ಅಧಿಕೃತವಾಗಿ ಇಂಡಿಯನ್‌ 2 ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಎಲ್ಲಿ ಯಾವಾಗ ಸ್ಟ್ರೀಮ್ ಆಗಲಿದೆ ಕಮಲ್‌ ಹಾಸನ್‌ ಸಿನಿಮಾ-ott news indian 2 ott release date announced heres when and where you can watch kamal haasans indian 2 movie mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಧಿಕೃತವಾಗಿ ಇಂಡಿಯನ್‌ 2 ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಎಲ್ಲಿ ಯಾವಾಗ ಸ್ಟ್ರೀಮ್ ಆಗಲಿದೆ ಕಮಲ್‌ ಹಾಸನ್‌ ಸಿನಿಮಾ

ಅಧಿಕೃತವಾಗಿ ಇಂಡಿಯನ್‌ 2 ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಎಲ್ಲಿ ಯಾವಾಗ ಸ್ಟ್ರೀಮ್ ಆಗಲಿದೆ ಕಮಲ್‌ ಹಾಸನ್‌ ಸಿನಿಮಾ

ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ರಿವೀಲ್‌ ಆಗಿದೆ. ಶಂಕರ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲುಂಡಿತ್ತು.

ಅಧಿಕೃತವಾಗಿ ಒಟಿಟಿ ಬಿಡುಗಡೆ ದಿನಾಂಕ ಘೋಷಿಸಿದ ಇಂಡಿಯನ್‌ 2; ಎಲ್ಲಿ ಯಾವಾಗ ಸ್ಟ್ರೀಮಿಂಗ್‌ ಆಗಲಿದೆ ಕಮಲ್‌ ಹಾಸನ್‌ ಸಿನಿಮಾ
ಅಧಿಕೃತವಾಗಿ ಒಟಿಟಿ ಬಿಡುಗಡೆ ದಿನಾಂಕ ಘೋಷಿಸಿದ ಇಂಡಿಯನ್‌ 2; ಎಲ್ಲಿ ಯಾವಾಗ ಸ್ಟ್ರೀಮಿಂಗ್‌ ಆಗಲಿದೆ ಕಮಲ್‌ ಹಾಸನ್‌ ಸಿನಿಮಾ (Photo\ Twitter)

Indian 2 OTT: ಉಳಗನಾಯಗನ್‌ ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಇಂಡಿಯನ್‌ 2 ಸಿನಿಮಾ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿತ್ತಾದರೂ, ಹೇಳಿಕೊಳ್ಳುವ ಕಲೆಕ್ಷನ್‌ ಮಾಡಲಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ಹೆಚ್ಚು ದಿನ ಚಿತ್ರಮಂದಿರದಲ್ಲಿ ನಿಲ್ಲಲಿಲ್ಲ ಈ ಸಿನಿಮಾ. 28 ವರ್ಷಗಳ ಹಿಂದೆ (1996) ತೆರೆಕಂಡಿದ್ದ ಇಂಡಿಯನ್‌ ಸಿನಿಮಾದ ಮುಂದುವರಿದ ಈ ಭಾಗವನ್ನು ಶಂಕರ್‌ ನಿರ್ದೇಶನ ಮಾಡಿದರೆ, ಲೈಕಾ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿತ್ತು. ಇದೀಗ ಈ ಚಿತ್ರದ ಅಧಿಕೃತ ಒಟಿಟಿ ಬಿಡುಗಡೆಯ ದಿನಾಂಕ ರಿವೀಲ್‌ ಆಗಿದೆ.

ಜುಲೈ 12ರಂದು ತೆರೆಕಂಡಿದ್ದ ಚಿತ್ರ

ರಾಕುಲ್‌ ಪ್ರೀತ್ ಸಿಂಗ್, ಬಾಬಿ ಸಿಂಹ, ಬ್ರಹ್ಮಾನಂದಂ, ಪ್ರಿಯಾ ಭವಾನಿ ಶಂಕರ್, ಕಾಜಲ್ ಅಗರ್ವಾಲ್ ಸೇರಿ ಬಹುತಾರಾಹಣದ ಈ ಸಿನಿಮಾ ಜುಲೈ 12ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ಮೊದಲ ಶೋದಿಂದ ಶುರುವಾದ ನೆಗೆಟಿವ್ ಟಾಕ್‌ನಿಂದಾಗಿ, ಮೊದಲ ಭಾಗ ಮಾಡಿದ ಮ್ಯಾಜಿಕ್‌ಅನ್ನು ಈ ಸಿನಿಮಾ ಮಾಡುವಲ್ಲಿ ವಿಫಲವಾಯ್ತು. ದೊಡ್ಡ ತಾರಾಗಣ, ಮೈನವಿರೇಳಿಸುವ ಸಾಹಸ ದೃಶ್ಯಗಳ ನಡುವೆ ನೀರಸ ಕಥೆಯಿಂದ ಟೀಕೆಗಳೇ ಹೆಚ್ಚು ಕೇಳಿಸಿದವು.

ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಹೀಗೆ ನೆಗೆಟಿವ್‌ ಟಾಕ್‌ ಕೇಳುತ್ತಿದ್ದಂತೆ, ನಿಗದಿತ ಸಮಯಕ್ಕೂ ಮೊದಲೇ ಈ ಸಿನಿಮಾ ಒಟಿಟಿಗೆ ಬರಲಿದೆ ಎಂದೇ ಹೇಳಲಾಗಿತ್ತು. ಅದರಂತೆ ಇದೀಗ ಆ ದಿನ ಬಂದೇ ಬಿಟ್ಟಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ, ಇಂಡಿಯನ್ 2 ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಆಗಸ್ಟ್ 9 ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ತಮಿಳು ಜತೆಗೆ ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.

250 ಕೋಟಿ ಬಜೆಟ್‌ನ ಸಿನಿಮಾ

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಸುಭಾಸ್ಕರನ್ 250 ಕೋಟಿಯಲ್ಲಿ ಇಂಡಿಯನ್‌ 2 ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 130 ಕೋಟಿ ಗಳಿಸಿದೆ. ತಮಿಳಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ತಂದ ಈ ಚಿತ್ರ ತೆಲುಗು, ಹಿಂದಿ, ಕನ್ನಡದಲ್ಲಿ ಕನಿಷ್ಠ ಕಲೆಕ್ಷನ್ ಗಳಿಸಲಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲುಂಡಿತು.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ದಿನದ ನಿಮಿತ್ತ ಒಟಿಟಿಗೆ ತರಲು ಪ್ಲಾನ್‌ ಮಾಡಲಾಗಿತ್ತು. ಅದಾದ ಬಳಿಕ ಒಂದು ವಾರ ಮುಂಚಿತವಾಗಿ ಅಂದರೆ, ಆಗಸ್ಟ್‌ 9ರಂದು ಒಟಿಟಿಗೆ ಬರಲಿದೆ. ಇದರ ಜತೆಗೆ ಇಂಡಿಯನ್‌ 2 ಚಿತ್ರದ ಮುಂದುವರಿದ ಭಾಗವಾಗಿ ಇಂಡಿಯನ್‌ 3 ಸಿನಿಮಾ ಸಹ ಬರಲಿದೆ. ಮೂರನೇ ಭಾಗದಲ್ಲಿ ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯನ್‌ 2 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪಾರ್ಟ್ 3 ಚಿತ್ರದ ಟೀಸರ್ ಬಿಡುಗಡೆಯಾಗಿದೆ.