Buddy movie on OTT: ಬಡ್ಡಿ ಸಿನಿಮಾ ಒಟಿಟಿಗೆ, ಮನೆಯಲ್ಲೇ ನೋಡಿ ಅಲ್ಲು ಸಿರಿಶ್ ಜತೆ ಟೆಡ್ಡಿ ಬೇರ್‌ ಸಾಹಸದ ಫ್ಯಾಂಟಸಿ ಚಿತ್ರ-ott news allu sirish buddy movie on ott everything you need to know about fantacsy action film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Buddy Movie On Ott: ಬಡ್ಡಿ ಸಿನಿಮಾ ಒಟಿಟಿಗೆ, ಮನೆಯಲ್ಲೇ ನೋಡಿ ಅಲ್ಲು ಸಿರಿಶ್ ಜತೆ ಟೆಡ್ಡಿ ಬೇರ್‌ ಸಾಹಸದ ಫ್ಯಾಂಟಸಿ ಚಿತ್ರ

Buddy movie on OTT: ಬಡ್ಡಿ ಸಿನಿಮಾ ಒಟಿಟಿಗೆ, ಮನೆಯಲ್ಲೇ ನೋಡಿ ಅಲ್ಲು ಸಿರಿಶ್ ಜತೆ ಟೆಡ್ಡಿ ಬೇರ್‌ ಸಾಹಸದ ಫ್ಯಾಂಟಸಿ ಚಿತ್ರ

Buddy (2024) movie on OTT: ಅಲ್ಲು ಸಿರಿಶ್‌ ನಟನೆಯ ಹೊಸ ಸಿನಿಮಾ ಬಡ್ಡಿ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಒಬ್ಬಾಕೆಯ ಆತ್ಮ ಟೆಡ್ಡಿ ಬೇರ್‌ನೊಳಗೆ ಸೇರಿಕೊಂಡು ಅನ್ಯಾಯದ ವಿರುದ್ಧ ಹೋರಾಡುವ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದಲ್ಲಿ ನೋಡಬಹುದು.

Buddy movie on OTT: ಮನೆಯಲ್ಲೇ ನೋಡಿ ಅಲ್ಲು ಸಿರಿಶ್ ಜತೆ ಟೆಡ್ಡಿ ಬೇರ್‌ ಸಾಹಸದ ಚಿತ್ರ
Buddy movie on OTT: ಮನೆಯಲ್ಲೇ ನೋಡಿ ಅಲ್ಲು ಸಿರಿಶ್ ಜತೆ ಟೆಡ್ಡಿ ಬೇರ್‌ ಸಾಹಸದ ಚಿತ್ರ

Buddy (2024) movie on OTT: ಅಲ್ಲು ಸಿರಿಶ್‌ ನಟನೆಯ ಹೊಸ ಸಿನಿಮಾ ಬಡ್ಡಿ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಆಗಸ್ಟ್‌ 2ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಬಡ್ಡಿ ಇದೀಗ ಒಂದು ತಿಂಗಳೊಳಗೆ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಸ್ಯಾಮ್‌ ಆಂಟೋಮ್‌ ನಿರ್ದೇಶನದ ಈ ತೆಲುಗು ಚಿತ್ರವು ಕನ್ನಡ, ತಮಿಳು, ಮಲಯಾಳಂನಲ್ಲೂ ಸ್ಟ್ರೀಮಿಂಗ್‌ ಆಗುತ್ತಿದೆ. ಬಡ್ಡಿ ಸಿನಿಮಾವನ್ನು ಒಟಿಟಿಯಲ್ಲಿ ನೋಡುವ ಮುನ್ನ ಒಂದಿಷ್ಟು ವಿವರ ತಿಳಿದುಕೊಳ್ಳೋಣ.

ಒಟಿಟಿಯಲ್ಲಿ ಬಿಡುಗಡೆಗೊಂಡ ಬಡ್ಡಿ ಸಿನಿಮಾ

ಅಲ್ಲು ಸಿರಿಶ್‌ ನಟನೆಯ ಬಡ್ಡಿ ಸಿನಿಮಾವು ಆಗಸ್ಟ್ 30, 2024ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಕನ್ನಡದಲ್ಲೂ ಇರುವ ಕಾರಣ ಟೆಡ್ಡಿ ಬೇರ್‌ ಸಾಹಸವನ್ನು ಕನ್ನಡಿಗರೂ ನೋಡಬಹುದು. ಈ ಫ್ಯಾಂಟಸಿ ಸಿನಿಮಾದಲ್ಲಿ ಅಲ್ಲು ಸಿರೀಶ್, ಅಜ್ಮಲ್ ಅಮೀರ್, ಗಾಯತ್ರು ಭಾರದ್ವಾಜ್ ಮತ್ತು ಶ್ರೀರಾಮ್ ರೆಡ್ಡಿ ಪೊಲಾಸನೆ ಮುಂತಾದವರು ನಟಿಸಿದ್ದಾರೆ. "ಬಡ್ಡಿ ಸಿನಿಮಾವು ಮಗುವಿನ ಆಟದ ಕರಡಿ (ಟೆಡ್ಡಿ ಬೇರ್)‌ ಮತ್ತು ಪೈಲಟ್‌ ಆದಿತ್ಯ ರಾಮ್‌ ಕಥೆ. ಇವರಿಬ್ಬರು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ. ಇವರಿಬ್ಬರು ಪರಸ್ಪರ ಸಹಾಯ ಮಾಡುತ್ತ ಭ್ರಷ್ಟಶಕ್ತಿಗಳ ಹುಟ್ಟಡಗಿಸಲು ಶಕ್ತರಾಗುವರೇ?" ಎಂದು ನೆಟ್‌ಫ್ಲಿಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದೆ.

ಬಡ್ಡಿ 2024 ಸಿನಿಮಾದ ಕಥೆಯೇನು?

ಬಡ್ಡಿ ಸಿನಿಮಾದಲ್ಲಿ ಅಲ್ಲು ಸಿರಿಶ್‌ ಅವರು ಆದಿತ್ಯ ರಾಮ್‌ ಎಂಬ ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಅನಿಮೇಟೆಡ್‌ ಟೆಡ್ಡಿ ಬೇರ್‌ ಅನುಸರಿಸುತ್ತದೆ. ಇವರಿಬ್ಬರು ವಿಶೇಷ ಮಿಷನ್‌ಗಾಗಿ ಕೆಲಸ ಮಾಡುತ್ತಾರೆ. ಆದಿತ್ಯ ಮತ್ತು ಬಡ್ಡಿ ಇಬ್ಬರೂ ಅಪಾಯಕಾರಿ ಕಾರ್ಯಕ್ಕೆ ಮುಂದಾಗುತ್ತಾರೆ. ಇಬ್ಬರು ಒಟ್ಟಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ನ್ಯಾಯ ಪಡೆಯಲು ಯತ್ನಿಸುತ್ತಾರೆ.

ಏರ್‌ ಟ್ರಾಫಿಕ್‌ ಕಂಟ್ರೋಲ್‌ ಆಫೀಸರ್‌ ಆಗಿರುವ ಪಲ್ಲವಿ ದೊಡ್ಡ ಅಪಘಾತದಿಂದ ತೊಂದರೆ ಅನುಭವಿಸುತ್ತಾಳೆ. ವೈದ್ಯರು ಮತ್ತು ಆಕೆಯ ಸಿಬ್ಬಂದಿಗಳು ಪಲ್ಲವಿಯನ್ನು ಕೋಮಾಕ್ಕೆ ಹೋಗುವಂತೆ ಮಾಡುತ್ತಾರೆ. ಈಕೆಯ ದೇಹದ ಭಾಗಗಳನ್ನು ಹಾಂಕಾಂಗ್‌ನಲ್ಲಿ ಮಾರಾಟ ಮಾಡಲು ಯತ್ನಿಸುತ್ತಾರೆ. ಈ ಸಮಯದಲ್ಲಿ ಪಲ್ಲವಿಯ ಆತ್ಮ ಟೆಡ್ಡಿ ಬೇರ್‌ನೊಳಗೆ ಸೇರಿಕೊಳ್ಳುತ್ತದೆ. ಈ ಟೆಡ್ಡಿ ಬೇರ್‌ ಪೈಲಟ್‌ ಆದಿತ್ಯ ರಾಮ್‌ ಮನೆಗೆ ಬರುತ್ತದೆ. ಈತನಿಗೂ ಪಲ್ಲವಿಗೂ ಗತಕಾಲದಲ್ಲಿ ಲವ್‌ ಆಗಿತ್ತು. ಇದಾದ ಬಳಿಕ ಟೆಡ್ಡಿ ಬೇರ್‌ ಮತ್ತು ಆದಿತ್ಯ ಅನ್ಯಾಯದ ವಿರುದ್ಧ ಹೋರಾಡುತ್ತಾರೆ.

ಫ್ಯಾಂಟಸಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಈ ಸಿನಿಮಾಕ್ಕೆ ವೀಕ್ಷಕರು ಐಎಂಡಿಬಿಯಲ್ಲಿ 5.8/10 ರೇಟಿಂಗ್‌ ನೀಡಿದ್ದಾರೆ. ಈ ಸಿನಿಮಾದ ಸ್ಕ್ರೀನ್‌ಪ್ಲೇ ಮತ್ತು ನಟರ ಪರ್ಫಾಮೆನ್ಸ್‌ ಅಷ್ಟು ಉತ್ತಮವಾಗಿಲ್ಲ ಎಂಬ ವಿಮರ್ಶೆ ಬಂದಿತ್ತು. ಮೊದಲ ಹತ್ತು ನಿಮಿಷ ನೋಡಿಯೇ ಸಾಕಾಯ್ತು, ಕೆಟ್ಟದ್ದಾಗಿ ನಟಿಸಿದಾರೆ ಎಂದೆಲ್ಲ ರಿವ್ಯೂ ಬಂದಿತ್ತು. ಆದರೆ, ಕೆಲವರಿಗೆ ಈ ಸಿನಿಮಾ ಇಷ್ಟವಾಗಿತ್ತು. ಕುಟುಂಬ ಸಮೇತ ನೋಡಬಹುದು, ಮಕ್ಕಳಿಗೆ ಇಷ್ಟವಾಗುವ ಸಿನಿಮಾ ಇದಾಗಿದೆ ಎಂದೆಲ್ಲ ಅಭಿಪ್ರಾಯಪಟ್ಟಿದ್ದಾರೆ. ಮನೆಯಲ್ಲಿ ಮಕ್ಕಳಿಗೆ ಯಾವ ಸಿನಿಮಾ ತೋರಿಸೋದು ಎಂದುಕೊಳ್ಳುವವರು ಬಡ್ಡಿಯನ್ನು ತೋರಿಸಬಹುದು.