ಕನ್ನಡ ಸುದ್ದಿ  /  ಮನರಂಜನೆ  /  Ott News: ತಿಂಗಳಿಗೆ 29 ರೂಗೆ ಪ್ರೀಮಿಯಂ ಪ್ಲಾನ್‌ ಪರಿಚಯಿಸಿದ ಜಿಯೋಸಿನಿಮಾ; ಒಟಿಟಿಯಲ್ಲಿ ಆರಂಭವಾಗಲಿದೆಯೇ ಹೊಸ ದರ ಸಮರ

OTT News: ತಿಂಗಳಿಗೆ 29 ರೂಗೆ ಪ್ರೀಮಿಯಂ ಪ್ಲಾನ್‌ ಪರಿಚಯಿಸಿದ ಜಿಯೋಸಿನಿಮಾ; ಒಟಿಟಿಯಲ್ಲಿ ಆರಂಭವಾಗಲಿದೆಯೇ ಹೊಸ ದರ ಸಮರ

ತಿಂಗಳಿಗೆ ಒಂದು ಡಿವೈಸ್‌ಗೆ 29 ರೂಪಾಯಿ ಮತ್ತು 4 ಡಿವೈಸ್‌ಗೆ 89 ರೂಪಾಯಿಯ ಹೊಸ ಪ್ರೀಮಿಯಂ ಪ್ಲ್ಯಾನ್‌ ಅನ್ನು ಜಿಯೋ ಸಿನಿಮಾ ಪರಿಚಯಿಸಿದೆ. ಈ ಮೂಲಕ ಒಟಿಟಿಯಲ್ಲಿ ಹೊಸ ದರ ಸಮರಕ್ಕೆ ಜಿಯೋ ಮುನ್ನುಡಿ ಬರೆಯುತ್ತಿದೆ.

OTT News: ತಿಂಗಳಿಗೆ 29 ರೂಗೆ ಪ್ರೀಮಿಯಂ ಪ್ಲಾನ್‌ ಪರಿಚಯಿಸಿದ ಜಿಯೋಸಿನಿಮಾ
OTT News: ತಿಂಗಳಿಗೆ 29 ರೂಗೆ ಪ್ರೀಮಿಯಂ ಪ್ಲಾನ್‌ ಪರಿಚಯಿಸಿದ ಜಿಯೋಸಿನಿಮಾ

ಬೆಂಗಳೂರು: ಹಿಂದೊಮ್ಮೆ ಜಿಯೋ ಸಿಮ್‌ ಬಂದ ಬಳಿಕ ಇಂಟರ್‌ನೆಟ್‌ ದರವೆಲ್ಲ ಅಗ್ಗವಾದ ಸಂಗತಿ ನಿಮಗೆ ನೆನಪಿರಬಹುದು. ಇದೀಗ ದುಬಾರಿ ಒಟಿಟಿ ಮಾರುಕಟ್ಟೆಯಲ್ಲೂ ಜಿಯೋ ಹೊಸ ದರ ಸಮರಕ್ಕೆ ನಾಂದಿಹಾಡಲಿದೆಯೇ? ಜಿಯೋಸಿನಿಮಾ ಪರಿಚಯಿಸಿದ ಹೊಸ ಪ್ಲ್ಯಾನ್‌ ನೋಡಿದರೆ ಇಂತಹ ಸಾಧ್ಯತೆ ನಿಚ್ಚಳವಾಗಿದೆ. ತಿಂಗಳಿಗೆ ಒಂದು ಡಿವೈಸ್‌ಗೆ 29 ರೂಪಾಯಿ ಮತ್ತು 4 ಡಿವೈಸ್‌ಗೆ 89 ರೂಪಾಯಿಯ ಹೊಸ ಪ್ರೀಮಿಯಂ ಪ್ಲ್ಯಾನ್‌ ಅನ್ನು ಜಿಯೋ ಸಿನಿಮಾ ಪರಿಚಯಿಸಿದೆ. ಈಗ ಬಹುತೇಕ ಒಟಿಟಿ ಪ್ರೀಮಿಯಂ ಪ್ಲ್ಯಾನ್‌ಗಳು 100 ರೂಪಾಯಿಗಿಂತ ಹೆಚ್ಚಿವೆ. ಟಿವಿ ಇತ್ಯಾದಿಗಳಲ್ಲಿ ಎಚ್‌ಡಿ ವಿಡಿಯೋ ನೋಡಬೇಕಾದರೆ ವರ್ಷಕ್ಕೆ 1500ರವರೆಗೆ ಪಾವತಿಸಬೇಕಿದೆ. ಇದೀಗ ತಿಂಗಳಿಗೆ 29 ರೂಪಾಯಿಯ ಆಫರ್‌ ನೀಡುವ ಮೂಲಕ ಜಿಯೋ ಹೊಸ ದರ ಸಮರಕ್ಕೆ ಮುನ್ನುಡಿ ಬರೆಯಲು ಹೊರಟಿದೆ.

ಟ್ರೆಂಡಿಂಗ್​ ಸುದ್ದಿ

ಜಿಯೋಸಿನಿಮಾ ಒಟಿಟಿ ಪ್ರೀಮಿಯಂ

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪ್ರಶಸ್ತಿ ಪುರಸ್ಕೃತ ಸಿನಿಮಾಗಳ ಕೊಡುಗೆಯ ಬಳಿಕ ಜಿಯೋ ಸಿನಿಮಾ ಹೆಚ್ಚು ಜನರಿಗೆ ತಲುಪಿದೆ. ಇದೀಗ ಒಟಿಟಿಗಳಲ್ಲಿ ಡಿವೈಸ್‌ ನಿರ್ಬಂದಗಳು, ಕಡಿಮೆ ಗುಣಮಟ್ಟದ ವಿಡಿಯೋ, ಹೆಚ್ಚು ದರದ ಚಂದಾದಾರಿಕೆ ಪ್ಲ್ಯಾನ್‌ಗಳು ಇತ್ಯಾದಿಗಳಿಗೆ ಬ್ರೇಕ್‌ ಹಾಕಲು ಮುಂದಾಗಿದೆ. ಇದೀಗ ಜಿಯೋ ಸಿನಿಮಾ ತನ್ನ ಹೊಸ ಚಂದಾದಾರಿಕೆ ಕೊಡುಗೆ `ಜಿಯೊ ಸಿನಿಮಾ ಪ್ರೀಮಿಯಂ’ ಪ್ರಕಟಿಸಿದೆ. ಹೊಸ ಪ್ಲಾನ್‌ಗಳು ತಿಂಗಳಿಗೆ 29 ರೂಪಾಯಿಯಿಂದ ಆರಂಭವಾಗುತ್ತಿವೆ. ಜಾಹೀರಾತು ಮುಕ್ತ ಅನುಭವವನ್ನು 4ಕೆ ಗುಣಮಟ್ಟದಲ್ಲಿ ಮತ್ತು ಆಫ್-ಲೈನ್ ವೀಕ್ಷಣೆಯ ಆಯ್ಕೆ ಇದರಿಂದ ಗ್ರಾಹಕರಿಗೆ ದೊರಕಲಿದೆ. ಸದಸ್ಯರು ವಿಶೇಷ ಸರಣಿಗಳು, ಚಲನಚಿತ್ರಗಳು, ಹಾಲಿವುಡ್, ಮಕ್ಕಳು ಮತ್ತು ಟಿ.ವಿ. ಮನರಂಜನೆಯನ್ನು ಕನೆಕ್ಟೆಡ್ ಟಿ.ವಿ.ಗಳನ್ನು ಒಳಗೊಂಡು ಯಾವುದೇ ಡಿವೈಸ್ ನಲ್ಲಿ ಪಡೆಯಬಹುದು ಎಂದು ಜಿಯೋ ಸಿನಿಮಾ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಯೋ ಫ್ಯಾಮಿಲಿ ಫ್ಲ್ಯಾನ್‌

ಹಲವು ಡಿವೈಸ್‌ಗಳಲ್ಲಿ ನೋಡಲು ಬಯಸುವವರಿಗಾಗಿ ಜಿಯೋಸಿನಿಮಾವು ಫ್ಯಾಮಿಲಿ ಪ್ಯಾಕ್‌ ಅನ್ನೂ ಪರಿಚಯಿಸಿದೆ. ಇದಕ್ಕೆ ಗ್ರಾಹಕರು ತಿಂಗಳಿಗೆ 89 ರೂಪಾಯಿ ನಿಗದಿಪಡಿಸಿದೆ. ಏಕಕಾಲದಲ್ಲಿ 4 ಸ್ಕ್ರೀನ್‌ಗಳಲ್ಲಿ ವೀಕ್ಷಿಸುವ ಅವಕಾಶ ಇದರಲ್ಲಿ ದೊರಕುತ್ತದೆ. ಜಿಯೊ ಸಿನಿಮಾ ಪ್ರೀಮಿಯಂ ಸದಸ್ಯರು ಈಗ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ `ಫ್ಯಾಮಿಲಿ’ ಪ್ಲಾನ್ ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಬಹುದು.

ಕ್ರಿಕೆಟ್‌ ನೋಡಿ

ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಕ್ರೀಡಾ ಕಂಟೆಂಟ್ ಮತ್ತು ಸಾವಿರಾರು ಗಂಟೆಗಳ ಮನರಂಜನೆಯ ಕಂಟೆಂಟ್ ಜಾಹೀರಾತು ಬೆಂಬಲಿತ ಕೊಡುಗೆಯಾಗಿ ಉಚಿತವಾಗಿ ಲಭ್ಯವಿದ್ದು ಇಲ್ಲಿ ಜಿಯೊ ಸಿನಿಮಾ ಪ್ರೀಮಿಯಂ ಸದಸ್ಯರು ವಿಶೇಷ ಅವಕಾಶ ದೊರಕಲಿದೆ. ಹಾಲಿವುಡ್ ನಿಂದ ಅತ್ಯಂತ ದೊಡ್ಡ ಜಾಗತಿಕ ಸರಣಿ ಮತ್ತು ಚಲನಚಿತ್ರಗಳನ್ನು ನೋಡಬಹುದು. ವಿಶ್ವದ ಅತ್ಯಂತ ದೊಡ್ಡ ಸ್ಟುಡಿಯೋಗಳಾದ ಪೀಕಾಕ್, ಎಚ್.ಬಿ.ಒ, ಪ್ಯಾರಾಮೌಂಟ್ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿ ಜೊತೆಯಲ್ಲಿ ಜಿಯೋಸಿನಿಮಾ ಪಾಲುದಾರಿಕೆ ಮಾಡಿಕೊಂಡಿದೆ. ಗೇಮ್ ಆಫ್ ಥ್ರೋನ್ಸ್, ಹೌಸ್ ಆಫ್ ದಿ ಡ್ರ್ಯಾಗನ್, ಓಪನ್ ಹೀಮರ್, ಬಾರ್ಬೀ ರೀತಿಯ ಶೀರ್ಷಿಕೆಗಳಲ್ಲದೆ ಹಿಂದಿ, ತಮಿಳು, ತೆಲುಗು, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಕೂಡಾ ಲಭ್ಯವಿರುತ್ತದೆ.

ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ವೀಕ್ಷಿಸಿ

ಜಿಯೋಸಿನಿಮಾ ಹೊರಡಿಸಿದ ಪತ್ರಿಕಾ ಪ್ರಕಟಣೆ ಪ್ರಕಾರ "ಒರಿಜಿನಲ್ ಸೀರೀಸ್ ನಲ್ಲಿ ಅತ್ಯಂತ ಚರ್ಚೆಗೆ ಒಳಗಾದ ರಣ್ ನೀತಿ: ಬಾಲಾಕೋಟ್ ಅಂಡ್ ಬಿಯಾಂಡ್(ಜಿಮ್ಮಿ ಶೇರ್ಗಿಲ್, ಲಾರಾ ದತ್ತಾ, ಆಶಿಶ್ ವಿದ್ಯಾರ್ಥಿ), ಮರ್ಡರ್ ಇನ್ ಮಾಹಿಂ(ವಿಜಯ್ ರಾಝ್, ಅಶುತೋಷ್ ರಾಣಾ) ಪಿಐಎಲ್ಎಲ್(ರೀತೇಶ್ ದೇಶ್ ಮುಖ್) ಇತ್ಯಾದಿಗಳನ್ನು ನೋಡಬಹುದು. ಜಿಯೋ ಸಿನಿಮಾ ಸದಸ್ಯರು ಕಲರ್ಸ್, ನಿಕಲೊಡಿಯೊನ್, ಕಲರ್ಸ್‌ನ ಸ್ಥಳೀಯ ಭಾಷೆಯ ಚಾನೆಲ್‌ಗಳನ್ನು ಪಡೆಯಬಹುದು. ಟಿವಿಯಲ್ಲಿ ಸೀರಿಯಲ್‌ಗಳು ಪ್ರಸಾರವಾಗುವ ಮೊದಲು ಒಟಿಟಿಯಲ್ಲಿ ಪ್ರಸಾರವಾಗಲಿದೆ. ವಯಾಕಾಂ 18 ನೆಟ್ವರ್ಕ್ 20+ ಟಿ.ವಿ. ಚಾನೆಲ್ ಗಳು ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತವೆ ಎಂದು ಪ್ರಕಟಣೆ ತಿಳಿಸಿದೆ.

IPL_Entry_Point