ಕನ್ನಡ ಸುದ್ದಿ  /  Entertainment  /  Ott News Iamai-kantar Report Says 86 Percent Use Internet To Enjoy Ott Services In India Pcp

OTT: ಭಾರತದಲ್ಲಿ ಶೇ 86 ಇಂಟರ್‌ನೆಟ್‌ ಬಳಕೆದಾರರಿಂದ ಒಟಿಟಿ ಸೇವೆ ಬಳಕೆ; ಐಎಎಂಎಐ ಕಾಂತಾರ್‌ ವರದಿಯಿಂದ ಬಹಿರಂಗ

OTT News: ಭಾರತದಲ್ಲಿ ಒಟಿಟಿ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ದೇಶದ ಒಟ್ಟು ಇಂಟರ್‌ನೆಟ್‌ ಬಳಕೆದಾರರಲ್ಲಿ ಶೇಕಡ 86ಷ್ಟು ಬಳಕೆದಾರರು ಭಾರತದಲ್ಲಿ ಒಟಿಟಿ ಸೇವೆಗಳನ್ನು ಆನಂದಿಸುತ್ತಿದ್ದಾರೆ ಎಂದು ಐಎಎಂಎಐ ಕಾಂತಾರ್‌ ವರದಿ ಕಂಡುಕೊಂಡಿದೆ.

OTT: ಭಾರತದಲ್ಲಿ ಶೇ 86 ಇಂಟರ್‌ನೆಟ್‌ ಬಳಕೆದಾರರಿಂದ ಒಟಿಟಿ ಸೇವೆ ಬಳಕೆ
OTT: ಭಾರತದಲ್ಲಿ ಶೇ 86 ಇಂಟರ್‌ನೆಟ್‌ ಬಳಕೆದಾರರಿಂದ ಒಟಿಟಿ ಸೇವೆ ಬಳಕೆ

ಭಾರತದಲ್ಲಿ ಒಟಿಟಿ ಸೇವೆ ಬಳಕೆದಾರರ ಪ್ರಮಾಣ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಒಟ್ಟಾರೆ ಇಂಟರ್‌ನೆಟ್‌ ಬಳಕೆದಾರರಲ್ಲಿ ಶೇಕಡ 86ಷ್ಟು ಬಳಕೆದಾರರು ಭಾರತದಲ್ಲಿ ಒಟಿಟಿ ಸೇವೆಗಳನ್ನು ಆನಂದಿಸುತ್ತಿದ್ದಾರೆ ಎಂದು ಐಎಎಂಎಐ ಕಾಂತಾರ್‌ ವರದಿ ತಿಳಿಸಿದೆ. ಭಾರತದ ಶೇಕಡ 86ರಷ್ಟು ಇಂಟರ್‌ನೆಟ್‌ ಬಳಕೆದಾರರೆಂದರೆ ಸುಮಾರು 707 ಮಿಲಿಯನ್‌ (70.7 ಕೋಟಿ) ಜನರು ಒಟಿಟಿ ಆಡಿಯೋ ಮತ್ತು ವಿಡಿಯೋ ಸೇವೆಗಳನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ಇಂಟರ್‌ನೆಟ್‌ ಅನ್ನು ಒಟಿಟಿಗಾಗಿ ಈಗ ಹೆಚ್ಚು ಬಳಸಲಾಗುತ್ತಿದೆ. ಕಮ್ಯುನಿಕೇಷನ್‌, ಆನ್‌ಲೈನ್‌ ಗೇಮಿಂಗ್‌, ಆನ್‌ಲೈನ್‌ ಪೇಮೆಂಟ್‌ ಮುಂತಾದ ವಿಭಾಗಗಳು ಒಟಿಟಿ ಬಳಿಕದ ಸ್ಥಾನ ಪಡೆದಿವೆ.

"ಇಂಟರ್‌ನೆಟ್‌ ಇನ್‌ ಇಂಡಿಯಾ ರಿಪೋರ್ಟ್‌ 2023" ಅನ್ನು ಇಂಟರ್‌ನೆಟ್‌ ಆಂಡ್‌ ಮೀಡಿಯಾ ಅಸೋಸಿಯೇಷನ್‌ ಆಫ್‌ ಇಂಡಿಯಾ (ಐಎಎಂಎಐ) ಮತ್ತು ಮಾರುಕಟ್ಟೆ ಡೇಟಾ, ಅನಾಲಿಟಿಕ್ಸ್‌ ಕಂಪನಿಯಾದ ಕಾಂತಾರ್‌ ಜಂಟಿಯಾಗಿ ಸಿದ್ಧಪಡಿಸಿವೆ. ಈ ವರದಿಯನ್ನು ಐಎಎಂಎಐ ಚೇರ್ಮನ್‌ ಮತ್ತು ಡ್ರೀಮ್‌ ಸ್ಪೋರ್ಸ್ಟ್‌ ಸಹಸ್ಥಾಪಕ ಹರ್ಷ್‌ ಜೈನ್‌ ಬಿಡುಗಡೆ ಮಾಡಿದ್ದಾರೆ. ಭಾರತದ ಎಲ್ಲಾ ರಾಜ್ಯಗಳು ಮತ್ತು ಲಕ್ಷದ್ವೀಪ ಹೊರತುಪಡಿಸಿದ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ 90 ಸಾವಿರ ಜನರ ಅಭಿಪ್ರಾಯಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

ಇದೇ ಸಂದರ್ಭದಲ್ಲಿ ಡಿಜಿಟಲ್‌ ಮನರಂಜನೆಯನ್ನು ಸಾಂಪ್ರದಾಯಿಕವಲ್ಲದ ಸಾಧನಗಳಲ್ಲಿ ಬಳಸುವುದು ಹೆಚ್ಚಾಗಿದೆ. ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ಸ್ಪೀಕರ್ಸ್‌, ಫೈರ್‌ ಸ್ಟಿಕ್‌, ಕ್ರೋಮ್‌ಕಾಸ್ಟ್‌, ಬ್ಲೂರೇ ಇತ್ಯಾದಿಗಳಲ್ಲಿ ಇಂಟರ್‌ನೆಟ್‌ ಬಳಸುವುದು ಶೇಕಡ 68ರಷ್ಟು ಏರಿಕೆ ಕಂಡಿದೆ. ಇಂಟರ್‌ನೆಟ್‌ ಬಳಸುವ ಸಾಧನಗಳಲ್ಲಿ ವಿಡಿಯೋ ಕಂಟೆಂಟ್‌ ಬಳಸುವವರ ಪ್ರಮಾಣವು ಈಗ 20.8 ಕೋಟಿಗೆ ತಲುಪಿದೆ. ಸಾಂಪ್ರದಾಯಿಕ ಟಿವಿ ಬಳಸುವವರು ಪ್ರಮಾಣ 18.1 ಕೋಟಿ ಇದೆ.

ಅಧ್ಯಯನದ ಪ್ರಕಾರ ಭಾರತದಲ್ಲಿ ಇಂಟರ್‌ನೆಟ್‌ ಅನ್ನು ಸಂವಹನ (621 ದಶಲಕ್ಷ ಜನರು), ಸಾಮಾಜಿಕ ಮಾಧ್ಯಮ (575 ದಶಲಕ್ಷ ), ಆನ್‌ಲೈನ್ ಗೇಮಿಂಗ್ (438 ದಶಲಕ್ಷ), ನಿವ್ವಳ ವಾಣಿಜ್ಯ (427 ದಶಲಕ್ಷ), ಡಿಜಿಟಲ್ ಪಾವತಿಗಳು (370 ದಶಲಕ್ಷ), ಮತ್ತು ಆನ್‌ಲೈನ್ ಕಲಿಕೆ (24 ದಶಲಕ್ಷ)ಗೆ ಬಳಸುತ್ತಾರೆ.

ಈ ಅಧ್ಯಯನದಲ್ಲಿ ಒಟಿಟಿ ಎಂದರೆ ಚಂದಾದಾರಿಕೆ ಇರುವ ಅಥವಾ ಇಲ್ಲದ ಕಂಟೆಂಟ್‌ಗಳು ಯುಜಿಸಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಡಿಯೋ/ವಿಡಿಯೋ ಸ್ಟ್ರೀಮಿಂಗ್‌ ಸೇವೆ ಒದಗಿಸುವುದಾಗಿದೆ. ಕಮ್ಯುನಿಕೇಷನ್‌ ಎಂದರೆ ಅಕ್ಷರ/ಧ್ವನಿ ಸಂವಹನ, ಚಾಟಿಂಗ್‌, ಇಮೇಲ್‌ ಇತ್ಯಾದಿಗಳು ಆಗಿವೆ.

ಒಟಿಟಿಯಲ್ಲಿ ಸಾಕಷ್ಟು ಹೊಸ ಸಿನಿಮಾ, ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಜಿಯೋ ಸಿನೆಮಾ, ಹಾಟ್‌ಸ್ಟಾರ್‌ ಸೇರಿದಂತೆ ಹತ್ತು ಹಲವು ಒಟಿಟಿ ಫ್ಲಾಟ್‌ಫಾರ್ಮ್‌ಗಳು ಲಭ್ಯವಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದವರು ಮನೆಯಲ್ಲಿಯೇ ಸಿನಿಮಾ ನೋಡಲು ಅವಕಾಶ ನೀಡುತ್ತದೆ. ಇದೇ ಸಮಯದಲ್ಲಿ ಹಲವು ಅತ್ಯಾಕರ್ಷಕ ವೆಬ್‌ ಸರಣಿಗಳು ಬಿಡುಗಡೆಯಾಗುತ್ತಿದ್ದು, ಒಟಿಟಿ ಬೇಡಿಕೆ ಹೆಚ್ಚಿಸಿದೆ.

ಕನ್ನಡದಲ್ಲಿ ಒಟಿಟಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point