OTT Release: ಒಂದೇ ದಿನ ಒಟಿಟಿಗೆ 11 ಸಿನಿಮಾ, ವೆಬ್‌ಸರಣಿ ಆಗಮನ; ಇವುಗಳಲ್ಲಿ ಕೆಲವು ಬಹುನಿರೀಕ್ಷಿತ, ಕೆಲವು ಅನಿರೀಕ್ಷಿತ
Friday OTT releases: ಇಂದು ಫೆಬ್ರವರಿ 22 ಮತ್ತು ನಾಳೆ ಹಲವು ಹೊಸ ಸಿನಿಮಾಗಳು ಮತ್ತು ವೆಬ್‌ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಜಿಯೋಸಿನಿಮಾ ಮುಂತಾದ ಒಟಿಟಿಗಳಲ್ಲಿ ಸ್ಟ್ರೀಮಿಂಗ್ ಆಗುವ ಹೊಸ ಸಿನಿಮಾಗಳ ವಿವರ ಇಲ್ಲಿದೆ.

Friday OTT Streaming Movies: ಈ ವಾರ ಒಟಿಟಿಗೆ ಬರಲಿರುವ ಕೆಲವು ವೆಬ್ ಸೀರೀಸ್ ತುಂಬಾ ಆಸಕ್ತಿದಾಯಕವಾಗಿವೆ. ಒಂದೇ ದಿನ 11 ಸಿನಿಮಾಗಳು ಒಟಿಟಿಗೆ ಆಗಮಿಸುವುದು ವಿಶೇಷ. ಕೆಲವು ಸಿನಿಮಾ, ಸರಣಿ ಇಂದೇ ಆಗಮಿಸಲಿವೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಮಮ್ಮುಟ್ಟಿ ಅಭಿನಯದ ಭ್ರಮಯುಗಂ ಸಿನಿಮಾವಿದೆ. ಕನ್ನಡದಲ್ಲಿ ಹತ್ತು ಹಲವು ಸಿನಿಮಾಗಳು ಕಳೆದ ಒಂದೆರಡು ವಾರಗಳಲ್ಲಿ ಬಿಡುಗಡೆಯಾಗಿವೆ. ಇವುಗಳು ಚಿತ್ರಮಂದಿರದಿಂದ ಶೀಘ್ರದಲ್ಲಿ ಒಟಿಟಿಗೆ ಆಗಮಿಸಬಹುದು. ಸದ್ಯ ಇಂದು ರಾತ್ರಿ ಮತ್ತು ನಾಳೆ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳು, ವೆಬ್ ಸರಣಿಗಳು ಯಾವುವು ಎಂದು ನೋಡೋಣ.
ಅಮೆಜಾನ್ ಪ್ರೈಮ್ ವಿಡಿಯೋ
ವಿಂಚೆಸ್ಟರ್ಸ್ - ಫೆಬ್ರವರಿ 22
ಅಪಾರ್ಟ್ಮೆಂಟ್ 404 ಕೊರಿಯನ್ (ವೆಬ್ ಸರಣಿ) - ಫೆಬ್ರವರಿ 23
ಪೋಚರ್ ವೆಬ್ ಸರಣಿ)- ಫೆಬ್ರವರಿ 23
ದಿ ಸೆಕೆಂಡ್ ಬೆಸ್ಟ್ ಹಾಸ್ಪಿಟಲ್ ಇನ್ ಗ್ಯಾಲಾಕ್ಸಿ (ಕಾರ್ಟೂನ್ ಸರಣಿ) - ಫೆಬ್ರವರಿ 23
ನೆಟ್‌ಫ್ಲಿಕ್ಸ್ ಒಟಿಟಿ
ಅವತಾರ್ ಆಂಡ್ ಲಾಸ್ಟ್ ಏರ್ಬೆಂಡರ್ (ವೆಬ್ ಸರಣಿ) - ಫೆಬ್ರವರಿ 22
ಸೌತ್ ಪಾ (ಇಂಗ್ಲಿಷ್ ಚಲನಚಿತ್ರ)- ಫೆಬ್ರವರಿ 22
ತ್ರೂ ಮೈ ವಿಂಡೋ 3: ಲುಕಿಂಗ್ ಅಟ್ ಯು (ಸ್ಪ್ಯಾನಿಷ್ ಚಲನಚಿತ್ರ) - ಫೆಬ್ರವರಿ 23
ಮಿ ಕಲ್ಪಾ (ನೆಟ್‌ಫ್ಲಿಕ್ಸ್ ಚಲನಚಿತ್ರ) - ಫೆಬ್ರವರಿ 23
ಫಾರ್ಮುಲಾ 1: ಡ್ರೈವ್ ಟು ಸರ್ವೈವ್ ಸೀಸನ್ 6 (ಸಾಕ್ಷ್ಯಚಿತ್ರ ಸರಣಿ) - ಫೆಬ್ರವರಿ 23
ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ದಿ ಬರೀಡ್ ಟ್ರುತ್ (ಸಾಕ್ಷ್ಯಚಿತ್ರ ಸರಣಿ) - ಫೆಬ್ರವರಿ 23
ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್- ಫೆಬ್ರವರಿ 23
ಮಾರ್ಷಲ್ ದಿ ಶೆಲ್ ವಿತ್ ಶೂಸ್ - ಫೆಬ್ರವರಿ 24
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ
ವಿಲ್ ಟ್ರೆಂಟ್ ಸೀಸನ್ 2 (ಇಂಗ್ಲಿಷ್ ಚಲನಚಿತ್ರ) - ಫೆಬ್ರವರಿ 21
ಸ್ಟಾರ್ ವಾರ್ಸ್: ದಿ ಬ್ಯಾಡ್ ಬ್ಯಾಚ್ (ಇಂಗ್ಲಿಷ್ ಅನಿಮೇಟೆಡ್ ಚಲನಚಿತ್ರ) - ಫೆಬ್ರವರಿ 21
ಮಲೈಕೊಟ್ಟೈ ವಲಿಬನ್ (ಮಲಯಾಳಂ ಚಲನಚಿತ್ರ)- ಫೆಬ್ರವರಿ 23
ಸಮ್ಮರ್ ಹೌಸ್ ಸೀಸನ್ 8 (ವೆಬ್ ಸೀರೀಸ್) - ಜಿಯೋ ಸಿನಿಮಾ - ಫೆಬ್ರವರಿ 23
ಸಾ ಎಕ್ಸ್ (ಅಮೆರಿಕನ್ ಹಾರರ್ ಚಲನಚಿತ್ರ) - ಲಯನ್ಸ್ ಗೇಟ್ ಪ್ಲೇ - ಫೆಬ್ರವರಿ 23
ಈ ವಾರ ಒಟಿಟಿಯಲ್ಲಿ 21 ಸಿನಿಮಾಗಳು ಬಿಡುಗಡೆಯಾಗಲಿದ್ದು, ಶುಕ್ರವಾರ (ಫೆಬ್ರವರಿ 23) 11 ಸಿನಿಮಾಗಳು ಸ್ಟ್ರೀಮಿಂಗ್‌ಗೆ ಸಿದ್ಧವಾಗಿವೆ. ಉಳಿದವು ಈಗಾಗಲೇ ಬಿಡುಗಡೆಯಾಗಿದೆ. ಹಾಗೆಯೇ ಇಂದು ಅಂದರೆ ಗುರುವಾರ (ಫೆಬ್ರವರಿ 22) 3 ಸಿನಿಮಾಗಳು ರಿಲೀಸ್ ಆಗಿವೆ. ಈ ವಾರ ಪೋಚರ್ ವೆಬ್ ಸೀರೀಸ್, ದಿ ಇಂದ್ರಾಣಿ ಮುಖರ್ಜಿ ಸ್ಟೋರಿ ದಿ ಬರೀಡ್ ಟ್ರುತ್ ಸಾಕ್ಷ್ಯಚಿತ್ರ ಸರಣಿ, ಮಲೈಕೋಟ್ಟೈ ವಲಿಬನ್ ಮೂವೀ, ಅವತಾರ್ ಆಂಡ್ ಲಾಸ್ಟ್ ಏರ್‌ಬೆಂಡರ್ ಸರಣಿಗಳು ಆಸಕ್ತಿದಾಯಕವಾಗಿವೆ. ಎಲ್ಲ ಗಮನ ಇವುಗಳ ಮೇಲೆಯೇ ಇರುವ ಸಾಧ್ಯತೆ ಇದೆ.
ವಾರಾಂತ್ಯ ಬಂದಿರುವುದರಿಂದ ಸಾಕಷ್ಟು ಜನರು ಒಟಿಟಿಯಲ್ಲಿ ಯಾವುದು ಹೊಸ ಸಿನಿಮಾ, ವೆಬ್ ಸರಣಿ ಇದೆ ಎಂದು ಕುತೂಹಲದಿಂದ ನೋಡುತ್ತಾ ಇರುತ್ತಾರೆ. ಕೆಲವೊಂದು ಸಿನಿಮಾಗಳು ಅನಿರೀಕ್ಷಿತವಾಗಿ ಒಟಿಟಿಯಲ್ಲಿ ಕಂಡಾಗ ಖುಷಿಯಾಗಬಹುದು. ಮೊನ್ನೆ ಥಿಯೇಟರ್‌ನಲ್ಲಿತ್ತು, ಇಂದು ಒಟಿಟಿಯಲ್ಲಿದೆ ಎಂದು ಖುಷಿಯಿಂದ ನೋಡಬಹುದು.
