Level Cross OTT: ಒಟಿಟಿಗೆ ಬಂತು ಮಲಯಾಳಂನ ಸೈಕಲಾಜಿಕಲ್ ಥ್ರಿಲ್ಲರ್ ಲೆವೆಲ್ ಕ್ರಾಸ್ ಸಿನಿಮಾ, ವೀಕ್ಷಣೆ ಎಲ್ಲಿ?
OTT Malayalam Psychological Thriller: ಆಸಿಫ್ ಅಲಿ ನಾಯಕನಾಗಿ ನಟಿಸಿರುವ ಲೆವೆಲ್ ಕ್ರಾಸ್ ಸಿನಿಮಾ, ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ. ಜುಲೈನಲ್ಲಿ ಚಿತ್ರಮಂದಿರದ ಬಾಗಿಲು ತಟ್ಟಿದ್ದ ಈ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು.
Level Cross OTT: ಇತ್ತೀಚಿನ ದಿನಗಳಲ್ಲಿ ಮಲಯಾಳಂನ ಸಾಕಷ್ಟು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸುತ್ತಲೇ ಇವೆ. ಅದರಲ್ಲೂ ಆಸಿಫ್ ಅಲಿ ನಟನೆಯ ಎರಡು ಸಿನಿಮಾಗಳು ಇತ್ತೀಚೆಗಷ್ಟೇ ಒಟಿಟಿ ಅಂಗಳ ಪ್ರವೇಶಿಸಿದ್ದವು. ಅಡಿಯೋಸ್ ಅಮಿಗೋ ಬಳಿಕ ಥಳವನ್ ಸಿನಿಮಾದಲ್ಲಿಯೂ ಆಸಿಫ್ ಅಲಿ ಕಾಣಿಸಿಕೊಂಡಿದ್ದರು. ಇದೀಗ ಆಸಿಫ್ ನಟನೆಯ ಇನ್ನೊಂದು ಸಿನಿಮಾ ಲೆವೆಲ್ ಕ್ರಾಸ್ ಒಟಿಟಿಗೆ ಆಗಮಿಸಲಿದೆ.
ಸೈಕಲಾಜಿಕಲ್ ಥ್ರಿಲ್ಲರ್ ಜಾನರ್‌ನ ಲೆವೆಲ್ ಕ್ರಾಸ್ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಜುಲೈ 26 ರಂದು ಥಿಯೇಟರ್‌ಗೆ ಬಂದ ಈ ಸಿನಿಮಾ ಇಂದು (ಸೆಪ್ಟೆಂಬರ್ 27) ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಾತ್ರಿ 12 ಗಂಟೆಗೆ ಸ್ಟ್ರೀಮ್ ಆಗಲಿದೆ. ಆಸಿಫ್ ಅಲಿ, ಅಮಲಾ ಪೌಲ್ ಮತ್ತು ಶರಫುದ್ದೀನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಅರ್ಫಾಜ್ ಅಯೂಬ್ ನಿರ್ದೇಶಿಸಿದ್ದಾರೆ.
ಲೆವೆಲ್ ಕ್ರಾಸ್ OTT ಬಿಡುಗಡೆ
ಲೆವೆಲ್ ಕ್ರಾಸ್ ಮಲಯಾಳಂ ಇಂಡಸ್ಟ್ರಿಯ ಮತ್ತೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಅಮೆಜಾನ್ ಪ್ರೈಮ್ ವಿಡಿಯೋ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಶುಕ್ರವಾರ ರಾತ್ರಿ 12 ಗಂಟೆಗೆ (ಸೆಪ್ಟೆಂಬರ್ 27) ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂನ ಸ್ಟಾರ್ ನಟ ಆಸಿಫ್ ಅಲಿ ಅಭಿನಯದ ಚಿತ್ರವಾಗಿರುವುದರಿಂದ ಲೆವೆಲ್ ಕ್ರಾಸ್ OTT ಪ್ರೇಕ್ಷಕರಿಂದಲೂ ಭಾರೀ ನಿರೀಕ್ಷೆ ಮೂಡಿಸಿದೆ. ಆಸಿಫ್ ಅಲಿ ಅಭಿನಯದ ಥಳವನ್ ಮತ್ತು ಅಡಿಯೋಸ್ ಅಮಿಗೋ ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದ್ದರೆ, ಈಗ ಥ್ರಿಲ್ಲರ್ ಸಿನಿಮಾ ಲೆವೆಲ್ ಕ್ರಾಸ್ ಕೂಡ ಆಗಮಿಸುತ್ತಿದೆ.
ಇದು ಗೇಟ್ ಕೀಪರ್‌ವೊಬ್ಬನ ಕಥೆ
ಲೆವೆಲ್ ಕ್ರಾಸ್ ಸಿನಿಮಾ ರಘು ಎಂಬ ರೈಲ್ವೇ ಗೇಟ್‌ಕೀಪರ್‌ನ ಸುತ್ತ ಸುತ್ತುತ್ತದೆ. ಅನಿರೀಕ್ಷಿತವಾಗಿ ಆ ಗೇಟ್‌ಕೀಪರ್‌ನ ಬದುಕಿಗೆ ಹುಡುಗಿಯೊಬ್ಬಳ ಆಗಮನವಾಗುತ್ತದೆ. ಜತೆಗೆ ಹಳೇ ಕಥೆಗಳು ತೆರೆದುಕೊಳ್ಳುತ್ತವೆ. ನೋಡುಗನನ್ನು ಗೊಂದಲಕ್ಕೀಡು ಮಾಡುವ ಈ ಸಿನಿಮಾದಲ್ಲಿ ಆಸಿಫ್ ಅಲಿ ವಿಶೇಷ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಲಾಷ್ ಬ್ಯಾಕ್ ಕಥೆಯೂ ಈ ಚಿತ್ರದಲ್ಲಿದೆ.
ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಲೆವೆಲ್ ಕ್ರಾಸ್ ಸಿನಿಮಾ ಇಷ್ಟವಾಗುತ್ತದೆ. ಸಿನಿಮಾದಲ್ಲಿನ ಟ್ವಿಸ್ಟ್‌ಗಳು ಒಳ್ಳೆಯ ಥ್ರಿಲ್ ನೀಡುತ್ತವೆ. ನಿರ್ದೇಶಕ ಅರ್ಫಾಜ್ ಅಯೂಬ್ ಈ ಸಿನಿಮಾವನ್ನು ಎಲ್ಲೂ ಬೋರಾಗದಂತೆ ಜಾಗರೂಕತೆಯಿಂದ ರೂಪಿಸಿರುವ ರೀತಿ ಸಿನಿಮಾದಲ್ಲಿ ಕಾಣುತ್ತದೆ. ಥಿಯೇಟರ್‌ಗಳಲ್ಲಿ ಮಿಸ್ ಮಾಡಿಕೊಂಡವರಿಗೆ ಈಗ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ನೋಡುವ ಅವಕಾಶ ಸಿಗಲಿದೆ.