ಒಟಿಟಿಯಲ್ಲಿ ಕಲ್ಕಿ 2898 ಎಡಿ ನೋಡಿದವರು ಏನಂದ್ರು? ಪ್ರಭಾಸ್‌ ಜೋಕರ್‌ ಎಂದ ಅರ್ಷದ್‌ ವಾರ್ಸಿ ಅಭಿಪ್ರಾಯ ಬೆಂಬಲಿಸಿದ ನೆಟ್ಟಿಗರು-ott news after kalki 2898 ads ott release internet agrees with arshad warsi social media reactions pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಕಲ್ಕಿ 2898 ಎಡಿ ನೋಡಿದವರು ಏನಂದ್ರು? ಪ್ರಭಾಸ್‌ ಜೋಕರ್‌ ಎಂದ ಅರ್ಷದ್‌ ವಾರ್ಸಿ ಅಭಿಪ್ರಾಯ ಬೆಂಬಲಿಸಿದ ನೆಟ್ಟಿಗರು

ಒಟಿಟಿಯಲ್ಲಿ ಕಲ್ಕಿ 2898 ಎಡಿ ನೋಡಿದವರು ಏನಂದ್ರು? ಪ್ರಭಾಸ್‌ ಜೋಕರ್‌ ಎಂದ ಅರ್ಷದ್‌ ವಾರ್ಸಿ ಅಭಿಪ್ರಾಯ ಬೆಂಬಲಿಸಿದ ನೆಟ್ಟಿಗರು

Kalki 2898 AD OTT release: ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾ ನೋಡಿದವರು ಸೋಷಿಯಲ್‌ ಮೀಡಿಯಾದಲ್ಲಿ ಕಲ್ಕಿ ಕುರಿತು ಚರ್ಚೆ ಮಾಡುತ್ತಿದ್ದಾರೆ.

ಒಟಿಟಿಯಲ್ಲಿ ಕಲ್ಕಿ 2898 ಎಡಿ ಸಿನಿಮಾ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ.
ಒಟಿಟಿಯಲ್ಲಿ ಕಲ್ಕಿ 2898 ಎಡಿ ಸಿನಿಮಾ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

Kalki 2898 AD OTT release: ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾ ನೋಡಿದವರು ಸೋಷಿಯಲ್‌ ಮೀಡಿಯಾದಲ್ಲಿ ಕಲ್ಕಿ ಕುರಿತು ಚರ್ಚೆ ಮಾಡುತ್ತಿದ್ದಾರೆ. ಸಾಕಷ್ಟು ಜನರು ಇತ್ತೀಚೆಗೆ ಅರ್ಷದ್‌ ವಾರ್ಸಿ ಮಾಡಿದ ಟೀಕೆಯನ್ನು ನೆನಪಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್‌ ಜೋಕರ್‌ನಂತೆ ಕಾಣಿಸುತ್ತಾರೆ ಎಂದು ಅರ್ಷದ್‌ ಟೀಕಿಸಿದ್ದರು. "ಖಂಡಿತವಾಗಿಯೂ ಪ್ರಭಾಸ್‌ ಜೋಕರ್‌ ರೀತಿ ಇಲ್ಲ. ಆದರೆ, ಅವರನ್ನು ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಳಬೇಕಿತ್ತು" ಎಂದು ಇದೀಗ ಒಟಿಟಿಯಲ್ಲಿ ಕಲ್ಕಿ ಕಣ್ತುಂಬಿಕೊಂಡವರು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ. ಇನ್ನು ಕೆಲವರು ಅರ್ಷದ್‌ ವಾರ್ಸಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ನಾಗ್ ಅಶ್ವಿನ್ ಅವರ ಪ್ರಭಾಸ್, ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 AD, ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸಾಕಷ್ಟು ಜನರು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದ್ದರು. ಆದರೆ, ಥಿಯೇಟರ್‌ನಲ್ಲಿ ಸಿನಿಮಾ ನೋಡದವರೆಲ್ಲ ನಿನ್ನೆ ರಾತ್ರಿಯಿಂದ ಒಟಿಟಿಯಲ್ಲಿ ಕಲ್ಕಿ ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ.

ಒಟಿಟಿಯಲ್ಲಿ ಕಲ್ಕಿ 2898 ಎಡಿ ನೋಡಿದವರ ವಿಮರ್ಶೆ

ಒಟಿಟಿಯಲ್ಲಿ ಬಿಡುಗಡೆಗೊಂಡ ಕಲ್ಕಿ ಸಿನಿಮಾದ ಕುರಿತು ನೆಟ್ಟಿಗರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾ ಅದ್ಭುತವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಎಲವರು ಪ್ರಭಾಸ್‌ ನಟಿಸಿದ ಭೈರವ ಪಾತ್ರದ ಕುರಿತು ಅರ್ಷಾದ್‌ ಮಾಡಿರುವ ಮೌಲ್ಯಮಾಪನ ತಪ್ಪಾಗಿಲ್ಲ ಎಂದಿದ್ದಾರೆ.

"ಕಲ್ಕಿ 2898 ಎಡಿ ಉತ್ತಮ ಕಥೆ ಹೊಂದಿದೆ. ಭವಿಷ್ಯದ ಕುರಿತು ಆಲೋಚಿಸಿದ್ದ ರೀತಿ ಇಷ್ಟವಾಗುತ್ತದೆ. ಇದು ಅವತಾರ್‌ ರೀತಿ ವೈಜ್ಞಾನಿಕವಲ್ಲ. ಅರ್ಷದ್ ವಾರ್ಸಿ ತಪ್ಪಾಗಿ ತಿಳಿದುಕೊಂಡಿದ್ದಾರೆ. ಜೋಕರ್‌ಗಳು ತಮಾಷೆಯಾಗಿದ್ದಾರೆ. ಪ್ರಭಾಸ್‌ ಅದ್ಭುತವಾಗಿ ನಟಿಸಿದ್ದಾರೆ. ಪ್ರಭಾಸ್‌ ಜೋಕರ್‌ ರೀತಿ ನಟಿಸಿಲ್ಲ" ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಬ್ಬರು ಆದಿಪುರುಷ್‌ ಮತ್ತು ಕಲ್ಕಿ ಸಿನಿಮಾದಲ್ಲಿ ಪ್ರಭಾಸ್‌ ಪಾತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. "ವಾರ್ಸಿ ಹೇಳಿದ್ದರಲ್ಲಿ ತಪ್ಪೇನಿಲ್ಲ. ಪ್ರಭಾಸ್‌ ನಟಿಸಿದ ಪಾತ್ರವನ್ನು ಅವರು ಇಷ್ಟಪಟ್ಟಿಲ್ಲ. ಪ್ರಭಾಸ್‌ ಕೊಂಚ ಜೋಕರ್‌ ರೀತಿ ಈ ಸಿನಿಮಾದಲ್ಲಿ ಇದ್ದಾರೆ" ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

"ನಾನು ಈಗಷ್ಟೇ ಕಲ್ಕಿ ಸಿನಿಮಾ ನೋಡಿದೆ. ಅರ್ಷದ್‌ ವಾರ್ಸಿ ಹೇಳಿದ್ದರಲ್ಲಿ ತಪ್ಪಿಲ್ಲ" ಎಂದು ಒಬ್ಬರು ಹೇಳಿದ್ದಾರೆ. "ಪ್ರಭಾಸ್‌ ಪ್ಯಾನ್‌ ಇಂಡಿಯಾ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಬಾಹುಬಲಿ ಬಳಿಕ ಇವರು ಮಾಸ್ಟರ್‌ಕ್ಲಾಸ್‌ ನಟನೆ ತೋರಿಲ್ಲ" ಎಂದು ಇನ್ನೊಬ್ಬರು ಹೇಳಿದ್ದಾರೆ.

ಅಲ್ಲು ಅರ್ಜುನ್‌ ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ನಾನು ನೆಟ್‌ಫ್ಲಿಕ್ಸ್‌ನಲ್ಲಿ ಈಗಷ್ಟೇ ಕಲ್ಕಿ ನೋಡಿದ್ದಾರೆ. ಸಿನಿಮಾ ಸಾಧಾರಣವಾಗಿದೆ. ಅರ್ಷದ್‌ ಮಾತನ್ನು ನಾನು ಒಪ್ಪುವೆ. ಈ ಸಿನಿಮಾದಲ್ಲಿ ಪ್ರಭಾಸ್‌ ಜೋಕರ್‌. ನನ್ನ ಪ್ರಕಾರ ಈ ಸಿನಿಮಾದಲ್ಲಿ ನಿರೀಕ್ಷೆಯಷ್ಟು ಅವರು ನಟಿಸಿಲ್ಲ. ಇವರ ಬದಲು ಅಲ್ಲು ಅರ್ಜುನ್‌ ಈ ಪಾತ್ರದಲ್ಲಿ ನಟಿಸಿದ್ದರೆ ಉತ್ತಮವಾಗಿರುತ್ತಿತ್ತು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಪ್ರಭಾಸ್‌ ಕುರಿತು ಅರ್ಷದ್‌ ಮಾಡಿರುವ ಟೀಕೆ ನಮಗೆ ಬೇಸರವಾಗಬಹುದು. ಆದರೆ, ಪ್ರಭಾಸ್‌ನಂತಹ ಸ್ಟಾರ್‌ ನಟ ಕಲ್ಕಿಯಲ್ಲಿ ಇನ್ನಷ್ಟು ಉತ್ತಮ ಪಾತ್ರ ನಿರ್ವಹಿಸಲು ಅರ್ಹರಾಗಿದ್ದರು ಎಂದು ಅವರು ಹೇಳಿದ್ದಾರೆ ಎಂದು ನಾವು ಅರ್ಥಮಾಡಿಕೊಳ್ಳಬೇಕು" ಎಂದು ಇನ್ನೊಬ್ಬರು ಹೇಳಿದ್ದಾರೆ.

ಸೈನ್ಸ್‌ ಮತ್ತು ಫಿಕ್ಷನ್‌ಗಿಂತ ಮಹಾಭಾರತಕ್ಕೆ ಕಲ್ಕಿ ಸಿನಿಮಾ ಹೆಚ್ಚು ಒತ್ತು ನೀಡಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. "ಈ ಸಿನಿಮಾದಲ್ಲಿ ಮಹಾಭಾರತದ ದೃಶ್ಯಗಳನ್ನು ಬಳಸಿಕೊಂಡಿರುವುದು ಅತ್ಯುತ್ತಮವಾಗಿದೆ. ಪೂರ್ಣ ಪ್ರಮಾಣದಲ್ಲಿ ಮಹಾಭಾರತ ಸಿನಿಮಾ ಮಾಡಿದ್ದರೆ ಉತ್ತಮವಾಗಿತ್ತು" ಎಂದು ಇನ್ನೊಬ್ಬರು ಹೇಳಿದ್ದಾರೆ.