Sarfira OTT: ಥಿಯೇಟರ್‌ನಲ್ಲಿ ಸೋತ ‘ಸರ್ಫಿರಾ’ಗೆ ಒಟಿಟಿ ಪ್ರೇಕ್ಷಕ ಬಹುಪರಾಕ್‌ ಹೇಳ್ತಾನಾ? ಹೀಗಿದೆ ಅಕ್ಷಯ್‌ ಕುಮಾರ್‌ ಚಿತ್ರದ ಒಟಿಟಿ ದಿನಾಂಕ
ಕನ್ನಡ ಸುದ್ದಿ  /  ಮನರಂಜನೆ  /  Sarfira Ott: ಥಿಯೇಟರ್‌ನಲ್ಲಿ ಸೋತ ‘ಸರ್ಫಿರಾ’ಗೆ ಒಟಿಟಿ ಪ್ರೇಕ್ಷಕ ಬಹುಪರಾಕ್‌ ಹೇಳ್ತಾನಾ? ಹೀಗಿದೆ ಅಕ್ಷಯ್‌ ಕುಮಾರ್‌ ಚಿತ್ರದ ಒಟಿಟಿ ದಿನಾಂಕ

Sarfira OTT: ಥಿಯೇಟರ್‌ನಲ್ಲಿ ಸೋತ ‘ಸರ್ಫಿರಾ’ಗೆ ಒಟಿಟಿ ಪ್ರೇಕ್ಷಕ ಬಹುಪರಾಕ್‌ ಹೇಳ್ತಾನಾ? ಹೀಗಿದೆ ಅಕ್ಷಯ್‌ ಕುಮಾರ್‌ ಚಿತ್ರದ ಒಟಿಟಿ ದಿನಾಂಕ

ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ಸರ್ಫಿರಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಕೆಟ್ಟ ಓಪನಿಂಗ್ ಪಡೆದ ಸಿನಿಮಾ ಎಂಬ ಹಣೆಪಟ್ಟಿ ಪಡೆದಿತ್ತು. ಇದೀಗ ಇದೇ ಚಿತ್ರ ಒಟಿಟಿಗೆ ಆಗಮಿಸಲು ಅಣಿಯಾಗಿದೆ.

Sarfira OTT: ಥಿಯೇಟರ್‌ನಲ್ಲಿ ಸೋತ ‘ಸರ್ಫಿರಾ’ಗೆ ಒಟಿಟಿ ಪ್ರೇಕ್ಷಕ ಬಹುಪರಾಕ್‌ ಹೇಳ್ತಾನಾ? ಹೀಗಿದೆ ಅಕ್ಷಯ್‌ ಕುಮಾರ್‌ ಚಿತ್ರದ ಒಟಿಟಿ ದಿನಾಂಕ
Sarfira OTT: ಥಿಯೇಟರ್‌ನಲ್ಲಿ ಸೋತ ‘ಸರ್ಫಿರಾ’ಗೆ ಒಟಿಟಿ ಪ್ರೇಕ್ಷಕ ಬಹುಪರಾಕ್‌ ಹೇಳ್ತಾನಾ? ಹೀಗಿದೆ ಅಕ್ಷಯ್‌ ಕುಮಾರ್‌ ಚಿತ್ರದ ಒಟಿಟಿ ದಿನಾಂಕ

Sarfira OTT: ಬಾಲಿವುಡ್‌ ನಟ ಅಕ್ಷಯ್ ಕುಮಾರ್ ನಟನೆಯ ಸರ್ಫಿರಾ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಒಟಿಟಿಗೆ ಬರಲಿದೆ. ಕಾಲಿವುಡ್‌ನಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದು, ಐದು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದ ಸೂರರೈ ಪೊಟ್ರು ಚಿತ್ರದ ರಿಮೇಕ್. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸುಧಾ ಕೊಂಗರ ಹಿಂದಿ ರಿಮೇಕ್‌ಗೂ ನಿರ್ದೇಶನ ಮಾಡಿದ್ದರು. ಆದರೆ, ಮೂಲ ಸಿನಿಮಾ ಮಾಡಿದ ಹೆಸರು, ಗಳಿಕೆ ಮಾತ್ರ ಹಿಂದಿ ರಿಮೇಕ್‌ ಮಾಡದಿರುವುದು ವಿಪರ್ಯಾಸ.

ಅಕ್ಷಯ್ ವೃತ್ತಿಜೀವನದಲ್ಲಿ ಕಡಿಮೆ ಕಲೆಕ್ಷನ್...

ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ಸರ್ಫಿರಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಕೆಟ್ಟ ಓಪನಿಂಗ್ ಪಡೆದ ಸಿನಿಮಾ ಎಂಬ ಹಣೆಪಟ್ಟಿ ಪಡೆದಿತ್ತು. ಸುಮಾರು 80 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 30 ಕೋಟಿಗಿಂತ ಕಡಿಮೆ ಕಲೆಕ್ಷನ್ ಮಾಡಿ, ಸೋಲೊಪ್ಪಿಕೊಂಡಿತ್ತು. ಈ ಸಿನಿಮಾದಿಂದ ನಿರ್ಮಾಪಕರಿಗೆ ಬರೋಬ್ಬರಿ ಐವತ್ತು ಕೋಟಿಯವರೆಗೂ ನಷ್ಟವಾಗಿತ್ತು.

ಸರ್ಫಿರಾಗೆ ತಮಿಳು ನಟ ಸೂರ್ಯ ನಿರ್ಮಾಪಕ

ಸರ್ಫಿರಾ ಚಿತ್ರದಲ್ಲಿ ರಾಧಿಕಾ ಮದನ್, ಪರೇಶ್ ರಾವಲ್ ಮತ್ತು ಶರತ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸೂರರೈ ಪೊಟ್ರು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ಹಿಂದಿ ರಿಮೇಕ್‌ನಲ್ಲಿ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಇದಲ್ಲದೇ ಸೂರ್ಯ ಈ ಸಿನಿಮಾಗೆ ನಿರ್ಮಾಪಕರಾಗಿಯೂ ಹಣ ಹೂಡಿಕೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಸಿನಿಮಾ ಮೂಲಕ ನಿರ್ಮಾಪಕರಾಗಿ ಬಾಲಿವುಡ್‌ಗೂ ಸೂರ್ಯ ಪ್ರವೇಶಿಸಿದ್ದರು.

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸರ್ಫಿರಾ

ಚಿತ್ರಮಂದಿರದಲ್ಲಿ ತೆರೆಕಂಡು ಒಂದು ತಿಂಗಳೊಳಗೆ ಸರ್ಫಿರಾ ಚಿತ್ರ OTTಯಲ್ಲಿ ಬಿಡುಗಡೆಯಾಗಲಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಈ ದೊಡ್ಡ ಬಜೆಟ್‌ನ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಸರ್ಫಿರಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 9ರಂದು ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ಮೊದಲು ಈ ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಚಿಸಿದ್ದರು. ಆದರೆ ಥಿಯೇಟರ್‌ನಲ್ಲಿ ಡಿಸಾಸ್ಟರ್‌ ಆದ ಹಿನ್ನೆಲೆಯಲ್ಲಿ ಒಂದು ತಿಂಗಳ ಮೊದಲೇ ಈ ಸಿನಿಮಾ ಒಟಿಟಿಯಲ್ಲಿ ಬರಲಿದೆ.

ಜಿಆರ್ ಗೋಪಿನಾಥ್ ಜೀವನ ಕಥೆ..

ಸರ್ಫಿರಾ ಸಿನಿಮಾ ಏರ್ ಡಕ್ಕನ್ ಸಂಸ್ಥಾಪಕ ಜಿಆರ್ ಗೋಪಿನಾಥ್ ಅವರ ಜೀವನಾಧಾರಿತವಾಗಿದೆ. ಶ್ರೀಮಂತರಿಗೆ ಮಾತ್ರ ಸಾಧ್ಯವಿದ್ದ ವಿಮಾನ ಪ್ರಯಾಣವನ್ನು ಸಾಮಾನ್ಯ ಜನರಿಗೂ ತಲುಪುವಂತೆ ಮಾಡುವ ಯುವಕನೊಬ್ಬನ ಪಯಣವನ್ನು ನಿರ್ದೇಶಕಿ ಸುಧಾ ಕೊಂಗರ ಈ ಸಿನಿಮಾದಲ್ಲಿ ತೋರಿಸಿದ್ದರು. ಸೂರ್ಯ ಅಭಿನಯದ ಸೂರ್ಯ ಪೋಟ್ರು ಚಿತ್ರ ಕೋವಿಡ್‌ನಿಂದಾಗಿ ಥಿಯೇಟರ್‌ಗಳ ಬದಲಿಗೆ ನೇರವಾಗಿ OTT ನಲ್ಲಿ ಬಿಡುಗಡೆಯಾಯಿತು. ಈ ಚಿತ್ರಕ್ಕಾಗಿ ಸೂರ್ಯ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದರು. ಈ ಚಿತ್ರವು ಸೌತ್‌ನ ಇತರ ಭಾಷೆಗಳಲ್ಲಿಯೂ ಡಬ್‌ ಆಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿತ್ತು.

ನಾಲ್ಕು ವರ್ಷದಲ್ಲಿ ಹದಿನಾರು ಫ್ಲಾಪ್...

ಕಳೆದ ನಾಲ್ಕು ವರ್ಷಗಳಲ್ಲಿ ಅಕ್ಷಯ್ ಕುಮಾರ್‌ಗೆ ಇದು ಹದಿನಾರನೇ ಫ್ಲಾಪ್ ಆಗಿದೆ. ಈ ವರ್ಷ ಬಡೇಮಿಯಾ ಚೋಟೆ ಮಿಯಾ ಜೊತೆಗೆ, ಕಳೆದ ವರ್ಷ ಸೆಲ್ಫಿ ಮತ್ತು ಮಿಷನ್ ರಾಣಿಗಂಜ್ ಸೋತು ಸುಣ್ಣವಾಗಿವೆ. ಇದರಿಂದ ನಿರ್ಮಾಪಕರೂ ಅಪಾರ ಹಣ ಕಳೆದುಕೊಂಡಿದ್ದಾರೆ.

Whats_app_banner