ಕನ್ನಡ ಸುದ್ದಿ  /  ಮನರಂಜನೆ  /  Ott Movies: ಗುರುವಾಯೂರ್ ಅಂಬಲನಡಯಿಲ್‌ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಇದು ಪೃಥ್ವಿರಾಜ್‌ ಸುಕುಮಾರನ್‌ ಸಿನಿಮಾ

OTT Movies: ಗುರುವಾಯೂರ್ ಅಂಬಲನಡಯಿಲ್‌ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಇದು ಪೃಥ್ವಿರಾಜ್‌ ಸುಕುಮಾರನ್‌ ಸಿನಿಮಾ

Guruvayoor Ambalanadayil OTT Release Date: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಗುರುವಾಯೂರ್ ಅಂಬಲನಡಯಿಲ್‌ (ಗುರುವಾಯೂರಂಬಲ ನಡಯಿಲ್‌) ಸಿನಿಮಾವನ್ನು ಮನೆಯಲ್ಲೇ ನೋಡಲು ಬಯಸುವವರಿಗೆ ಈ ಸಿನಿಮಾದ ಒಟಿಟಿ ಬಿಡುಗಡೆ, ಪಾತ್ರವರ್ಗ, ಕಥೆ, ಟ್ರೇಲರ್‌ ಇತ್ಯಾದಿ ವಿವರ ಇಲ್ಲಿದೆ.

ಗುರುವಾಯೂರ್ ಅಂಬಲನಡಯಿಲ್‌ ಒಟಿಟಿ ಬಿಡುಗಡೆ ದಿನಾಂಕ
ಗುರುವಾಯೂರ್ ಅಂಬಲನಡಯಿಲ್‌ ಒಟಿಟಿ ಬಿಡುಗಡೆ ದಿನಾಂಕ

Guruvayoor Ambalanadayil OTT Release Date: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಗುರುವಾಯೂರ್ ಅಂಬಲನಡಯಿಲ್‌ ಸಿನಿಮಾವನ್ನು ಸಾಕಷ್ಟು ಜನರಿಗೆ ಥಿಯೇಟರ್‌ನಲ್ಲಿ ನೋಡಲು ಸಾಧ್ಯವಾಗದೆ ಹೋಗಿರಬಹುದು. ವಿಪಿನ್ ದಾಸ್ ನಿರ್ದೇಶನದ ಪೃಥ್ವಿರಾಜ್ ಸುಕುಮಾರನ್ ಮತ್ತು ಬೇಸಿಲ್ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕುತೂಹಲದಿಂದ ಕಾಯುತ್ತಿರುವ ಹಾಸ್ಯ-ನಾಟಕ 'ಗುರುವಾಯೂರ್ ಅಂಬಲನಡಯಿಲ್‌' ಕೆಲವು ದಿನಗಳ ಹಿಂದಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೂಸು ಹುಟ್ಟುವ ಮುನ್ನವೇ... ಗಾದೆಯಂತೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುವ ಮೊದಲೇ ಸಾಕಷ್ಟು ಜನರು ಇದು ಒಟಿಟಿಗೆ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದರು. ಕಳೆದ ವಾರ ಚಿತ್ರಮಂದಿರಗಳಲ್ಲಿ ರಿಲೀಸ್‌ ಆದ ಬಳಿಕ ಈ ಸಿನಿಮಾ ಒಟಿಟಿಗೆ ಯಾವಾಗ ಆಗಮಿಸುತ್ತದೆ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಈ ಮಲಯಾಳಂ ಸಿನಿಮಾವನ್ನು ಸಾಕಷ್ಟು ಜನರಿಗೆ ಥಿಯೇಟರ್‌ನಲ್ಲಿ ನೋಡಲು ಸಾಧ್ಯವಾಗದೆ ಇರಬಹುದು. ಬೆಂಗಳೂರು, ಕೇರಳ ಹೊರತುಪಡಿಸಿ ಕೆಲವೊಂದು ಕಡೆಗಳ ಥಿಯೇಟರ್‌ನಲ್ಲಿ ಇದು ರಿಲೀಸ್‌ ಆಗದೆ ಇರಬಹುದು. ಇವರೆಲ್ಲರೂ ಒಟಿಟಿಯಲ್ಲಿ ಗುರುವಾಯೂರ್ ಅಂಬಲನಡಯಿಲ್‌ ನೋಡಲು ಕಾಯುತ್ತಿರಬಹುದು.

ಟ್ರೆಂಡಿಂಗ್​ ಸುದ್ದಿ

ಗುರುವಾಯೂರ್ ಅಂಬಲನಡಯಿಲ್‌ ಅರ್ಥವೇನು?

ಇದನ್ನು ಗುರುವಾಯೂರಂಬಲ ನಡಯಿಲ್‌ ಅಥವಾ ಗುರುವಾಯೂರ್ ಅಂಬಲ ನಡಯಿಲ್‌ ಎಂದೂ ಓದಿಕೊಳ್ಳಬಹುದು. ಈ ಸಿನಿಮಾದ ಶೀರ್ಷಿಕೆಯ ಅರ್ಥ "ಗುರುವಾಯೂರು ದೇವಸ್ಥಾನದ ನಡೆಯಲ್ಲಿ" ಎಂದಾಗಿದೆ. ಇದನ್ನು ಗುರುವಾಯೂರು ದೇವಸ್ಥಾನದ ಸನ್ನಿಧಿಯಲ್ಲಿ ಎಂದೂ ಅರ್ಥ ಮಾಡಿಕೊಳ್ಳಬಹುದು.

ಗುರುವಾಯೂರ್ ಅಂಬಲನಡಯಿಲ್‌ ಒಟಿಟಿ ಬಿಡುಗಡೆ ದಿನಾಂಕ

ಈಗಷ್ಟೇ ಚಿತ್ರಮಂದಿರಗಳಲ್ಲಿ ಗುರುವಾಯೂರ್ ಅಂಬಲನಡಯಿಲ್‌ ಸಿನಿಮಾ ಬಿಡುಗಡೆಯಾಗಿದೆ. ಹೀಗಾಗಿ, ಇನ್ನು ಕೆಲವು ದಿನ ಅಧಿಕೃತವಾಗಿ ಚಿತ್ರತಂಡವು ಇದರ ಒಟಿಟಿ ರಿಲೀಸ್‌ ಕುರಿತು ಅಪ್‌ಡೇಟ್‌ ನೀಡಲಾರದು. ಆದರೆ, ಕೆಲವೊಂದು ವದಂತಿಗಳು, ಈ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್‌ ಆದ 45 ದಿನಗಳ ಬಳಿಕ ಒಟಿಟಿಗೆ ಆಗಮಿಸಲಿದೆ ಎಂದಿವೆ. ಜೂನ್‌ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಈ ಸಿನಿಮಾ ಒಟಿಟಿಗೆ ಆಗಮಿಸುವ ನಿರೀಕ್ಷೆಯಲ್ಲಿ ನಾವಿರಬಹುದು.

ಗುರುವಾಯೂರ್ ಅಂಬಲನಡಯಿಲ್‌ ಸಿನಿಮಾದ ಶೂಟಿಂಗ್‌ 2023ರ ಮೇ 12ರಂದು ಆರಂಭವಾಗಿತ್ತು. ಇದಕ್ಕಾಗಿ ಗುರುವಾಯೂರು ದೇಗುಲವನ್ನು ಹೋಲುವ ಸೆಟ್‌ ನಿರ್ಮಿಸಲಾಗಿತ್ತು. ಇದಾದ ಬಳಿಕ ಜುಲೈನಲ್ಲಿ ದುಬೈನಲ್ಲಿ ಶೂಟಿಂಗ್‌ ಮಾಡಲಾಗಿತ್ತು. ಮೂರನೇ ಫಿಲ್ಮ್‌ ಶೆಡ್ಯೂಲ್‌ ಸಮಯದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ಚಿತ್ರತಂಡ ಸೇರಬೇಕಿತ್ತು. ಆದರೆ, ವಿಲಯಾತ್‌ ಬುದ್ಧ ಸಿನಿಮಾದ ಸೆಟ್‌ನಲ್ಲಿ ಆದ ಗಾಯದಿಂದಾಗಿ ತುಸು ತಡವಾಗಿ ಚಿತ್ರತಂಡ ಸೇರಿಕೊಂಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಇವರು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಜನವರಿ ಆರಂಭದಲ್ಲಿ ನಾಲ್ಕನೇ ಶೂಟಿಂಗ್‌ ಶೆಡ್ಯೂಲ್‌ ಆರಂಭವಾಗಿತ್ತು. ಒಟ್ಟಾರೆ ಈ ಸಿನಿಮಾದ ಶೂಟಿಂಗ್‌ ಈ ವರ್ಷ ಏಪ್ರಿಲ್‌ 4ಕ್ಕೆ ಪೂರ್ಣಗೊಂಡಿತ್ತು.

ಗುರುವಾಯೂರ್ ಅಂಬಲನಡಯಿಲ್‌ ಸಿನಿಮಾಕ್ಕೆ ಅಂಕಿತ್‌ ಮೆನನ್‌ ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಸಂಗೀತವಿದೆ. ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಸರೆಗಮ ಪಡೆದಿದೆ. ಮೇ 5ರಂದು ಈ ಸಿನಿಮಾದ ಮೊದಲ ಹಾಡು ಕೆ ಫಾರ್‌ ಕೃಷ್ಣ ರಿಲೀಸ್‌ ಆಗಿತ್ತು. ಕೊನೆಯ ಸಿಂಗಲ್‌ "ಕೆ ಫಾರ್‌ ಕಲ್ಯಾಣಂ" ಮೇ 14ರಂದು ರಿಲೀಸ್‌ ಆಗಿತ್ತು. ಇದೀಗ ಈ ಚಿತ್ರವು ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದ್ದು, ಹಲವು ಕೋಟಿಗಳನ್ನು ಬಾಚಿಕೊಳ್ಳುತ್ತ ಸಾಗುತ್ತಿದೆ.

ಟಿ20 ವರ್ಲ್ಡ್‌ಕಪ್ 2024