ಕನ್ನಡ ಸುದ್ದಿ  /  ಮನರಂಜನೆ  /  Kaagaz 2 Ott Release: ಅನುಪಮ್‌ ಖೇರ್‌, ಸತೀಶ್‌ ಕೌಶಿಕ್‌ ನಟನೆಯ ಕಾಗಜ್‌ 2 ಒಟಿಟಿಗೆ; ಎಲ್ಲಿ ನೋಡಬಹುದು ಈ ಸಿನಿಮಾ

Kaagaz 2 OTT release: ಅನುಪಮ್‌ ಖೇರ್‌, ಸತೀಶ್‌ ಕೌಶಿಕ್‌ ನಟನೆಯ ಕಾಗಜ್‌ 2 ಒಟಿಟಿಗೆ; ಎಲ್ಲಿ ನೋಡಬಹುದು ಈ ಸಿನಿಮಾ

Kaagaz 2 OTT release: ಅನುಪಮ್ ಖೇರ್, ದರ್ಶನ್ ಕುಮಾರ್, ನೀನಾ ಗುಪ್ತಾ ಮತ್ತು ದಿವಂಗತ ನಟ ಸತೀಶ್ ಕೌಶಿಕ್ ನಟಿಸಿರುವ ಕಾಗಝ್‌ 2 ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಮಾರ್ಚ್‌ 1ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು.

Kaagaz 2 OTT release: ಅನುಪಮ್‌ ಖೇರ್‌, ಸತೀಶ್‌ ಕೌಶಿಕ್‌ ನಟನೆಯ ಕಾಗಜ್‌ 2 ಒಟಿಟಿಗೆ
Kaagaz 2 OTT release: ಅನುಪಮ್‌ ಖೇರ್‌, ಸತೀಶ್‌ ಕೌಶಿಕ್‌ ನಟನೆಯ ಕಾಗಜ್‌ 2 ಒಟಿಟಿಗೆ

Kaagaz 2 OTT release: ಅನುಪಮ್ ಖೇರ್ ಮತ್ತು ಸತೀಶ್ ಕೌಶಿಕ್ ನಟನೆಯ ಕಾಗಾಜ್ 2 ಸಿನಿಮಾವು ಕೊನೆಗೂ ಒಟಿಟಿಗೆ ಆಗಮಿಸಿದೆ. ಕಾಗಜ್‌ 2 ಸಿನಿಮಾವು ಮಾರ್ಚ್‌ 1ರಂದು ಥಿಯೇಟರ್‌ನಲ್ಲಿ ರಿಲೀಸ್‌ ಆಗಿತ್ತು. ಇದೀಗ ಎರಡು ತಿಂಗಳ ಬಳಿಕ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಮಾರ್ಚ್‌ 9ರಂದು ಈ ಸಿನಿಮಾದ ನಟ ಸತೀಶ್‌ ನಿಧನರಾಗಿದ್ದಾರೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಕಾಗಜ್‌ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡುವಂತೆ ಇನ್‌ಸ್ಟಾಗ್ರಾಂನಲ್ಲಿ ಅನುಪಮ್‌ ಖೇರ್‌ ಪ್ರೇಕ್ಷಕರನ್ನು ಕೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅನುಪಮ್‌ ಖೇರ್‌ ಏನಂದ್ರು?

"ದಯವಿಟ್ಟು ಸತೀಶ್‌ ಕೌಶಿಕ್‌ ಅವರ ಕೊನೆಯ ಚಿತ್ರ ಕಾಗಜ್‌ 2 ಅಮೆಜಾನ್‌ ಪ್ರೈಮ್‌ನಲ್ಲಿದೆ. ದಯವಿಟ್ಟು ವೀಕ್ಷಿಸಿ. ಇದು ಸಮಸ್ಯೆಯೊಂದರ ಸುತ್ತ ನಡೆಯುವ ಕಥಾನಕ. ಖಂಡಿತಾ ನಿಮಗಿದು ಇಷ್ಟವಾಗಲಿದೆ ಎಂದು ನಾನು ಭರವಸೆ ನೀಡುವೆ" ಎಂದು ಇನ್‌ಸ್ಟಾಗ್ರಾಂನಲ್ಲಿ ಪುಟ್ಟ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. "ಅಮೆಜಾನ್‌ ಪ್ರೈಮ್‌ನಲ್ಲಿರುವ ಈ ಚಿತ್ರವನ್ನು ಆನಂದಿಸುತ್ತದೆ. ಇದು ನಿಮ್ಮ ಚಿಂತನೆಗೆ ಪ್ರೇರೇಪಣೆ ನೀಡುವ ಸಿನಿಮಾವಾಗಿದೆ. ಇದು ನಮ್ಮ ಕಾಲದ ಪ್ರಮುಖ ಚಿತ್ರವಾಗಿದೆ" ಎಂದು ಅವರು ಹೇಳಿದ್ದಾರೆ.

ಕಾಗಜ್‌ 2 ಸಿನಿಮಾದ ಕುರಿತು

ಈ ಸಿನಿಮಾದಲ್ಲಿ ದಿವಂಗತ ಸತೀಶ್‌ ಅವರು ಭಾವುಕರಾಗಿ ನಟಿಸಿದ್ದಾರೆ. ಮೃತಪಟ್ಟ ತನ್ನ ಮಗಳಿಗೆ ನ್ಯಾಯ ಕೇಳುವ ತಂದೆಯ ಪಾತ್ರದಲ್ಲಿ ನಟಿಸಿದಾರೆ. ಇವರ ಮಗಳ ಸಾವಿಗೆ ರಾಜಕೀಯ ರಾಲಿ ಪ್ರಮುಖ ಕಾರಣ. ಹೀಗಾಗಿ ರಾಜಕೀಯ ರಾಲಿಗಳನ್ನು ನಿಷೇಧಿಸಬೇಕೆಂದು ಹೋರಾಟ ಮಾಡುವ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಬಲ ರಾಜಕಾರಣಿಯ ಪಾತ್ರದಲ್ಲಿ ಅನಂತ್‌ ದೇಸಾಯಿ ನಟಿಸಿದ್ದಾರೆ.

ಕಾಗಜ್‌ 2ನಲ್ಲಿ ಅನುಪಮ್‌ ಖೇರ್‌ ಅವರು ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್‌ ಹೋರಾಟಕ್ಕೆ ಅನುಪಮ್‌ ಖೇರ್‌ ವಕೀಲರಾಗಿ ಬೆಂಬಲ ನೀಡುತ್ತಾರೆ. ಈ ಕಾನೂನು ಸಮರದ ಸಮಯದಲ್ಲಿ ತನ್ನ ಜೀವಕ್ಕೆ ಅಪಾಯವಾಗುವಂತಹ ಸನ್ನಿವೇಶಗಳು ಎದುರಾದರೂ ಧೈರ್ಯದಿಂದ ಹೋರಾಡುತ್ತಾರೆ. ಈ ಚಿತ್ರವನ್ನು ಸತೀಶ್ ಕೌಶಿಕ್ ಎಂಟರ್‌ಟೈನ್‌ಮೆಂಟ್ ಎಲ್‌ಎಲ್‌ಪಿ ಮತ್ತು ವೀನಸ್ ವರ್ಲ್ಡ್‌ವೈಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಶಶಿ ಸತೀಶ್ ಕೌಶಿಕ್, ರತನ್ ಜೈನ್ ಮತ್ತು ಗಣೇಶ್ ಜೈನ್ ನಿರ್ಮಿಸಿದ್ದಾರೆ. ಇದರಲ್ಲಿ ದರ್ಶನ್ ಕುಮಾರ್ ಮತ್ತು ನೀನಾ ಗುಪ್ತಾ ಕೂಡ ನಟಿಸಿದ್ದಾರೆ.

ಕಾಗಜ್‌ ಬಗ್ಗೆ ಅನುಪಮ್‌ ಖೇರ್‌ ಅಭಿಪ್ರಾಯ

ಇತ್ತೀಚೆಗೆ ಸುದ್ದಿ ಸಂಸ್ಥೆ ಎಎನ್‌ಐ ಜತೆ ಅನುಪಮ್‌ ಖೇರ್‌ ಕಾಗಜ್‌ ಅನುಭವವನ್ನು ಅನುಪಮ್‌ ಖೇರ್‌ ಹಂಚಿಕೊಂಡಿದ್ದರು. "ಇದು ಅವರ (ಸತೀಶ್ ಕೌಶಿಕ್) ಪ್ಯಾಶನ್ ಪ್ರಾಜೆಕ್ಟ್ ಆಗಿತ್ತು. ಈ ಪ್ರಾಜೆಕ್ಟ್‌ಗಾಗಿ ಅವರು 2 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇದು ಸತ್ಯ ಘಟನೆಗಳನ್ನು ಆಧರಿಸಿದೆ. ಈ ಸಿನಿಮಾದ ವಿಷಯದ ಬಗ್ಗೆ ತುಂಬಾ ಭಾವುಕರಾಗಿದ್ದರು. ಅಮೇಲ ಜನರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದರು. ರಾಜಕೀಯ ಪಕ್ಷಗಳು ಮತ್ತು ಇತರರು ನಡೆಸಿದ ಪ್ರತಿಭಟನೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದರು" ಎಂದು ಅನುಪಮ್‌ ಖೇರ್‌ ಮಾಹಿತಿ ನೀಡಿದ್ದಾರೆ.

"ಈ ಚಿತ್ರದಲ್ಲಿ ಸತೀಶ್ ಕೌಶಿಕ್ ಮಗಳು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡವಳು. ಆದರೆ, ಅವಳು ಅಪಘಾತಕ್ಕೀಡಾಗುತ್ತಾಳೆ. ಅವಳನ್ನು ಬದುಕಿಸಬಹುದಿತ್ತು. ಆದರೆ, ರಾಜಕೀಯ ರಾಲಿಯಿಂದ ಅಂಬ್ಯುಲೆನ್ಸ್‌ ಮುಂದಕ್ಕೆ ಹೋಗಲಾಗದೆ ಅದರಲ್ಲಿ ಸಿಲುಕಿ ಮಗಳು ಮೃತಪಡುತ್ತಾಳೆ" ಎಂದು ಅನುಪಮ್‌ ಖೇರ್‌ ಮಾಹಿತಿ ನೀಡಿದ್ದಾರೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point