Double Ismart OTT Release: ಸದ್ದಿಲ್ಲದೆ ಒಟಿಟಿಗೆ ಬಂದ ರಾಮ್‌ ಪೋತಿನೇನಿ- ಪುರಿ ಜಗನ್ನಾಥ್‌ ಜೋಡಿಯ ಡಬಲ್ ಇಸ್ಮಾರ್ಟ್‌‌; ವೀಕ್ಷಣೆ ಎಲ್ಲಿ?-ott news double ismart movie ott release update when and where to watch ram pothineni starrer sci fi action thriller mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Double Ismart Ott Release: ಸದ್ದಿಲ್ಲದೆ ಒಟಿಟಿಗೆ ಬಂದ ರಾಮ್‌ ಪೋತಿನೇನಿ- ಪುರಿ ಜಗನ್ನಾಥ್‌ ಜೋಡಿಯ ಡಬಲ್ ಇಸ್ಮಾರ್ಟ್‌‌; ವೀಕ್ಷಣೆ ಎಲ್ಲಿ?

Double Ismart OTT Release: ಸದ್ದಿಲ್ಲದೆ ಒಟಿಟಿಗೆ ಬಂದ ರಾಮ್‌ ಪೋತಿನೇನಿ- ಪುರಿ ಜಗನ್ನಾಥ್‌ ಜೋಡಿಯ ಡಬಲ್ ಇಸ್ಮಾರ್ಟ್‌‌; ವೀಕ್ಷಣೆ ಎಲ್ಲಿ?

ಟಾಲಿವುಡ್‌ ನಿರ್ದೇಶಕ ಪುರಿ ಜಗನ್ನಾಥ್‌ ಮತ್ತು ರಾಮ್‌ ಪೋತಿನೇನಿ ಕಾಂಬಿನೇಷನ್‌ನ ಡಬಲ್‌ ಇಸ್ಮಾರ್ಟ್‌ ಸಿನಿಮಾ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರಗಳಲ್ಲಿ ನೀರಸ ಪ್ರದರ್ಶನ ಕಂಡಿದ್ದ ಈ ಚಿತ್ರ ಒಟಿಟಿಯಲ್ಲಿ ಹೇಗೆ ಪ್ರತಿಕ್ರಿಯೆ ಸಿಗಬಹುದೆಂದು ಕಾದು ನೋಡಬೇಕಿದೆ.

ಒಟಿಟಿಗೆ ಬಂದ ಡಬಲ್‌ ಇಸ್ಮಾರ್ಟ್‌
ಒಟಿಟಿಗೆ ಬಂದ ಡಬಲ್‌ ಇಸ್ಮಾರ್ಟ್‌

Double Ismart OTT Release: ಟಾಲಿವುಡ್‌ನ ಸ್ಟಾರ್‌ ನಿರ್ದೇಶಕ ಪುರಿ ಜಗನ್ನಾಥ್‌, ಲೈಗರ್‌ ಮೂಲಕ ಸೋಲಿನ ಸುಳಿಗೆ ಸಿಲುಕಿದ್ದರು. ಆ ಸೋಲಿನ ಬಳಿಕ ಅವರು ಮಾಡಿದ ಮತ್ತೊಂದು ಸಿನಿಮಾ ಅದೇ ಡಬಲ್‌ ಇಸ್ಮಾರ್ಟ್‌. ಈ ಹಿಂದೆ ಅಂದರೆ 2019ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್‌ ಶಂಕರ್‌ ಚಿತ್ರದ ಮುಂದುವರಿದ ಭಾಗವೇ ಈ ಡಬಲ್‌ ಇಸ್ಮಾರ್ಟ್‌. ಇತ್ತೀಚೆಗಷ್ಟೇ ತೆರೆಕಂಡಿದ್ದ ರಾಮ್‌ ಪೋತಿನೇನಿಯ ಈ ಸಿನಿಮಾ ಸಹ ಸೋತು ಸುಣ್ಣವಾಗಿತ್ತು. ಇದೀಗ ಇದೇ ಚಿತ್ರ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ.

ನಿರ್ದೇಶಕ ಪುರಿ ಜಗನ್ನಾಥ್‌ ಮತ್ತು ರಾಮ್‌ ಪೋತಿನೇನಿ ಡಬಲ್‌ ಇಸ್ಮಾರ್ಟ್‌ ಸಿನಿಮಾ ಮೂಲಕ ಶತಾಯಗತಾಯ ಗೆಲುವಿನ ಲಯಕ್ಕೆ ಮರಳಲೇಬೇಕು ಎಂಬ ಪ್ರಯತ್ನದಲ್ಲಿದ್ದರು. ಈ ಹಿಂದಿನ ಇಸ್ಮಾರ್ಟ್‌ ಶಂಕರ್‌ ಚಿತ್ರದ ಮುಂದುವರಿದ ಭಾಗವಾಗಿ ಮೂಡಿಬಂದಿದ್ದ ಡಬಲ್‌ ಇಸ್ಮಾರ್ಟ್‌, ಟೀಸರ್‌ ಮತ್ತು ಟ್ರೇಲರ್‌ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಹಾಡುಗಳಿಂದಲೂ ಮಾಡಿತ್ತು. ಆದರೆ, ಇದೇ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬಂದ ಬಳಿಕ ಮಾತ್ರ ನೆಗೆಟಿವ್‌ ರಿವ್ಯೂವ್‌ ಪಡೆಯಿತು.

ಆಗಸ್ಟ್‌ 15ರಂದು ಚಿತ್ರಮಂದಿರದಲ್ಲಿ..

ಪ್ರಮೋಷನ್‌ ವಿಚಾರದಲ್ಲಿ ಸಾಕಷ್ಟು ಹೈಪ್‌ ಕ್ರಿಯೆಟ್‌ ಮಾಡಿದ್ದ ಈ ಸಿನಿಮಾ, ಆಗಸ್ಟ್‌ 15ರಂದು ತೆರೆಗೆ ಬಂದಿತ್ತು. ರಾಮ್ ಜೊತೆಗೆ ಕಾವ್ಯ ಥಾಪರ್, ಸಂಜಯ್ ದತ್, ವಿಶು ರೆಡ್ಡಿ, ಬನಿ ಜೆ, ಶಾಯಾಜಿ ಶಿಂಧೆ, ಗೆಟಪ್ ಶ್ರೀನು ಸೇರಿದಂತೆ ಪ್ರಮುಖರು ಈ ಚಿತ್ರದಲ್ಲಿ ನಟಿಸಿದ್ದರು. ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಇದೀಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ.

ಯಾವ ಒಟಿಟಿಯಲ್ಲಿ ಡಬಲ್ ಇಸ್ಮಾರ್ಟ್ ?

ಗಳಿಕೆ ವಿಚಾರದಲ್ಲಿ ನಿರಸ ಪ್ರದರ್ಶನ ತೋರಿದ್ದ ಡಬಲ್ ಇಸ್ಮಾರ್ಟ್ ಸಿನಿಮಾ, ಒಟ್ಟಾರೆ 15ಕೋಟಿ ಕಲೆಕ್ಷನ್ ಮಾಡುವಷ್ಟರಲ್ಲಿ ಬಸವಳಿದಿತ್ತು. ಬಾಕ್ಸ್ ಆಫೀಸ್‌ನಲ್ಲಿ ಈ ಜೋಡಿಯ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿರಲಿಲ್ಲ. ಈ ನಡುವೆ ಇದೇ ಸಿನಿಮಾ ಸೆಪ್ಟೆಂಬರ್ 27 ರಂದು OTT ಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಯಾವುದೇ ಮುನ್ಸೂಚನೆ ನೀಡದೇ ಒಟಿಟಿಗೆ ಲಗ್ಗೆ ಇಟ್ಟಿದೆ.

ಪ್ರೈಂನಲ್ಲಿ ಡಬಲ್‌ ಇಸ್ಮಾರ್ಟ್‌

ಡಬಲ್ ಸ್ಮಾರ್ಟ್ ಮೂವಿ ಯಾವುದೇ ಅಧಿಕೃತ ಪ್ರಕಟಣೆಯಿಲ್ಲದೆ ಇಂದಿನಿಂದ (ಸೆಪ್ಟೆಂಬರ್ 5) ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ತೆಲುಗು ಜತೆಗೆ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್‌ ಆಗಿ ಬಿಡುಗಡೆ ಮಾಡಲಾಗಿದೆ. ಡಬಲ್‌ ಇಸ್ಮಾರ್ಟ್‌ ಚಿತ್ರವನ್ನು ಥಿಯೇಟರ್‌ಗಳಲ್ಲಿ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ಒಟಿಟಿಯಲ್ಲಿ ಈ ಚಿತ್ರವನ್ನು ನೋಡಿ ಆನಂದಿಸಬಹುದು. ಆದ್ರೆ, ಥಿಯೇಟರ್‌ನಲ್ಲಿ ನೆಗೆಟಿವ್ ಟಾಕ್ ಪಡೆದಿರುವ ಈ ಡಬಲ್ ಸ್ಮಾರ್ಟ್ ಸಿನಿಮಾಕ್ಕೆ ಒಟಿಟಿಯಲ್ಲಿ ಯಾವ ರೀತಿಯ ರೆಸ್ಪಾನ್ಸ್ ಸಿಗಬಹುದು ಎಂಬುದನ್ನು ಕಾದು ನೋಡಬೇಕಿದೆ. ಏತನ್ಮಧ್ಯೆ, ಅಮೆಜಾನ್‌ ಪ್ರೈಂ ಈ ಚಿತ್ರದ ಹಕ್ಕುಗಳನ್ನು 33 ಕೋಟಿಗೆ ಖರೀದಿಸಲಾಗಿದೆ ಎಂದು ವರದಿಯಾಗಿದೆ.

ಡಬಲ್ ಸ್ಮಾರ್ಟ್ ಹಿಂದಿ ಆವೃತ್ತಿ OTT

ಡಬಲ್ ಸ್ಮಾರ್ಟ್ ಹಿಂದಿ ಆವೃತ್ತಿಯ ಒಟಿಟಿ ಬಿಡುಗಡೆಯ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಇಂದು (ಸೆಪ್ಟೆಂಬರ್ 5) ಸೌತ್ ಭಾಷೆಗಳಲ್ಲಿ ಡಬಲ್ ಸ್ಮಾರ್ಟ್ ಚಿತ್ರ ಒಟಿಟಿಗೆ ಬಂದಿದ್ದು, ಕೆಲವೇ ದಿನಗಳಲ್ಲಿ ಹಿಂದಿ ಆವೃತ್ತಿಯೂ ಬಿಡುಗಡೆಯಾಗುವ ಸಾಧ್ಯತೆಯಿದೆ. ಡಬಲ್ ಸ್ಮಾರ್ಟ್‌ನ ಹಿಂದಿ ಆವೃತ್ತಿಯು ನೆಟ್‌ಫ್ಲಿಕ್ಸ್ ಅಥವಾ ಜೀ5ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.