ಕನ್ನಡ ಸುದ್ದಿ  /  ಮನರಂಜನೆ  /  Ott News: ಆಸ್ಕರ್‌ ಪ್ರಶಸ್ತಿ ಪಡೆದಿದ್ದ ಗಾಡ್ಜಿಲಾ ಮೈನಸ್‌ ಒನ್ ಚಿತ್ರ ದಿಢೀರ್‌ ಒಟಿಟಿಗೆ ಎಂಟ್ರಿ; ಕಾಯುವಿಕೆಗೆ ಬಿತ್ತು ತೆರೆ

OTT News: ಆಸ್ಕರ್‌ ಪ್ರಶಸ್ತಿ ಪಡೆದಿದ್ದ ಗಾಡ್ಜಿಲಾ ಮೈನಸ್‌ ಒನ್ ಚಿತ್ರ ದಿಢೀರ್‌ ಒಟಿಟಿಗೆ ಎಂಟ್ರಿ; ಕಾಯುವಿಕೆಗೆ ಬಿತ್ತು ತೆರೆ

ಗಾಡ್ಜಿಲ್ಲಾ ಮೈನಸ್ ಒನ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾದರೂ, ಭಾರತದ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಚಿತ್ರಮಂದಿರದಲ್ಲಿ ಮಿಸ್‌ ಆದರೆ, ಒಟಿಟಿಯಲ್ಲಾದ್ರೂ ನೋಡಬಹುದೆಂದು ಭಾರತೀಯ ಪ್ರೇಕ್ಷಕ ಕಾತರದಿಂದ ಕಾಯುತ್ತಿದ್ದರು. ಇದೀಗ ಆ ಕಾಯುವಿಕೆಗೆ ಬ್ರೇಕ್‌ ಬಿದ್ದಿದೆ.

OTT News: ಆಸ್ಕರ್‌ ಪ್ರಶಸ್ತಿ ಪಡೆದಿದ್ದ ಗಾಡ್ಜಿಲಾ ಮೈನಸ್‌ ಒನ್ ಚಿತ್ರ ದಿಢೀರ್‌ ಒಟಿಟಿಗೆ ಎಂಟ್ರಿ; ಕಾಯುವಿಕೆಗೆ ಬಿತ್ತು ತೆರೆ
OTT News: ಆಸ್ಕರ್‌ ಪ್ರಶಸ್ತಿ ಪಡೆದಿದ್ದ ಗಾಡ್ಜಿಲಾ ಮೈನಸ್‌ ಒನ್ ಚಿತ್ರ ದಿಢೀರ್‌ ಒಟಿಟಿಗೆ ಎಂಟ್ರಿ; ಕಾಯುವಿಕೆಗೆ ಬಿತ್ತು ತೆರೆ

Godzilla Minus One OTT: ಈ ಹಿಂದೆ ಗಾಡ್ಜಿಲ್ಲಾ ಪರಿಕಲ್ಪನೆಯಲ್ಲಿ ಮೂಡಿಬಂದ ಸಿನಿಮಾಗಳು ಬಾಕ್ಸ್‌ ಆಫೀಸ್‌ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಸಿನಿಮಾ ಪ್ರೇಕ್ಷಕನಿಗೂ ಆ ಹೊಸ ಲೋಕದ ಮೇಲೆ ಅಚ್ಚರಿಯ ಬೆರಗು. ಹೀಗಿರುವಾಗಲೇ ಇದೀಗ ಮತ್ತೊಂದು ಗಾಡ್ಜಿಲ್ಲಾವನ್ನು ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಭಾರತದಲ್ಲಿಯೂ ಗಾಡ್ಜಿಲ್ಲಾ ಕಾನ್ಸೆಪ್ಟ್‌ನ ಸಿನಿಮಾಗಳಿಗೆ ಬೇಡಿಕೆ ಇದೆ. ಹಿಂದಿ ಜತೆಗೆ ದಕ್ಷಿಣ ಭಾರತದ ಭಾಷೆಗಳಿಗೂ ಡಬ್‌ ಆಗಿ ರಿಲೀಸ್‌ ಕಂಡು ಯಶ ಗಳಿಸಿವೆ. ಇದೀಗ ಕಳೆದ ವರ್ಷ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಸಿನಿಮಾ ಗಾಡ್ಜಿಲ್ಲಾ ಮೈನಸ್ ಒನ್ ಒಟಿಟಿಗೆ ಎಂಟ್ರಿಕೊಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಅಕಾಡೆಮಿ ಅವಾರ್ಡ್‌ ಚಿತ್ರ ಒಟಿಟಿಗೆ

ಕಳೆದ ವರ್ಷದ ನವೆಂಬರ್ 03 ರಂದು ಬಿಡುಗಡೆಯಾದ ಈ ಗಾಡ್ಜಿಲ್ಲಾ ಮೈನಸ್ ಒನ್ ಜಪಾನೀಸ್ ಸಿನಿಮಾದಲ್ಲಿ ಮಿಯಾಮಿ ಹಮಾಬ್, ಕಾಮಿಕಿ ರ್ಯುನೊಸುಕೆ, ಯುಕಿ ಎಂಡಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತಕಾಶಿ ಯಮಝಕಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಪ್ರೇಕ್ಷಕರ ಮುಂದೆ ಬಂದಿದ್ದ ಈ ಚಿತ್ರ ಜಪಾನ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ನಿರ್ಮಾಪಕರ ಜೇಬಿಗೂ ಹಣದ ಹೊಳೆ ಹರಿದು ಬಂದಿತ್ತು. ಅಷ್ಟೇ ಅಲ್ಲ ಈ ಚಿತ್ರ ಆಸ್ಕರ್ ಪ್ರಶಸ್ತಿಯಲ್ಲೂ ತನ್ನ ಶಕ್ತಿ ತೋರಿಸಿತ್ತು. ಅತ್ಯುತ್ತಮ ವಿಷುವಲ್ ಎಫೆಕ್ಟ್ಸ್ ವಿಭಾಗದಲ್ಲಿ, ಹಾಲಿವುಡ್ ಸಿನಿಮಾಗಳನ್ನೇ ಹಿಂದಿಕ್ಕಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು ಗಾಡ್ಜಿಲ್ಲಾ ಮೈನಸ್ ಒನ್.

ಈ ಒಟಿಟಿಯಲ್ಲಿ ನೋಡಬಹುದು..

ಗಾಡ್ಜಿಲ್ಲಾ ಮೈನಸ್ ಒನ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾದರೂ, ಭಾರತದ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಚಿತ್ರಮಂದಿರದಲ್ಲಿ ಮಿಸ್‌ ಆದರೆ, ಒಟಿಟಿಯಲ್ಲಾದ್ರೂ ನೋಡಬಹುದೆಂದು ಭಾರತೀಯ ಪ್ರೇಕ್ಷಕ ಕಾತರದಿಂದ ಕಾಯುತ್ತಿದ್ದರು. ಇದೀಗ ಆ ಕಾಯುವಿಕೆಗೆ ಬ್ರೇಕ್‌ ಬಿದ್ದಿದೆ. ಯಾವುದೇ ಪೂರ್ವ ಘೋಷಣೆ ಇಲ್ಲದೆ ಈ ಬ್ಲಾಕ್‌ಬಸ್ಟರ್ ಚಿತ್ರ ಈಗ ಇದ್ದಕ್ಕಿದ್ದಂತೆ ಒಟಿಟಿಗೆ ಎಂಟ್ರಿಕೊಟ್ಟಿದೆ. ಹಾಗಾದರೆ ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು. ಗಾಡ್ಜಿಲ್ಲಾ ಮೈನಸ್ ಒನ್ ಚಿತ್ರ ಪ್ರಸ್ತುತ ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸದ್ಯ ಜಪಾನೀಸ್ ಜತೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಈ ಸಿನಿಮಾ ವೀಕ್ಷಿಸಬಹುದು. ನೆಟ್‌ಫ್ಲಿಕ್ಸ್ ಈ ವಿಷಯವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಬಹಿರಂಗಪಡಿಸಿದೆ.

ಎರಡನೇ ಮಹಾಯುದ್ಧದ ಎಳೆ

ಗಾಡ್ಜಿಲ್ಲಾ ಮೈನಸ್ ಒನ್ 1945ರ ಎರಡನೇ ಮಹಾಯುದ್ಧದಲ್ಲಿ ನಡೆದ ಘಟನೆಗಳನ್ನೇ ಸ್ಫೂರ್ತಿಯಾಗಿಸಿಕೊಂಡು ಮೂಡಿ ಬಂದ ಸಿನಿಮಾ. ಹಿರೋಷಿಮಾ ಮತ್ತು ನಾಗಾಸಾಕಿಯ ನಾಶಕ್ಕೆ ಪರಮಾಣು ಬಾಂಬ್‌ ದಾಳಿ ದುರಂತಕ್ಕೆ ಕಾಲ್ಪನಿಕ ಟಚ್‌ ನೀಡಿದ್ದಾರೆ ನಿರ್ದೇಶಕರು. ಪರಮಾಣು ಬಾಂಬ್‌ ದಾಳಿಯಿಂದ ಜಪಾನ್‌ ಹೇಗೆ ಅಕ್ಷರಶಃ ನಲುಗಿತೋ, ಅದೇ ರೀತಿ ಗಾಡ್ಜಿಲ್ಲಾ ದಾಳಿಯಿಂದಲೂ ಅದೇ ಸ್ಥಿತಿ ನಿರ್ಮಾಣವಾಯ್ತು ಎಂಬುದನ್ನು ಕಾಲ್ಪನಿಕ ಕಥೆಯ ಮೂಲಕ ತೆರೆಮೇಲೆ ಅಷ್ಟೇ ರೋಚಕವಾಗಿಯೇ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಗ್ರಾಫಿಕ್ಸೇ ಈ ಚಿತ್ರದ ಹೈಲೈಟ್.‌ ಹಾಗಾದರೆ, ಇನ್ಯಾಕೆ ತಡ, ಈ ವಾರಾಂತ್ಯಕ್ಕೆ ಯಾವ ಸಿನಿಮಾ ನೋಡಬೇಕು ಎಂಬ ಗೊಂದಲವಿದ್ದರೆ, ಗಾಡ್ಜಿಲ್ಲಾ ಆಯ್ಕೆ ನಿಮ್ಮದಾಗಿರಲಿ.

ಟಿ20 ವರ್ಲ್ಡ್‌ಕಪ್ 2024