ಕನ್ನಡ ಸುದ್ದಿ  /  ಮನರಂಜನೆ  /  Korean Movies On Ott: ನೀವು ಒಟಿಟಿಯಲ್ಲಿನ ಟಾಪ್‌ ಕೊರಿಯನ್‌ ಚಿತ್ರಗಳನ್ನು ನೋಡಿದ್ದೀರಾ? ಈ ವಾರಾಂತ್ಯಕ್ಕೆ ಮಿಸ್‌ ಮಾಡಲೇಬೇಡಿ

Korean Movies on OTT: ನೀವು ಒಟಿಟಿಯಲ್ಲಿನ ಟಾಪ್‌ ಕೊರಿಯನ್‌ ಚಿತ್ರಗಳನ್ನು ನೋಡಿದ್ದೀರಾ? ಈ ವಾರಾಂತ್ಯಕ್ಕೆ ಮಿಸ್‌ ಮಾಡಲೇಬೇಡಿ

ಇತ್ತೀಚಿನ ದಿನಗಳಲ್ಲಿ ಮಲಯಾಳಂ ಸಿನಿಮಾಗಳಂತೆ, ಕೊರಿಯನ್ ಚಲನಚಿತ್ರಗಳು ಸಹ ಭಾರತೀಯ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಹಾಗಾದರೆ, ನೀವು ಈ OTTಯಲ್ಲಿ ಈ ಟಾಪ್ 5 ಕೊರಿಯನ್ ಸಿನಿಮಾಗಳನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನೋಡಿ ಲಿಸ್ಟ್‌.

Korean Movies on OTT: ನೀವು ಒಟಿಟಿಯಲ್ಲಿನ ಟಾಪ್‌ ಕೊರಿಯನ್‌ ಚಿತ್ರಗಳನ್ನು ನೋಡಿದ್ದೀರಾ? ಈ ವಾರಾಂತ್ಯಕ್ಕೆ ಮಿಸ್‌ ಮಾಡಲೇಬೇಡಿ
Korean Movies on OTT: ನೀವು ಒಟಿಟಿಯಲ್ಲಿನ ಟಾಪ್‌ ಕೊರಿಯನ್‌ ಚಿತ್ರಗಳನ್ನು ನೋಡಿದ್ದೀರಾ? ಈ ವಾರಾಂತ್ಯಕ್ಕೆ ಮಿಸ್‌ ಮಾಡಲೇಬೇಡಿ

Korean Movies on OTT: ಕೊರಿಯನ್ ಸಿನಿಮಾಗಳಿಗೆ ಅದರದೇ ಆದ ದೊಡ್ಡ ನೋಡುಗ ವರ್ಗವೇ ಇದೆ. ಬರೀ ಆ ಭಾಷೆಗಷ್ಟೇ ಸೀಮಿತವಾಗದ ಆ ಕೊರಿಯನ್‌ ಚಿತ್ರರಂಗ, ಜಾಗತಿಕ ಮಟ್ಟದಲ್ಲೂ ಮಿಂಚುತ್ತಿದೆ. ಅಕಾಡೆಮಿ ಅವಾರ್ಡ್‌ ಕಾರ್ಯಕ್ರಮದಲ್ಲೂ ಪ್ರಶಸ್ತಿ ಪಡೆಯುತ್ತ ದಾಪುಗಾಲಿರಿಸಿದೆ. ಒಂದಕ್ಕಿಂತ ಒಂದು ಅತ್ಯದ್ಭುತ ಎನಿಸುವ ಸಿನಿಮಾಗಳನ್ನು ನೀಡುತ್ತ ಯಶಸ್ಸಿನ ಓಟ ಮುಂದುವರಿಸಿದೆ. ಆ ಪೈಕಿ ಒಟಿಟಿ ವೇದಿಕೆಗಳಲ್ಲೂ ಅಂಥ ಸಾಕಷ್ಟು ಕೊರಿಯನ್‌ ಸಿನಿಮಾಗಳು ಈಗಾಗಲೇ ಸ್ಟ್ರೀಮಿಂಗ್‌ ಆಗಿವೆ. ಆಸ್ಕರ್ ವಿಜೇತ ಪ್ಯಾರಾಸೈಟ್ ಸೇರಿ ಹತ್ತು ಹಲವು ಸಿನಿಮಾಗಳು ಒಟಿಟಿಯ ಬತ್ತಳಿಕೆಯಲ್ಲಿವೆ. ಹಾಗಾದರೆ, ಆ ಸಿನಿಮಾಗಳ್ಯಾವವು? ಅವುಗಳ ವೀಕ್ಷಣೆ ಯಾವ ಒಟಿಟಿಯಲ್ಲಿ.. ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಪ್ಯಾರಾಸೈಟ್‌

2019ರಲ್ಲಿ ಬಂದ ಪ್ಯಾರಾಸೈಟ್ ಸಿನಿಮಾ ಕೊರಿಯನ್ ಸಿನಿಮಾದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿತು. ಈ ಆಸ್ಕರ್ ವಿಜೇತ ಚಿತ್ರದ ನಂತರ ಭಾರತೀಯ ಸಿನಿಮಾ ಪ್ರೇಮಿಗಳು, ಕೊರಿಯನ್ ಸಿನಿಮಾಗಳತ್ತ ವಾಲಿದರು. 

ಅಂದಹಾಗೆ, ಪ್ಯಾರಾಸೈಟ್‌ ಬಡವ ಮತ್ತು ಶ್ರೀಮಂತರ ನಡುವಿನ ಅಂತರದ ಹಿನ್ನೆಲೆಯಲ್ಲಿ ಮೂಡಿಬಂದ ಸಿನಿಮಾ. ಬಡತನವನ್ನು ಹೋಗಲಾಡಿಸಲು ಕೆಲಸಗಾರರಾಗಿ ಶ್ರೀಮಂತ ಕುಟುಂಬಕ್ಕೆ ತೆರಳುವ ಕುಟುಂಬ, ಮುಂದೆ ಎದುರಿಸುವ ಸವಾಲುಗಳನ್ನು ಸಿನಿಮಾದಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಮೆಮೋರೀಸ್ ಆಫ್ ಮರ್ಡರ್

ಮೆಮೋರೀಸ್ ಆಫ್ ಮರ್ಡರ್ ಒಂದು ಕ್ರೈಂ ಥ್ರಿಲ್ಲರ್ ಸಿನಿಮಾ. ಈ ಚಿತ್ರವು 1980 ರ ದಶಕದಲ್ಲಿ ಕೊರಿಯಾದ ಸಣ್ಣ ಪಟ್ಟಣದಲ್ಲಿ ನಡೆದ ಸರಣಿ ಕೊಲೆಗಳು ಮತ್ತು ಅಲ್ಲಿನವರ ತನಿಖೆಯ ವಿಧಾನವನ್ನು ಆಧರಿಸಿದೆ. ಮೆಮೋರೀಸ್ ಆಫ್ ಮರ್ಡರ್ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.

ಸೇವ್‌ ದಿ ಗ್ರೀನ್‌ ಪ್ಲಾನೆಟ್‌

ಸೇವ್‌ ದಿ ಗ್ರೀನ್‌ ಪ್ಲಾನೆಟ್‌ ಕಾಮಿಡಿ ಶೈಲಿಯ ಚಿತ್ರವಾಗಿದ್ದು, ನಮ್ಮ ಭೂಮಿಯ ಮೇಲೆ ಏಲಿಯನ್‌ಗಳಿವೆ ಮತ್ತವು ನಮ್ಮ ಭೂಮಿಯನ್ನು ನಾಶಮಾಡಲು ಬಂದಿವೆ ಎಂದು ನಂಬುವ ವ್ಯಕ್ತಿಯ ಸುತ್ತ ಸುತ್ತುತ್ತದೆ. ಅನ್ಯಗ್ರಹ ಜೀವಿಗಳ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ. ಫಾರ್ಮಾ ಕಂಪನಿಯ ಬಗ್ಗೆಯೂ ಈ ಚಿತ್ರದಲ್ಲಿ ವಿವರಣೆ ಇದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ದಿ ಗ್ಯಾಂಗ್‌ಸ್ಟರ್, ದಿ ಕಾಪ್, ದಿ ಡೆವಿಲ್

ದಿ ಗ್ಯಾಂಗ್‌ಸ್ಟರ್, ದಿ ಕಾಪ್, ದಿ ಡೆವಿಲ್ ಸಿನಿಮಾ ಕ್ರೈಂ ಥ್ರಿಲ್ಲರ್‌ ಶೈಲಿಯ ಚಿತ್ರ. ದರೋಡೆಕೋರರ ಜತೆಗೆ ಸರಣಿ ಹಂತಕನನ್ನು ಹಿಡಿಯುವ ಕಳ್ಳ ಪೊಲೀಸ್‌ ಆಟದ ಕಥೆ. ಪೊಲೀಸ್ ಅಧಿಕಾರಿ ಅವರನ್ನು ಹಿಡಿಯಲು ಮಾಡುವ ವಿಚಿತ್ರ ಪ್ರಯತ್ನಗಳೇ ಇಲ್ಲಿ ಹೈಲೆಟ್. ಈ ಸಿನಿಮಾ ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

ಓಲ್ಡ್‌ಬಾಯ್

2003ರಲ್ಲಿ ಬಿಡುಗಡೆಯಾದ ಓಲ್ಡ್ ಬಾಯ್ ಸಿನಿಮಾ ಕೊರಿಯನ್ ಸಿನಿಮಾದ ದಿಕ್ಕನ್ನೇ ಬದಲಿಸಿದೆ. ಉದ್ಯಮಿಯೊಬ್ಬರನ್ನು ಅಪಹರಿಸಿ 15 ವರ್ಷಗಳ ಕಾಲ ಚಿತ್ರಹಿಂಸೆ ನೀಡುತ್ತಾರೆ. ಅಲ್ಲಿಂದ ಆಚೆ ಬರುವ ಆತ, ಅಪಹರಿಸಿದವರ ಮೇಲೆ ಸೇಡು ತೀರಿಸಿಕೊಳ್ಳಲು ಬಯಸುತ್ತಾನೆ. ಮುಂದೇನಾಗುತ್ತದೆ ಎಂಬುದೇ ಸಿನಿಮಾದ ಹೈಲೈಟ್. ಈ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿದೆ.

IPL_Entry_Point

ವಿಭಾಗ