JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ
ಕನ್ನಡ ಸುದ್ದಿ  /  ಮನರಂಜನೆ  /  Jiocinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ

JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ

ಮೇ 12ರಿಂದ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳಿಗಾಗಿಯೇ ಒಂದು ಪ್ರತ್ಯೇಕ ಹಬ್ ಒಂದನ್ನು ಪರಿಚಯಿಸಲಾಗುತ್ತಿದೆ. ಭರ್ಜರಿ ಆಕ್ಷನ್ ಮತ್ತು ನಕ್ಕು ನಗಿಸುವ ಕಾಮಿಡಿಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ‘ಸ್ಪೈ ಎಕ್ಸ್ ಫ್ಯಾಮಿಲಿ’, ಶಾಲಾ ತರಗತಿ ಕೋಣೆಯ ತರಹೇವಾರಿ ತರಲೆಗಳನ್ನು ಕಟ್ಟಿಕೊಡುವ ;ಅಸಾಸಿನೇಷನ್ ಕ್ಲಾಸ್‌ರೂಮ್’ ಸೇರಿ ಹತ್ತು ಹಲವು ಶೋಗಳನ್ನು ವೀಕ್ಷಿಸಬಹುದಾಗಿದೆ.

JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ
JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ

JioCinema: ಇತ್ತೀಚೆಗೆ ಪರಿಚಯಿಸಲಾಗಿದ್ದ JioCinema Premium, ಯಶಸ್ವಿಯಾಗಿ ಜನರನ್ನು ಆಕರ್ಷಿಸುತ್ತಿರುವಾಗಲೇ, ಆ ಪ್ಲಾಟ್‌ಫಾರಂನಲ್ಲಿ ಹೊಸ ಹೊಸ ಮನರಂಜನಾ ವೈಶಿಷ್ಟ್ಯಗಳನ್ನು ತನ್ನ ಚಂದಾದಾರರಿಗೆ ನೀಡಲಾಗುತ್ತಿದೆ. ಇಂಥದ್ದೇ ಒಂದು ಹೊಸ ತಾಣವನ್ನು ಜಿಯೋಸಿನಿಮಾ ವೇದಿಕೆಯಲ್ಲಿ ರೂಪಿಸಲಾಗಿದ್ದು, ಜಗತ್ತಿನ ಹಲವು ಜನಪ್ರಿಯ ಮತ್ತು ಅತ್ಯದ್ಭುತ ಆನಿಮೇ ಷೋಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ಮೇ 12ರಿಂದ ಜಿಯೋಸಿನಿಮಾದಲ್ಲಿ ಆನಿಮೇ ಷೋಗಳಿಗಾಗಿಯೇ ಒಂದು ಪ್ರತ್ಯೇಕ ಹಬ್ ಒಂದನ್ನು ಪರಿಚಯಿಸಲಾಗುತ್ತಿದೆ. ಆನಿಮೇ ಪ್ರಿಯರಿಗೆ ಇದೊಂದು ಅದ್ಭುತ ತಾಣವಾಗುವುದರಲ್ಲಿ ಸಂಶಯವೇ ಇಲ್ಲ. ಜಾಗತಿಕವಾಗಿ ಸೂಪರ್ ಹಿಟ್ ಆಗಿರುವ ಆನಿಮೇ ‘ಡೆಮನ್ ಸ್ಲೇಯರ್’ನ ನಾಲ್ಕನೇ ಸೀಸನ್‌ನೊಂದಿಗೆ ಈ ಆನಿಮೇ ಹಬ್ಬ ಪ್ರಾರಂಭವಾಗಲಿದೆ. ಬಹುನಿರೀಕ್ಷಿತ ‘ಡೆಮನ್ ಸ್ಲೇಯರ್’ ಅನ್ನು ನೀವು ಮೇ 12ರಿಂದ ಜಿಯೋಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ. ಜಿಯೋಸಿನಿಮಾ ಪ್ರೀಮಿಯಮ್‌ನಲ್ಲಿ ಆನಿಮೇ ಹಬ್‌ ಅನ್ನು ಅನಿಯಮಿತವಾಗಿ ವೀಕ್ಷಿಸಬಹುದಾಗಿದ್ದು, ತಿಂಗಳಿಗೆ ಕೇವಲ 29ರೂ ಪಾವತಿಸುವುದರೊಂದಿಗೆ ಪ್ರೀಮಿಯಮ್ ಸದಸ್ಯತ್ವ ಪಡೆಯಬಹುದಾಗಿದೆ.

ಇನ್ನೂ ಏನೇನಿವೆ?

ಭರ್ಜರಿ ಆಕ್ಷನ್ ಮತ್ತು ನಕ್ಕು ನಗಿಸುವ ಕಾಮಿಡಿಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ‘ಸ್ಪೈ ಎಕ್ಸ್ ಫ್ಯಾಮಿಲಿ’, ಶಾಲಾ ತರಗತಿ ಕೋಣೆಯ ತರಹೇವಾರಿ ತರಲೆಗಳನ್ನು ಕಟ್ಟಿಕೊಡುವ; ಅಸಾಸಿನೇಷನ್ ಕ್ಲಾಸ್‌ರೂಮ್’ ಕೂಡ ಜಿಯೋಸಿನಿಮಾ ಆನಿಮೇ ಹಬ್‌ನಲ್ಲಿ ವೀಕ್ಷಿಸಬಹುದು. ಸೂಪರ್ ನ್ಯಾಚುರಲ್‌ ಕಥನಪ್ರಿಯರಿಗೆ ‘ಮೊಬ್‌ ಸೈಕೊ 100’, ಟೈಮ್ ಟ್ರಾವೆಲ್ ಕತೆಗಳನ್ನು ಇಷ್ಟಪಡುವವರಿಗೆ ‘ಟೊಕ್ಯೊ ರಿವೆಂಜರ್ಸ್’, ಫ್ಯಾಂಟಸಿ ಪ್ರೇಮಿಗಳಿಗೆ ‘ವೆಲ್‌ಕಮ್‌ ಟು ಡೆಮನ್ ಸ್ಕೂಲ್‌! ಲ್ರೂಮಾ-ಕುನ್’, ಸೈಕಾಲಾಜಿಕಲ್ ಥ್ರಿಲ್ಲರ್ ನೋಡಬೇಕು ಎಂಬ ಆಸೆ ಇರುವವರಿಗೆ, ‘ವೆಲ್‌ಕಮ್‌ ಟು ದ ಎಲೈಟ್’, ಮಿಸ್ಟರಿ ಕಥೆಯುಳ್ಳ, ‘ದ ಜುಂಜಿ ಟು ಮೆಕ್ಯಾನಿಕ್’ ಹೀಗೆ ಹತ್ತು ಹಲವು ವಿಶಿಷ್ಟ ಕಥನಪ್ರಕಾರದ ಆನಿಮೇ ಷೋಗಳು ಪ್ರೇಕ್ಷಕರನ್ನು ರಂಜಿಸಲು ಕಾದಿವೆ.

ಮುಂದೆ ಏನೇನು ಬರಲಿವೆ?

ಭಾರತದಲ್ಲಿ ಆನಿಮೇ ಪ್ರಿಯ ತಲೆಮಾರು ವೇಗವಾಗಿ ರೂಪುಗೊಳ್ಳುತ್ತಿರುವ ಕಾಲವಿದು. ಅವರಿಗಾಗಿ ಸಮಕಾಲೀನ ಸೂಪರ್ ಹಿಟ್‌ ಮತ್ತು ಸಾರ್ವಕಾಲಿಕ ಕ್ಲಾಸಿಕ್‌ ಷೋಗಳನ್ನು ನೋಡುವ ಅವಕಾಶವನ್ನು ಜಿಯೊ ಸಿನಿಮಾ ನೀಡುತ್ತಿದೆ. ಸದ್ಯಕ್ಕೆ ಜಿಯೋಸಿನಿಮಾ ಆನಿಮೇ ಹಬ್‌ನಲ್ಲಿ ಸಾಕಷ್ಟು ಷೋಗಳು ಲಭ್ಯವಿರುವುದಷ್ಟೇ ಅಲ್ಲ, ಹಲವು ಷೋಗಳು ಬಿಡುಗಡೆಯಾಗಲು ಸರತಿ ಸಾಲಲ್ಲಿ ನಿಂತಿವೆ ಕೂಡ! ಈ ಪ್ರತಿ ದಿನವೂ ಹೊಸ ಹೊಸ ಷೋಗಳು ಬಿಡುಗಡೆಯಾಗುತ್ತಿವೆ. ‘ಮೈ ನೆಕ್ಸ್ಟ್ ಲೈಫ್ ಆಸ್ ಅ ವಿಲನ್‌ನೆಸ್‌: ಆಲ್‌ ರೂಟ್ಸ್‌ ಲೀಡ್ ಟು ದೂಮ್!’, ‘ದ ಫ್ಯಾಮಿಲಿಯರ್ ಆಫ್ ಝಿರೊ’, ‘ಗೊಬ್ಲಿನ್ ಸ್ಲೇಯರ್’, ‘ಇನ್‌/ಸ್ಪೆಂಟರ್’ ಹೀಗೆ ಹಲವು ಷೋಗಳು ಬಿಡುಗಡೆಗೆ ರೆಡಿಯಾಗಿವೆ.

ಜಿಯೋ ಸಿನಿಮಾದಿಂದ ಆನಿಮೇ ಹಬ್‌

‘ಅತ್ಯುತ್ತಮ ಗುಣಮಟ್ಟದ ಮತ್ತು ವೈವಿಧ್ಯಮಯವಾದ ಆನಿಮೇ ಷೋಗಳನ್ನು ಪರಿಚಯಿಸುವ ಹಬ್‌ ಒಂದನ್ನು ಜಿಯೋಸಿನಿಮಾ ಇದೇ ಮೊದಲ ಬಾರಿಗೆ ಭಾರತದಾದ್ಯಂತ ತನ್ನ ಚಂದಾದಾರರಿಗೆ ಪರಿಚಯಿಸುತ್ತಿದೆ. ನಮ್ಮ ಹೊಸ ಪರಿಚಯವಾದ, ಆನಿಮೇ ಹಬ್‌ನಲ್ಲಿ ಆನಿಮೇ ಪ್ರೇಮಿಗಳನ್ನು ನಿರಂತರವಾಗಿ ರಂಜಿಸುವಂಥ ಹಲವು ಅತ್ಯುತ್ತಮ ಷೋಗಳಿವೆ. ಸಮಕಾಲೀನ ಜಾಗತಿಕ ಸೂಪರ್ ಹಿಟ್‌ ಆನಿಮೆ ಷೋಗಳ ಜೊತೆಗೆ ಸಾರ್ವಕಾಲಿಕ ಹಿಟ್‌ ಆದ ಹಲವು ಷೋಗಳನ್ನೂ ಅನಿಯಮಿತವಾಗಿ ವೀಕ್ಷಿಸುವ ಅವಕಾಶವಿದೆ. ಭಾರತದಲ್ಲಿನ ಆನಿಮೇ ಪ್ರೇಮಿಗಳಿಗೆ, ಜಿಯೋಸಿನಿಮಾ ಆನಿಮೇ ಹಬ್‌ ಒಂದು ಇದೊಂದು ನೆಚ್ಚಿನ ತಾಣವಾಗಿ ಬೆಳೆಯುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದು ಜಿಯೋಸಿನಿಮಾ ವಕ್ತಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆನಿಮೇ ಹಬ್‌ ಜೊತೆಯಲ್ಲಿ ಜಿಯೋಸಿನಿಮಾ ಪ್ರೀಮಿಯಮ್‌ನಲ್ಲಿ ಅಪರಿಮಿತ, ಜಾಗತಿಕ ಮತ್ತು ಪ್ರಾದೇಶಿಕ ಸಿನಿಮಾ, ವೆಬ್‌ಸಿರೀಸ್‌ಗಳು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿದ್ದು, ಮಕ್ಕಳು ಮತ್ತು ಮನೆಯವರೆಲ್ಲರೂ ವೀಕ್ಷಿಸುವಂಥ ಹಲವು ಪ್ರಕಾರಗಳ ಸಿನಿಮಾ, ಟೀವಿ ಷೋಗಳು, ವೆಬ್‌ಸಿರೀಸ್‌ಗಳು,ಲೈವ್‌ ಚಾನಲ್‌ಗಳು 4k ಗುಣಮಟ್ಟದಲ್ಲಿ ತಿಂಗಳಿಗೆ ಕೇವಲ 29 ರೂ ಪಾವತಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ 89 ರೂ ಪಾವತಿಸಿದರೆ ಏಕಕಾಲದಲ್ಲಿ ನಾಲ್ಕು ತೆರೆಗಳಲ್ಲಿ ಜಿಯೋಸಿನಿಮಾ ಪ್ರೀಮಿಯಮ್‌ ಷೋಗಳನ್ನು ವೀಕ್ಷಿಸಬಹುದಾಗಿದೆ.

Whats_app_banner