ಕನ್ನಡ ಸುದ್ದಿ  /  ಮನರಂಜನೆ  /  Ott News: ಈ ವಾರಾಂತ್ಯ ಒಟಿಟಿಯಲ್ಲಿ ಸಿನಿಮಾ ಪ್ರಿಯರಿಗೆ ರಸದೌತಣ; ಯಾವೆಲ್ಲ ಸಿನಿಮಾ, ವೆಬ್‌ ಸಿರೀಸ್‌ಗಳು ಬಿಡುಗಡೆ?

OTT News: ಈ ವಾರಾಂತ್ಯ ಒಟಿಟಿಯಲ್ಲಿ ಸಿನಿಮಾ ಪ್ರಿಯರಿಗೆ ರಸದೌತಣ; ಯಾವೆಲ್ಲ ಸಿನಿಮಾ, ವೆಬ್‌ ಸಿರೀಸ್‌ಗಳು ಬಿಡುಗಡೆ?

ಈ ವಾರ ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿ ಅಂಗಳಕ್ಕೆ ಬಂದು ನಿಂತಿವೆ. ಯಾವೆಲ್ಲ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ರಿಲೀಸ್‌ ಆಗಲಿವೆ ಎಂಬ ಮಾಹಿತಿ ಇಲ್ಲಿದೆ.

OTT News: ಈ ವಾರಾಂತ್ಯ ಒಟಿಟಿಯಲ್ಲಿ ಸಿನಿಮಾ ಪ್ರಿಯರಿಗೆ ರಸದೌತಣ; ಯಾವೆಲ್ಲ ಸಿನಿಮಾ, ವೆಬ್‌ ಸಿರೀಸ್‌ಗಳು ಬಿಡುಗಡೆ?
OTT News: ಈ ವಾರಾಂತ್ಯ ಒಟಿಟಿಯಲ್ಲಿ ಸಿನಿಮಾ ಪ್ರಿಯರಿಗೆ ರಸದೌತಣ; ಯಾವೆಲ್ಲ ಸಿನಿಮಾ, ವೆಬ್‌ ಸಿರೀಸ್‌ಗಳು ಬಿಡುಗಡೆ?

Weekend OTT Releases: ಒಟಿಟಿಯಲ್ಲಿ ಈ ವಾರಾಂತ್ಯ ಸಿನಿಮಾ ಪ್ರಿಯರಿಗೆ ರಸದೌತಣವೇ ಸಿಗಲಿದೆ. ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಈ ವಾರ ಒಟಿಟಿ ಅಂಗಳಕ್ಕೆ ಬಂದು ನಿಂತಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಹಾಟ್‌ಸ್ಟಾರ್‌ ಒಟಿಟಿಯಲ್ಲಿ ವೆರೈಟಿ ವೆರೈಟಿ ಸಿನಿಮಾ ಮತ್ತು ವೆಬ್‌ ಸರಣಿಗಳು ಬಿಡುಗಡೆ ಆಗಿವೆ. ಹಾಗಾದರೆ, ಯಾವೆಲ್ಲ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ರಿಲೀಸ್‌ ಆಗಿವೆ? ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

ಯಕ್ಷಿಣಿ ವೆಬ್ ಸರಣಿ - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

ಹಾರರ್ ಥ್ರಿಲ್ಲರ್ ವೆಬ್ ಸೀರೀಸ್ ಯಕ್ಷಿಣಿ ಶುಕ್ರವಾರ (ಜೂನ್ 14) ಒಟಿಟಿಗೆ ಬಂದಿದೆ. ಈ ಸರಣಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಪರುವು ವೆಬ್ ಸರಣಿ - ಜೀ5 ಒಟಿಟಿ

ಪರುವು ಎಂಬುದು ಚಿರಂಜೀವಿ ಪುತ್ರಿ ಸುಶ್ಮಿತಾ ನಿರ್ಮಿಸಿರುವ ವೆಬ್ ಸರಣಿಯಾಗಿದೆ. ನಿವೇದಾ ಪೇತುರಾಜ್ ಅಭಿನಯದ ಈ ಸಿರೀಸ್‌ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಶುಕ್ರವಾರದಿಂದ (ಜೂನ್ 14) ಸರಣಿ ಲಭ್ಯವಿದೆ.

ಗ್ಯಾಂಗ್ಸ್ ಆಫ್ ಗೋದಾವರಿ - ನೆಟ್‌ಫ್ಲಿಕ್ಸ್

ವಿಶ್ವಕ್‌ ಸೇನ್ ಅಭಿನಯದ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರ ಎರಡು ವಾರಗಳಲ್ಲಿ ಒಟಿಟಿಗೆ ಬಂದಿದೆ. ಮೇ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯ್ತು. ಇದೀಗ ಶುಕ್ರವಾರದಿಂದ (ಜೂನ್ 14) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಗಾಂತ್‌ ವೆಬ್ ಸರಣಿ - ಜಿಯೋ ಸಿನಿಮಾ

ಗಾಂತ್‌  ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಜಿಯೋ ಸಿನಿಮಾದಲ್ಲಿ ಈ ಸಿರೀಸ್‌ ವೀಕ್ಷಣೆಗೆ ಲಭ್ಯವಿದೆ. ಈ ಸರಣಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ, ಮನೋವೈದ್ಯನ ಜತೆ ಸೇರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣವನ್ನು ಹೇಗೆ ಬೇಧಿಸುತ್ತಾನೆ ಎಂಬುದೇ ಕಥೆ.

ಮಹಾರಾಜ್ - ನೆಟ್‌ಫ್ಲಿಕ್ಸ್

ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ ಚಿತ್ರ ಮಹಾರಾಜ್. ಇದು ಅವರ ಮೊದಲ ಚಿತ್ರ. ಈ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದೆ. 19ನೇ ಶತಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ವೀರ ಪತ್ರಕರ್ತನೊಬ್ಬನ ಕಥೆ ಈ ಚಿತ್ರದ ಹೈಲೈಟ್.

ಲವ್ ಕೀ ಅರೇಂಜ್ ಮ್ಯಾರೇಜ್ - ಜೀ5 ಒಟಿಟಿ

ಲವ್ ಕಿ ಅರೇಂಜ್ ಮ್ಯಾರೇಜ್ ಒಂದು ರೊಮ್ಯಾಂಟಿಕ್ ಹಾಸ್ಯ ಸಿನಿಮಾ. ಈ ಚಿತ್ರದಲ್ಲಿ ಅನ್ನೂ ಕಪೂರ್, ಸುಪ್ರಿಯಾ ಪಾಠಕ್, ರಾಜಪಾಲ್ ಯಾದವ್ ಮುಂತಾದ ಹಿರಿಯ ನಟರು ನಟಿಸಿದ್ದಾರೆ. ಈ ಸಿನಿಮಾ ಜೀ5 ಒಟಿಟಿಯಲ್ಲಿ ಲಭ್ಯವಿದೆ.

ಡಿಯರ್‌ ನಾನ್ನ- ಆಹಾ ಒಟಿಟಿ

ಚೈತನ್ಯ ರಾವ್ ಅಭಿನಯದ ಡಿಯರ್ ನಾನ್ನ ಶುಕ್ರವಾರದಿಂದ (ಜೂನ್ 14) ಆಹಾ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಇದೇ ಭಾನುವಾರ (ಜೂನ್ 16) ಅಪ್ಪಂದಿರ ದಿನ ಹಾಗಾಗಿ ಈ ಸಿನಿಮಾವನ್ನು ಮಿಸ್ ಮಾಡದೇ ನೋಡಬಹುದು.

ಪಾರಿಜಾತ ಪರ್ವಂ - ಆಹಾ ಒಟಿಟಿ

ಚೈತನ್ಯರಾವ್ ಅಭಿನಯದ ಮತ್ತೊಂದು ಚಿತ್ರ ಪಾರಿಜಾತಪರ್ವಂ. ಕಳೆದ ಬುಧವಾರದಿಂದ (ಜೂನ್ 12) ಆಹಾ ಒಟಿಟಿಯಲ್ಲಿ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಈ ಕ್ರೈಂ ಕಾಮಿಡಿ ಸಿನಿಮಾ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.