Bad Newz OTT: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?-ott news bad newz ott release date announced how to watch vicky kaushal triptii dimri starrer bad newz movie mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bad Newz Ott: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?

Bad Newz OTT: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?

Bad Newz Movie OTT: ವಿಕ್ಕಿ ಕೌಶಾಲ್‌, ತೃಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ಯಾಡ್‌ ನ್ಯೂಸ್‌ ಸಿನಿಮಾ ಒಟಿಟಿಗೆ ಆಗಮಿಸಿದೆ.

OTT Bold Movie: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?
OTT Bold Movie: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?

Bad News OTT Release: ವಿಕ್ಕಿ ಕೌಶಾಲ್‌ ಮತ್ತು ತೃಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಬಾಲಿವುಡ್‌ನ ಬ್ಯಾಡ್‌ ನ್ಯೂಸ್‌ ಸಿನಿಮಾ, ಕಳೆದ ತಿಂಗಳಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ತೋಬಾ ತೋಬಾ ಹಾಡು, ಟ್ರೇಲರ್‌ ಮೂಲಕವೇ ಸುದ್ದಿಯಾಗಿದ್ದ ಈ ಸಿನಿಮಾ, ದೊಡ್ಡ ಮಟ್ಟದ ಹೈಪ್‌ ಪಡೆದುಕೊಂಡಿತ್ತು. ಅನಿಮಲ್‌ ಬ್ಯೂಟಿ ಮತ್ತು ಹೊಸ ನ್ಯಾಶನಲ್‌ ಕ್ರಶ್‌ ಎಂದೇ ಕರೆಸಿಕೊಂಡ ತೃಪ್ತಿ ದಿಮ್ರಿ ಸಹ ಆ ನಿರೀಕ್ಷೆಗೆ ತುಪ್ಪ ಸುರಿದಿದ್ದರು. ಕಲೆಕ್ಷನ್‌ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು ಈ ಸಿನಿಮಾ. ಇದೀಗ ಇದೇ ಸಿನಿಮಾ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದೆ.

ಜುಲೈ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಸುಮಾರು 80 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ 115.74 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಇದೇ ಸಿನಿಮಾ ಯಾವುದೇ ಮುನ್ಸೂಚನೆ ನೀಡದೇ, ಒಟಿಟಿಗೆ ಆಗಮಿಸಿದೆ.

ಪ್ರೈಂನಲ್ಲಿ ರಿಲೀಸ್..

ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬ್ಯಾಡ್ ನ್ಯೂಸ್ ಸಿನಿಮಾ ಡಿಜಿಟಲ್ ಸ್ಟ್ರೀಮ್ ಆಗುತ್ತಿದೆ. ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ಪ್ರೈಂ ಸಾಮಾನ್ಯ ಚಂದಾದಾರರಿಗೆ ಈ ಸಿನಿಮಾ ವೀಕ್ಷಣೆಗೆ ಲಭ್ಯವಿಲ್ಲ. ಬದಲಿಗೆ ಅದೇ ಅಮೆಜಾನ್‌ನಲ್ಲಿ ಬಾಡಿಗೆ ಆಧಾರದ ಮೇಲೆ ಬ್ಯಾಡ್‌ ನ್ಯೂಸ್‌ ಸಿನಿಮಾ ವೀಕ್ಷಿಸಬೇಕಿದೆ. ಹೆಚ್ಚುವರಿ 349 ರೂಪಾಯಿ ಪಾವತಿಸಿ ಸಿನಿಮಾ ವೀಕ್ಷಿಸಬಹುದು.

ಏನಿದು ಬ್ಯಾಡ್‌ ನ್ಯೂಸ್‌ ಕಥೆ..

ಬ್ಯಾಡ್ ನ್ಯೂಸ್ ಕಥೆ ಏನಿರಬಹುದು? ನಾಯಕಿ ಇಬ್ಬರು ನಾಯಕರ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾಳೆ. ಅದು ಅವಳನ್ನು ಗರ್ಭಿಣಿಯನ್ನಾಗಿ ಮಾಡುತ್ತದೆ. ಆ ಇಬ್ಬರಿಂದಲೂ ಆಕೆ ಗರ್ಭಿಣಿ ಆಗುತ್ತಾಳೆ. ಹೀಗಿರುವಾಗ ನಾಯಕಿಯನ್ನು ಪಡೆಯಲು ಆ ಇಬ್ಬರು ನಾಯಕರು ಹೇಗೆ ಪೈಪೋಟಿ ನಡೆಸುತ್ತಾರೆ? ಈ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದು ಚಿತ್ರದ ಕಥೆ. ಅಂದಹಾಗೆ, ಇದು ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಎಂಬುದು ಚಿತ್ರತಂಡದ ಮಾತು.

ಆನಂದ್ ತಿವಾರಿ ನಿರ್ದೇಶನದ ಬ್ಯಾಡ್ ನ್ಯೂಸ್‌ನಲ್ಲಿ ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ, ಆಮಿ ವಿರ್ಕ್, ನೇಹಾ ಧೂಪಿಯಾ, ಕರಣ್ ಅಜ್ಲಾ ಮತ್ತು ತರುಣ್ ದಡೇಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್, ಲಿಯೋ ಮೀಡಿಯಾ ಕ್ರಿಯೇಟಿವ್ ಮತ್ತು ಅಮೆಜಾನ್ ಪ್ರೈಮ್ ಬ್ಯಾನರ್‌ಗಳ ಅಡಿಯಲ್ಲಿ ಕರಣ್ ಜೋಹರ್, ಯಶ್ ಜೋಹರ್, ಅಪೂರ್ವ್ ಮೆಹ್ತಾ ಮತ್ತು ಆನಂದ್ ತಿವಾರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.