ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ವೆಬ್ ಸರಣಿಗಳು: ಯೇ ಮೇರಿ ಫ್ಯಾಮಿಲಿ, ಪಾರಸೈಟ್ ದಿ ಗ್ರೇ, ರಿಪ್ಲೇ ಸೇರಿದಂತೆ ಇಲ್ಲಿದೆ ಲಿಸ್ಟ್
April 2024 upcoming web series: ಈ ತಿಂಗಳು ಹಲವು ವೆಬ್ ಸರಣಿಗಳು ಬಿಡುಗಡೆಯಾಗಲು ಕಾಯುತ್ತಿವೆ. ಈ ತಿಂಗಳು ನೋಡಬಹುದಾದ ಹತ್ತು ಹೊಸ ವೆಬ್ ಸರಣಿಗಳ ವಿವರ ಇಲ್ಲಿದೆ.
ಈ ಏಪ್ರಿಲ್ ತಿಂಗಳಲ್ಲಿ ಯೇ ಮೇರಿ ಫ್ಯಾಮಿಲಿ, ಪ್ಯಾರಾಸೈಟ್ ದಿ ಗ್ರೇ, ಫ್ರಾಂಕ್ಲಿನ್ ಸೇರಿದಂತೆ ಹಲವು ವೆಬ್ ಸರಣಿಗಳು ವಿವಿಧ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಲಿವೆ. ಇದೇ ಸಮಯದಲ್ಲಿ ಮಾಸ್ಟರ್‌ಶೆಫ್ ಇಂಡಿಯಾ, ಗುಡ್‌ಬೈ ಅರ್ಥ್, ಫ್ಯಾಮಿಲಿ ಆಜ್ ಕಲ್ ಮುಂತಾದ ಶೋಗಳು ಬಿಡುಗಡೆಯಾಗಲಿವೆ. ನೀವು ವೆಬ್ ಸರಣಿ ಪ್ರಿಯರಾಗಿದ್ದಾರೆ, ನಿಮಗಾಗಿ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗುವ ವೆಬ್ ಸೀರಿಸ್ ಮತ್ತು ಶೋಗಳ ವಿವರ ಇಲ್ಲಿ ನೀಡಲಾಗಿದೆ.
1) ಯೇ ಮೇರಿ ಫ್ಯಾಮಿಲಿ
ಜೂಹಿ ಪರ್ಮಾರ್ ಮತ್ತು ರಾಜೇಶ್ ಕುಮಾರ್ ಅವರು ಯೇ ಮೇರಿ ಫ್ಯಾಮಿಲಿಯ ಮೂರನೇ ಸೀಸನ್‌ನೊಂದಿಗೆ ವಾಪಸ್ ಬಂದಿದ್ದಾರೆ. 995 ರ ವಸಂತ ಋತುವಿನಲ್ಲಿ ಅವಸ್ಥಿ ಕುಟುಂಬದ ಭಾರತೀಯ ಸಾಮಾನ್ಯ ಮನೆಗೆ ಆಗಮಿಸುತ್ತಾರೆ. ಇವರ ಕಥೆಯು ಭಾರತದ ಪ್ರತಿಮನೆಯಲಲ್ಲೂ ನಡೆಯುವ ಕಥೆಯಂತೆ ಇರಲಿದೆ.
2) ಪ್ಯಾರಾಸೈಟ್: ದಿ ಗ್ರೇ
ಟ್ರೈನ್ ಟು ಬುಸಾನ್ ಸಿನಿಮಾ ಮಾಡಿದ ತಂಡವೀಗ ಕೆ-ಡ್ರಾಮಾ ಸರಣಿ ಪ್ಯಾರಾಸೈಟ್: ದಿ ಗ್ರೇ ನಿರ್ಮಿಸಿದೆ. ದಿ ಗ್ರೇ ಹಿತೋಶಿ ಇವಾಸಾಕಿ ಅವರ ಮಂಗಾ ಸರಣಿಯ ಇನ್ನೊಂದು ಆಕ್ಷನ್ ಸರಣಿ ಇದಾಗಿದೆ. ದೇಹದೊಳಗೆ ಪರಾವಲಂಬಿಗಳು ನಿಧಾನವಾಗಿ ನುಸುಳಿ ದೇಹವನ್ನು ಹೇಗೆ ನಿಯಂತ್ರಿಸುತ್ತವೆ ಎಂಬ ವಿವರವನ್ನೂ ಈ ಸರಣಿ ಹೊಂದಿದೆ. ಇದು ಏಪ್ರಿಲ್ 5ರಂದು ಬಿಡುಗಡೆಯಾಗುತ್ತಿದೆ.
3) ಮಾಸ್ಟರ್ ಶೆಫ್ ಇಂಡಿಯಾ
ಮಾಸ್ಟರ್‌ಶೆಫ್ ಇಂಡಿಯಾ ರಿಯಾಲಿಟಿ ಕಾರ್ಯಕ್ರಮದ ತಮಿಳು ಮತ್ತು ತೆಲುಗು ಆವೃತ್ತಿಗಳು ಏಪ್ರಿಲ್ 22 ರಂದು ಸೋನಿಲಿವ್‌ನಲ್ಲಿ ಪ್ರದರ್ಶನಗೊಳ್ಳಲಿವೆ. ಸ್ಪರ್ಧಾತ್ಮಕ ಅಡುಗೆ ಸರಣಿಯು ತನ್ನ ಚೊಚ್ಚಲ ತಮಿಳು ಮತ್ತು ತೆಲುಗು ಆವೃತ್ತಿಗಳ ಮೂಲಕ ದಕ್ಷಿಣ ಭಾರತದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಅಡುಗೆ ಮಾಡುವವರಿಗೆ ವೇದಿಕೆ ಒದಗಿಸಲಿದೆ. ಈಗಾಗಲೇ ತೆಲುಗು ಮತ್ತು ತಮಿಳು ಎರಡೂ ಶೋಗಳು ಸ್ಪರ್ಧಿಗಳಿಗಾಗಿ ಆಡಿಷನ್ ನಡೆಸಲು ಪ್ರಾರಂಭಿಸಿವೆ.
4) ಫ್ಯಾಮಿಲಿ ಆಜ್ ಕಲ್
ಏಪ್ರಿಲ್ 3 ರಂದು ಸೋನಿ ಲಿವ್‌ನಲ್ಲಿ ಬಿಡುಗಡೆಯಾಗಲಿದೆ. ಫ್ಯಾಮಿಲಿ ಆಜ್ ಕಲ್ ದೆಹಲಿಯ ಗದ್ದಲದ ಸ್ಟೋರಿ. ಕುಟುಂಬ ಜೀವನದ ಭಾವನಾತ್ಮಕ ರೋಲರ್ ಕೋಸ್ಟರ್‌ನಲ್ಲಿ ವೀಕ್ಷಕರನ್ನು ಕೊಂಡೊಯ್ಯಲಿದೆ. ಅಪೂರ್ವ ಅರೋರಾ, ಸೋನಾಲಿ ಸಚ್‌ದೇವ್, ದಿವಂಗತ ನಿತೇಶ್ ಪಾಂಡೆ, ಆಕರ್ಶನ್ ಸಿಂಗ್, ಪ್ರಖರ್ ಸಿಂಗ್ ಮತ್ತು ಮಸೂದ್ ಅಖ್ತರ್ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಸಿವಿಕ್ ಸ್ಟುಡಿಯೋಸ್‌ನ ಅನುಷ್ಕಾ ಶಾ ನಿರ್ಮಿಸಿದ್ದಾರೆ. ಫ್ಯಾಮಿಲಿ ಆಜ್ ಕಲ್ ಅನ್ನು ಮನೋಜ್ ಕಲ್ವಾನಿ ಬರೆದಿದ್ದಾರೆ ಮತ್ತು ಪರೀಕ್ಷಿತ್ ಜೋಶಿ ನಿರ್ದೇಶಿಸಿದ್ದಾರೆ.
5) ಅದೃಶ್ಯಮ್
ಈ ಸರಣಿಯಲ್ಲಿ ದಿವ್ಯಾಂಕಾ ತ್ರಿಪಾಠಿ ಮತ್ತು ಐಜಾಜ್ ಖಾನ್ ಕಾಣಿಸಿಕೊಂಡಿದ್ದಾರೆ. ಇದು ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆಗುತ್ತದೆ. ಈಗಾಗಲೇ ಇದರ ಟ್ರೇಲರ್ ಬಿಡುಗಡೆಯಾಗಿದೆ. ಅದೃಶ್ಯಂ ಏಪ್ರಿಲ್ 11 ರಿಂದ ಸ್ಟ್ರೀಮ್ ಆಗಲಿದೆ.
6) ಫ್ರಾಂಕ್ಲಿನ್
ಮೈಕೆಲ್ ಡೌಗ್ಲಾಸ್ ನಿರ್ಮಿಸಿದ ಹೊಸ ಸರಣಿಯು ಆಪಲ್ ಟಿವಿ+ ನಲ್ಲಿ ಸ್ಟ್ರೀಮ್ ಆಗಲಿದೆ. ಪುಲಿಟ್ಜರ್ ಪ್ರಶಸ್ತಿ ವಿಜೇತ ಸ್ಟೇಸಿ ಸ್ಕಿಫ್ ಅವರ ಎ ಗ್ರೇಟ್ ಇಂಪ್ರೂವೈಸೇಶನ್: ಫ್ರಾಂಕ್ಲಿನ್, ಫ್ರಾನ್ಸ್ ಮತ್ತು ಬರ್ತ್ ಆಫ್ ಅಮೇರಿಕಾವನ್ನು ಆಧರಿಸಿದ ಎಂಟು-ಭಾಗದ ನಾಟಕವು ಏಪ್ರಿಲ್ 12 ರಂದು ಜಾಗತಿಕವಾಗಿ ಸ್ಟ್ರೀಮಿಂಗ್ ಆಗಲಿದೆ. ನೋಹ್ ಜೂಪ್, ಥಿಬಾಲ್ಟ್ ಡಿ ಮೊಂಟಲೆಂಬರ್ಟ್, ಡೇನಿಯಲ್ ಮೇಸ್, ಲುಡಿವೈನ್ ಸಾಗ್ನಿಯರ್, ಎಡ್ಡಿ ಮಾರ್ಸನ್, ಅಸ್ಸಾದ್ ಬೌಬ್, ಜೀನ್ ಬಲಿಬಾರ್ ಮತ್ತು ಥಿಯೋಡರ್ ಪೆಲ್ಲೆರಿನ್ ಈ ಸರಣಿಯಲ್ಲಿ ನಟಿಸಿದ್ದಾರೆ.
7) ರಿಪ್ಲಿ
ಅಭಿಮಾನಿಗಳು ರಿಪ್ಲಿಯನ್ನು ಹಾಟ್ ಪಾದ್ರಿ ಎಂದು ಕರೆಯುತ್ತಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 4 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ.
8) ಶುಗರ್
ಸಾಹಿತ್ಯಿಕ, ಚಲನಚಿತ್ರ ಮತ್ತು ದೂರದರ್ಶನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಮತ್ತು ಮಹತ್ವದ ಪ್ರಕಾರಗಳಲ್ಲಿ ಒಂದಾದ ಖಾಸಗಿ ಪತ್ತೆದಾರಿ ಕಥೆಯನ್ನು ಶುಗರ್ ಹೊಂದಿದೆ. ಹಾಲಿವುಡ್ ನಿರ್ಮಾಪಕ ಜೊನಾಥನ್ ಸೀಗೆಲ್ ಅವರ ಪ್ರೀತಿಯ ಮೊಮ್ಮಗಳು ಒಲಿವಿಯಾ ಸೀಗೆಲ್ ಅವರ ನಿಗೂಢ ಕಣ್ಮರೆಯ ಕಥೆ ಹೊಂದಿದೆ. ಅಮೆರಿಕದ ಖಾಸಗಿ ತನಿಖಾಧಿಕಾರಿ ಜಾನ್ ಶುಗರ್ ಆಗಿ ಕಾಲಿನ್ ಫಾರೆಲ್ ನಟಿಸಿದ್ದಾರೆ. ಈ ಸರಣಿಯಲ್ಲಿ ಕಿರ್ಬಿ, ಆಮಿ ರಯಾನ್, ಡೆನ್ನಿಸ್ ಬೌಟ್ಸಿಕಾರಿಸ್, ನೇಟ್ ಕಾರ್ಡ್ರಿ, ಅಲೆಕ್ಸ್ ಹೆರ್ನಾಂಡೆಜ್ ಮತ್ತು ಜೇಮ್ಸ್ ಕ್ರೋಮ್‌ವೆಲ್ ಸಹ ನಟಿಸಿದ್ದಾರೆ.
9) ಗುಡ್‌ಬೈ ಅರ್ಥ್
ಗುಡ್‌ಬೈ ಅರ್ಥ್ ಸೀಸನ್ 1 ಅನ್ನು ಏಪ್ರಿಲ್ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯ ಸುತ್ತ ಇದರ ಕಥೆ ಇರಲಿದೆ.
10) ಆಸ್ ದಿ ಕೌ ಫ್ಲೈಸ್
ಈ ಶೋದ ಮೂರನೇ ಮತ್ತು ಅಂತಿಮ ಸರಣಿಯು ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 11ರಂದು ಪ್ರೀಮಿಯರ್ ಆಗಲಿದೆ. ಈಗಾಗಲೇ ನೆಟ್‌ಫ್ಲಿಕ್ಸ್ ಇದರ ಟ್ರೇಲರ್ ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ.