ಕನ್ನಡ ಸುದ್ದಿ  /  ಮನರಂಜನೆ  /  Ott News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ಟ್ರೇಲರ್‌ ರಿಲೀಸ್‌ ಆಗಿದೆ. ಮೊದಲ ಸೀಸನ್‌ ಮೂಲಕ ಕುತೂಹಲ ಇಮ್ಮಡಿಸಿಗೊಳಿಸಿರುವ ಈ ಸಿರೀಸ್‌, ಜೂನ್‌ 17ರಿಂದ ಜಿಯೊಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ ಇರಲಿದೆ. ವಿಶೇಷ ಏನೆಂದರೆ ಕನ್ನಡದಲ್ಲೂ ಇದನ್ನು ನೋಡಬಹುದಾಗಿದೆ.

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

House of the Dragon Season 2: ರಕ್ತಪಾತ ಪ್ರಾರಂಭವಾಗಲು ಸಜ್ಜಾಗಿದೆ! ಜಿಯೊಸಿನಿಮಾ ತನ್ನ ಜಾಗತಿಕ HBO ಸೀರೀಸ್ ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ಅಧಿಕೃತ ಟ್ರೈಲರ್ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಜಿಯೊಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17ರಿಂದ ಲಭ್ಯವಿರುತ್ತಿದ್ದು ಪ್ರತಿ ಸೋಮವಾರ ಯು.ಎಸ್. ಸೇರಿದಂತೆ ಎಲ್ಲ ಕಡೆ ಏಪಿಸೋಡ್‌ಗಳು ಪ್ರಸಾರವಾಗಲಿವೆ.

ಟ್ರೆಂಡಿಂಗ್​ ಸುದ್ದಿ

ಜಾರ್ಜ್ ಆರ್.ಆರ್. ಮಾರ್ಟಿನ್ ಅವರ ಫೈರ್ ಅಂಡ್ ಬ್ಲಡ್ ಆಧರಿಸಿದ ಈ ಸರಣಿಯು ಹೌಸ್ ಟಾರ್ಗೇರಿಯನ್ ಕಥೆಯನ್ನು ತೆರೆದಿಡಲಿದೆ.  ರಾಜ ಕುಟುಂಬದ ಕಥೆಯಲ್ಲಿ ಅಧಿಕಾರದ ಸಂಘರ್ಷಗಳ ಬಳಿಕ ಕುಟುಂಬವು ಹೇಗೆ ರಾಜಕೀಯ ಒಳಸಂಚು, ಕೌಟುಂಬಿಕ ಶತ್ರುತ್ವಗಳನ್ನು ಎದುರಿಸಿ ಮುನ್ನಡೆಯುತ್ತದೆ ಮತ್ತು ಸಿಂಹಾಸನವನ್ನು ಮರಳಿ ಪಡೆಯಲು ಹೇಗೆ ಯುದ್ಧಕ್ಕಿಳಿಯುತ್ತದೆ ಎಂಬುದೇ ಈ ಸಿರೀಸ್‌ನ ಎಳೆ.

ಬಹುತಾರಾಗಣದ ಹೌಸ್ ಆಫ್ ದಿ ಡ್ರ್ಯಾಗನ್

ಹೌಸ್ ಆಫ್ ದಿ ಡ್ರ್ಯಾಗನ್ ಸಿರೀಸ್‌ನಲ್ಲಿ ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್ ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ಈ ಸಿರೀಸ್‌ನ ತಾರಾಗಣದಲ್ಲಿದ್ದಾರೆ. ಇನ್ನುಳಿದಂತೆ ಹ್ಯಾರಿ ಕೊಲೆಟ್, ಬೆಥನಿ ಅಂಟೋನಿಯ, ಫೋಬ್ ಕ್ಯಾಂಪ್ ಬೆಲ್, ಫಿಯಾ ಸಬನ್, ಜೆಫರ್ಸನ್ ಹಾಲ್ ಮತ್ತು ಮ್ಯಾಥ್ಯೂ ನೀಧಂ, ಅನುಬಕರ್ ಸಲೀಂ, ಗೇಯ್ಲ್ ರಂಕಿನ್, ಫ್ರೆಡ್ಡೀ ಫಾಕ್ಸ್, ಸಿಮನ್ ರಸೆಲ್ ಬೀಲ್, ಕ್ಲಿಂಟನ್ ಲಿಬರ್ಟಿ, ಜೆಮೀ ಕೆನ್ನಾ, ಕಿಯೆರನ್ ಬ್ಯೂ, ಟಾಮ್ ಬೆನೆಟ್, ಟಾಮ್ ಟೇಲರ್, ವಿನ್ಸೆಂಟ್ ರೆಗಾನ್ ಪಾತ್ರವರ್ಗದಲ್ಲಿದ್ದಾರೆ.

ಟಿವಿಗೂ ಮುನ್ನ ಸೀರಿಯಲ್‌ ನೋಡಿ

ಹೌಸ್ ಆಫ್ ಡ್ರ್ಯಾಗನ್ ಸೀಸನ್‌ 2 ಜತೆ ಜತೆಗೆ ಜಿಯೊಸಿನಿಮಾ ಪ್ರೀಮಿಯಂ ಸ್ಥಳೀಯ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಂಟೆಂಟ್, ಮಕ್ಕಳು ಹಾಗೂ ಕೌಟುಂಬಿಕ ಮನರಂಜನೆಯ ದೃಷ್ಟಿಯಿಂದಲೂ ಸಾಕಷ್ಟು ಶೋಗಳನ್ನು ಅರ್ಪಿಸುತ್ತಿದೆ. ಒರಿಜಿನಲ್ಸ್, ಬ್ಲಾಕ್ ಬಸ್ಟರ್ ಸಿನಿಮಾಗಳ ಜತೆಗೆ ಟಿವಿಗೂ ಮುಂಚಿತವಾಗಿ ಸೀರಿಯಲ್‌ಗಳನ್ನೂ ವೀಕ್ಷಿಸುವ ಆಯ್ಕೆಯನ್ನು ನೀಡಿದೆ. ಲೈವ್ ಚಾನೆಲ್ ಗಳನ್ನು 4ಕೆ ಗುಣಮಟ್ಟದಲ್ಲಿ ತಿಂಗಳಿಗೆ ಕೇವಲ ರೂ. 29ರಲ್ಲಿ ಒದಗಿಸುತ್ತಿದೆ. 4 ಡಿವೈಸ್‌ಗೆ ಏಕಕಾಲದಲ್ಲಿ ತಿಂಗಳಿಗೆ 89ರೂಗೆ ಲಭ್ಯವಿದೆ.

IPL_Entry_Point