OTT Movies: ಈ ವಾರ ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ ಕನ್ನಡಕ್ಕೆ ಡಬ್‌ ಆದ ಹಲವು ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?-ott news double ismart simbaa nindha to the fall guy latest ott kannada dubbed movies ott telugu films this week mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Movies: ಈ ವಾರ ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ ಕನ್ನಡಕ್ಕೆ ಡಬ್‌ ಆದ ಹಲವು ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

OTT Movies: ಈ ವಾರ ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ ಕನ್ನಡಕ್ಕೆ ಡಬ್‌ ಆದ ಹಲವು ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

OTT Dubbed Movies: ಈ ವಾರ ಏಳು ಸಿನಿಮಾಗಳು ಹಲವು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿಯಲಿ ಸ್ಟ್ರೀಮ್ ಆಗುತ್ತಿವೆ. ಅವುಗಳಲ್ಲಿ ಮೂರು ತೆಲುಗು ಸಿನಿಮಾಗಳಾದರೆ, ಉಳಿದ ನಾಲ್ಕು ಕನ್ನಡ ಅವತರಣಿಕೆಯಲ್ಲಿ ವೀಕ್ಷಕರಿಗೆ ನೋಡಲು ಸಿಗಲಿದೆ. ಇಲ್ಲಿದೆ ನೋಡಿ ವಿವರ.

ಈ ವಾರ ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ ಕನ್ನಡಕ್ಕೆ ಡಬ್‌ ಆದ ಹಲವು ಸಿನಿಮಾಗಳು ಈ ಪಟ್ಟಿಯಲ್ಲಿವೆ.
ಈ ವಾರ ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ ಕನ್ನಡಕ್ಕೆ ಡಬ್‌ ಆದ ಹಲವು ಸಿನಿಮಾಗಳು ಈ ಪಟ್ಟಿಯಲ್ಲಿವೆ.

OTT Dubbed Movies: ಈ ವಾರ ಒಟಿಟಿಯಲ್ಲಿ ಕನ್ನಡದ ಸಿನಿಮಾಗಳ ಜತೆಗೆ ಬೇರೆ ಬೇರೆ ಭಾಷೆಗಳ ಹಲವು ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಸದ್ದಿಲ್ಲದೆ ಬಂದ ಭೀಮ ಎಲ್ಲರನ್ನು ಸೆಳೆದಿದೆ. ಈ ಭೀಮನ ಜತೆಗೆ ಈ ವಾರ ಒಟಿಟಿಯಲ್ಲಿ ಹೊಸ ಮೂರು ತೆಲುಗು ಸಿನಿಮಾಗಳನ್ನೂ ವೀಕ್ಷಿಸಬಹುದು. ಡಬಲ್ ಇಸ್ಮಾರ್ಟ್ ಸಿನಿಮಾ ಇದ್ದಕ್ಕಿದ್ದಂತೆ OTT ಅಂಗಳ ಪ್ರವೇಶಿಸಿತು. ಇನ್ನೂ ಎರಡು ತೆಲುಗು ಸಿನಿಮಾಗಳು ಸ್ಟ್ರೀಮಿಂಗ್‌ಗೆ ಲಭ್ಯವಿವೆ. ಈ ನಡುವೆ ಕನ್ನಡ ಡಬ್ಬಿಂಗ್‌ನಲ್ಲಿ ಇನ್ನೂ ನಾಲ್ಕು ಪರಭಾಷೆ ಸಿನಿಮಾಗಳೂ ಸ್ಟ್ರೀಮ್ ಆಗುತ್ತಿವೆ.

ಡಬಲ್ ಇಸ್ಮಾರ್ಟ್ (ತೆಲುಗು)

ಪೂರಿ ಜಗನ್ನಾಥ್ ನಿರ್ದೇಶನದ ಮತ್ತು ರಾಮ್ ಪೋತಿನೇನಿ ನಾಯಕನಾಗಿ ನಟಿಸಿರುವ ಡಬಲ್ ಇಸ್ಮಾರ್ಟ್ ಈ ವಾರ ಸೆಪ್ಟೆಂಬರ್ 5 ರಂದು Amazon Prime Video OTTಯಲ್ಲಿ ಸ್ಟ್ರೀಮ್ ಆಗುತ್ತಿದೆ. ಮೂಲ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಆವೃತ್ತಿಗಳ ಜೊತೆಗೆ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲು ಲಭ್ಯವಿದೆ. ಈ ಆಕ್ಷನ್‌ ಡ್ರಾಮಾ ಡಬಲ್ ಇಸ್ಮಾರ್ಟ್ ಸಿನಿಮಾ ಆಗಸ್ಟ್ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಹೀನಾಯ ಸೋಲನುಭವಿಸಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೂರೇ ವಾರಗಳಲ್ಲಿ ಈ ಚಿತ್ರ OTT ಪ್ರವೇಶಿಸಿತು. ಈ ಚಿತ್ರವನ್ನು ಕನ್ನಡದಲ್ಲಿಯೂ ವೀಕ್ಷಿಸಬಹುದು.

ನಿಂದ (ತೆಲುಗು)

ವರುಣ್ ಸಂದೇಶ್ ಅಭಿನಯದ ನಿಂದ (nindha) ಈ ಶುಕ್ರವಾರ (ಸೆಪ್ಟೆಂಬರ್ 6) ETV ವಿನ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿದೆ. ರಾಜೇಶ್ ಜಗನ್ನಾಥನ್ ನಿರ್ದೇಶನದ ಈ ಇನ್ವೆಸ್ಟಿಗೇಷನ್‌ ಥ್ರಿಲ್ಲರ್ ಸಿನಿಮಾ ಜೂನ್ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿಂದ ಸಿನಿಮಾವನ್ನು ಈಗ ETV Win OTT ನಲ್ಲಿ ನೋಡಬಹುದು. ಇದು ಮೂಲ ತೆಲುಗಿನಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ.

ಸಿಂಬಾ

ಕ್ರೈಮ್ ಥ್ರಿಲ್ಲರ್ ಚಿತ್ರ 'ಸಿಂಬಾ' ಸೆಪ್ಟೆಂಬರ್ 6ರಂದು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಆಹಾ OTT ಗಳಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಚಿತ್ರದಲ್ಲಿ ಅನಸೂಯಾ, ಜಗಪತಿ ಬಾಬು, ಕಸ್ತೂರಿ ಮತ್ತು ದೇವಿ ಶ್ರೀನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಆಗಸ್ಟ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಒಂದು ತಿಂಗಳೊಳಗೆ, ಆಹಾ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಬಂದಿತು. ಇದೂ ಸಹ ಕೇವಲ ತೆಲುಗಿನಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದೆ.

ಡಬ್ಬಿಂಗ್‌ನಲ್ಲಿ ನಾಲ್ಕು ಸಿನಿಮಾಗಳು

ಅಡಿಯೋಸ್ ಅಮಿಗೋ: ಮಲಯಾಳಂ ಸಿನಿಮಾ ಆಡಿಯೋಸ್ ಅಮಿಗೋ ಸೆಪ್ಟೆಂಬರ್ 6 ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಕನ್ನಡದಲ್ಲೂ ಕೂಡ ಈ ಸಿನಿಮಾ ಲಭ್ಯವಿದೆ. ಈ ಚಿತ್ರದಲ್ಲಿ ಸೂರಜ್ ವೆಂಜರಮೂಡು ಮತ್ತು ಆಸಿಫ್ ಅಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನೀಲವೇಲಿಚಂ: ನೀಲವೇಲಿಚಂ ಸಿನಿಮಾ ಆಹಾ OTTಯಲ್ಲಿ ಸೆಪ್ಟೆಂಬರ್ 5ರಂದು ಸ್ಟ್ರೀಮ್ ಆಗುತ್ತಿದೆ. ಮಲಯಾಳಂನಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ನೀಲವೇಲಿಚಂ ಚಿತ್ರ ಭಾರ್ಗವಿ ನಿಲಯಂ ಎಂಬ ಹೆಸರಿನೊಂದಿಗೆ ತೆಲುಗಿಗೆ ಡಬ್ಬಿಂಗ್‌ ಆಗಿದೆ. ಭಾರ್ಗವಿ ನಿಲಯಂ ಚಿತ್ರದಲ್ಲಿ ಟೊವಿನೋ ಥಾಮಸ್, ರೀಮಾ ಕಳ್ಳಿಂಗಲ್ ಮತ್ತು ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಿಸಬೇಕೆನ್ನುವವರು ಪ್ರೈಂನಲ್ಲಿ ಈ ಚಿತ್ರ ಲಭ್ಯವಿದೆ.

ದಿ ಫಾಲ್ ಗೈ: ಹಾಲಿವುಡ್ ಆಕ್ಷನ್ ಕಾಮಿಡಿ ಚಿತ್ರ 'ದಿ ಫಾಲ್ ಗೈ' ಸೆಪ್ಟೆಂಬರ್ 3 ರಂದು ಸ್ಟ್ರೀಮಿಂಗ್ ಆಗುತ್ತಿದೆ. ಇಂಗ್ಲಿಷ್ ಜೊತೆಗೆ, ಈ ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದೆ. ಈ ವರ್ಷ ಮೇ ತಿಂಗಳಿನಲ್ಲಿ ಚಿತ್ರವು ಥಿಯೇಟರ್‌ಗೆ ಬಂದು ಪಾಸಿಟಿವ್ ಟಾಕ್ ಪಡೆದುಕೊಂಡಿದೆ.

ಸತ್ಯ: ಲವ್ ಫ್ಯಾಮಿಲಿ ಡ್ರಾಮಾ ಚಿತ್ರ ಸತ್ಯ ಸೆಪ್ಟೆಂಬರ್ 7ರಿಂದ ಆಹಾ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಹಮರೇಶ್, ಆಡುಕಳಂ ಮುರುಗದಾಸ್ ಮತ್ತು ಪ್ರಾರ್ಥನಾ ಸಂದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

mysore-dasara_Entry_Point