ಕನ್ನಡ ಸುದ್ದಿ  /  ಮನರಂಜನೆ  /  Ott News: ಸದ್ದಿಲ್ಲದೆ ಒಟಿಟಿಗೆ ಬಂತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ O2 ಸಿನಿಮಾ

OTT News: ಸದ್ದಿಲ್ಲದೆ ಒಟಿಟಿಗೆ ಬಂತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ O2 ಸಿನಿಮಾ

ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ O2 ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಮೆಡಿಕಲ್‌ ಥ್ರಿಲ್ಲರ್‌ ಶೈಲಿಯ ಈ ಚಿತ್ರವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ.

OTT News: ಸದ್ದಿಲ್ಲದೆ ಒಟಿಟಿಗೆ ಬಂತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ O2 ಸಿನಿಮಾ
OTT News: ಸದ್ದಿಲ್ಲದೆ ಒಟಿಟಿಗೆ ಬಂತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ O2 ಸಿನಿಮಾ

O2 Movie: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿತ್ತು ಓ2 ಸಿನಿಮಾ. ಅಚ್ಚರಿಯ ವಿಚಾರ ಏನೆಂದರೆ ಸ್ವತಃ ಅಪ್ಪು ಕೇಳಿ ಇಷ್ಟಪಟ್ಟ ಕೊನೇ ಕಥೆಯಿದು. ಏಪ್ರಿಲ್‌ 18ಕ್ಕೆ ಬಿಡುಗಡೆಯಾಗಿದ್ದ ಈ ಸಿನಿಮಾ ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಇದೇ ಒಟಿಟಿಗೆ ಸದ್ದಿಲ್ಲದೆ ಎಂಟ್ರಿಕೊಟ್ಟಿದೆ. ಇಂದಿನಿಂದ (ಮೇ 31) ಸ್ಟ್ರೀಮಿಂಗ್‌ ಆರಂಭಿಸಿದೆ. 

ಟ್ರೆಂಡಿಂಗ್​ ಸುದ್ದಿ

ಓ2 ಚಿತ್ರಕ್ಕೆ ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್ ನಿರ್ದೇಶನ ಮಾಡಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮೂಡಿಬಂದ ಚಿತ್ರದಲ್ಲಿ ಆಶಿಕಾ ರಂಗನಾಥ್‌, ಪ್ರವೀಣ್‌ ತೇಜ, ರಾಘವ್‌ ನಾಯಕ್‌, ಸಿರಿ ರವಿಕುಮಾರ್, ಗೋಪಾಲ್‌ ದೇಶಪಾಂಡೆ, ಪ್ರಕಾಶ್‌ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೈದ್ಯಕೀಯ ರಂಗದಲ್ಲಿನ ಬೆಳವಣಿಗೆ ಸುತ್ತ ನಡೆಯುವ ಕಥೆಯಾಗಿದೆ.

ಸತ್ತ ವ್ಯಕ್ತಿಯನ್ನು ಬದುಕಿಸುವ ಕಥೆ

ಸತ್ತ ವ್ಯಕ್ತಿಯನ್ನು ಮತ್ತೆ ಬದುಕಿಸಬಹುದೇ? ಇಂಥದ್ದೊಂದು ಎಳೆಯ ನಡುವೆ ಸಾಗುವ ಈ ಸಿನಿಮಾದಲ್ಲಿ, ವೈದ್ಯಕೀಯ ಕ್ಷೇತ್ರದ ರೋಚಕ ಸಂಗತಿಗಳನ್ನೂ ನೋಡುಗರ ಎದೆಗಿಳಿಸುವ ಸಾಹಸಕ್ಕೆ ಕೈ ಹಾಕಿದ್ದರು ನವ ನಿರ್ದೇಶಕರಾದ ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್. ಈ ನಿರ್ದೇಶಕದ್ವಯರ ಸಾಹಸಕ್ಕೆ ಪ್ರೇಕ್ಷಕರಿಂದಲೂ ಬಹುಪರಾಕ್‌ ಸಿಕ್ಕಿತ್ತು. ಇದೀಗ ಇದೇ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ.

ಈ ಒಟಿಟಿಯಲ್ಲಿ O2 ಸಿನಿಮಾ ಲಭ್ಯ

O2 ಸಿನಿಮಾ ಶುಕ್ರವಾರದಿಂದ Amazon Prime Video OTTಯಲ್ಲಿ ಸ್ಟ್ರೀಮ್ ಆಗುತ್ತಿದೆ. ಸದ್ಯ ಈ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಮ್ ಈ ಒ2 ಚಿತ್ರವನ್ನು ತೆಲುಗು ಜೊತೆಗೆ ಮಲಯಾಳಂ ಮತ್ತು ತಮಿಳಿನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದೂ ಹೇಳಲಾಗುತ್ತಿದೆ. O2 ಚಿತ್ರವನ್ನು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಪಿಆರ್‌ಕೆ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿದ್ದಾರೆ.

ವಿವಾನ್‌ ರಾಧಾಕೃಷ್ಣ ಸಂಗೀತ ಮತ್ತು ನವೀನ್‌ ಅವರ ಛಾಯಾಗ್ರಹಣ ಚಿತ್ರವನ್ನು ಮತ್ತಷ್ಟು ಮೇಲಕ್ಕೇರಿಸಿದೆ. ವೈದ್ಯೆಯಾಗಿ ಆಶಿಕಾ ವಿಭಿನ್ನ ಪಾತ್ರದ ಮೂಲಕ ಮನಸ್ಸಲ್ಲಿ ಉಳಿಯುತ್ತಾರೆ. ಪ್ರವೀಣ್‌ ತೇಜ ಎರಡು ಭಿನ್ನ ಕೋನದಲ್ಲಿ ಕಾಣಿಸುತ್ತಾರೆ. ಓಶೋ ಪಾತ್ರ ಮಾಡಿರುವ ನಿರ್ದೇಶಕ ರಾಘವ್‌ ನಾಯಕ್‌ ಚೊಚ್ಚಲ ಪ್ರಯತ್ನದಲ್ಲೇ ಗಮನಸೆಳೆಯುತ್ತಾರೆ.

ವಿಶ್ವಂಭರ ಚಿತ್ರದಲ್ಲಿ ಚಿರಂಜೀವಿ

ನಾಗಾರ್ಜುನ ಅವರ ನಾ ಸಾಮಿ ರಂಗ ಚಿತ್ರದ ಬಳಿಕ ಚಿರಂಜೀವಿ ಜೊತೆಗೆ ವಿಶ್ವಂಭರ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದಾರೆ. ವಿಶ್ವಂಭರ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆಶಿಕಾ ರಂಗನಾಥ್ ಕಳೆದ ವರ್ಷ ಕಲ್ಯಾಣ್ ರಾಮ್ ಅವರ ಅಮಿಗೋಸ್ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಕಲ್ಯಾಣ್ ರಾಮ್ ತ್ರಿಪಾತ್ರದಲ್ಲಿ ನಟಿಸಿದ್ದ ಈ ಪ್ರಯೋಗಾತ್ಮಕ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ವಿಫಲವಾಯಿತು. ಇತ್ತ ಕನ್ನಡದಲ್ಲಿ ಗತವೈಭವ ಚಿತ್ರದ ಕೆಲಸಗಳಲ್ಲೂ ಆಶಿಕಾ ತೊಡಗಿಸಿಕೊಂಡಿದ್ದಾರೆ.

ಟಿ20 ವರ್ಲ್ಡ್‌ಕಪ್ 2024