರತದ ಅತ್ಯಧಿಕ ಗಳಿಕೆಯ ಎಂಟನೇ ಸಿನಿಮಾ ಎಂಬ ಹಿರಿಮೆಗೆ ಆವೇಶಂ ಪಾತ್ರವಾಗಿದೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Whats_app_banner