ಕನ್ನಡ ಸುದ್ದಿ  /  Entertainment  /  Ott News Aha Ott To Make Biopic On Late Prime Minister P V Narasimha Rao Prakash Jha Direction Pcp

PV Narasimha Rao: ಮಾಜಿ ಪ್ರಧಾನಿ ದಿವಂಗತ ಪಿವಿ ನರಸಿಂಹ ರಾವ್‌ ಬಯೋಪಿಕ್‌ ನಿರ್ಮಾಣ, ಒಟಿಟಿಯಲ್ಲಿ ಶೀಘ್ರದಲ್ಲಿ ಪ್ರಸಾರ

P V Narasimha Rao biopic: ಭಾರತ ಕಂಡ ಧೀಮಂತ ರಾಜಕಾರಣಿ ಮತ್ತು ಪ್ರಧಾನಮಂತ್ರಿ ದಿವಂಗತ ಪಿವಿ ನರಸಿಂಹ ರಾವ್‌ ಅವರ ಬದುಕಿನ ಕಥೆ ವೆಬ್‌ ಸರಣಿ ರೂಪದಲ್ಲಿ ಬಿಡುಗಡೆಯಾಗಲಿದೆ. ಆಹಾ ಒಟಿಟಿಯಲ್ಲಿ ಈ ವೆಬ್‌ ಸರಣಿ ಬಿಡುಗಡೆಯಾಗಲಿದೆ.

PV Narasimha Rao: ಮಾಜಿ ಪ್ರಧಾನಿ ದಿವಂಗತ ಪಿವಿ ನರಸಿಂಹ ರಾವ್‌ ಬಯೋಪಿಕ್‌ ನಿರ್ಮಾಣ
PV Narasimha Rao: ಮಾಜಿ ಪ್ರಧಾನಿ ದಿವಂಗತ ಪಿವಿ ನರಸಿಂಹ ರಾವ್‌ ಬಯೋಪಿಕ್‌ ನಿರ್ಮಾಣ

ಭಾರತ ಕಂಡ ಧೀಮಂತ ರಾಜಕಾರಣಿ ಮತ್ತು ಪ್ರಧಾನಮಂತ್ರಿ ದಿವಂಗತ ಪಿವಿ ನರಸಿಂಹ ರಾವ್‌ ಅವರ ಬದುಕಿನ ಕಥೆ ವೆಬ್‌ ಸರಣಿ ರೂಪದಲ್ಲಿ ಬಿಡುಗಡೆಯಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ಪ್ರಕಾಶ್‌ ಝಾ ಅವರು ವಿನಯ್‌ ಸೀತಾಪತಿ ಬರೆದ ಪುಸ್ತಕದ ಆಧಾರದಲ್ಲಿ ಮಾಜಿ ಪ್ರಧಾನಿಯ ಜೀವನಕಥೆಯನ್ನು ಸರಣಿ ರೂಪದಲ್ಲಿ ಹೊರತರಲಿದ್ದಾರೆ.

ಈ ಕುರಿತು ಬುಧವಾರ ಆಹಾ ಸ್ಟುಡಿಯೋ ಮಾಹಿತಿ ನೀಡಿದೆ. "ಭಾರತದ ಆರ್ಥಿಕ ಕ್ರಾಂತಿಯ ಹಿಂದಿನ ಪ್ರೇರಕ ಶಕ್ತಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಪಿ.ವಿ. ನರಸಿಂಹ ರಾವ್ ಅವರ ಅಪ್ರತಿಮ ಸಾಧನೆಯನ್ನು ಗೌರವಿಸುವ ಚಲುವಾಗಿ ಆಹಾ ಸ್ಟುಡಿಯೋ ಮತ್ತು ಅಪಾಲಸ್‌ ಎಂಟರ್‌ಟೈನ್ಮೆಂಟ್‌ ಅವರ ಕಥೆಯನ್ನು ತರಲು ಉತ್ಸುಕವಾಗಿದೆ" ಎಂದು ಆಹಾ ಸ್ಟುಡಿಯೋ ಟ್ವೀಟ್‌ ಮಾಡಿದೆ.

ಬಯೋಪಿಕ್‌ ಹೆಸರು ಹಾಫ್ ಲಯನ್

ಆಹಾ ಸ್ಟುಡಿಯೋ ಮತ್ತು ಅಪಾಲಸ್‌ ಎಂಟರ್‌ಟೈನ್‌ಮೆಂಟ್‌ ಜಂಟಿಯಾಗಿ ದಿವಂಗತ ಪ್ರಧಾನಿಯವರ ಜೀವನದ ಕುರಿತು ಮಾಹಿತಿ ನೀಡುವ ದ್ವಿಭಾಷಾ ಬಯೋಪಿಕ್ ಸರಣಿ 'ಹಾಫ್ ಲಯನ್' ಗಾಗಿ ತಮ್ಮ ಸಹಯೋಗವನ್ನು ಈ ಹಿಂದೆಯೇ ಘೋಷಿಸಿವೆ. ಈ ಪ್ರೀಮಿಯಂ ಬಹು-ಭಾಷೆಯ ಪ್ಯಾನ್-ಇಂಡಿಯನ್ ಸರಣಿಯನ್ನು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಸರಣಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ.

ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್‌ ಬಗ್ಗೆ

ಇವರು ಭಾರತದ 9ನೇ ಪ್ರಧಾನ ಮಂತ್ರಿ. ಚಂದ್ರಶೇಖರ್‌ ಬಳಿಕ ಇವರು ಪ್ರಧಾನಿ ಹುದ್ದೆಗೆ ಏರಿದರು. ಇವರು ಹುದ್ದೆ ತ್ಯಜಿಸಿದ ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾದರು. ಪಿವಿ ನರಸಿಂಹ ರಾವ್‌ ಅವರು ಜೂನ್‌ 28, 1991ರಿಂದ ಮೇ 19, 1996ರವರೆಗೆ ಪ್ರಧಾನ ಮಂತ್ರಿಯಾಗಿದ್ದರು. 1921ರಲ್ಲಿ ಕರೀಂ ನಗರದಲ್ಲಿ ಜನಿಸಿದ ಇವರು ಹೈದರಾಬಾದ್‌ನ ಒಸ್ಮಾನಿಯಾ ವಿವಿ, ಬಾಂಬೆ ವಿವಿ, ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಕೃಷಿಕ ಮತ್ತು ವಕೀಲರಾದ ಇವರು ರಾಜಕೀಯ ಪ್ರವೇಶಿಸಿ ಹಲವು ಪ್ರಮುಖ ಹುದ್ದೆಗಳನ್ನು ಪಡೆದಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಭಾರತದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌ ಅವರು ಜುಲೈ 19, 1984ರಂದು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನವೆಂಬರ್ 5, 1984ರಂದು ಯೋಜನಾ ಸಚವರ ಹೆಚ್ಚುವರಿ ಹೊಣೆಯೊಂದಿಗೆ ಅವರನ್ನು ಈ ಹುದ್ದೆಗೆ ಮರು ನೇಮಕ ಮಾಡಲಾಯಿತು. ಡಿಸೆಂಬರ್ 31, 1985 ರಿಂದ ಸೆಪ್ಟೆಂಬರ್ 25, 1985ರವರೆಗೆ ರಕ್ಷಣಾ ಸಚಿವರಾಗಿ ನೇಮಕಗೊಂಡರು. ಸೆಪ್ಟೆಂಬರ್ 25, 1985ರಮದು ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಜೂನ್‌ 28, 1991ರಂದು ಭಾರತದ ಒಂಬತ್ತನೇ ಪ್ರಧಾನಮಂತ್ರಿಯಾಗಿ ನೇಮಕಗೊಂಡರು.

IPL_Entry_Point