ಕನ್ನಡ ಸುದ್ದಿ  /  ಮನರಂಜನೆ  /  Amul Doodle: ಚಮ್ಕಿಲಾ ಸಿನಿಮಾದ ಅಮುಲ್‌ ಡೂಡಲ್‌ ನೋಡಿ ಸಂಭ್ರಮಿಸಿದ ಫ್ಯಾನ್ಸ್‌; ಇಮ್ತಿಯಾಜ್‌ ಸಿನಿಮಾಕ್ಕೆ ಬಹುಪರಾಕ್‌

Amul doodle: ಚಮ್ಕಿಲಾ ಸಿನಿಮಾದ ಅಮುಲ್‌ ಡೂಡಲ್‌ ನೋಡಿ ಸಂಭ್ರಮಿಸಿದ ಫ್ಯಾನ್ಸ್‌; ಇಮ್ತಿಯಾಜ್‌ ಸಿನಿಮಾಕ್ಕೆ ಬಹುಪರಾಕ್‌

Amar Singh Chamkila Movie: ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆ ಮತ್ತು ಸಕಾರಾತ್ಮಕ ವಿಮರ್ಶೆ ಕೇಳಿಬರುತ್ತಿದೆ. ಪಂಜಾಬ್‌ನ ಎಲ್ವಿಸ್‌ ಎಂದೇ ಖ್ಯಾತಿ ಪಡೆದ ಗಾಯಕನ ಬಯೋಪಿಕ್‌ ಕುರಿತು ಇದೀಗ ಅಮೂಲ್‌ ಹೊಸ ಡೂಡಲ್‌ ಬಿಡುಗಡೆ ಮಾಡಿದೆ.

ಚಮ್ಕಿಲಾ ಸಿನಿಮಾದ ಅಮುಲ್‌ ಡೂಡಲ್‌
ಚಮ್ಕಿಲಾ ಸಿನಿಮಾದ ಅಮುಲ್‌ ಡೂಡಲ್‌

ಬೆಂಗಳೂರು: ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆ ಮತ್ತು ಸಕಾರಾತ್ಮಕ ವಿಮರ್ಶೆ ಕೇಳಿಬರುತ್ತಿದೆ. ಪಂಜಾಬ್‌ನ ಎಲ್ವಿಸ್‌ ಎಂದೇ ಖ್ಯಾತಿ ಪಡೆದ ಗಾಯಕನ ಬಯೋಪಿಕ್‌ ಕುರಿತು ಇದೀಗ ಅಮೂಲ್‌ ಹೊಸ ಡೂಡಲ್‌ ಬಿಡುಗಡೆ ಮಾಡಿದೆ. ಈ ಡೂಡಲ್‌ ನೋಡಿ ಸಿನಿಮಾದ ನಾಯಕ ಮತ್ತು ನಾಯಕಿ ದಿಲ್‌ಜಿತ್‌ ದೋಸಂಜ್‌ ಮತ್ತು ಪರಿಣಿತಿ ಚೋಪ್ರಾ ಅವರು ಸಾಕಷ್ಟು ಖುಷಿಗೊಂಡಿದ್ದಾರೆ. ಈ ಸಿನಿಮಾದ ಯಶಸ್ಸಿಗೆ ಅಮುಲ್‌ ಸ್ವೀಟಾದ ಧನ್ಯವಾದ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಚಂಪ್ಕಿಕಾ ಡೂಡಲ್‌

ಅಮುಲ್‌ ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಮರ್‌ ಸಿಂಗ್‌ ಚಮ್ಕಿಲಾ ಸಿನಿತಂಡಕ್ಕೆ ಸಿಹಿಯಾದ ಅಚ್ಚರಿ ನೀಡಿದೆ. ಚಂಪ್ಕಿಲಾದಿಂದ ಸ್ಪೂರ್ತಿ ಪಡೆದ ವಿಶೇಷ ಡೂಡಲ್‌ ಅನ್ನು ಹಂಚಿಕೊಂಡಿದೆ. ಈ ಡೂಡಲ್‌ನಲ್ಲಿ ಚಂಮ್ಕಿಲಾ ನೀಲು ಕುರ್ತಾ ಪೈಜಾಮಾ ತೊಟ್ಟಿದ್ದ. ಪರಿಣಿತಿ ಫ್ಲೂರಲ್‌ ಸೂಟ್‌ ಧರಿಸಿದ್ದಳು. ಇವರಿಬ್ಬರು ಸ್ಟೇಜ್‌ನಲ್ಲಿ ಹಾಡುವ ಡೂಡಲ್‌ ಅನ್ನು ಅಮುಲ್‌ ರಚಿಸಿದೆ. ಇದೇ ಸಮಯದಲ್ಲಿ ಚಮ್ಕಿಲಾನನ್ನು ಪಂಜಾಬ್‌ ದ ಬಟರ್‌ ಎಂದು ಕರೆದಿದೆ.

ಅಮುಲ್‌ ಟಾಪಿಕಲ್‌: ದಿಲ್‌ಜಿತ್‌ ದೋಸಂಜ್‌ ಅವರು ಇಮ್ತಿಯಾಜ್‌ ಆಲಿ/ಎಆರ್‌ ರೆಹಮನ್‌ ಸೂಪರ್‌ಹಿಟ್‌ ಮ್ಯೂಸಿಕಲ್‌ ಡ್ರಾಮಾದಲ್ಲಿ ಹಾಡುತ್ತಿದ್ದಾರೆ" ಎಂದು ಅಮುಲ್‌ ಈ ಪೋಸ್ಟ್‌ಗೆ ಕ್ಯಾಪ್ಷನ್‌ ಬರೆದಿದೆ. ಅಮುಲ್‌ನ ಈ ಚಿತ್ರಕ್ಕೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. "ಈ ಇಮೇಜ್‌ ಮತ್ತು ಸಿನಿಮಾ ಎರಡೂ ಚೆನ್ನಾಗಿದೆ" "ಅದ್ಭುತ ಸೃಜನಶೀಲತೆಯ ಆರ್ಟ್‌ ವರ್ಕ್‌ ಇದಾಗಿದೆ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ. ತನ್ನ ಹಾಡುಗಳಿಂದಲೇ ಜನಪ್ರಿಯರಾದ ಗಾಯಕ, ಸಂಗೀತಗಾರ ಅಮರ್‌ ಸಿಂಗ್‌ ಚಮ್ಕಿಲಾ ಅವರ ಬಯೋಪಿಕ್‌ ಇದಾಗಿದೆ. ಏಪ್ರಿಲ್‌ 12ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. 1980 ರ ದಶಕದಲ್ಲಿ ಕ್ಷಿಪ್ರವಾಗಿ ಜನಪ್ರಿಯತೆ ಪಡೆದ ಪಂಜಾಬ್‌ ಎಲ್ವಿಸ್‌ ಎಂದೇ ಖ್ಯಾತಿ ಪಡೆದ ಚಮ್ಕಿಲಾರ ಕಥೆಯನ್ನು ನಿರ್ದೇಶಕರು ಯಶಸ್ವಿಯಾಗಿ ತೆರೆಮೇಲೆ ತಂದಿದ್ದಾರೆ. ಪಂಜಾಬ್‌ನ ಹಾಡುಗಾರ ಬಹುಬೇಗ ಪ್ರಸಿದ್ಧಿಗೆ ಬಂದಿದ್ದ. ಆದರೆ, ತನ್ನ 27ನೇ ವಯಸ್ಸಿನಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದ.

ಅಮರ್‌ ಸಿಂಗ್‌ ಚಮ್ಕಿಲಾ ವಿಮರ್ಶೆ

ಈಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾದ ವಿಮರ್ಶೆ ಮಾಡಿದೆ. "ಅಮರ್‌ ಸಿಂಗ್‌ ಚಮ್ಕಿಲಾ ಸಿನಿಮಾವು 1977 ಮತ್ತು 1988 ರ ನಡುವಿನ ಕಾಲಘಟ್ಟದಲ್ಲಿ ನಡೆಯುತ್ತದೆ. ಸಾಕ್ಸ್ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಮ್ಕಿಲಾನಿಗೆ ಬಾಲ್ಯದಿಂದಲೂ ಹಾಡುಗಳೆಂದರೆ ಪಂಚಪ್ರಾಣ. ಸುತ್ತಮುತ್ತಲಿನ ಸನ್ನಿವೇಶಗಳಿಗೆ ಸಾಹಿತ್ಯ ಬರೆದು ಹಾಡುತ್ತಾನೆ. ಈತ ಜನಪ್ರಿಯ ಗಾಯಕ ಶಿಂದಾರನ್ನು ಭೇಟಿಯಾಗುತ್ತಾನೆ. ಹಾಡಿನ ಸಾಹಿತ್ಯ ಬರೆಯುತ್ತಾನೆ. ಹಾಡಿಗೆ ಟ್ಯೂನ್‌ ಮಾಡುತ್ತಾನೆ. ಚಮ್ಕಿಲಾನಿಗೆ ಸ್ಟೇಜ್‌ನಲ್ಲಿ ಶೋ ನೀಡುವಅವಕಾಶ ದೊರಕುತ್ತದೆ. ಚಮ್ಕಿಲಾನ ಹಾಡಿಗೆ ಎಲ್ಲರೂ ಮರುಳಾಗುತ್ತಾರೆ."

"ಅಮರ್‌ ಸಿಂಗ್ ಚಮ್ಕಿಲಾನ ಬದುಕಿನ ಕಥೆಯನ್ನು ಇರುವಂತೆ ಚಿತ್ರಿಸಲು ನಿರ್ದೇಶಕರು ಯತ್ನಿಸಿದ್ದಾರೆ. ಅಮರ್‌ ಸಿಂಗ್‌ ಚಮ್ಕಿಲಾನ ಆಲೋಚನೆಗಳು, ಗಾಯಕನಾಗಿ ಬೆಳೆಯುವ ಆತನ ಹಂಬಲ, ಎದುರಾಗುವ ವಿವಿಧ ಸನ್ನಿವೇಶಗಳನ್ನು ಎದುರಿಸಿದ ರೀತಿ ಇತ್ಯಾದಿಗಳನ್ನು ಸಮರ್ಥವಾಗಿ ಸಿನಿಮಾವಾಗಿ ಹೊರತಂದಿದ್ದಾರೆ. ಚಮ್ಕಿಲಾ ಅಮರಜೋತ್‌ನನ್ನು ಏಕೆ ಮದುವೆಯಾದ ಎಂಬುದನ್ನೂ ಯಾವುದೇ ಫಿಲ್ಟರ್ ಇಲ್ಲದೆ ತೋರಿಸಲಾಗಿದೆ. ಸಿನಿಮಾದ ಬಹುತೇಕ ಡೈಲಾಗ್‌ಗಳೂ ಆಕರ್ಷಕವಾಗಿವೆ. ಈ ಚಿತ್ರದ ಪಂಜಾಬಿ ಹಾಡುಗಳೂ ಮನಸೂರೆಗೊಳ್ಳುತ್ತವೆ" ಎಂದು ವಿಮರ್ಶೆ ಮಾಡಲಾಗಿದೆ.

IPL_Entry_Point