ಕನ್ನಡ ಸುದ್ದಿ  /  Entertainment  /  Ott News Friday Ott Releases March 29, 2024 List Netflix Amazon Prime Video Disney Plus Hotstar Lionsgate Play Etc Pcp

Friday OTT releases: ಈ ವಾರ ಒಟಿಟಿಯಲ್ಲಿ ಹಲವು ಹೊಸ ಸಿನಿಮಾ ಸರಣಿ ಬಿಡುಗಡೆ; ಇನ್‌ಸ್ಪೆಕ್ಟರ್‌ ರಿಷಿಯಿಂದ ಹಾರ್ಟ್‌ ಆಫ್‌ ಹಂಟರ್‌ವರೆಗೆ

March 29 Friday OTT releases: ಈ ವಾರ ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌, ಲಯನ್ಸ್‌ಗೇಟ್‌ ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಹೊಸ 11 ಸಿನಿಮಾ- ಶೋಗಳು ಬಿಡುಗಡೆಯಾಗುತ್ತಿವೆ. ಇನ್‌ಸ್ಪೆಕ್ಟರ್‌ ರಿಷಿ, ಗೋಡ್ಜಿಲ್ಲಾ ಎಕ್ಸ್‌ ಕಾಂಗ್‌ ಸೇರಿದಂತೆ ವಿವಿಧ ಸಿನಿಮಾ, ಸೀರಿಸ್‌ಗಳು ರಿಲೀಸ್‌ ಆಗುತ್ತಿವೆ.

Friday OTT releases: ಈ ವಾರ ಒಟಿಟಿಯಲ್ಲಿ ಹಲವು ಹೊಸ ಸಿನಿಮಾ ಸರಣಿ ಬಿಡುಗಡೆ
Friday OTT releases: ಈ ವಾರ ಒಟಿಟಿಯಲ್ಲಿ ಹಲವು ಹೊಸ ಸಿನಿಮಾ ಸರಣಿ ಬಿಡುಗಡೆ

ಈ ವಾರ ಕನ್ನಡದಲ್ಲಿ ಯುವ, ಮಲಯಾಳಂನಲ್ಲಿ ಆಡುಜೀವಿತಂ ಮುಂತಾದ ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ. ಇದೇ ಸಮಯದಲ್ಲಿ ಒಟಿಟಿಯಲ್ಲಿ ಯಾವೆಲ್ಲ ಹೊಸ ಸಿನಿಮಾ, ವೆಬ್‌ ಸೀರಿಸ್‌ಗಳು ಬಿಡುಗಡೆಯಾಗುತ್ತಿವೆ ಎಂದು ಒಟಿಟಿ ಪ್ರಿಯರು ಯೋಚಿಸುತ್ತಿರಬಹುದು. ಈ ತಿಂಗಳಾಂತ್ಯದಲ್ಲಿ ಹಲವು ಪ್ರಮುಖ ಸಿನಿಮಾಗಳು, ವೆಬ್‌ ಸರಣಿಗಳು ಅಮೆಜಾನ್‌ ಪ್ರೈಮ್‌ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌, ಲಯನ್ಸ್‌ಗೇಟ್‌ ಪ್ಲೇ ಮುಂತಾದ ಒಟಿಟಿಗಳಲ್ಲಿ ರಿಲೀಸ್‌ ಆಗುತ್ತಿವೆ. ಸದ್ಯ ಕನ್ನಡದ ಯಾವ ಸಿನಿಮಾಗಳು ಮಾರ್ಚ್‌ 29ರಂದು ರಿಲೀಸ್‌ ಆಗುತ್ತಿವೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಬಹುತೇಕ ಕನ್ನಡ ಸಿನಿಮಾಗಳು ಸದ್ದಿಲ್ಲದೆ ಒಟಿಟಿಯೊಳಗೆ ಪ್ರವೇಶಿಸುತ್ತಿರುವುದು ಇತ್ತೀಚಿನ ಬೆಳವಣಿಗೆ. ಒಟಿಟಿಯಲ್ಲಿ ರಿಲೀಸ್‌ ಮಾಡ್ತಿವಿ ಎಂಬ ಘೋಷಣೆ ಹೊರಬಿದ್ದರೆ ಥಿಯೇಟರ್‌ಗೆ ಬರುವವರ ಸಂಖ್ಯೆ ಕಡಿಮೆಯಾಗಬಹುದು ಎನ್ನುವ ಆತಂಕ ಇದರ ಹಿಂದಿದೆ. ಇರಲಿ, ಈ ವಾರ ಯಾವೆಲ್ಲ ಹೊಸ ಸಿನಿಮಾ- ವೆಬ್‌ ಸರಣಿಗಳು ರಿಲೀಸ್‌ ಆಗುತ್ತಿವೆ ಎಂದು ತಿಳಿಯೋಣ.

ಇನ್‌ಸ್ಪೆಕ್ಟರ್‌ ರಿಷಿ ಒಟಿಟಿ ಬಿಡುಗಡೆ ದಿನಾಂಕ

ತಮಿಳಿನ ಇನ್‌ಸ್ಪೆಕ್ಟರ್‌ ರಿಷಿಯು ಇದೇ ಮಾರ್ಚ್‌ 29ರಿಂದ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಇದನ್ನು ಕನ್ನಡ ಭಾಷೆಯಲ್ಲೂ ವೀಕ್ಷಿಸಲು ಅವಕಾಶವಿದೆ. ಹೌದು, ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಇನ್‌ಸ್ಪೆಕ್ಟರ್‌ ರಿಷಿ ವೆಬ್‌ ಸರಣಿ ಬಿಡುಗಡೆಯಾಗಲಿದೆ. ಈ ಸರಣಿಯನ್ನು ನಂದಿನಿ ಜೆಎಸ್ ನಿರ್ದೇಶಿಸಿದ್ದಾರೆ. ಮೇಕ್ ಬಿಲೀವ್ ಪ್ರೊಡಕ್ಷನ್ಸ್‌ನಲ್ಲಿ ಸುಖ್ ದೇವ್ ಲಾಹಿರಿ ನಿರ್ಮಿಸಿದ್ದಾರೆ.

ಮದು (MADU)

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಮದು ಎಂಬ ಸ್ಪೂರ್ತಿದಾಯಕ ಡಾಕ್ಯುಮೆಂಟರಿ ಬಿಡುಗಡೆಯಾಗಲಿದೆ. ಇಂಗ್ಲೆಂಡ್‌ನ ಪ್ರತಿಷ್ಠಿತ ಸ್ಕೂಲ್‌ಗೆ ಹೋಗುವ 12 ವರ್ಷ ವಯಸ್ಸಿನ ನೈಜೀರಿಯಾ ಹುಡುಗನ ಕಥೆಯಿದು. ಇನ್‌ಸ್ಪಿರಿಷೇನಲ್‌ ಸ್ಟೋರಿ ನೋಡಲು ಬಯಸುವವರು ಮಿಸ್‌ ಮಾಡದೆ ನೋಡಬಹುದಾದ ಸಿನಿಮಾವಿದು.

ಗೋಡ್ಜಿಲ್ಲಾ ಎಕ್ಸ್‌ ಕಾಂಗ್‌: ದಿ ನ್ಯೂ ಎಂಪೈರ್‌

ಇದು ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾವಲ್ಲ. ಇದು ಇದೇ ಮಾರ್ಚ್‌ 29ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾ. ಗೋಡ್ಜಿಲ್ಲಾ ಸಾಹಸ ಸಿನಿಮಾ ಪ್ರಿಯರು ನೋಡಬಹುದು.

ದಿ ವೇಜಸ್‌ ಆಫ್‌ ಫಿಯರ್‌

ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಸಿನಿಮಾ. ಜೂಲಿಯನ್‌ ಲೆಕ್ಲೆರಿಕ್‌ ನಿರ್ದೇಶನದ ಸಿನಿಮಾವು ಥ್ರಿಲ್ಲರ್‌ ಕೆಟಗರಿಯಲ್ಲಿ ಆಗಮಿಸಿ ಜನಮೆಚ್ಚುಗೆ ಪಡೆದಿದೆ. ಭೂಮಿಯನ್ನು ಭಯಾನಕ ಸ್ಪೋಟದಿಂದ ರಕ್ಷಿಸುವ ಸಲುವಾಗಿ ಎರಡು ಟ್ರಕ್ಸ್‌ನಲ್ಲಿ ನೈಟ್ರೊಗ್ಲಿಸರಿನ್‌ ತುಂಬಿಕೊಂಡು ಸಾಗುವ ತಂಡದ ಕಥೆಯಿದು.

ಪಾಟ್ನಾ ಶುಕುಲಾ

ಇದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಈ ವಾರ ಮಾರ್ಚ್‌ 29ರಂದು ರಿಲೀಸ್‌ ಆಗಲಿದೆ.

ಹಾರ್ಟ್‌ ಆಫ್‌ ಹಂಟರ್

ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಲಿದೆ.

ಮೆಮೊರಿ

ಲಯನ್ಸ್‌ಗೇಟ್‌ ಪ್ಲೇ ಒಟಿಟಿಯಲ್ಲಿ ಮಾರ್ಚ್‌ 29ರಿಂದ ವೀಕ್ಷಿಸಬಹುದು.

ದಿ ಬ್ಯೂಟಿಫುಲ್‌ ಗೇಮ್‌

ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಕ್ರ್ಯೂ

ತಬು, ಕರೀನಾ ಕಪೂರ್‌, ಕೃತಿ ಸನನ್‌ ನಟನೆಯ ಈ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದೆ.

ಯುವ

ಕನ್ನಡದ ಬಹುನಿರೀಕ್ಷಿತ ಸಿನಿಮಾ ಯುವ ಚಿತ್ರಮಂದಿರಗಳಲ್ಲಿ ಮಾರ್ಚ್‌ 29ರಂದು ರಿಲೀಸ್‌ ಆಗಲಿದೆ.