ಕನ್ನಡ ಸುದ್ದಿ  /  Entertainment  /  Ott News Central Government Blocks 18 Streaming Platforms For Obscene, Pornographic Content Mnk

OTT Ban: ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡುತ್ತಿದ್ದ 18 ಒಟಿಟಿ ವೇದಿಕೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ

ಒಟಿಟಿ ವೇದಿಕೆ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಅಶ್ಲೀಲ ಮತ್ತು ನಗ್ನ ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದ 18 ಒಟಿಟಿಗಳು, ವೆಬ್‌ಸೈಟ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿಷೇಧ ಹೇರಿದೆ.

OTT Ban: ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡುತ್ತಿದ್ದ 18 ಒಟಿಟಿ ವೇದಿಕೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ
OTT Ban: ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡುತ್ತಿದ್ದ 18 ಒಟಿಟಿ ವೇದಿಕೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ

OTT Ban: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಒಟಿಟಿ ಮೂಲಕ ಅಶ್ಲೀಲ ಮತ್ತು ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿಗಳಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿಷೇಧ ಹೇರಿದೆ. ಬರೀ ಒಟಿಟಿ ವೇದಿಕೆಗಳಷ್ಟೇ ಅಲ್ಲದೆ, ಒಟಿಟಿ ವೇದಿಕೆಯ 19 ವೆಬ್‌ಸೈಟ್‌ಗಳು, 10 ಅಪ್ಲಿಕೇಷನ್‌ಗಳು, 57 ಸೋಷಿಯಲ್‌ ಮೀಡಿಯಾ ಖಾತೆಗಳನ್ನೂ ಬ್ಯಾನ್‌ ಮಾಡಿ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಸಚಿವಾಲಯಗಳು, ಮನರಂಜನೆ, ಮಹಿಳಾ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿನ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕವೇ ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ನಿಬಂಧನೆಗಳ ಅಡಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ನಿರ್ಧಾರವನ್ನು ಕೈಗೊಂಡಿದೆ.

ಯಾವೆಲ್ಲ ಒಟಿಟಿಗಳು ಬ್ಯಾನ್‌

ಮಾಹಿತಿ ತಂತ್ರಜ್ಞಾನ ಕಾಯಿದೆಯ 67 ಮತ್ತು 67ಎ, ಐಪಿಸಿಯ ಸೆಕ್ಷನ್ 292 ಮತ್ತು ಮಹಿಳೆಯರ ಆಕ್ಷೇಪಾರ್ಹ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986ರ ಸೆಕ್ಷನ್ 4 ಅಡಿಯಲ್ಲಿ ನಿರ್ಬಂಧಿಸಲಾಗಿದೆ. ಬೆಶರಮ್ಸ್‌, ಹಂಟರ್ಸ್, ಡ್ರೀಮ್ ಫಿಲಂಸ್‌, ಮೂಡ್ ಎಕ್ಸ್, ನಿಯಾನ್ ಎಕ್ಸ್, ಎಕ್ಸ್ಟ್ರಾ ಮೂಡ್, ವೂವಿ, ಯೆಸ್ಮಾ, ಅನ್‌ಕಟ್ ಅಡ್ಡಾ, ಟ್ರೈ ಫ್ಲಿಕ್ಸ್, ಎಕ್ಸ್ ಪ್ರೈಮ್, ನಿಯಾನ್ ಎಕ್ಸ್ ವಿಐಪಿ, ರ್ಯಾಬಿಟ್, ನ್ಯೂಫ್ಲಿಕ್ಸ್, ಮೊಜ್‌ ಫ್ಲಿಕ್ಸ್, ಹಾಟ್ ಶಾಟ್ಸ್ ವಿಐಪಿ, ಫುಗಿ, ಚಿಕೂಫ್ಲಿಕ್ಸ್ ಮತ್ತು ಪ್ರೈಮ್ ಪ್ಲೇ ಸೇರಿ ಹಲವು ಒಟಿಟಿ ವೇದಿಕೆಗಳಿಗೆ ಬ್ಯಾನ್‌ ಬಿಸಿ ಮುಟ್ಟಿದೆ.

ಈ ಒಟಿಟಿಗಳ ಕೆಲಸವೇನು?

"ಈ ಒಟಿಟಿಗಳ ಮೂಲಕ ಅಶ್ಲೀಲ, ಲೈಂಗಿಕತೆ ಮತ್ತು ಮಹಿಳೆಯರನ್ನು ಕೀಳಾಗಿ ಚಿತ್ರಿಕರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ವೇದಿಕೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಅಶ್ಲೀಲ ವಿಡಿಯೋಗಳು, ಅನೈತಿಕ ಸಂಬಂಧದಂಥ ವಿಡಿಯೋಗಳು ಮತ್ತು ಯುವತಿಯರ ನಗ್ನ ವಿಡಿಯೋಗಳನ್ನು ಪೋಸ್ಟ್‌ ಮಾಡಲಾಗುತ್ತಿತ್ತು. ಹಾಗಾಗಿ ಇವುಗಳನ್ನು ನಿಷೇಧಿಸಲಾಗಿದೆ. ಒಂದು ಅಪ್ಲಿಕೇಶನ್ 10 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳಾದರೆ, ಇತರ ಎರಡು ಅಪ್ಲಿಕೇಷನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ತಲಾ ಐದು ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ ಆಗಿದೆ" ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತಿಳಿಸಿದೆ.

ಸೋಷಿಯಲ್‌ ಮೀಡಿಯಾ ಖಾತೆಗಳೂ ಬ್ಯಾನ್‌

ಸೋಷಿಯಲ್‌ ಮೀಡಿಯಾಗಳಲ್ಲಿ ಅಶ್ಲೀಲ ಕಂಟೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದ12 ಫೇಸ್‌ಬುಕ್‌ ಖಾತೆಗಳು, 17 ಇನ್ಸ್ಟಾಗ್ರಾಮ್ ಖಾತೆಗಳು, 16 ಟ್ವಿಟರ್‌ ಖಾತೆಗಳು ಮತ್ತು 12 ಯೂಟ್ಯೂಬ್ ಖಾತೆಗಳನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ಬಂಧಿಸಿದೆ. ಇತ್ತ ನಿಷೇಧಿಸಲ್ಪಟ್ಟ ಅಪ್ಲಿಕೇಷನ್‌ಗಳಲ್ಲಿ ಏಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದರೆ, ಮೂರು ಆಪಲ್‌ ಸ್ಟೋರ್‌ನಲ್ಲಿದ್ದವು. ಒಟ್ಟಾರೆ 3.2 ಮಿಲಿಯನ್‌ ಜನ ಇವುಗಳನ್ನು ಫಾಲೋ ಮಾಡುತ್ತಿರುವ ಬಗ್ಗೆಯೂ ವರದಿ ಹೊರಬಿದ್ದಿದೆ.

IPL_Entry_Point