OTT Actor Salary: ಒಟಿಟಿಯಲ್ಲಿ ಪ್ರತಿ ಎಪಿಸೋಡ್‌ಗೆ 18 ಕೋಟಿ ರೂ ಸಂಭಾವನೆ ಪಡೆಯುವ ನಟ; ಶಾರೂಖ್‌ ಖಾನ್‌ನನ್ನು ಹಿಂದಿಕ್ಕಿದ ಸ್ಟಾರ್‌ ಯಾರು
ಕನ್ನಡ ಸುದ್ದಿ  /  ಮನರಂಜನೆ  /  Ott Actor Salary: ಒಟಿಟಿಯಲ್ಲಿ ಪ್ರತಿ ಎಪಿಸೋಡ್‌ಗೆ 18 ಕೋಟಿ ರೂ ಸಂಭಾವನೆ ಪಡೆಯುವ ನಟ; ಶಾರೂಖ್‌ ಖಾನ್‌ನನ್ನು ಹಿಂದಿಕ್ಕಿದ ಸ್ಟಾರ್‌ ಯಾರು

OTT Actor Salary: ಒಟಿಟಿಯಲ್ಲಿ ಪ್ರತಿ ಎಪಿಸೋಡ್‌ಗೆ 18 ಕೋಟಿ ರೂ ಸಂಭಾವನೆ ಪಡೆಯುವ ನಟ; ಶಾರೂಖ್‌ ಖಾನ್‌ನನ್ನು ಹಿಂದಿಕ್ಕಿದ ಸ್ಟಾರ್‌ ಯಾರು

Highest-paid OTT Actor: ರತದ ಒಟಿಟಿ ನಟರೊಬ್ಬರು ಒಂದು ಸೀಸನ್‌ಗೆ 125 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇವರು ಪಡೆದ ವೇತನವು ಶಾರೂಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಸಿನಿಮಾವೊಂದಕ್ಕೆ ಪಡೆಯುವ ಶುಲ್ಕಕ್ಕಿಂತಲೂ ಹೆಚ್ಚಿದೆ. ಬನ್ನಿ ಈ ಒಟಿಟಿ ಸ್ಟಾರ್‌ ಯಾರು ಎಂದು ತಿಳಿದುಕೊಳ್ಳೋಣ.

OTT Actor Salary: ಒಟಿಟಿಯಲ್ಲಿ ಪ್ರತಿ ಎಪಿಸೋಡ್‌ಗೆ 18 ಕೋಟಿ ರೂ ಸಂಭಾವನೆ ಪಡೆಯುವ ನಟ
OTT Actor Salary: ಒಟಿಟಿಯಲ್ಲಿ ಪ್ರತಿ ಎಪಿಸೋಡ್‌ಗೆ 18 ಕೋಟಿ ರೂ ಸಂಭಾವನೆ ಪಡೆಯುವ ನಟ

ಭಾರತದಲ್ಲಿ ಆನ್‌ಲೈನ್‌ ಸ್ಟ್ರೀಮಿಂಗ್‌ಗಳು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿತ್ತು. ಹೆಚ್ಚಾಗಿ ಯೂಟ್ಯೂಬ್‌ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್‌ ಮಾಡಲಾಗುತ್ತಿತ್ತು. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಬಂದ ಬಳಿಕ ದೊಡ್ಡ ಬಜೆಟ್‌ನ ವೆಬ್‌ ಸರಣಿಗಳು ಆರಂಭವಾದವು. ಸೈಫ್ ಅಲಿ ಖಾನ್ ನೆಟ್‌ಫ್ಲಿಕ್ಸ್‌ನಲ್ಲಿ ಸೇಕ್ರೆಡ್ ಗೇಮ್ಸ್‌ನಲ್ಲಿ ನಟಿಸಿದರು. ವಿವೇಕ್ ಒಬೆರಾಯ್ ಅಮೆಜಾನ್‌ ಪ್ರೈಮ್ ವೀಡಿಯೊದಲ್ಲಿ ಇನ್‌ಸೈಡ್ ಎಡ್ಜ್‌ನಲ್ಲಿ ಕಾಣಿಸಿಕೊಂಡರು. ಸಹಜವಾಗಿ ಈ ನಟರು ಒಟಿಟಿಯಲ್ಲಿ ನಟಿಸಲು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಒಟಿಟಿಗೆ ಹೀಗೆ ಜನಪ್ರಿಯ ಕಲಾವಿದರು ಪ್ರವೇಶಿಸಿದಾಗ ಇವರ ಸಂಭಾವನೆ ಹೆಚ್ಚುತ್ತ ಹೋಯಿತು. ಇದೀಗ ನಾವು ಹೇಳುತ್ತಿರುವ ನಟರೊಬ್ಬರು ಒಟಿಟಿ ವೆಬ್‌ ಸರಣಿಯಲ್ಲಿ ನಟಿಸಲು ನೂರು ಕೋಟಿ ರೂಪಾಯಿಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದಾರೆ.

ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಒಟಿಟಿ ನಟ ಯಾರು?

2021ರಲ್ಲಿ ಅಜಯ್ ದೇವಗನ್ ಹಿಟ್ ಬ್ರಿಟಿಷ್ ಶೋ ಲುಥರ್‌ನ ಭಾರತೀಯ ಅವತರಣಿಕೆಯಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಹಾಕಿದರು. ಇಡ್ರಿಸ್ ಎಲ್ಬಾದಿಂದ ಜವಾಬ್ದಾರಿಯನ್ನು ವಹಿಸಿಕೊಂಡ ಅಜಯ್  ದೇವಗನ್‌ ಅವರು “ರುದ್ರ: ಎಡ್ಜ್ ಆಫ್ ಡಾರ್ಕ್‌ನೆಸ್‌”ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದರು. ಬಾಲಿವುಡ್ ಹಂಗಾಮಾ ವರದಿ ಪ್ರಕಾರ ಅಜಯ್ ದೇವಗನ್‌ ಅವರು ಏಳು ಎಪಿಸೋಡ್ ಹೊಂದಿರುವ ಈ ಸೀಸನ್‌ಗೆ 125 ಕೋಟಿ ಚಾರ್ಜ್ ಮಾಡಿದ್ದಾರೆ. ಅಂದ್ರೆ, ಇವರು ಪ್ರತಿ ಎಪಿಸೋಡ್‌ಗೆ 18 ಕೋಟಿ ರೂಪಾಯಿ ಚಾರ್ಜ್‌ ಮಾಡಿದಂತೆ ಆಯಿತು. ಇದು ಭಾರತದ ಒಟಿಟಿ ಇತಿಹಾಸದಲ್ಲಿಯೇ ಸ್ಟಾರ್‌ ನಟನೊಬ್ಬ ಪಡೆದ ಅತಿ ಹೆಚ್ಚು ಸಂಭಾವನೆ.

ಈ ಸಂಭಾವನೆಯ ಪ್ರಮಾಣವನ್ನು ಇತರೆ ನಟರು ಸಿನಿಮಾಗಳಲ್ಲಿ ನಟಿಸಲು ಪಡೆಯುವ ವೇತನದ ಜತೆ ಹೋಲಿಸಬಹುದು. ಶಾರುಖ್ ಖಾನ್ ತಮ್ಮ ರೈಸ್ ಮತ್ತು ಜೀರೋ ಸಿನಿಮಾಗಳಲ್ಲಿ ನಟಿಸಲು 90ರಿಂದ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಲ್ಮಾನ್ ಖಾನ್ ಭಾರತ್‌ ಸಿನಿಮಾದಲ್ಲಿ ನಟಿಸಲು ಇಷ್ಟೇ ಪ್ರಮಾಣದ ಸಂಭಾವನೆ ಪಡೆದಿದ್ದಾರೆ. ಅಜಯ್ ದೇವಗನ್ ಪಡೆದಿರುವ ಈ ಹೆಚ್ಚಿನ ಮೊತ್ತವು ವೆಬ್‌ ಸರಣಿಯ ರನ್‌ ಟೈಮ್‌ ಅನ್ನು ಅವಲಂಬಿಸಿದೆ. ಶೋನ ಏಳು ಎಪಿಸೋಡ್‌ಗಳು ಎರಡು ಚಲನಚಿತ್ರಗಳ ಅವಧಿಗೆ ಸಮವಾಗಿದೆ. ಇದರೊಂದಿಗೆ ಇವರು ಈ ವೆಬ್‌ ಸರಣಿಯ ಪ್ರಚಾರದ ಕಾರ್ಯಗಳನ್ನೂ ಈ ಒಪ್ಪಂದ ಒಳಗೊಂಡಿದೆ. ಅಂದರೆ, ರಿಯಾಲಿಟಿ ಶೋಗಳಲ್ಲಿ ಈ ಸರಣಿಯ ಪ್ರಚಾರ ಮಾಡುವುದು, ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವುದು ಇತ್ಯಾದಿ ಪ್ರಚಾರದ ಮೊತ್ತವನ್ನೂ ಈ ಒಪ್ಪಂದ ಒಳಗೊಂಡಿದೆ ಎಂದು ಬಾಲಿವುಡ್‌ ಹಂಗಾಮ ವರದಿ ಮಾಡಿದೆ.

ಅಜಯ್ ದೇವಗನ್ ಅವರಂತೆ ಬೇರೆ ಯಾವ ಸ್ಟಾರ್‌ ನಟರು ಕೂಡ ಇಷ್ಟು ದೊಡ್ಡಮಟ್ಟದ ವೇತನವನ್ನು ಒಟಿಟಿ ನಟನೆಗೆ ಪಡೆದಿಲ್ಲ. ಸದ್ಯದ ಮಟ್ಟಿಗೆ ಅಜಯ್‌ ದೇವಗನ್‌ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಒಟಿಟಿ ನಟರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರ ನಂತರದ ಸ್ಥಾನವನ್ನು ಸೈಫ್‌ ಅಲಿ ಖಾನ್‌ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಸೇಕ್ರೆಡ್ ಗೇಮ್ಸ್ ಸೀಸನ್ 2ನಲ್ಲಿ ನಟಿಸಲು ಇವರು ಸುಮಾರು 15-20 ಕೋಟಿ ರೂಪಾಯಿ ಪಡೆದಿದ್ದಾರೆ. ವರುಣ್ ಧವನ್ ಅವರು ಸಿಟಾಡೆಲ್: ಹನಿ ಬನ್ನಿ ನಟನೆಗೆ 12-15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಜಿಕ್ಯೂ ನಟರಾದ ನವಾಜುದ್ದೀನ್ ಸಿದ್ದಿಕಿ, ಪಂಕಜ್ ತೃಪಾಠಿ, ಅಲಿ ಫಜಲ್ ಮತ್ತು ಸಮಂತಾ ರುತ್‌ ಪ್ರಭು ಅವರು ತಮ್ಮ ಒಟಿಟಿ ಶೋಗಳಿಗೆ 5-10 ಕೋಟಿ ರೂಪಾಯಿ ನಡುವೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner