ಕನ್ನಡ ಸುದ್ದಿ  /  ಮನರಂಜನೆ  /  Bbk 10: ಇದೇ ಮೊದಲ ಭಾರಿಗೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್‌ ಕನ್ನಡ ಪ್ರಸಾರ; ದಿನದ 24 ಗಂಟೆಯೂ ಬಿಗ್‌ನ್ಯೂಸ್‌ ಅನ್‌ಸೀನ್‌ ಸ್ಟೋರಿಗಳ ರಸದೌತಣ

BBK 10: ಇದೇ ಮೊದಲ ಭಾರಿಗೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್‌ ಕನ್ನಡ ಪ್ರಸಾರ; ದಿನದ 24 ಗಂಟೆಯೂ ಬಿಗ್‌ನ್ಯೂಸ್‌ ಅನ್‌ಸೀನ್‌ ಸ್ಟೋರಿಗಳ ರಸದೌತಣ

Watch Bigg Boss Kannada TV Show in Jiocinema: ಇದೇ ಮೊದಲ ಬಾರಿಗೆ ಜಿಯೋಸಿನಿಮಾ ಒಟಿಟಿ/ಆಪ್‌ ಮೂಲಕ ಬಿಗ್‌ಬಾಸ್‌ ಕನ್ನಡ ವೀಕ್ಷಿಸಬಹುದು. ದಿನದ 24 ಗಂಟೆಯೂ ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಏನು ನಡೆಯುತ್ತದೆ ಎಂದು ನೋಡುವ ಅವಕಾಶ ದೊರಕಲಿದೆ ಎಂದು ಕಲರ್ಸ್‌ ಕನ್ನಡ ತಿಳಿಸಿದೆ.

BBK 10: ಇದೇ ಮೊದಲ ಭಾರಿಗೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್‌ ಕನ್ನಡ  ಪ್ರಸಾರ
BBK 10: ಇದೇ ಮೊದಲ ಭಾರಿಗೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್‌ ಕನ್ನಡ ಪ್ರಸಾರ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಕುರಿತು ಕಲರ್ಸ್‌ ಕನ್ನಡವು ಮಂಗಳವಾರ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಈ ಹಿಂದೆ ವೂಟ್‌ನಲ್ಲಿ ಬಿಗ್‌ಬಾಸ್‌ ವೀಕ್ಷಣೆಗೆ ಅವಕಾಶವಿತ್ತು. ಆದರೆ, ಇದೇ ಮೊದಲ ಬಾರಿಗೆ ಜಿಯೋಸಿನಿಮಾ ಒಟಿಟಿ/ಆಪ್‌ ಮೂಲಕ ಬಿಗ್‌ಬಾಸ್‌ ಕನ್ನಡ ವೀಕ್ಷಿಸಬಹುದು. ದಿನದ 24 ಗಂಟೆಯೂ ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಏನು ನಡೆಯುತ್ತದೆ ಎಂದು ನೋಡುವ ಅವಕಾಶ ದೊರಕಲಿದೆ ಎಂದು ಕಲರ್ಸ್‌ ಕನ್ನಡ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಬಿಗ್‌ಬಾಸ್‌ ಕನ್ನಡ ನೇರಪ್ರಸಾರ

‘ಬಿಗ್‌ಬಾಸ್‌ ಕನ್ನಡ’ ಹತ್ತನೇ ಆವೃತ್ತಿಯ ಕುರಿತು ಕುತೂಹಲ ಬೆಳೆಯುತ್ತಿರುವ ಹೊತ್ತಿನಲ್ಲಿಯೇ ಹಬ್ಬದ ಮನರಂಜನಾ ಮೆನ್ಯೂ, ಜಿಯೋ ಸಿನಿಮಾ ಮೂಲಕ ಇನ್ನಷ್ಟು ವೈವಿಧ್ಯಗೊಂಡಿದೆ. ಇದೇ ಮೊದಲ ಬಾರಿಗೆ ‘ಬಿಗ್‌ಬಾಸ್‌ ಕನ್ನಡ’ ಜಿಯೋಸಿನಿಮಾದಲ್ಲಿಯೂ ಪ್ರಸಾರವಾಗಲಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮನೆಯಲ್ಲಿ ಏನಾಗುತ್ತಿದೆ ಎಂಬುದರ ನೇರಪ್ರಸಾರವನ್ನು ವೀಕ್ಷಕರು 24 ಗಂಟೆ ಲೈವ್ ಚಾನಲ್‌ನಲ್ಲಿ ನೋಡಬಹುದಾಗಿದೆ ಎಂದು ಕಲರ್ಸ್‌ ಕನ್ನಡ ತಿಳಿಸಿದೆ.

ಅನ್‌ಸೀನ್‌ ಕಥೆಗಳನ್ನು ನೋಡಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ವೈವಿಧ್ಯದ ಎಕ್ಸ್‌ಕ್ಲ್ಯೂಸಿವ್‌ ಮತ್ತು ಅನ್‌ಸೀನ್‌ ಮನರಂಜನಾ ಕಂಟೆಂಟ್‌ಗಳು ಜಿಯೋಸಿನಿಮಾದಲ್ಲಿ ಇರಲಿವೆ. ‘ಬಿಗ್‌ ನ್ಯೂಸ್‌’, ‘ಅನ್‌ಸೀನ್‌ ಕಥೆಗಳು’, ‘ಜಿಯೋಸಿನಿಮಾ ಫನ್‌ ಫ್ರೈಡೇ’, ‘ಡೀಪ್ ಆಗಿ ನೋಡಿ…’ ಹೀಗೆ ಹಲವಾರು ರೂಪದಲ್ಲಿ, ಮನೆಯೊಳಗಿನ ಕುತೂಹಲಕಾರಿ ಘಟನಾವಳಿಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆ ಸಜ್ಜುಗೊಂಡಿದೆ. ಮನೆಯೊಳಗೆ ನಡೆಯುವ ನಾಟಕೀಯ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ‘ಲೈವ್ ಶಾರ್ಟ್‌’ ಇನ್ನೊಂದು ವಿಶೇಷ ಆಕರ್ಷಣೆಯಾಗಿದೆ.

ವೀಕ್ಷಕರಿಗೆ ಫನ್‌ ಕೂಡ ಇದೆ

"ಇದರ ಜೊತೆಜೊತೆಯಲ್ಲಿ ‘ವಾಚ್‌ ಆಂಡ್ ವಿನ್’, ‘ಮೀಮ್‌ ದ ಮೊಮೆಂಟ್‌’, ‘ಹೈಪ್‌ ಚಾಟ್‌’, ‘ವಿಡಿಯೊ ವಿಚಾರ್‍‌’ಗಳ ಮೂಲಕ ಬಿಗ್‌ಬಾಸ್‌ ಕನ್ನಡದ ಅಭಿಮಾನಿಗಳಿಗೆ, ಸಂವಾದ ನಡೆಸುವ ಅಪೂರ್ವ ಅವಕಾಶವನ್ನೂ ಕಲ್ಪಿಸಲಾಗಿದೆ. ಇಷ್ಟೇ ಅಲ್ಲ, ಇದೇ ಮೊದಲ ಬಾರಿಗೆ, ಟೀವಿಯಲ್ಲಿ ಷೋ ನೋಡಿ, ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ JioCinemaದಲ್ಲಿ ಉತ್ತರಿಸುವ ಮೂಲಕ ಪ್ರತಿದಿನವೂ ರೋಮಾಂಚಕಾರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನೂ ಪರಿಚಯಿಸಲಾಗಿದೆ. ಈ ಎಲ್ಲ ಸಂವಾದ ದಾರಿಗಳು ವೀಕ್ಷಕರ ಅನುಭವವನ್ನು ಇನ್ನಷ್ಟು ರೋಚಕಗೊಳಿಸುವುದರ ಜೊತೆಗೆ, ಮನೆಯೊಳಗೆ ತೆಗೆದುಕೊಳ್ಳಲಾಗುವ ಅತಿಮುಖ್ಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ, ತಮ್ಮಿಷ್ಟದ ಅಭ್ಯರ್ಥಿಯನ್ನು ಉಳಿಸುವ ಅಧಿಕಾರವನ್ನೂ ನೀಡಲಿವೆ" ಎಂದು ಕಲರ್ಸ್‌ ಕನ್ನಡ ತಿಳಿಸಿದೆ.

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಲಾಂಚ್ ಎಪಿಸೋಡ್ ಅಕ್ಟೊಬರ್ 8 ರ ಸಂಜೆ ಆರು ಗಂಟೆಗೆ ಮತ್ತು ನಂತರ ಪ್ರತಿದಿನ ರಾತ್ರಿ 9.30ಕ್ಕೆ. ಜೊತೆಗೆ ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ನ ಅನಿಯಮಿತ ಮನರಂಜನೆಯನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ಆನಂದಿಸಿ ಎಂದು ಕಲರ್ಸ್‌ ಕನ್ನಡವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

IPL_Entry_Point